ಸ್ಪಾಟ್ ಟೆಸ್ಟಿಂಗ್ ವೇಳೆ ಲಡಾಕ್‍ನಲ್ಲಿ ಕಾಣಿಸಿಕೊಂಡ ಟಾಟಾ ಆಲ್‍ಟ್ರೋಜ್

ಟಾಟಾ ಮೋಟಾರ್ಸ್ ಸಂಸ್ಥೆಯು ಈ ವರ್ಷದಲ್ಲಿ ಪ್ರತೀ ಸೆಗ್ಮೆಂಟ್‍ನಲ್ಲಿ ಹೊಸ ವಾಹನಗಳನ್ನು ಮತ್ತು ಈಗಾಗಲೇ ಇರುವ ವಾಹನಗಳನ್ನು ಅಪ್ಗ್ರೇಡ್ ಮಾಡಿ ಬಿಡುಗಡೆ ಮಾಡುವ ಕಾರ್ಯದಲ್ಲಿದ್ದು, ಸಧ್ಯಕ್ಕೆ ಇನ್ನು ಕೆಲವೇ ದಿನಗಳಲ್ಲಿ ತಮ್ಮ ಹೊಚ್ಚ ಹೊಸ ಪ್ರೀಮಿಯಂ ಹ್ಯಾಚ್‍ಬ್ಯಾಕ್ ಟಾಟಾ ಆಲ್‍ಟ್ರೋಜ್ ಕಾರನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಲಡಾಕ್‍ನಲ್ಲಿ ಕಾಣಿಸಿಕೊಂಡ ಟಾಟಾ ಆಲ್‍ಟ್ರೋಜ್

ಮುಂದಿನ ತಿಂಗಳು ದೇಶಿಯ ಮಾರಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಟಾಟಾ ಆಲ್‍ಟ್ರೋಜ್ ಕಾರು ಪ್ರೀಮಿಯಂ ಸೆಗ್ಮೆಂಟ್‍ನಲ್ಲಿ ಸಂಚಲ ಸೃಷ್ಠಿಸಲಿದ್ದು, ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಬಲೆನೊ, ಟೊಯೊಟಾ ಗ್ಲಾಂಝಾ, ಹ್ಯುಂಡೈ ಐ20 ಮತ್ತು ಹೋಂಡಾ ಜಾಝ್ ಕಾರುಗಳಿಗೆ ಪೈಪೋಟಿ ನೀಡಲಿದೆ. ಈ ಕಾರು ಸಧ್ಯಕ್ಕೆ ಬಿಡುಗಡೆಗೂ ಮುನ್ನೆ ದೇಶದಲ್ಲಿರುವ ಹಲವಾರು ಪ್ರದೇಶಗಳಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದ್ದು, ಇದೀಗ ಲಧಾಕ್‍ನಲ್ಲಿನ ಲೆಹ್‍‍ನಲ್ಲಿ ಕಾಣಿಸಿಕೊಂಡಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಲಡಾಕ್‍ನಲ್ಲಿ ಕಾಣಿಸಿಕೊಂಡ ಟಾಟಾ ಆಲ್‍ಟ್ರೋಜ್

ಕಳೆದ ವರ್ಷದಲ್ಲಿ ನಡೆದ ಗ್ಲೋಬಲ್ ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಟಾಟಾ ನೆಕ್ಸಾನ್ ಕಾರು 5ಕ್ಕೆ 5 ಅಂಕವನ್ನು ಪಡೆದು ಭಾತದ ಸೇಪೆಸ್ಟ್ ಎಸ್‍ಯುವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಇದೀಗ ಟಾಟಾ ಮೋಟಾರ್ಸ್ ಸಂಸ್ಥೆಯು ತಮ್ಮ ಆಲ್‍ಟ್ರೋಜ್ ಕಾರನ್ನು ಆಲ್ಫಾ ಪ್ಲಾಟ್‍‍ಫಾರ್ಮ್‍ನ ಅಡಿಯಲ್ಲಿ ನಿರ್ಮಾಣ ಮಾಡಲಿರುವ ಕಾರಣ ಈ ಕಾರು ಮತ್ತಷ್ಟು ಬಲಿಷ್ಠವಾಗಿ ಅಭಿವೃದ್ದಿಗೊಳ್ಳಲಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಲಡಾಕ್‍ನಲ್ಲಿ ಕಾಣಿಸಿಕೊಂಡ ಟಾಟಾ ಆಲ್‍ಟ್ರೋಜ್

ಟಾಟಾ ಆಲ್‍ಟ್ರೋಜ್ ಕಾರು ಇದೇ ವರ್ಷದ ಹಬ್ಬದ ಋತುವಿನಲ್ಲಿ ಬಿಡುಗಡೆಯಾಗುವ ಬಹಳಷ್ಟು ಸಾಧ್ಯತೆಗಾಳಿದ್ದು, ದಿನದಿಂದ ದಿನಕ್ಕೆ ಈ ಕಾರಿನ ಬಗ್ಗೆ ಹೆಚ್ಚು ಮಾಹಿತಿಯು ಹೊರ ಬರುತ್ತಿದೆ. ಈಗಾಗಲೇ ಈ ಕಾರಿನ ಗುಣಮಟ್ಟ, ಸೇಫ್ಟಿ ಫೀಚರ್ಸ್, ಎಂಜಿನ್ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಇದೀಗ ವರದಿಗಳ ಪ್ರಕಾರ ಟಾಟಾ ಆಲ್‍ಟ್ರೋಜ್ ಕಾರು ಮ್ಯಾನುವಲ್ ಗೇರ್‍‍ಬಾಕ್ಸ್ ಆಯ್ಕೆಯಲ್ಲಿ ಮಾತ್ರ ಮೊದಲಿದೆ ಬಿಡುಗಡೆಯಾಗಲಿದೆ. ನಂತರ ದಿನಗಳಲ್ಲಿ ಅಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಯಲ್ಲಿ ಕೂಡಾ ಲಭ್ಯವಾಗುವ ಸಾಧ್ಯತೆಗಳಿವೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಲಡಾಕ್‍ನಲ್ಲಿ ಕಾಣಿಸಿಕೊಂಡ ಟಾಟಾ ಆಲ್‍ಟ್ರೋಜ್

ಹಾಗೆಯೆ ಟಾಟಾ ಅಲ್‍ಟ್ರೋಜ್ ಕಾರಿನ ಬಗ್ಗೆ ಮತ್ತೊಂದು ಮಾಹಿತಿ ಲಭ್ಯವಾಗಿದ್ದು, ಟಾಟಾ ಟಿಯಾಗೊ ಜೆಟಿಪಿ ಕಾರನಲ್ಲಿ ನೀಡಲಾದ 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಈ ಕಾರಿನಲ್ಲಿಯೂ ನೀಡಲಿದೆ ಎಂಬ ಮಾಹಿತಿಯು ಲಭ್ಯವಾಗಿದೆ. ಅಲ್‍ಟ್ರೋಜ್ ಕಾರು ಜೆಟಿಪಿ ಎಂಜಿನ್ ಪಡೆದಿದ್ದೆ ಆದಲ್ಲಿ ಈ ಕಾರು 114 ಬಿಹೆಚ್‍ಪಿ ಮತ್ತು 150 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿರಲಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಲಡಾಕ್‍ನಲ್ಲಿ ಕಾಣಿಸಿಕೊಂಡ ಟಾಟಾ ಆಲ್‍ಟ್ರೋಜ್

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಆಲ್ಬಾಟ್ರೊಸ್ ಎನ್ನುವ ಸಮುದ್ರ ಹಕ್ಕಿಯ ಬಲಿಷ್ಠತೆ ಮತ್ತು ಚತುರತೆಯ ಪ್ರೇರಣೆಯೊಂದಿಗೆ ಆಲ್‌ಟ್ರೊಜ್ ಕಾರನ್ನು ನಿರ್ಮಾಣ ಮಾಡಿರುವ ಟಾಟಾ ಸಂಸ್ಥೆಯು ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಬಲೆನೊ ಮತ್ತು ಹ್ಯುಂಡೈ ಐ20 ಕಾರುಗಳಿಗೆ ಪ್ರಬಲ ಪೈಪೋಟಿಯಾಗಿ ಮಾರುಕಟ್ಟೆಗೆ ಪ್ರವೇಶ ಪಡೆಯುವುದು ಬಹುತೇಕ ಖಚಿತವಾಗಿದೆ. ಇದಕ್ಕೆ ಕಾರಣ, ಆಲ್‌ಟ್ರೊಜ್ ಕಾರಿನ ಎಂಜಿನ್ ಪರ್ಫಾಮೆನ್ಸ್ ಗುಣಲಕ್ಷಣಗಳು ಇತರೆ ಹ್ಯಾಚ್‌ಬ್ಯಾಕ್ ಆವೃತ್ತಿಗಳಿಂತಲೂ ಉತ್ತಮವಾಗಿರುವುದಲ್ಲದೇ ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತುಬರಲಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಲಡಾಕ್‍ನಲ್ಲಿ ಕಾಣಿಸಿಕೊಂಡ ಟಾಟಾ ಆಲ್‍ಟ್ರೋಜ್

ಮಾಹಿತಿಗಳ ಪ್ರಕಾರ ಟಾಟಾ ಅಲ್‍ಟ್ರೋಜ್ ಕಾರಿನಲ್ಲಿ ಸ್ಲಿಮ್ ಹೆಡ್‍ಲ್ಯಾಂಪ್ಸ್, ಆಕರ್ಷಕವಾದ ಫ್ರಂಟ್ ಗ್ರಿಲ್, ಪಿಯಾನೊ ಬ್ಲಾಕ್ ಒಆರ್‍‍ವಿಎಂ, ಮತ್ತು ಸಿಗ್ನೇಚರ್ ಗ್ರಿಲ್ ಅನ್ನು ಹೊಂದಿರಲಿದ್ದು, ಇವುಗಳ ಜೊತೆಗೆ ಈ ಕಾರಿನ ಟಾಪ್ ಸ್ಪೆಕ್ ಮಾಡಲ್‍‍ನಲ್ಲಿ 16 ಇಂಚಿನ ಅಲಾಯ್ ವ್ಹೀಲ್ಸ್ ಅನ್ನು ಸಹ ಅಳವಡಿಸಲಾಗಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಲಡಾಕ್‍ನಲ್ಲಿ ಕಾಣಿಸಿಕೊಂಡ ಟಾಟಾ ಆಲ್‍ಟ್ರೋಜ್

ವೈಶಿಷ್ಟ್ಯತೆಗಳು

ಇನ್ನು ಕಾರಿನ ಒಳಭಾಗದಲ್ಲಿ 7 ಇಂಚಿನ ಫ್ಲೋಟಿಂಗ್ ಇನ್ಫೋಟೈನ್ಮೆಂಟ್ ಸಿಸ್ಟಂ, ಟಿಎಫ್‍ಟಿ ಕ್ಲಸ್ಟರ್ ಡಿಸ್ಪ್ಲೇ, ರಿಯರ್ ಎಸಿ ವೆಂಟ್ಸ್ ಅನ್ನು ಪಡೆದುಕೊಂಡಿರಲಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ ಇದರಲ್ಲಿ ಕ್ರೂಸ್ ಕಂತ್ರೋಲ್, ಡ್ರೈವರ್ ಮತ್ತು ಕೋ ಡ್ರೈವರ್ ಏರ್‍‍ಬ್ಯಾಗ್ಸ್, ಸೀಟ್ ಬೆಲ್ಟ್ ರಿಮೈಂಡರ್, ಪಾರ್ಕಿಂಗ್ ಅಸಿಸ್ಟ್, ಎಬಿಡಿ, ಇಬಿಡಿ, ಐಎಸ್ಒಫಿಕ್ಸ್ ಚೈಲ್ಡ್ ಸೀಟ್ ಮೌಂಟ್ಸ್ ಮತ್ತು ರಿಯರ್ ಸೆನ್ಸಾರ್ಸ್ ಹಾಗು ಕ್ಯಾಮೆರಾವನ್ನು ನೀಡಲಾಗಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಲಡಾಕ್‍ನಲ್ಲಿ ಕಾಣಿಸಿಕೊಂಡ ಟಾಟಾ ಆಲ್‍ಟ್ರೋಜ್

ಪ್ರಮುಖ ವಿಚಾರ ಅಂದ್ರೆ, ಟಾಟಾ ಸಂಸ್ಥೆಯು ಸದ್ಯ ಜೆಎಲ್ಆರ್ ಸಂಸ್ಥೆಯ ಜೊತೆಗೂಡಿ ಕಾರು ನಿರ್ಮಾಣದಲ್ಲಿ ಭಾರೀ ಬದಲಾವಣೆ ತರುತ್ತಿದ್ದು, ಹ್ಯಾರಿಯರ್ ಕಾರು ಮಾದರಿಯಲ್ಲೇ ಹೊಸ ಆಲ್‌ಟ್ರೊಜ್ ಕಾರನ್ನು ಸಹ ಇಂಪ್ಯಾಕ್ಟ್ ಡಿಸೈನ್ 2.0 ಅಡ್ವಾನ್ಸ್ ಆಕ್ಟಿಟೆಕ್ಕರ್ ವಿನ್ಯಾಸದೊಂದಿಗೆ ಅಭಿವೃದ್ಧಿಗೊಳಿಸಿರುವುದು ಕಾರಿನ ತೂಕವನ್ನು ಕಡಿತಗೊಳಿಸುವಲ್ಲಿ ಸಾಕಷ್ಟು ನೆರವಾಗಿದೆ. ಇದು ನೆರವಾಗಿ ಕಾರಿನ ಎಂಜಿನ್ ಪರ್ಫಾಮೆನ್ಸ್ ಪರಿಣಾಮ ಬೀರುವುದಲ್ಲದೇ ಮೈಲೇಜ್ ಪ್ರಮಾಣ ಕೂಡಾ ಹೆಚ್ಚಳವಾಗಲಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಲಡಾಕ್‍ನಲ್ಲಿ ಕಾಣಿಸಿಕೊಂಡ ಟಾಟಾ ಆಲ್‍ಟ್ರೋಜ್

ಆದ್ರೆ ಕಾರಿನ ಒಳವಿನ್ಯಾಸಗಳ ಬಗ್ಗೆ ಯಾವುದೇ ತಾಂತ್ರಿಕ ಮಾಹಿತಿಗಳನ್ನು ಬಿಟ್ಟುಕೊಡದ ಟಾಟಾ ಮೋಟಾರ್ಸ್ ಸಂಸ್ಥೆಯು ಇದೇ ವರ್ಷ ಜೂನ್ ಅಥವಾ ಜುಲೈ ಅಂತ್ಯಕ್ಕೆ ಬಿಡುಗಡೆಗೊಳಿಸುವ ಸುಳಿವು ನೀಡಿದ್ದು, ಹೊಸ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 5 ಲಕ್ಷದಿಂದ ರೂ.8 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Source: Rushlane

Most Read Articles

Kannada
English summary
Tata Altroz Spotted While Testing In Leh Ladak. Read In Kannada
Story first published: Wednesday, July 10, 2019, 13:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X