ಮಹೀಂದ್ರಾ ಎಕ್ಸ್‌ಯುವಿ 500 ಗಿಂತಲೂ ಹೆಚ್ಚಿನ ಗಾತ್ರವನ್ನು ಪಡೆಯಲಿದೆ ಟಾಟಾ ಕ್ಯಾಸಿನಿ

ಟಾಟಾ ಮೋಟಾರ್ಸ್ ಸಂಸ್ಥೆಯು ಇದೇ ತಿಂಗಳು 5ರಂದು ಜಿನೆವಾ ಆಟೋ ಮೇಳದಲ್ಲಿ ತನ್ನ ಭವಿಷ್ಯದ 7 ಸೀಟರ್ ಎಸ್‌ಯುವಿ ಮಾದರಿಯಾದ ಹೆಚ್7ಎಕ್ಸ್ ಬಝರ್ಡ್ ಕಾರನ್ನು ಅನಾವರಣ ಮಾಡಿದಲ್ಲದೇ ಮುಂಬರುವ ಅಕ್ಟೋಬರ್ ಹೊತ್ತಿಗೆ ಭಾರತ ಸೇರಿದಂತೆ ವಿಶ್ವದ ಪ್ರಮುಖ ಬಿಡುಗಡೆಯ ಸುಳಿವು ನೀಡಿದ್ದು, ಕೆಲವು ದಿನಗಳ ಹಿಂದಷ್ಟೆ ಟಾಟಾ ಸಂಸ್ಥೆಯು ಹೊಸ ಕಾರಿಗೆ ಕ್ಯಾಸಿನ್ನಿ ಎಂಬ ಹೆಸರನ್ನು ನೀಡಿದೆ. ಆದರೆ ಈ ಕುರಿತಾದ ಮಾಹಿತಿಯನ್ನು ಸಂಸ್ಥೆಯು ಇನ್ನು ಅಧಿಕೃತವಾಗಿ ಬಹಿರಂಗಪಡಿಸಲಿಲ್ಲ.

ಮಹೀಂದ್ರಾ ಎಕ್ಸ್‌ಯುವಿ 500 ಗಿಂತಲೂ ಹೆಚ್ಚಿನ ಗಾತ್ರವನ್ನು ಪಡೆಯಲಿದೆ ಟಾಟಾ ಕ್ಯಾಸಿನಿ

ಆದರೆ ಇದೀಗ ಮಾರುಕಟ್ಟೆಯಲ್ಲಿರುವ ಮಹೀಂದ್ರಾ ಎಕ್ಸ್‌ಯುವಿ 500, ಜೀಪ್ ಕಂಪಾಸ್ ಮತ್ತು ಬಿಡುಗಡೆಗೊಳ್ಳಲಿರುವ ಎಂ ಹೆಕ್ಟರ್ ಕಾರುಗಳಿಗೆ ಪೈಪೋಟಿ ನೀಡಲು ಸಜ್ಜುಗೊಳ್ಳುತ್ತಿರುವ ಟಾಟಾ ಕ್ಯಾಸಿನ್ನಿ ಕಾರು, ತನ್ನ ಎದುರಾಳಿಗಳಿಗಿಂತಲೂ ಗಾತ್ರದಲ್ಲಿ ಅಧಿಕವಾಗಿರಲಿದೆಯಂತೆ. ಅದು ಹೇಗೆ ಎಂದು ತಿಳಿಯಲು ಮತ್ತು ಎಷ್ಟು ವ್ಯತ್ಯಾಸ ಇರಲಿದೆ ಎಂದು ಕೆಳಗಿನ ಪಟ್ಟಿಯಲ್ಲಿ ತಿಳಿಯಿರಿ...

ಮಹೀಂದ್ರಾ ಎಕ್ಸ್‌ಯುವಿ 500 ಗಿಂತಲೂ ಹೆಚ್ಚಿನ ಗಾತ್ರವನ್ನು ಪಡೆಯಲಿದೆ ಟಾಟಾ ಕ್ಯಾಸಿನಿ

Tata Buzzard

MG Hector

Mahindra XUV500

Length

4,661 mm

4,655 mm

4,585 mm

Width

1,894 mm

1,835 mm

1,890 mm

Height

1,786 mm

1,760 mm

1,785 mm

Wheelbase

2,741 mm

2,750 mm

2,700 mm

ಮಹೀಂದ್ರಾ ಎಕ್ಸ್‌ಯುವಿ 500 ಗಿಂತಲೂ ಹೆಚ್ಚಿನ ಗಾತ್ರವನ್ನು ಪಡೆಯಲಿದೆ ಟಾಟಾ ಕ್ಯಾಸಿನಿ

ಸದ್ಯ ಮಾರುಕಟ್ಟೆಯಲ್ಲಿರುವ ಹೆಕ್ಸಾ ಕಾರಿಗಿಂತಲೂ ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯವನ್ನು ಹೊಂದಿರುವ ಬಝರ್ಡ್ ಕಾರು, 2,741-ಎಂಎಂ ನಷ್ಟು ವೀಲ್ಹ್ ಬೆಸ್ ಸೌಲಭ್ಯದೊಂದಿಗೆ ಹ್ಯಾರಿಯರ್ ಕಾರಿಗಿಂತ 62-ಎಂಎಂ ಉದ್ದವಾಗಿದೆ ಎನ್ನಲಾಗಿದೆ. ಇದು ಮೂರನೇ ಸಾಲಿನಲ್ಲಿ ಕೂರುವ ಪ್ರಯಾಣಿಕರಿಗೆ ಸಹಕಾರಿಯಾಗಲಿದ್ದು, ಎಸ್‌ಯುವಿ ಕಾರುಗಳ ಪ್ರಮುಖ ಆಕರ್ಷಣೆಯಾದ ಫುಟ್ ಬೋರ್ಡ್, ರೂಫ್ ರೈಲ್ಸ್ ಮತ್ತು 18-ಇಂಚಿನ ಅಲಾಯ್ ಚಕ್ರಗಳು ಗ್ರಾಹಕರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಮಹೀಂದ್ರಾ ಎಕ್ಸ್‌ಯುವಿ 500 ಗಿಂತಲೂ ಹೆಚ್ಚಿನ ಗಾತ್ರವನ್ನು ಪಡೆಯಲಿದೆ ಟಾಟಾ ಕ್ಯಾಸಿನಿ

ಮತ್ತೊಂದು ವಿಚಾರ ಅಂದ್ರೆ, ಹೊಸ ಕಾರು ಇಂಪ್ಯಾಕ್ಟ್ 2.0 ಡಿಸೈನ್ ಅಡಿ ನಿರ್ಮಾಣವಾಗಿದ್ದು, ಫ್ಲೇರ್ಡ್ ಆರ್ಚೆಸ್, ಮುಂಭಾಗದ ಬಂಪರ್‍‍ಗಳಿಗೆ ಟ್ರೈ ಆರೋ ಡಿಸೈನ್, ಡ್ಯುಯಲ್ ಟೋನ್ ಬಂಪರ್, ಎಲ್ಇಡಿ ಹೆಡ್‍ಲೈಟ್, ವ್ರಾಪ್ಡ್ ಅರೌಂಡ್ ಟೈಲ್ ಲೈಟ್ ಮತ್ತು ಸ್ಕಿಡ್ ಪ್ಲೇಟ್‍‍ಗಳಿಂದ ಸಜ್ಜುಗೊಂಡಿದೆ.

ಮಹೀಂದ್ರಾ ಎಕ್ಸ್‌ಯುವಿ 500 ಗಿಂತಲೂ ಹೆಚ್ಚಿನ ಗಾತ್ರವನ್ನು ಪಡೆಯಲಿದೆ ಟಾಟಾ ಕ್ಯಾಸಿನಿ

ಕಾರಿನ ವಿನ್ಯಾಸ

ಬಝರ್ಡ್ ಎಸ್‍ಯುವಿ ಕಾರು ಐಷಾರಾಮಿ ಒಳವಿನ್ಯಾಸದೊಂದಿಗೆ ವಿಶಾಲವಾದ ಕ್ಯಾಬಿನ್ ಸ್ಪೆಸ್ ಹೊಂದಿದ್ದು, ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲರ್, ಪ್ರೀಮಿಯಂ ಆಡಿಯೊ ಸಿಸ್ಟಂ ಹಾಗೂ ಇನ್ನು ಹಲವಾರು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿರಲಿದೆ. ಜೊತೆಗೆ ಹೊಸ ಕಾರು ಆಪ್ಟಿಮಲ್ ಮಾಡ್ಯುಲರ್ ಎಫಿಶಿಯೆಂಟ್ ಗ್ಲೋಬಲ್ ಅಡ್ವಾನ್ಸ್ಡ್ ಪ್ಲಾಟ್‍ಫಾರ್ಮ್ ಅನ್ನು ಆಧರಿಸಿದ್ದು, ಇದೇ ತಂತ್ರವನ್ನು ಲ್ಯಾಂಡ್ ರೋವರ್ ಡಿಸ್ಕವರಿ ಕಾರಿನಲ್ಲಿಯೂ ಕೂಡಾ ಇದನ್ನು ನಾವು ಕಾಣಬಹುದಾಗಿದೆ.

ಮಹೀಂದ್ರಾ ಎಕ್ಸ್‌ಯುವಿ 500 ಗಿಂತಲೂ ಹೆಚ್ಚಿನ ಗಾತ್ರವನ್ನು ಪಡೆಯಲಿದೆ ಟಾಟಾ ಕ್ಯಾಸಿನಿ

ಎಂಜಿನ್ ಸಾಮರ್ಥ್ಯ

ಬಝರ್ಡ್ ಕಾರುಗಳಲ್ಲಿ 2.0-ಲೀಟರ್ ಕ್ರೆಯೊಟೆಕ್ ಡೀಸೆಲ್ ಎಂಜಿನ್ ಸಹಾಯದಿಂದ 170-ಬಿಹೆಚ್‍ಪಿ ಹಾಗೂ 350-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ಟಿಯನ್ನು ಪಡೆದಿದ್ದು, ಹ್ಯುಂಡೈನಿಂದ ಎರವಲು ಪಡೆಯಲಾಗಿರುವ ಸಿಕ್ಸ್ ಸ್ಪೀಡ್ ಮ್ಯಾನುವಲ್ ಮತ್ತು ಸಿಕ್ಸ್ ಸ್ಪಿಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಸೌಲಭ್ಯ ಪಡೆದುಕೊಳ್ಳಲಿದೆ.

ಮಹೀಂದ್ರಾ ಎಕ್ಸ್‌ಯುವಿ 500 ಗಿಂತಲೂ ಹೆಚ್ಚಿನ ಗಾತ್ರವನ್ನು ಪಡೆಯಲಿದೆ ಟಾಟಾ ಕ್ಯಾಸಿನಿ

ಕಾರಿನ ಬೆಲೆ ಮತ್ತು ಬಿಡುಗಡೆಯ ಅವಧಿ(ಅಂದಾಜು)

ಟಾಟಾ ಸಂಸ್ಥೆಯು ಸದ್ಯ ನಾಲ್ಕು ವಿವಿಧ ಮಾದರಿಯ ಕಾರುಗಳ ಬಿಡುಗಡೆಗಾಗಿ ಯೋಜನೆ ರೂಪಿಸಿದ್ದು, ಇದರಲ್ಲಿ ಮೊದಲಿಗೆ ಆಲ್‌ಟ್ರೊಜ್ ಕಾರು ಬಿಡುಗಡೆಯಾದ ನಂತರವಷ್ಟೇ ಬಝರ್ಡ್ ಕಾರು ಮಾರುಕಟ್ಟೆಗೆ ಪ್ರವೇಶ ಪಡೆಯಲಿದೆ.

ಮಹೀಂದ್ರಾ ಎಕ್ಸ್‌ಯುವಿ 500 ಗಿಂತಲೂ ಹೆಚ್ಚಿನ ಗಾತ್ರವನ್ನು ಪಡೆಯಲಿದೆ ಟಾಟಾ ಕ್ಯಾಸಿನಿ

ಮೂಲಗಳ ಪ್ರಕಾರ, ಬಝರ್ಡ್ ಕಾರು 2019ರ ಅಂತ್ಯದಲ್ಲಿ ಇಲ್ಲವೇ 2020ರ ಆರಂಭದಲ್ಲಿ ಬಿಡುಗಡೆಯಾಗುವ ನೀರಿಕ್ಷೆಗಳಿದ್ದು, ಕಾರಿನ ಬೆಲೆಯು ಮಾರುಕಟ್ಟೆಯಲ್ಲಿರುವ ಪ್ರತಿಸ್ಪರ್ಧಿ ಎಸ್‌ಯುವಿ ಕಾರುಗಳಿಂತಲೂ ಅತಿ ಕಡಿಮೆ ಬೆಲೆಯಲ್ಲಿ ದೊರೆಯಲಿದೆ. ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ಆವೃತ್ತಿಯು ರೂ.21 ಲಕ್ಷದಿಂದ ಟಾಪ್ ಎಂಡ್ ಆವೃತ್ತಿಯು ರೂ.23 ಲಕ್ಷ ಬೆಲೆ ಹೊಂದಿರಬಹುದು ಎಂದು ನೀರಿಕ್ಷಿಸಲಾಗಿದೆ.

Source: gaadiwaadi

Most Read Articles

Kannada
English summary
Tata Buzzard To Be Longer, Wider and Taller Than Its Main Rivals Like Mahindra Xuv500. Read In Kannada
Story first published: Thursday, May 2, 2019, 18:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X