ಹೊಸ ಇ‍ವಿ ನಿಯಮ ಘೋಷಿಸಿದ ತಮಿಳುನಾಡು ಸರ್ಕಾರ

ತಮಿಳುನಾಡು ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಹೊಸ ನಿಯಮಯನ್ನು ಪ್ರಕಟಿಸಿದೆ. ಹೊಸ ನಿಯಮ ಜಾರಿಯೊಂದಿಗೆ ತಮಿಳುನಾಡು ರಾಜ್ಯ ಸರ್ಕಾರ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡಲು ಸಜ್ಜಾಗಿದೆ.

ಹೊಸ ಇ‍ವಿ ನಿಯಮ ಘೋಷಿಸಿದ ತಮಿಳುನಾಡು ಸರ್ಕಾರ

ಎಲೆಕ್ಟ್ರಿಕ್ ವಾಹನಕ್ಕಾಗಿ ರೂ. 50,000 ಕೋಟಿ ಮೊತ್ತದ ಹೊಡಿಕೆ ದಾರರಿಂದ ಹೊಡಿಕೆ ಗುರಿಯನ್ನು ಹೊಂದಿದೆ. ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯನ್ನು ಹೆಚ್ಚಿಸುವುದು ಮತ್ತು ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಹೊಸ ಆವಿಷ್ಕಾರಗಳಿಗೆ ಉತ್ತೇಜಿಸುವ ಗುರಿಯನ್ನು ಹೊಂದಿದೆ. ಸಾರ್ವಜನಿಕ ವಾಹನಗಳನ್ನು ಎಲೆಕ್ಟ್ರಿಕ್ ವಾಹನವಾಗಿ ಪರಿವರ್ತಿಸುವ ಕುರಿತು ಚಿಂತಿಸಿದೆ.

ಹೊಸ ಇ‍ವಿ ನಿಯಮ ಘೋಷಿಸಿದ ತಮಿಳುನಾಡು ಸರ್ಕಾರ

ತಮಿಳುನಾಡು ಸರ್ಕಾರದ ಹೊಸ ನಿಯಮ ರಾಜ್ಯಾದ್ಯಂತ ಇರುವ ಸಾಕಷ್ಟು ಜಾರ್ಚಿಂಗ್ ಪಾಯಿಂಟ್ ನೆಟ್‍‍ವರ್ಕ್ ಹೊಂದಿರುವ ಎಲೆಕ್ಟ್ರಿಕ್ ವಾಹನಗಳಿಗೆ ಸರಿಯಾದ ಜಾರ್ಜಿಂಗ್ ಮೂಲಸೌಕರ್ಯವನ್ನು ರಚಿಸಲು ಸಹಾಯವಾಗುತ್ತದೆ. ಇಷ್ಟೇ ಅಲ್ಲದೇ 1.50 ಲಕ್ಷಕ್ಕೂ ಅಧಿಕ ಹುದ್ದೆಗಳಿಗೆ ಹೊಸ ಉದ್ಯೋಗಾವಕಾಶಗಳನ್ನು ತೆರೆಯುತ್ತದೆ. ಹಾನಿಗೊಳಗಾದ ಬ್ಯಾಟರಿಗಳನ್ನು ಮರುಬಳಿಕೆಗೆ ಸಹಕಾರಿಯಾಗುವ ರೀತಿಯಲ್ಲಿ ಸಿದ್ದಪಡಿಸುವ ನೀತಿಗಳು ಇವೆ. ಹೊಸ ಸಂಶೋಧನೆ ನಡೆಸಲು ಈ ನೀತಿ ಉತ್ತೇಜಿಸುತ್ತದೆ.

ಹೊಸ ಇ‍ವಿ ನಿಯಮ ಘೋಷಿಸಿದ ತಮಿಳುನಾಡು ಸರ್ಕಾರ

ಹೊಸ ನಿಯಮದ ಅನ್ವಯ ಎಲೆಕ್ಟ್ರಿಕ್ ವಾಹನಗಳಿಗೆ ತೆರಿಗೆ ವಿನಾಯಿತಿ, ಮನ್ನಾ ಮತ್ತು ಹಣಕಾಸಿನ ರಿಯಾಯಿತಿ ಯೋಜನೆಗಳನ್ನು ನೀಡುತ್ತದೆ. ಈ ನೀತಿಯು 2022ರ ಡಿಸೆಂಬರ್ 30 ರವರೆಗೆ ಶೆ. 100 ರಸ್ತೆ ತೆರಿಗೆ ವಿನಾಯಿತಿ ಮತ್ತು ದ್ವಿಚಕ್ರ ಮತ್ತು ಖಾಸಗಿ ಕಾರುಗಳ ನೋಂದಣೆ ಶುಲ್ಕದ ಮನ್ನಾವನ್ನು ಒಳಗೊಂಡಿದೆ. ಮುಂದಿನ 10 ವರ್ಷಗಳವರೆಗೆ ಎಲೆಕ್ಟ್ರಿಕ್ ವಾಹನಗಳ ಉತ್ತೇಜನೆ ನೀಡುವ ಯೋಜನೆಗಳು ಮತ್ತು ಉಪಕ್ರಮವನ್ನು ಒಳಗೊಂಡಿದೆ.

ಹೊಸ ಇ‍ವಿ ನಿಯಮ ಘೋಷಿಸಿದ ತಮಿಳುನಾಡು ಸರ್ಕಾರ

ಎಲ್ಲಾ ಆಟೋ ರಿಕ್ಷಾಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸಲು ತಮಿಳುನಾಡು ಸರ್ಕಾರ ಚಿಂತಿಸಿದೆ. ಈ ಯೋಜನೆಯನ್ನು ಉತ್ತೆಜಿಸಲು ಸರ್ಕಾರವು 2022ರ ಡಿಸೆಂಬರ್ 30ರವರೆಗೆ ಪರವಾನಗಿ ಶುಲ್ಕ ಮತ್ತು ಎಲ್ಲಾ ಎಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ ಶೇ.100 ರಷ್ಟು ರಸ್ತೆ ತೆರಿಗೆ ವಿನಾಯಿತಿ ನೀಡಲಿದೆ. ಆಟೋ ರಿಕ್ಷಾಯೊಂದಿಗೆ ಟ್ಯಾಕ್ಸಿಗಳು, ಪ್ರವಾಸಿ ಕಾರುಗಳು, ಎಲ್‍‍ಸಿ‍ವಿಗಳು ಈ ಯೋಜನಯಡಿಯಲ್ಲಿ ಬರುತ್ತದೆ.

ಹೊಸ ಇ‍ವಿ ನಿಯಮ ಘೋಷಿಸಿದ ತಮಿಳುನಾಡು ಸರ್ಕಾರ

ತಮಿಳುನಾಡು ಪ್ರತಿವರ್ಷ ಶೇ. 5 ರಷ್ಟು ಸರ್ಕಾರಿ ಬಸ್‍‍‍ಗಳನ್ನು ಎಲೆಕ್ಟ್ರಿಕ್ ಚಾಲಿತ ಬಸ್‍‍ಗಳಾಗಿ ಪರಿವರ್ತಿಸುತ್ತದೆ. ಎಲೆಕ್ಟ್ರಿಕ್ ಬಸ್‍ಗಳ ಸುಗಮ ಸಂಚಾರಕ್ಕೆ ಇದು ಮಾರ್ಗದಲ್ಲಿರುವ ಬಸ್ ಸ್ಟಾಪ್‍ಗಳಲ್ಲಿ ಮತ್ತು ಬಸ್ ನಿಲ್ಡಾಣಗಳಲ್ಲಿ ಜಾರ್ಜಿಂಗ್ ಕೇಂದ್ರವನ್ನು ಸ್ಥಾಪಿಸಲಿದೆ.

ಹೊಸ ಇ‍ವಿ ನಿಯಮ ಘೋಷಿಸಿದ ತಮಿಳುನಾಡು ಸರ್ಕಾರ

ಗ್ಯಾಸೋಲಿನ್ ಚಾಲಿತ ಮತ್ತು ಎಲೆಕ್ಟ್ರಿಕ್ ವಾಹನಗಳನ್ನು ಆಯ್ಕೆ ಮಾಡುವ ವಾಹನ ಚಾಲಕರಿಗೆ ಜಾರ್ಜಿಂಗ್ ಕೇಂದ್ರ ಮತ್ತು ಮೂಲಸೌಕರ್ಯಗಳನ್ನು ಒದಗಿಸುವುದು ದೊಡ್ಡ ಸವಾಲಾಗಿದೆ. ಸಾರ್ವಜನಿಕರಿಗೆ ಯಾವುದೇ ಸಮಸ್ಯೆಗಳು ಉಂಟಾಗಬಾರದೆಂದು ಹೆದ್ದಾರಿಯ ಎರಡು ಬದಿಯಲ್ಲಿ ಪ್ರತಿ 25 ಕಿ.ಮೀ ಅಂತರದಲ್ಲಿ ಜಾರ್ಜಿಂಗ್ ಸ್ಟೇಷನ್ ಅನ್ನು ಇರಿಸಲು ಸರ್ಕಾರ ಚಿಂತಿಸಿದೆ. ಸಾರ್ವಜನಿಕ ಪ್ರದೇಶಗಳಾದ ಮಾಲ್‍‍ಗಳು, ಸಿನಿಮ ಮಂದಿರ, ಆಸ್ಪತ್ರೆಗಳು, ಸರ್ಕಾರಿ ಕಚೇರಿಗಳು, ವಾಹನ ಪಾರ್ಕಿಂಗ್ ಸ್ಥಳಗಳಲ್ಲಿ ಚಾರ್ಜಿಂಗ್ ಸ್ಟೇಷನ್ ಇರಿಸಲು ಸರ್ಕಾರ ಯೋಚಿಸಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಹೊಸ ಇ‍ವಿ ನಿಯಮ ಘೋಷಿಸಿದ ತಮಿಳುನಾಡು ಸರ್ಕಾರ

ಎಲೆಕ್ಟ್ರಿಕ್ ವಾಹನಗಳ ಉತ್ತೇಜಿಸಲು ಮೊದಲ ಹಂತದಲ್ಲಿ ಪ್ರಮುಖ ಆರು ನಗರಗಳನ್ನು ಕೇಂದ್ರೀಕರಿಸಲು ಯೋಜಿಸಿದೆ. ತಮಿಳುನಾಡಿನ ಪ್ರಮುಖ ನಗರಗಳಾದ ಚೆನ್ನೈ, ಕೊಯಮತ್ತೂರು, ತಿರುಚ್ಚಿ, ಮಧುರೈ, ಸೇಲಂ ಮತ್ತು ತಿರುನೆಲ್‍‍ವೇಲಿಯನ್ನು ಆಯ್ಕೆ ಮಾಡಿಕೊಂಡಿದೆ. ಕೇವಲ 10 ವರ್ಷಗಳಲ್ಲಿ ಆಟೋ ರಿಕ್ಷಾ ಮತ್ತು ಕ್ಯಾಬ್‍‍ಗಳೊಂದಿಗೆ ಎಲ್ಲಾ ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸಲು ಚಿಂತಿಸಿದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಹೊಸ ಇ‍ವಿ ನಿಯಮ ಘೋಷಿಸಿದ ತಮಿಳುನಾಡು ಸರ್ಕಾರ

ಮಹೀಂದ್ರಾ ಎಲೆಕ್ಟ್ರಿಕ್ ಸಿಇಒ, ಮಹೇಶ್ ಬಾಬು ಅವರು ಮಾತನಾಡಿ, ತಮಿಳುನಾಡು ಸರ್ಕಾರ ಹೊಸ ನೀತಿಯನ್ನು ನಾವು ಸ್ವಾಗತಿಸುತ್ತೇವೆ. ಇದು ಪಗ್ರತಿಪರ ಮತ್ತು ಪ್ರಕೃತಿಯ ಅಭಿವೃದ್ದಿಗೆ ಸಹಕಾರಿಯಾಗಿದೆ. ಸರ್ವಾಜನಿಕ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸುವುದು ಉತ್ತಮ ನಿರ್ಧಾರ. ಹೊಸ ನೀತಿ ಅನ್ವಯ ರಸ್ತೆ ತೆರಿಗೆ ವಿನಾಯಿತಿ, ಶೋನ್ಯ ಪರವಾನಗಿ ಶುಲ್ಕ, ತ್ರಿಚಕ್ರ ವಾಹನಗಳಿಗೆ ನೋಂದಣೆ ಶುಲ್ಕ ಮನ್ನಾ ಮುಂತಾದ ಪೋತ್ಸಾಹ ನೀತಿಗಳು ನೀಡುವುದು ಪ್ರಶಂಸಿಸುತ್ತೇವೆ. ಶೀಘ್ರದಲ್ಲೇ ಈ ನೀತಿಯನ್ನು ಅನುಷ್ಠಾನವಾಗುದನ್ನು ನಾವು ಎದಿರು ನೋಡುತ್ತಿದ್ದೇವೆ. ತಮಿಳುನಾಡು ಸರ್ಕಾರದೊಂದಿಗೆ ಮಹೀಂದ್ರಾ ಸಂಸ್ಥೆಯು ಸ್ಪಂದಿಸುತ್ತೇವೆ ಎಂದು ಹೇಳಿದರು.

MOST READ: ಭಾರತದಲ್ಲಿ ಐಕಾನಿಕ್ ಯಜ್ಡಿ ಬೈಕ್‌ಗಳ ಮರುಬಿಡುಗಡೆ ಪಕ್ಕಾ

ಹೊಸ ಇ‍ವಿ ನಿಯಮ ಘೋಷಿಸಿದ ತಮಿಳುನಾಡು ಸರ್ಕಾರ

ಹೆಚ್ಚುತ್ತಿರುವ ಮಾಲಿನ್ಯ ಸಮಸ್ಯೆಗೆ ತಮಿಳುನಾಡು ಸರ್ಕಾರದ ಉತ್ತಮ ಹೆಚ್ಚೆ ಇಟ್ಟಿದೆ. ಸಾರ್ವಜನಿಕ ಸಾರಿಗೆಯನ್ನು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸುವುದಕ್ಕೆ ಉತ್ತೇಜಿಸುವುದು ತಮಿಳುನಾಡು ಸರ್ಕಾರದ ಉತ್ತಮ ನಿರ್ಧಾರವಾಗಿದೆ. ತಮಿಳುನಾಡು ಸರ್ಕಾರದ ಹೊಸ ನಿಯಮ ಹಲವು ರಾಜ್ಯಗಳಿಗೆ ಮಾದರಿಯಾಗಿದೆ.

Most Read Articles

Kannada
English summary
Tamil Nadu Announced A New EV Policy: Aims At Becoming EV Hub Of IndiaRead more at: https://www.drivespark.com/four-wheelers/2019/tamil-nadu-new-electric-vehicle-policy-announced-aims-at-becoming-ev-hub-029418.htmlTamil Nadu Announced A New EV Policy: Aims At Becoming EV Hub Of India - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X