ಆಕ್ರಮಣಕಾರಿ ವಿನ್ಯಾಸದಲ್ಲಿ ಅನಾವರಣಗೊಂಡ ಸುಜುಕಿ ಸ್ವಿಫ್ಟ್ ಕಾರು..

ಮಾರುತಿ ಸುಜುಕಿ ಸ್ವಿಫ್ಟ್ ಕಾರು ಎಂದರೆ ಯಾರಿಗೆ ತಾನೆ ತಿಳಿದಿರಲ್ಲ ಹೇಳಿ. ತಿಂಗಳಿಗೆ ಸಾವುರಾರುಗಟ್ಟಲೆ ಮಾರಟವಾಗುತ್ತಿರುವ ಈ ಕಾರು ಕಳೆದ ವರ್ಷದ 'ಬೆಸ್ಟ್ ಕಾರ್ ಆಫ್ ದಿ ಇಯರ್' ಪ್ರಶಸ್ತಿಯನ್ನು ಸಹ ತನ್ನದಾಗಿಸಿಕೊಂಡಿದೆ. ಆದರೆ ನಾವಿಂದು ಹೇಳಲಿರುವುದು ಒಂದು ವಿಶೇಷವಾದ ವಿನ್ಯಾಸದಿಂದ ನಿರ್ಮಿಸಲ್ಪಟ್ಟ ಸುಜುಕಿ ಸ್ವಿಫ್ಟ್ ಕಾರಿನ ಬಗ್ಗೆ.

ಆಕ್ರಮಣಕಾರಿ ವಿನ್ಯಾಸದಲ್ಲಿ ಅನಾವರಣಗೊಂಡ ಸುಜುಕಿ ಸ್ವಿಫ್ಟ್ ಕಾರು..

ಹೌದು, ಸುಜುಕಿ ಸಂಸ್ಥೆಯು ತಮ್ಮ ಜನಪ್ರಿಯ ಸ್ವಿಫ್ಟ್ ಕಾರಿನ ಸ್ಪೋರ್ಟ್ ಕಟಾನ ಮಾದರಿಯನ್ನು ನೆದರ್‍‍ಲ್ಯಾಂಡ್‍‍ನಲ್ಲಿ ಅನಾವರಣಗೊಳಿಸಿದ್ದು, ಈ ಸ್ಪೆಷಲ್ ಎಡಿಷನ್ ಕಾರು ಸುಜುಕಿ ಕಟಾನಾ ಬೈಕಿಗೆ ಗೌರವ ಪ್ರಶಂಸೆಯನ್ನು ನೀಡುವ ಸಲುವಾಗಿ ತಯರಿಸಲಾಗಿದೆ ಎಂದು ಹೇಳಲಾಗಿದೆ. ಹಾಗೆಯೆ ಕೇವಲ 30 ಸ್ವಿಫ್ಟ್ ಸ್ಪೋರ್ಟ್ ಕಟಾನ ಕಾರುಗಳಾನ್ನು ಮಾತ್ರ ಸುಜುಕಿ ಸಂಸ್ಥೆಯು ತಯಾರಿ ಮಾಡಲಾಗಿದೆ ಎನ್ನಲಾಗಿದೆ.

ಆಕ್ರಮಣಕಾರಿ ವಿನ್ಯಾಸದಲ್ಲಿ ಅನಾವರಣಗೊಂಡ ಸುಜುಕಿ ಸ್ವಿಫ್ಟ್ ಕಾರು..

ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಕಟಾನ ಕಾರು ಪ್ರಸ್ತುತ ಡಚ್ ಮಾರುಕಟ್ಟೆಯಲ್ಲಿ ಮಾರಾಟವಾಗುತಿದ್ದು, ಈ ಕಾರನ್ನು ಇನ್ನಿತರೆ ದೇಶಗಳ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಯೋಜನೆ ಇಲ್ಲ ಎನ್ನಲಾಗಿದೆ. ಮೊದಲಿಗೆ ಹೇಳಿರುವ ಹಾಗೆ ಸ್ವಿಫ್ಟ್ ಸ್ಪೋರ್ಟ್ ಕಟಾನ ಕಾರು ಮಾದರಿಯು ಕೇವಲ ಸುಜುಕಿ ಕಟಾನ ಬೈಕ್‍ಗೆ ಪ್ರಶಂಸೆಯನ್ನು ನೀಡುವ ಸಲುವಾಗಿ ತಯಾರು ಮಾಡಲಾಗಿದೆ.

ಆಕ್ರಮಣಕಾರಿ ವಿನ್ಯಾಸದಲ್ಲಿ ಅನಾವರಣಗೊಂಡ ಸುಜುಕಿ ಸ್ವಿಫ್ಟ್ ಕಾರು..

ಇನ್ನು ಸುಜುಕಿ ಕಟಾನಾ ಬೈಕ್ ಬಗ್ಗೆ ಹೇಳುವುದಾದರೆ ಈ ಬೈಕಿನ ಕುರಿತಾಕಿ ಬಹುತೆಕರಿಗೆ ಗೊತ್ತಿಲ್ಲವಾದರೂ, ಇದು ಇನ್ನಿತರೆ ದೇಶದ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದು, ಭಾರತದಲ್ಲಿರುವ ಮೋಟಾರ್‍‍ಸೈಕಲ್ ಅಭಿಮಾನಿಗಳಿಗೆ ಈ ಬೈಕ್ ತಪ್ಪದೇ ತಿಳಿದೆಯೆ ಇರುತ್ತದೆ.

ಆಕ್ರಮಣಕಾರಿ ವಿನ್ಯಾಸದಲ್ಲಿ ಅನಾವರಣಗೊಂಡ ಸುಜುಕಿ ಸ್ವಿಫ್ಟ್ ಕಾರು..

ಸುಜುಕಿ ಕಟಾನ ಬೈಕ್ ಮೊದಲಿಗೆ 1981ರಲ್ಲಿ ಬಿಡುಗಡೆಗೊಂಡಿದ್ದು, ನಂತರ ಜಾಗತಿಕ ಮಟ್ಟದಲ್ಲಿ ಜನಪ್ರೀಯತೆಯನ್ನು ಪಡೆದುಕೊಂಡಿದೆ. ಇಂದಿಗೂ ಸಹ ಈ ಬೈಕಿನ ಜನಪೀಯತೆಯನ್ನು ಕಾಣಬಹುದಾಗಿದ್ದು, 2006ರಲ್ಲಿ ಇದರ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಯಿತು.

ಆಕ್ರಮಣಕಾರಿ ವಿನ್ಯಾಸದಲ್ಲಿ ಅನಾವರಣಗೊಂಡ ಸುಜುಕಿ ಸ್ವಿಫ್ಟ್ ಕಾರು..

ಕಟಾನ ಎಂದರೆ ಜಾಪನೀಸ್ ಬಾಷೆಯಲ್ಲಿ 'ಕತ್ತಿ' ಎಂದು ಅರ್ಥ. ಇದಕ್ಕಗಾಗಿಯೆ ಹೆಸರಿಗೆ ತಕ್ಕ ಹಾಗೆ ಸುಜುಕಿ ಸ್ವಿಫ್ಟ್ ಕಾರಿನ ವಿನ್ಯಾಸವನ್ನು ತಯಾರು ಮಾಡಲಾಗಿದ್ದು, ಈ ಕಾರಿಗೆ ಮೋಟಾರ್‍‍ಸೈಕಲ್‍ನಲ್ಲಿ ಬಳಸಲಾದ ಹಲವಾರು ವಿಶೇಷತಗಳನ್ನು ಈ ಕಾರು ಒಳಗೊಂಡಿದೆ.

ಆಕ್ರಮಣಕಾರಿ ವಿನ್ಯಾಸದಲ್ಲಿ ಅನಾವರಣಗೊಂಡ ಸುಜುಕಿ ಸ್ವಿಫ್ಟ್ ಕಾರು..

ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಕಟಾನ ವಿನ್ಯಾಸ

ಈ ಕಾರಿನ ಮುಂಭಾಗದದಲ್ಲಿ ಕಪ್ಪು ಬಣ್ಣದಲ್ಲಿನ ಹನಿ ಕಾಂಬ್ ಗ್ರಿಲ್ ಹಾಗು ಅದರ ಸುತ್ತಲೂ ಕೆಂಪು ಬಣ್ಣವನ್ನು ನೀಡಲಾಗಿದೆ. ಇನ್ನು ಸೈಡ್ ಪ್ರೊಫೈ ಬಗ್ಗೆ ಹೇಳುವುದಾದ್ರೆ ಈ ಕಾರಿನಲ್ಲಿ 17 ಇಂಚಿನ O.Z ಅಲಾಯ್ ವ್ಹೀಲ್‍ಗಳನ್ನು ನೀಡಲಾಗಿದ್ದು, 18 ಇಂಚಿನ ಡೈಮಂಡ್ ಕಟ್ ಲಾಯ್ ವ್ಹೀಲ್‍ಗಳನ್ನು ಸಹ ಆಯ್ಕೆಯಾಗಿ ಪಡೆಯಬಹುದಾಗಿದೆ. ಇಷ್ಟೆ ಅಲ್ಲದೆಯೆ ಕಟಾನ ಚಿಹ್ನೆಯನ್ನು ಕಾರಿನ ಬಾಗಿಲುಗಳಲ್ಲಿ ನೀಡಲಾಗಿದೆ.

ಆಕ್ರಮಣಕಾರಿ ವಿನ್ಯಾಸದಲ್ಲಿ ಅನಾವರಣಗೊಂಡ ಸುಜುಕಿ ಸ್ವಿಫ್ಟ್ ಕಾರು..

ರಿಯರ್ ಬಂಪರ್‍‍ನ ಮೇಳೆ ಇದರಲ್ಲಿ ಫೌಕ್ಸ್ ಕಾರ್ಬನ್ ಫೈಬರ್‍‍ನಿಂದ ಸಜ್ಜುಗೊಳಿಸಲಾಗಿದ್ದು, ಟ್ವಿನ್ ಎಕ್ಸಾಸ್ಟ್ ಔಟ್‍ಲೆಟ್ಸ್ ಮತ್ತು ಕಾರ್ಬರ್ನ್ ಫೈಬರ್ ಬಂಪರ್ ಅನ್ನು ನೀಡಿರುವುದು ಸ್ಪೋರ್ಟಿ ಲುಕ್ ಅನ್ನು ನೀಡಿದೆ. ಕೇವಲ ಕಾರಿನ ಹೊರಭಾಗದಲ್ಲಿ ಮಾತ್ರವಲ್ಲದೆಯೆ ಕಾರಿನ ಒಳಭಾಗದಲ್ಲಿಯು ಸಹ ಮಾರ್ಪಾಡುಗಳನ್ನು ಮಾಡಲಾಗಿದೆ.

ಆಕ್ರಮಣಕಾರಿ ವಿನ್ಯಾಸದಲ್ಲಿ ಅನಾವರಣಗೊಂಡ ಸುಜುಕಿ ಸ್ವಿಫ್ಟ್ ಕಾರು..

ಕಾರಿನ ಒಳಭಾಗದಲಿ ಸ್ಟೀರಿಂಗ್ ವ್ಹೀಲ್‍ ಮತ್ತು ಸೀಟ್ ಕವರ್‍‍ಗಳ ಮೇಲೆ ಕಟಾನಾ ಲೋಗೊವನ್ನು ನೀಡಲಾಗಿದ್ದು, ಜೊತೆಗೆ ಸಂಖ್ಯೆಗಳನ್ನು ಕೂಡಾ ನೀಡಲಾಗಿದೆ. ರಿಯರ್ ಪಾರ್ಕಿಂಗ್ ಮತ್ತು ನ್ಯಾವಿಗೆಷನ್ ಸಪೋರ್ಟ್ ಮಾಡುವ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಸಹ ಈ ಕಾರು ಪಡೆದುಕೊಂಡಿದೆ.

ಆಕ್ರಮಣಕಾರಿ ವಿನ್ಯಾಸದಲ್ಲಿ ಅನಾವರಣಗೊಂಡ ಸುಜುಕಿ ಸ್ವಿಫ್ಟ್ ಕಾರು..

ಎಂಜಿನ್ ಸಾಮರ್ಥ್ಯ

ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಕಟಾನ ಎಡಿಷನ್ ಕಾರು ಸಾಧಾರಣ ಸ್ವಿಫ್ಟ್ ಸ್ಪೋರ್ಟ್ ಕಾರಿನಲ್ಲಿ ನೀಡಲಾದ 1.4 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಸಹಾಯದಿಂದ 140 ಬಿಹೆಚ್‍ಪಿ ಮತ್ತು 230ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಆಕ್ರಮಣಕಾರಿ ವಿನ್ಯಾಸದಲ್ಲಿ ಅನಾವರಣಗೊಂಡ ಸುಜುಕಿ ಸ್ವಿಫ್ಟ್ ಕಾರು..

ಸುರಕ್ಷತೆಯ ಅನುಸಾರ ಈ ಕಾರಿನಲ್ಲಿ ಎಬಿಎಸ್, ಇಬಿಡಿ, ಬ್ರೇಕ್ ಅಸಿಸ್ಟ್, ಫ್ರಂಟ್ ಮತ್ತು ಸೈಡ್ ಏರ್‍‍ಬ್ಯಾಗ್ಸ್ ಹಾಗು ಇವುಗಳ ಜೊತೆಗೆ ಟೈರ್ ಪ್ರೆಶುರ್ ಮಾನಿಟರಿಂಗ್ ಸಿಸ್ಟಂ ಅನ್ನು ಒದಗಿಸಲಾಗಿದೆ. ಒಟ್ಟಾರೆಯಾಗಿ ಈ ಕಾರು ನೋಡಲು ಆಕ್ರಮಣಕಾರಿ ವಿನ್ಯಾಸವನ್ನು ಪಡೆದುಕೊಂಡಿದ್ದು, ಈ ಕಾರು ಭಾರತದಲ್ಲಿ ಬಿಡುಗಡೆಯಾಗುತ್ತಾ ಇಲ್ವಾ ಅಂತ ಸಂಸ್ಥೆಯು ಇನ್ನು ಸ್ಪಷ್ಟನೆ ನೀಡಿಲ್ಲ.

Most Read Articles

Kannada
English summary
Suzuki Swift Sport Katana Edition Revealed — Looks Tasty & Goes Fast!
Story first published: Wednesday, May 8, 2019, 16:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X