ಹೊಸ ಯೋಜನೆಗಾಗಿ ಟಾಟಾ ಮೋಟಾರ್ಸ್‌ನಿಂದ 4 ಸಾವಿರ ಕೋಟಿ ಹೂಡಿಕೆ..!

ಭಾರತದಲ್ಲಿ ಸದ್ಯ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ವಾಹನ ಉತ್ಪಾದನಾ ಸಂಸ್ಥೆಗಳ ನಡುವೆ ಪೈಪೋಟಿ ಶುರುವಾಗಿದ್ದು, ಟಾಟಾ ಮೋಟಾರ್ಸ್ ಸಂಸ್ಥೆಯು ಹೊಸ ಯೋಜನೆಯೊಂದಕ್ಕೆ ಸಿದ್ದತೆ ನಡೆಸುತ್ತಿದೆ. ಈಗಾಗಲೇ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮತ್ತು ಮಾರಾಟವನ್ನು ಶುರು ಮಾಡಿರುವ ಟಾಟಾ ಸದ್ಯದಲ್ಲೇ ದೇಶಿಯಾಗಿ ಉತ್ತಮ ಮೈಲೇಜ್ ಪ್ರೇರಣೆ ಹೊಂದಿರುವ ಲೀಥಿಯಂ ಅಯಾನ್ ಬ್ಯಾಟರಿ ಉತ್ಪಾದನೆಗೂ ಚಾಲನೆ ನೀಡುತ್ತಿದೆ.

ಹೊಸ ಯೋಜನೆಗಾಗಿ ಟಾಟಾ ಮೋಟಾರ್ಸ್‌ನಿಂದ 4 ಸಾವಿರ ಕೋಟಿ ಹೂಡಿಕೆ..!

ಪ್ರಸ್ತುತ ಮಾರುಕಟ್ಟೆಯಲ್ಲಿ ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು ಎಲೆಕ್ಟ್ರಿಕ್ ವಾಹನಗಳಿಗಾಗಿ ವಿದೇಶಿ ಮಾರುಕಟ್ಟೆಯಿಂದಲೇ ಲೀಥಿಯಂ ಬ್ಯಾಟರಿಯನ್ನು ಆಮದು ಮಾಡಿಕೊಳ್ಳುತ್ತಿದ್ದು, ಮುಂಬರುವ ಕೆಲವೇ ದಿನಗಳಲ್ಲಿ ಭಾರತದಲ್ಲೇ ಲೀಥಿಯಂ ಅಯಾನ್ ಬ್ಯಾಟರಿ ಉತ್ಪಾದನಾ ಘಟಕಗಳು ಶುರುವಾಗುತ್ತಿರುವುದು ಎಲೆಕ್ಟ್ರಿಕ್ ಕಾರುಗಳ ಬೆಲೆ ಇಳಿಕೆಗೆ ಅನುಕೂಲಕರವಾಗಲಿದೆ. ಇದಕ್ಕಾಗಿಯೇ ಟಾಟಾ ಸಂಸ್ಥೆಯು ಭಾರೀ ಪ್ರಮಾಣದ ಬಂಡವಾಳದೊಂದಿಗೆ ಲೀಥಿಯಂ ಅಯಾನ್ ಬ್ಯಾಟರಿ ಉತ್ಪಾದನೆಗೆ ಮುಂದಾಗಿದ್ದು, ಹೊಸ ಘಟಕ ನಿರ್ಮಾಣಕ್ಕೆ ಈಗಾಗಲೇ ಚಾಲನೆ ನೀಡಿದೆ.

ಹೊಸ ಯೋಜನೆಗಾಗಿ ಟಾಟಾ ಮೋಟಾರ್ಸ್‌ನಿಂದ 4 ಸಾವಿರ ಕೋಟಿ ಹೂಡಿಕೆ..!

ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು ಸದ್ಯ ಲೀಥಿಯಂ ಅಯಾನ್ ಬ್ಯಾಟರಿ ಉತ್ಪನ್ನಕ್ಕಾಗಿ ಚೀನಿ ಮತ್ತು ತೈವಾನ್ ಮಾರುಕಟ್ಟೆಯನ್ನೇ ಅವಲಂಬಿಸಿದ್ದು, ಕಳೆದ ವರ್ಷದ ಆರ್ಥಿಕ ವರ್ಷದ ಅವಧಿಯಲ್ಲಿ ಬರೋಬ್ಬರಿ ರೂ.56 ಸಾವಿರ ಕೋಟಿಯಷ್ಟು ವ್ಯವಹಾರ ನಡೆದಿದೆ.

ಹೊಸ ಯೋಜನೆಗಾಗಿ ಟಾಟಾ ಮೋಟಾರ್ಸ್‌ನಿಂದ 4 ಸಾವಿರ ಕೋಟಿ ಹೂಡಿಕೆ..!

ಹೀಗಿರುವಾಗ ಭಾರತದಲ್ಲಿ ಇದುವರೆಗೂ ಯಾವುದೇ ಸಂಸ್ಥೆಯು ಲೀಥಿಯಂ ಅಯಾನ್ ಬ್ಯಾಟರಿ ಉತ್ಪಾದನಾ ಘಟಕಗಳನ್ನು ಹೊಂದಿಲ್ಲದೇ ಇರುವುದು ಎಲೆಕ್ಟ್ರಿಕ್ ವಾಹನಗಳ ಬೆಲೆಯು ದುಬಾರಿಯಾಗಿರುವುದಕ್ಕೆ ಪ್ರಮುಖ ಕಾರಣವಾಗಿದ್ದು, ಸ್ಥಳೀಯವಾಗಿಯೇ ಲೀಥಿಯಂ ಅಯಾನ್ ಬ್ಯಾಟರಿ ಉತ್ಪಾದನೆ ಶುರುವಾದಲ್ಲಿ ಇವಿ ವಾಹನ ಮಾರಾಟವು ಮತ್ತಷ್ಟು ಗರಿಗೆದರಲಿದೆ.

ಹೊಸ ಯೋಜನೆಗಾಗಿ ಟಾಟಾ ಮೋಟಾರ್ಸ್‌ನಿಂದ 4 ಸಾವಿರ ಕೋಟಿ ಹೂಡಿಕೆ..!

ಈ ನಿಟ್ಟಿನಲ್ಲಿ ಬೃಹತ್ ಯೋಜನೆ ರೂಪಿಸಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ರೂ.4 ಸಾವಿರ ಕೋಟಿ ಬಂಡವಾಳದೊಂದಿಗೆ ಗುಜರಾತ್‌ನಲ್ಲಿ ಹೊಸ ಲೀಥಿಯಂ ಅಯಾನ್ ಬ್ಯಾಟರಿ ಉತ್ಪಾದನಾ ಘಟಕ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಬರೋಬ್ಬರಿ 126 ಎಕರೆ ವಿಸ್ತೀರ್ಣದಲ್ಲಿ ದೇಶದ ಅತಿದೊಡ್ಡ ಬ್ಯಾಟರಿ ಉತ್ಪಾದನಾ ಘಟಕವನ್ನು ನಿರ್ಮಾಣ ಮಾಡುತ್ತಿದೆ. 10 ಗಿಗಾ ವ್ಯಾಟ್ ಸಾಮಾರ್ಥ್ಯದ ಬ್ಯಾಟರಿ ಉತ್ಪಾದನಾ ಘಟಕ ಇದಾಗಿದ್ದು, ದೇಶಿಯ ಮಾರುಕಟ್ಟೆಗಳಿಗೆ ಅಷ್ಟೇ ಅಲ್ಲದೇ ವಿದೇಶಿ ಮಾರುಕಟ್ಟೆಗಳಿಗೂ ರಫ್ತು ಮಾಡುವ ಗುರಿಹೊಂದಲಾಗಿದೆ.

ಹೊಸ ಯೋಜನೆಗಾಗಿ ಟಾಟಾ ಮೋಟಾರ್ಸ್‌ನಿಂದ 4 ಸಾವಿರ ಕೋಟಿ ಹೂಡಿಕೆ..!

ಇನ್ನು ಭಾರತದಲ್ಲಿ ಹೊಸ ವಾಹನ ಖರೀದಿದಾರರು ಎಲೆಕ್ಟ್ರಿಕ್ ವಾಹನ ಖರೀದಿ ಮೇಲೆ ಆಸಕ್ತಿ ಹೊಂದಿದ್ದರೂ ಸಹ ದುಬಾರಿ ಬೆಲೆ ಮತ್ತು ಚಾರ್ಜಿಂಗ್ ಸ್ಟೆಷನ್‌ಗಳ ಕೊರತೆಯಿಂದ ಹಿಂದೇಟು ಹಾಕುತ್ತಿದ್ದು, ಟಾಟಾ ಸಂಸ್ಥೆಯ ಹೊಸ ಯೋಜನೆಯು ಮತ್ತಷ್ಟು ಅನುಕೂಲಕರವಾಗಲಿದೆ.

ಹೊಸ ಯೋಜನೆಗಾಗಿ ಟಾಟಾ ಮೋಟಾರ್ಸ್‌ನಿಂದ 4 ಸಾವಿರ ಕೋಟಿ ಹೂಡಿಕೆ..!

ಕೇಂದ್ರ ಸರ್ಕಾರವು 2030ರ ಹೊತ್ತಿಗೆ ದೇಶಾದ್ಯಂತ ಶೇ.100 ಎಲೆಕ್ಟ್ರಿಕ್ ವಾಹನಗಳ ರಸ್ತೆಗಿಳಿಸುವ ಸಂಬಂಧ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮೇಲೆ ಹೆಚ್ಚಿನ ಗಮನಹರಿಸುವಂತೆ ಆಟೋ ಉತ್ಪಾದನಾ ಸಂಸ್ಥೆಗಳ ಮೇಲೆ ಒತ್ತಡ ಹೇರುತ್ತಿದ್ದು, ಎಲೆಕ್ಟ್ರಿಕ್ ವಾಹನ ಮಾರಾಟವನ್ನು ಹೆಚ್ಚಿಸುವ ಸಂಬಂಧ ಫೇಮ್ 2 ಯೋಜನೆಯನ್ನು ಸಹ ಘೋಷಣೆ ಮಾಡಿದೆ.

ಹೊಸ ಯೋಜನೆಗಾಗಿ ಟಾಟಾ ಮೋಟಾರ್ಸ್‌ನಿಂದ 4 ಸಾವಿರ ಕೋಟಿ ಹೂಡಿಕೆ..!

2018 ರಿಂದ 2021ರ ಅವಧಿಗಾಗಿ ಬರೋಬ್ಬರಿ ರೂ.10 ಸಾವಿರ ಕೋಟಿ ಮೀಸಲು ಇರಿಸಿರುವ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಖರೀದಿದಾರರ ಜೊತೆಗೆ ಆಟೋ ಉತ್ಪಾದನಾ ಸಂಸ್ಥೆಗಳನ್ನು ಉತ್ತೇಜಿಸಲು ಸಬ್ಸಡಿ ಯೋಜನೆಯನ್ನು ಜಾರಿಗೆ ಮಾಡಿದ್ದು, ಲೀಥಿಯಂ ಅಯಾನ್ ಬ್ಯಾಟರಿ ಹೊಂದಿರುವ ವಾಹನಗಳಿಗೆ ಮಾತ್ರವೇ ಸಬ್ಸಡಿ ಯೋಜನೆಯು ಅನ್ವಯವಾಗುವಂತೆ ತಿದ್ದುಪಡಿ ತಂದಿದೆ.

ಹೊಸ ಯೋಜನೆಗಾಗಿ ಟಾಟಾ ಮೋಟಾರ್ಸ್‌ನಿಂದ 4 ಸಾವಿರ ಕೋಟಿ ಹೂಡಿಕೆ..!

ಹೀಗಾಗಿ ಲೀಥಿಯಂ ಅಲಾಯ್ ಬ್ಯಾಟರಿ ಬಳಕೆಗಾಗಿ ಪ್ರತಿ ಆಟೋ ಸಂಸ್ಥೆಗಳು ಸಹ ಅಧಿಕ ಮಟ್ಟದಲ್ಲಿ ವಿದೇಶಿ ಬ್ಯಾಟರಿ ಉತ್ಪಾದನಾ ಸಂಸ್ಥೆಗಳಿಗೆ ಬೇಡಿಕೆ ಸಲ್ಲಿಸಿದ್ದು, ಭಾರತದಲ್ಲಿ ಬ್ಯಾಟರಿ ನಿರ್ಮಾಣ ಮಾಡಿದಲ್ಲಿ ವಿದೇಶಿ ಕಂಪನಿಗಳಿಗೆ ಸಲ್ಲಿಕೆಯಾಗುವ ಬೇಡಿಕೆಯನ್ನು ಸ್ಥಳೀಯವಾಗಿ ಪೂರೈಸಲು ಟಾಟಾ ಸಂಸ್ಥೆಯು ಉತ್ಸುಕವಾಗಿದೆ.

ಹೊಸ ಯೋಜನೆಗಾಗಿ ಟಾಟಾ ಮೋಟಾರ್ಸ್‌ನಿಂದ 4 ಸಾವಿರ ಕೋಟಿ ಹೂಡಿಕೆ..!

ಟಾಟಾ ಅಷ್ಟೇ ಅಲ್ಲದೇ ಮಾರುತಿ ಸುಜುಕಿ ಸಹ ರೂ.1,400 ಕೋಟಿ ಬಂಡವಾಳದೊಂದಿಗೆ ಟೊಯೊಟಾ ಜೊತೆಗೂಡಿ ಲೀಥಿಯಂ ಅಲಾಯ್ ಬ್ಯಾಟರಿ ಉತ್ಪಾದನಾ ಘಟಕ ನಿರ್ಮಾಣಕ್ಕಾಗಿ ಈಗಾಗಲೇ ಗುಜುರಾತ್‌ನಲ್ಲಿ ಚಾಲನೆ ನೀಡಿದ್ದು, ಜಂಟಿಯಾಗಿ ಕಾರು ಉತ್ಪಾದನೆ ಮತ್ತು ರೀ ಬ್ಯಾಡ್ಜ್ ಕಾರುಗಳ ಮಾರಾಟ ಯೋಜನೆಗೆ ಚಾಲನೆ ನೀಡಿರುವ ಮರುತಿ ಸುಜುಕಿ ಮತ್ತು ಟೊಯೊಟಾ ಸಂಸ್ಥೆಗಳು ಹಲವು ಹೊಸ ಮಾದರಿಯ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸುವ ಯೋಜನೆಯಲ್ಲಿದೆ.

Most Read Articles

Kannada
English summary
Tata Group To Set-Up A Lithium-Ion Battery Plant In India Soon.
Story first published: Friday, July 12, 2019, 18:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X