Just In
- 32 min ago ಸಾಮಾನ್ಯರಂತೆ ಹಳ್ಳಿಯಲ್ಲಿರುವ ದೇಶದ 55ನೇ ಶ್ರೀಮಂತ ಶ್ರೀಧರ್ ವೆಂಬು: ಕಚೇರಿಗೆ ಹೋಗಲು ಎಲೆಕ್ಟ್ರಿಕ್ ಆಟೋ ಖರೀದಿ!
- 3 hrs ago ಹ್ಯುಂಡೈ ವೆರ್ನಾ ಕಾರಿಗೆ ಭಾರೀ ಡಿಸ್ಕೌಂಟ್: ರಾಶಿ ಫೀಚರ್ನ ಕಾರಿಗೆ ಇಷ್ಟು ಆಫರ್ ಯಾಕೆಂದ ನೆಟ್ಟಿಗರು!
- 16 hrs ago ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸಲು ಹೊಸ ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ಅನಾವರಣ
- 18 hrs ago Air Taxi: ಬೆಂಗಳೂರು ಸೇರಿ ಈ ನಗರಗಳಲ್ಲಿ ಏರ್ ಟ್ಯಾಕ್ಸಿ.. ಆಕಾಶದಲ್ಲೇ ಆಫೀಸ್ಗೆ ಹೋಗಬಹುದು, ಕಡಿಮೆ ಖರ್ಚು!
Don't Miss!
- Finance April 23 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Movies "ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
- News Helicopters Crash: ಸೇನೆಯ ಎರಡು ಹೆಲುಕಾಪ್ಟರ್ ಡಿಕ್ಕಿ: 10 ಜನರ ಸಾವು
- Technology Google Chrome: ಗೂಗಲ್ ಕ್ರೋಮ್ ಬಳಕೆದಾರರು ಹ್ಯಾಕಿಂಗ್ ಅಪಾಯದಲ್ಲಿ! ಸುರಕ್ಷಿತವಾಗಿರೋದು ಹೇಗೆ?
- Sports IPL 2024: ವಿರಾಟ್ ಕೊಹ್ಲಿ ವಿವಾದಾತ್ಮಕ ಔಟ್; ಅಂಪೈರಿಂಗ್ ವಿರುದ್ಧ ಕೆಂಡಕಾರಿದ ಮೊಹಮ್ಮದ್ ಕೈಫ್!
- Lifestyle ಮನೆಯಲ್ಲಿ ಘಮ ಘಮಿಸುವ ಮಲ್ಲಿಗೆ ಗಿಡ ಬೆಳೆಸೋದು ಹೇಗೆ..? ಇಲ್ಲಿದೆ ಮಾಹಿತಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಡುಗಡೆಯ ಸನಿಹದಲ್ಲಿ ಟಾಟಾ 7 ಸೀಟರ್ ಎಸ್ಯುವಿ ಕ್ಯಾಸಿನಿ..!
ಜಿನೆವಾ ಆಟೋ ಮೇಳದಲ್ಲಿ ಪ್ರದರ್ಶನಗೊಂಡಿದ್ದ ಟಾಟಾ ಮೋಟಾರ್ಸ್ ಬಹುನೀರಿಕ್ಷಿತ ಕ್ಯಾಸಿನಿ ಎಸ್ಯುವಿ ಮಾದರಿಯು ಬಿಡುಗಡೆಗಾಗಿ ಅಂತಿಮ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದ್ದು, 2020ರ ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಮೇಳದಲ್ಲಿ ಪ್ರದರ್ಶನಗೊಂಡ ನಂತರವಷ್ಟೇ ಮಾರುಕಟ್ಟೆ ಪ್ರವೇಶಿಸಲಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿರುವ 5 ಸೀಟರ್ ಹ್ಯಾರಿಯರ್ ಕಾರಿನ ವಿನ್ಯಾಸವನ್ನೇ ಪಡೆದುಕೊಂಡಿರುವ ಕ್ಯಾಸಿನಿ ಕಾರು ಗ್ರಾಹಕರ ಬೇಡಿಕೆಯೆಂತೆ ವಿಶೇಷ ತಾಂತ್ರಿಕ ಸೌಲಭ್ಯವನ್ನು ಪಡೆದುಕೊಂಡಿದ್ದು, ಎಸ್ಯುವಿ ಆವೃತ್ತಿಗಳಲ್ಲಿ ಮುಂಚೂಣಿಯಲ್ಲಿರುವ ಫೋರ್ಡ್ ಎಂಡೀವರ್, ಮಹೀಂದ್ರಾ ಅಲ್ಟುರಾಸ್ ಜಿ4 ಮತ್ತು ಟೊಯೊಟಾ ಫಾರ್ಚೂನರ್ ಕಾರುಗಳಿಗೂ ಕ್ಯಾಸಿನಿ ಕಾರು ಪ್ರಬಲ ಪೈಪೋಟಿಯಾಗುವ ನೀರಿಕ್ಷೆಯಲ್ಲಿದೆ.
ಕ್ಯಾಸಿನಿ ಕಾರು 4,661-ಎಂಎಂ ಉದ್ದ, 1786-ಎಂಎಂ ಎತ್ತರ ಮತ್ತು 2,741-ಎಂಎಂ ವೀಲ್ಹ್ ಬೆಸ್ನೊಂದಿಗೆ ಹ್ಯಾರಿಯರ್ಗಿಂತಲೂ 63-ಎಂಎಂ ಹೆಚ್ಚು ಉದ್ದ, 80-ಎಂಎಂ ಕಡಿಮೆ ಎತ್ತರ ಪಡೆದುಕೊಂಡಿದೆ.
ಟಾಟಾ ಕ್ಯಾಸಿನಿ ಹೊಸ ಎಸ್ಯುವಿ ಕಾರು ಇಂಪ್ಯಾಕ್ಟ್ 2.0 ಡಿಸೈನ್ ಅಡಿ ನಿರ್ಮಾಣವಾಗಿದ್ದು, ಫ್ಲೇರ್ಡ್ ಆರ್ಚೆಸ್, ಮುಂಭಾಗದ ಬಂಪರ್ಗಳಿಗೆ ಟ್ರೈ ಆರೋ ಡಿಸೈನ್, ಡ್ಯುಯಲ್ ಟೋನ್ ಬಂಪರ್, ಎಲ್ಇಡಿ ಹೆಡ್ಲೈಟ್, ವ್ರಾಪ್ಡ್ ಅರೌಂಡ್ ಟೈಲ್ ಲೈಟ್ ಮತ್ತು ಸ್ಕಿಡ್ ಪ್ಲೇಟ್ಗಳಿಂದ ಸಜ್ಜುಗೊಂಡಿದೆ.
ಇನ್ನು ಕ್ಯಾಸಿನ ಕಾರು ಹ್ಯಾರಿಯರ್ನಂತೆಯೇ ಎಕ್ಸ್ಇ, ಎಕ್ಸ್ಎಂ, ಎಕ್ಸ್ ಟಿ ಮತ್ತು ಎಕ್ಸ್ಜೆಡ್ ಎಂಬ ನಾಲ್ಕು ವೆರಿಯೆಂಟ್ಗಳಲ್ಲಿ ಬಿಡುಗಡೆಯಾಗಲಿದ್ದು, 18-ಇಂಚಿನ ಅಲಾಯ್ ವ್ಹೀಲ್ಸ್, ಆಲ್ ವ್ಹೀಲ್ ಡಿಸ್ಕ್ ಬ್ರೇಕ್, ವಿಭಿನ್ನವಾದ ಬೂಟ್ ಲಿಡ್ ಮತ್ತು ಟೈಲ್ ಲ್ಯಾಂಪ್ಸ್ ಅನ್ನು ಹೊಂದಿರಲಿದೆ. ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಟಾಟಾ ಕ್ಯಾಸಿನಿ ಕಾರು ಹ್ಯಾರಿಯರ್ ಕಾರಿಗಿಂತಲೂ ವಿಭಿನ್ನವಾದ ಎಲ್ಇಡಿ ಟೈಲ್ಲೈಟ್ಸ್ ಅನ್ನು ಪಡೆದುಕೊಂಡಿದ್ದು, ಬಿಎಸ್ 6 ಎಂಜಿನ್ ಪ್ರೇರಿತ ಹ್ಯಾರಿಯರ್ ಕಾರಿನೊಂದಿಗೆ ಸಧ್ಯ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.
ಕ್ಯಾನಿಸಿ ಎಸ್ಯುವಿ ಕಾರು ಐಷಾರಾಮಿ ಒಳವಿನ್ಯಾಸದೊಂದಿಗೆ ವಿಶಾಲವಾದ ಕ್ಯಾಬಿನ್ ಸ್ಪೆಸ್ ಹೊಂದಿದ್ದು, ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲರ್, ಪ್ರೀಮಿಯಂ ಆಡಿಯೋ ಸಿಸ್ಟಂ ಹಾಗೂ ಇನ್ನು ಹಲವಾರು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿರಲಿದೆ.
ಜೊತೆಗೆ ಹೊಸ ಕಾರು ಆಪ್ಟಿಮಲ್ ಮಾಡ್ಯುಲರ್ ಎಫಿಶಿಯೆಂಟ್ ಗ್ಲೋಬಲ್ ಅಡ್ವಾನ್ಸ್ಡ್ ಪ್ಲಾಟ್ಫಾರ್ಮ್ ಅನ್ನು ಆಧರಿಸಿದ್ದು, ಇದೇ ತಂತ್ರವನ್ನು ಲ್ಯಾಂಡ್ ರೋವರ್ ಡಿಸ್ಕವರಿ ಕಾರಿನಲ್ಲಿಯೂ ಕೂಡಾ ಇದನ್ನು ನಾವು ಕಾಣಬಹುದಾಗಿದೆ.
MOST READ: ಹೊಸ ವಾಹನ ಖರೀದಿ ನೀರಿಕ್ಷೆಯಲ್ಲಿದ್ದ ಗ್ರಾಹಕರಿಗೆ ಕೇಂದ್ರದಿಂದ ಮತ್ತೆ ನಿರಾಸೆ?
ಹೀಗಾಗಿ ಎಸ್ಯುವಿ ಕಾರುಗಳಲ್ಲೇ ವಿಭಿನ್ನ ಎನ್ನಸಲಿರುವ ಕ್ಯಾಸಿನಿ ಕಾರು 7 ಸೀಟರ್ನೊಂದಿಗೆ 3ನೇ ಸಾಲಿನಲ್ಲಿರುವ ಕೂರುವ ಪ್ರಯಾಣಿಕರಿಗೆ ಅನುಕೂಲಕರ ಸ್ಥಳಾವಕಾಶ ಒದಗಿಸಿ ಕೊಡಲಿದ್ದು, ಫುಟ್ ಬೋರ್ಡ್, ರೂಫ್ ರೈಲ್ಸ್ ಮತ್ತು 18-ಇಂಚಿನ ಅಲಾಯ್ ಚಕ್ರಗಳು ಗ್ರಾಹಕರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.
ಎಂಜಿನ್ ಸಾಮರ್ಥ್ಯ
ಕ್ಯಾಸಿನಿ ಕಾರು ಬಿಎಸ್6 ಆಧಾರಿತ 2.0-ಲೀಟರ್ ಕ್ರೆಯೊಟೆಕ್ ಡೀಸೆಲ್ ಎಂಜಿನ್ ಸಹಾಯದಿಂದ 170-ಬಿಹೆಚ್ಪಿ ಹಾಗೂ 350-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ಟಿಯನ್ನು ಪಡೆದಿದ್ದು, ಹ್ಯುಂಡೈನಿಂದ ಎರವಲು ಪಡೆಯಲಾಗಿರುವ ಸಿಕ್ಸ್ ಸ್ಪೀಡ್ ಮ್ಯಾನುವಲ್ ಮತ್ತು ಸಿಕ್ಸ್ ಸ್ಪಿಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಸೌಲಭ್ಯ ಪಡೆದುಕೊಳ್ಳಲಿದೆ.
MOST READ: ದುಬಾರಿ ದಂಡಕ್ಕೆ ಜನಾಕ್ರೋಶ: ವಾಹನ ಸವಾರರಿಗೆ ಸಿಹಿಸುದ್ದಿ ನೀಡಿದ ಕರ್ನಾಟಕ ಸರ್ಕಾರ..!
2020ರ ಮಾರ್ಚ್ ಆರಂಭದಲ್ಲಿ ಬಿಡುಗಡೆಯಾಗುವ ನೀರಿಕ್ಷೆಯಲ್ಲಿರುವ ಕ್ಯಾಸಿನಿ ಕಾರು ಪ್ರತಿಸ್ಪರ್ಧಿ ಎಸ್ಯುವಿ ಕಾರುಗಳಿಂತಲೂ ಅತಿ ಕಡಿಮೆ ಬೆಲೆಯಲ್ಲಿ ದೊರೆಯಲಿದ್ದು, ಎಕ್ಸ್ಶೋರೂಂ ಪ್ರಕಾರ ಆರಂಭಿಕ ಆವೃತ್ತಿಯು ರೂ.18 ಲಕ್ಷದಿಂದ ಟಾಪ್ ಎಂಡ್ ಆವೃತ್ತಿಯು ರೂ.22 ಲಕ್ಷ ಬೆಲೆ ಹೊಂದಿರಬಹುದು ಎಂದು ನೀರಿಕ್ಷಿಸಲಾಗಿದೆ.
Source: Team bhp