Just In
Don't Miss!
- Finance
ಡಿ. 16ರಿಂದ ದಿನದ 24 ಗಂಟೆ, ವರ್ಷದ 365 ದಿನವೂ NEFT ವರ್ಗಾವಣೆ
- Education
ಪ್ರಧಾನಿ ಜೊತೆ ಪರೀಕ್ಷಾ ಪೇ ಚರ್ಚಾ-2020ರ ಮಾತುಕತೆಗೆ ಇಂದೇ ರಿಜಿಸ್ಟರ್ ಮಾಡಿ
- News
ಮೋದಿ ಟೀ ಮಾರುತ್ತಿದ್ದರು, ಆದರೆ ಬಿಜೆಪಿಗರಿಗೆ ಟೀ ಎಂದರೆ ಆಗೊಲ್ಲ: ಉದ್ಧವ್ ಠಾಕ್ರೆ
- Lifestyle
ಪಾರ್ಕಿನ್ಸನ್ಸ್ ಅಪಾಯವನ್ನು ಕಣ್ಣು ನೋಡಿ ಮೊದಲೇ ಅರಿಯಬಹುದು
- Technology
2020ಕ್ಕೆ ಆಪಲ್ನಿಂದ 5G ಐಫೋನ್ ಪಕ್ಕಾ ಅಂತೆ..!
- Movies
KPL ಫಿಕ್ಸಿಂಗ್ ಪ್ರಕರಣ: ನಟಿಯರಿಗೆ ಶಾಕ್ ನೀಡಿದ ಕಮಿಷನರ್ ಭಾಸ್ಕರ್ ರಾವ್
- Sports
ವೆಸ್ಟ್ ಇಂಡೀಸ್ ವಿರುದ್ಧ ಭಾರತ ಎಡವಿದ್ದೆಲ್ಲಿ?: ಸೋಲಿಗೆ ಪ್ರಮುಖ ಕಾರಣಗಳು!
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ಬಿಡುಗಡೆಗಾಗಿ ಭರ್ಜರಿ ಸಿದ್ದತೆ ನಡೆಸಿದ ಟಾಟಾ ಆಲ್‌ಟ್ರೊಜ್
ಟಾಟಾ ಬಹುನೀರಿಕ್ಷಿತ ಆಲ್‌ಟ್ರೊಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿಯು ಇದೇ ವರ್ಷ ಡಿಸೆಂಬರ್ ಆರಂಭದಲ್ಲಿ ಅನಾವರಣಗೊಳ್ಳಲು ಸಜ್ಜಾಗುತ್ತಿದ್ದು, ತದನಂತರ 2020ರ ಜನವರಿ ಆರಂಭದಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರು ಹಲವಾರು ಪ್ರೀಮಿಯಂ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.

ಟಾಟಾ ಸಂಸ್ಥೆಯು ಸದ್ಯ ಆಲ್‌ಟ್ರೊಜ್ ಕಾರು ಮಾದರಿಯಲ್ಲಿ ಬಿಎಸ್-4 ಎಂಜಿನ್ ಮಾದರಿಯನ್ನು ಜೋಡಣೆ ಮಾಡಿ ರೋಡ್ ಟೆಸ್ಟಿಂಗ್ ನಡೆಸುತ್ತಿದ್ದು, ಹೊಸ ಕಾರನ್ನು ಇದೀಗ ಬಿಡುಗಡೆ ಮಾಡಿದರೂ ಸಹ ಮುಂಬರುವ ಕೆಲವೇ ದಿನಗಳಲ್ಲಿ ಮತ್ತೊಂದು ಬಾರಿ ಎಂಜಿನ್ ಉನ್ನತೀಕರಣ ಮಾಡಬೇಕಾಗುತ್ತದೆ. ಹೀಗಾಗಿ ಆಲ್‌ಟ್ರೊಜ್ ಕಾರಿನ ಬಿಡುಗಡೆಯನ್ನು ತಾತ್ಕಾಲಿಕವಾಗಿ ಮುಂದೂಡುತ್ತಾ ಬಂದಿದ್ದ ಟಾಟಾ ಸಂಸ್ಥೆಯು ಇದೀಗ ಬಿಎಸ್-6 ಎಂಜಿನ್‌ನೊಂದಿಗೆಯೇ ಅನಾವರಣಗೊಳಿಸಿ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.

ಮಾಹಿತಿಗಳ ಪ್ರಕಾರ 2019ರ ಡಿಸೆಂಬರ್ ಆರಂಭದಲ್ಲಿ ಆಲ್‌ಟ್ರೊಜ್ ಕಾರಿನ ಉತ್ಪಾದನಾ ಆವೃತ್ತಿಯು ಅನಾವರಣಗೊಳ್ಳಲಿದ್ದು, ತದನಂತರ 2020ರ ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಎಕ್ಸ್‌ಪೋ ಪ್ರದರ್ಶನಕ್ಕೂ ಮುನ್ನ ಹೊಸ ಕಾರು ಅಧಿಕೃತವಾಗಿ ಲಭ್ಯವಾಗಲಿದೆ.

ಹ್ಯಾರಿಯರ್ ಎಸ್‌ಯುವಿ ಬಿಡುಗಡೆಯ ಯಶಸ್ವಿ ನಂತರ ಭವಿಷ್ಯದಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳ ಉತ್ಪಾದನೆಯಲ್ಲಿ ಮಹತ್ವದ ಹೆಜ್ಜೆಯಿಡುತ್ತಿರುವ ಟಾಟಾ ಸಂಸ್ಥೆಯು ಭಾರತೀಯ ಆಟೋ ಉದ್ಯಮದಲ್ಲಿ ಭಾರೀ ಬದಲಾವಣೆಗೆ ಮುಂದಾಗಿದ್ದು, ಹೊಸ ಕಾರು ಹಲವು ವಿಶೇಷತೆಗಳನ್ನು ಹೊತ್ತುಬರುವ ನೀರಿಕ್ಷೆಯಲ್ಲಿದೆ.

ಆಲ್ಬಾಟ್ರೊಸ್ ಎನ್ನುವ ಸಮುದ್ರ ಹಕ್ಕಿಯ ಬಲಿಷ್ಠತೆ ಮತ್ತು ಚತುರತೆಯ ಪ್ರೇರಣೆಯೊಂದಿಗೆ ಆಲ್‌ಟ್ರೊಜ್ ಕಾರನ್ನು ನಿರ್ಮಾಣ ಮಾಡಿರುವ ಟಾಟಾ ಸಂಸ್ಥೆಯು ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಬಲೆನೊ ಮತ್ತು ಹ್ಯುಂಡೈ ಐ20 ಕಾರುಗಳಿಗೆ ಪ್ರಬಲ ಪೈಪೋಟಿಯಾಗಿ ಮಾರುಕಟ್ಟೆಗೆ ಪ್ರವೇಶ ಪಡೆಯುವುದು ಬಹುತೇಕ ಖಚಿತವಾಗಿದೆ. ಆಲ್‌ಟ್ರೊಜ್ ಕಾರು ಬಿಎಸ್-6 ಮಾದರಿಯ ಪೆಟ್ರೋಲ್ ಆವೃತ್ತಿಯಲ್ಲಿ ಎರಡು ಎಂಜಿನ್ ಆಯ್ಕೆಗಳು ಇರಲಿದ್ದು, ಡೀಸೆಲ್ ಆವೃತ್ತಿಯಲ್ಲಿ ಒಂದು ಆಯ್ಕೆ ಮಾತ್ರ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ.

ಟಾಟಾ ಸಂಸ್ಥೆಯು ಹೊಸ ಕಾರಿನ ಎಂಜಿನ್ ಪರ್ಫಾಮೆನ್ಸ್‌ನಲ್ಲಿ ಕೆಲವು ಗಮನಸೆಳೆಯಬಹುದಾದ ಬದಲಾವಣೆಗಳನ್ನು ಮಾಡಿದ್ದು, ಪ್ರಮುಖ ವಿಚಾರ ಅಂದ್ರೆ ಹೊಸ ಆಲ್‌ಟ್ರೊಜ್ ಕಾರನ್ನು ಸಹ ಇಂಪ್ಯಾಕ್ಟ್ ಡಿಸೈನ್ 2.0 ಅಡ್ವಾನ್ಸ್ ಆಕ್ಟಿಟೆಕ್ಕರ್ ವಿನ್ಯಾಸದೊಂದಿಗೆ ಅಭಿವೃದ್ಧಿಗೊಳಿಸಲಾಗಿದೆ.

ಇದು ಕಾರಿನ ತೂಕವನ್ನು ಕಡಿತಗೊಳಿಸುವಲ್ಲಿ ಸಾಕಷ್ಟು ನೆರವಾಗಿದ್ದು, ಇದು ನೇರವಾಗಿ ಕಾರಿನ ಎಂಜಿನ್ ಪರ್ಫಾಮೆನ್ಸ್ ಸುಧಾರಣೆಯಾಗುವುದಲ್ಲದೇ ಮೈಲೇಜ್ ಪ್ರಮಾಣ ಕೂಡಾ ಹೆಚ್ಚಳವಾಗಿರುವುದು ಸ್ಪಾಟ್ ಟೆಸ್ಟಿಂಗ್ ವೇಳೆ ಖಚಿತವಾಗಿದೆ.

ಆದ್ರೆ ಕಾರಿನ ಒಳವಿನ್ಯಾಸಗಳ ಬಗ್ಗೆ ಯಾವುದೇ ಅಧಿಕೃತ ತಾಂತ್ರಿಕ ಮಾಹಿತಿಗಳನ್ನು ಬಿಟ್ಟುಕೊಡದ ಟಾಟಾ ಮೋಟಾರ್ಸ್ ಸಂಸ್ಥೆಯು 2020ರ ಫೆಬ್ರುವರಿಯಲ್ಲಿ ಬಿಡುಗಡೆಗೊಳಿಸುವ ಸುಳಿವು ನೀಡಿದ್ದು, ಹೊಸ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 6.50 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.8.50 ಲಕ್ಷಕ್ಕೆ ನಿಗದಿಯಾಗಬಹುದು ಎಂದು ಅಂದಾಜಿಸಲಾಗಿದೆ.

ಇದರೊಂದಿಗೆ ಟಾಟಾ ಸಂಸ್ಥೆಯು ಹೊಸ ಆಲ್‌ಟ್ರೋಜ್ ಕಾರುನ್ನು ಸಹ ಈ ಹಿಂದಿನ ನೆಕ್ಸಾನ್ ಮತ್ತು ಹ್ಯಾರಿಯರ್ ಮಾದರಿಯಲ್ಲೇ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಪ್ರಯಾಣಿಕರ ಸುರಕ್ಷತೆಯಲ್ಲಿ 5 ಸ್ಟಾರ್ ರೇಟಿಂಗ್ ಒದಗಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದೆ. ಇದರಿಂದ ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ವಿಶೇಷ ಎನ್ನಿಸಲಿರುವ ಹೊಸ ಆಲ್‌ಟ್ರೋಜ್ ಕಾರು ಹ್ಯುಂಡೈ ಐ20 ಮತ್ತು ಮಾರುತಿ ಬಲೆನೊ ಕಾರುಗಳಿಗೆ ಟಕ್ಕರ್ ನೀಡಲಿದೆ.
Source: Zigwheels