ಹೊಸ ತಾಂತ್ರಿಕ ಸೌಲಭ್ಯಗಳೊಂದಿಗೆ ಬರಲಿದೆ ಬಿಎಸ್-6 ವೈಶಿಷ್ಟ್ಯತೆಯ ಟಾಟಾ ಹ್ಯಾರಿಯರ್

ಟಾಟಾ ಮೋಟಾರ್ಸ್ ಸಂಸ್ಥೆಯು ಮುಂಬರುವ 2020ರ ಏಪ್ರಿಲ್1ರಿಂದ ಜಾರಿಗೆ ಬರಲಿರುವ ಬಿಎಸ್-6 ನಿಯಮದಂತೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕಾರುಗಳ ಎಂಜಿನ್ ಮಾದರಿಗಳನ್ನು ಉನ್ನತಿಕರಿಸುತ್ತಿದ್ದು, ಇದರಲ್ಲಿ ಸದ್ಯ ಜನಪ್ರಿಯಗೊಳುತ್ತಿರುವ ಹ್ಯಾರಿಯರ್ ಕೂಡಾ ಒಂದಾಗಿದೆ. ಬಿಎಸ್-6 ಎಂಜಿನ್ ಹೊಂದಿರುವ ಹ್ಯಾರಿಯರ್ ಮಾದರಿಯನ್ನು ರೋಡ್ ಟೆಸ್ಟಿಂಗ್ ಮಾಡಲಾಗುತ್ತಿದ್ದು, ಹೊಸ ಕಾರಿನಲ್ಲಿ ಕೆಲವು ತಾಂತ್ರಿಕ ಅಂಶಗಳನ್ನು ಬದಲಾವಣೆಗೊಳಿಸಲಾಗಿದೆ.

ಹೊಸ ತಾಂತ್ರಿಕ ಸೌಲಭ್ಯಗಳೊಂದಿಗೆ ಬರಲಿದೆ ಬಿಎಸ್-6 ವೈಶಿಷ್ಟ್ಯತೆಯ ಟಾಟಾ ಹ್ಯಾರಿಯರ್

ಬಿಎಸ್-6 ಎಂಜಿನ್‌ನಿಂದಾಗಿ ಹೊಸ ಕಾರುಗಳ ಎಂಜಿನ್ ಕಾರ್ಯಕ್ಷಮತೆಯಲ್ಲಿ ಮಹತ್ವದ ಬದಲಾವಣೆಗಳಾಗಿದ್ದು, ಟಾಟಾ ಸಹ ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಬಿಎಸ್-6 ಕಾರುಗಳನ್ನು ಹೊರತರುತ್ತಿದೆ. ಇದೀಗ ಬೆಂಗಳೂರಿನಲ್ಲಿ ನಡೆಸಲಾದ ರೋಡ್ ಟೆಸ್ಟಿಂಗ್‌ನಲ್ಲಿ ಹ್ಯಾರಿಯರ್ ಕೂಡಾ ಗುರುತರ ಬದಲಾವಣೆಗಳನ್ನು ಪಡೆದಿದ್ದು, ಸನ್‌ರೂಫ್ ಮತ್ತು ಆಟೋಮ್ಯಾಟಿಕ್ ವರ್ಷನ್ ಸಹ ಹ್ಯಾರಿಯರ್‌ನಲ್ಲಿ ಆಯ್ಕೆ ಪಡೆದಿರುವುದು ಬಹುತೇಕ ಖಚಿತವಾಗಿದೆ.

ಹೊಸ ತಾಂತ್ರಿಕ ಸೌಲಭ್ಯಗಳೊಂದಿಗೆ ಬರಲಿದೆ ಬಿಎಸ್-6 ವೈಶಿಷ್ಟ್ಯತೆಯ ಟಾಟಾ ಹ್ಯಾರಿಯರ್

ಹೊಸ ನಿಯಮದಂತೆ ಉನ್ನತಿಕರಿಸಲಾಗಿರುವ ಹ್ಯಾರಿಯರ್ ಮಾದರಿಯಲ್ಲಿ ಕೇವಲ ಎಂಜಿನ್ ಮಾತ್ರವಲ್ಲದೇ ಪ್ರಯಾಣಿಕರ ಸುರಕ್ಷತೆ ಮತ್ತು ಕಾರುಗಳ ಗುಣಮಟ್ಟದಲ್ಲೂ ಸುಧಾರಣೆ ಕಂಡಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆಯೆಂತೆ ಹಲವು ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಲಾಗಿದೆ.

ಹೊಸ ತಾಂತ್ರಿಕ ಸೌಲಭ್ಯಗಳೊಂದಿಗೆ ಬರಲಿದೆ ಬಿಎಸ್-6 ವೈಶಿಷ್ಟ್ಯತೆಯ ಟಾಟಾ ಹ್ಯಾರಿಯರ್

ಇನ್ನು ಮಧ್ಯಮ ಗಾತ್ರದ ಎಸ್‌ಯುವಿ ಕಾರು ಮಾರಾಟದಲ್ಲಿ ಮುನ್ನುಗ್ಗುತ್ತಿರುವ ಹ್ಯಾರಿಯರ್ ಮಾದರಿಯು ಕಳೆದ ಜನವರಿಯಲ್ಲಿ ಬಿಡುಗಡೆಗೊಂಡ ತಿಂಗಳಿನಿಂದಲೂ ಮಾರಾಟದಲ್ಲಿ ಉತ್ತಮ ಬೇಡಿಕೆಯನ್ನು ಕಾಯ್ದುಕೊಂಡಿದ್ದು, ಕಳೆದ ತಿಂಗಳ ಹಿಂದಷ್ಟೇ ಆ್ಯಪಲ್ ಕಾರ್ ಪ್ಲೇ, ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಜೊತೆಗೆ ಆಂಡ್ರಾಯಿಡ್ ಆಟೋ ಸೌಲಭ್ಯವನ್ನು ನೀಡಲಾಗಿದೆ.

ಹೊಸ ತಾಂತ್ರಿಕ ಸೌಲಭ್ಯಗಳೊಂದಿಗೆ ಬರಲಿದೆ ಬಿಎಸ್-6 ವೈಶಿಷ್ಟ್ಯತೆಯ ಟಾಟಾ ಹ್ಯಾರಿಯರ್

ಇಂಪ್ಯಾಕ್ಟ್ ಡಿಸೈನ್ 2.0 ತಂತ್ರಜ್ಞಾನ ಆಧಾರದ ಮೇಲೆ ಹ್ಯಾರಿಯರ್ ಕಾರುಗಳನ್ನು ನಿರ್ಮಾಣ ಮಾಡಲಾಗಿದ್ದು, ಹೊಸ ಕಾರುಗಳಲ್ಲಿ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್ (OMEGA)" ಆರ್ಕಿಟೆಕ್ಚರ್ ಬಳಕೆ ಮಾಡಿರುವುದೇ ಹೊಸ ಕಾರಿನ ವಿನ್ಯಾಸಕ್ಕೆ ಮೆರಗು ತಂದಿವೆ. ಇದೀಗ ಜಾರಿಗೆ ಬರುತ್ತಿರುವ ಬಿಎಸ್-6 ನಿಯಮದಿಂದಾಗಿ ಹೊಸ ಕಾರು ಮತ್ತಷ್ಟು ಬಲಿಷ್ಠ ಎಂಜಿನ್ ಆಯ್ಕೆ ಹೊಂದಲಿದ್ದು, ಪರ್ಫಾಮೆನ್ಸ್ ಮತ್ತು ಸುರಕ್ಷತೆಯಲ್ಲಿ ಸದ್ದು ಮಾಡಲಿದೆ.

ಹೊಸ ತಾಂತ್ರಿಕ ಸೌಲಭ್ಯಗಳೊಂದಿಗೆ ಬರಲಿದೆ ಬಿಎಸ್-6 ವೈಶಿಷ್ಟ್ಯತೆಯ ಟಾಟಾ ಹ್ಯಾರಿಯರ್

ಇಲ್ಲಿ ಇನ್ನೊಂದು ವಿಶೇಷ ಅಂದ್ರೆ, ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಜೊತೆ ಕೈಜೋಡಿಸಿರುವ ಜೆಎಲ್ಆರ್ ಕೂಡಾ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್" ಆರ್ಕಿಟೆಕ್ಚರ್ ತಂತ್ರವನ್ನೇ ಬಳಕೆ ಮಾಡುತ್ತಿದ್ದು, ಇದೇ ಕಾರಣಕ್ಕೆ ಟಾಟಾ ಕಾರುಗಳಲ್ಲೂ ಜೆಎಲ್ಆರ್ ಹೊಸ ಪ್ರಯೋಗ ಮಾಡಿರುವುದು ಹ್ಯಾರಿಯರ್ ಎಸ್‌ಯುವಿ ಮಾದರಿಯ ವಿನ್ಯಾಸಕ್ಕೆ ಐಷಾರಾಮಿ ಕಳೆ ಬಂದಿರುವುದು ಬೇಡಿಕೆ ಹೆಚ್ಚಳಕ್ಕೆ ಕಾರಣವಾಗಿದೆ.

ಹೊಸ ತಾಂತ್ರಿಕ ಸೌಲಭ್ಯಗಳೊಂದಿಗೆ ಬರಲಿದೆ ಬಿಎಸ್-6 ವೈಶಿಷ್ಟ್ಯತೆಯ ಟಾಟಾ ಹ್ಯಾರಿಯರ್

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಹಾಗೆಯೇ ಹೊಸ ಡಿಸೈನ್ ತಂತ್ರಜ್ಞಾನದಿಂದಾಗಿ ಕಾರು ಸಾಕಷ್ಟು ಸ್ಟೈಲಿಷ್ ಆಗಿ ಕಾಣುವಂತಾಗಿದ್ದು, ಕಾರಿನ ಮುಂಭಾಗದಲ್ಲಿ ಹನಿಕೊಂಬ್ ಗ್ರೀಲ್ ಮತ್ತು ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಪಾಲಿಜೊನಲ್ ಮಾದರಿಯ ಎಲ್‌ಇಡಿ ಲೈಟ್ಸ್ ಮಾದರಿಯು ಕಾರಿಗೆ ಸ್ಪೋರ್ಟಿ ಲುಕ್ ನೀಡಿವೆ.

ಹೊಸ ತಾಂತ್ರಿಕ ಸೌಲಭ್ಯಗಳೊಂದಿಗೆ ಬರಲಿದೆ ಬಿಎಸ್-6 ವೈಶಿಷ್ಟ್ಯತೆಯ ಟಾಟಾ ಹ್ಯಾರಿಯರ್

ಟಾಟಾ ಹ್ಯಾರಿಯರ್ ಕಾರುಗಳು ಸದ್ಯ ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿ ಮತ್ತು ಎಕ್ಸ್‌ಜೆಡ್ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ವೇರಿಯೆಂಟ್‍ಗಳಿಗೆ ಅನುಗುಣವಾಗಿ ಕಾರಿನ ಬೆಲೆಗಳು ಆರಂಭಿಕವಾಗಿ ರೂ.13 ಲಕ್ಷದಿಂದ ಹೈ ಎಂಡ್ ಮಾದರಿಯು ರೂ.16.56 ಲಕ್ಷ ಬೆಲೆ ಹೊಂದಿದೆ.

ಹೊಸ ತಾಂತ್ರಿಕ ಸೌಲಭ್ಯಗಳೊಂದಿಗೆ ಬರಲಿದೆ ಬಿಎಸ್-6 ವೈಶಿಷ್ಟ್ಯತೆಯ ಟಾಟಾ ಹ್ಯಾರಿಯರ್

ಎಂಜಿನ್ ಸಾಮರ್ಥ್ಯ

ಹ್ಯಾರಿಯರ್ ಎಸ್‌ಯುವಿ ಕಾರು 2-ಲೀಟರ್(2 ಸಾವಿರ ಸಿಸಿ) 4 ಸಿಲಿಂಡರ್, ಕ್ರೆಯೊಟೆಕ್ ಡೀಸೆಲ್ ಎಂಜಿನ್ ಹೊಂದಿದ್ದು, 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ 140-ಬಿಹೆಚ್‍ಪಿ, 350-ಎನ್ಎಂ ಶಕ್ತಿಯನ್ನು ಉತ್ಪಾದಿಸುವ ಗುಣಹೊಂದಿದ್ದು, ಬಿಎಸ್-6 ಜಾರಿ ನಂತರ ಹ್ಯಾರಿಯರ್ ಎಂಜಿನ್‌ ಪರ್ಫಾಮೆನ್ಸ್‌ನಲ್ಲಿ ಬದಲಾವಣೆಯಾಗಬಹುದು ಇಲ್ಲವೇ ಹೊಸ ಎಂಜಿನ್ ಆಯ್ಕೆ ಹೊಂದಬಹುದು ಎನ್ನಲಾಗಿದೆ.

ಹೊಸ ತಾಂತ್ರಿಕ ಸೌಲಭ್ಯಗಳೊಂದಿಗೆ ಬರಲಿದೆ ಬಿಎಸ್-6 ವೈಶಿಷ್ಟ್ಯತೆಯ ಟಾಟಾ ಹ್ಯಾರಿಯರ್

ಹೀಗಾಗಿ ಬಿಎಸ್-6 ಜಾರಿ ನಂತರ ಡೀಸೆಲ್ ಎಂಜಿನ್ ಕಾರುಗಳ ಬೆಲೆಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬೆಲೆಗಳಿಂತ ರೂ.1 ಲಕ್ಷದಿಂದ ರೂ.1.80 ಲಕ್ಷದ ತನಕ ಹೆಚ್ಚಳವಾಗುವ ಸಾಧ್ಯತೆಗಳಿದ್ದು, ಹೊಸ ನಿಯಮದಿಂದ ಶೇ.25 ರಷ್ಟು ಮಾಲಿನ್ಯ ತಗ್ಗುವುದಲ್ಲದೇ ಶೇ.10ರಿಂದ ಶೇ.15ರಷ್ಟು ಮೈಲೇಜ್ ಪ್ರಮಾಣವು ಹೆಚ್ಚಳವಾಗಲಿದೆ.

Source: Autocarindia

Most Read Articles

Kannada
English summary
BS-VI Compliant Tata Harrier Spied Testing — A Bunch Of Other Updates Expected As Well.
Story first published: Saturday, July 20, 2019, 15:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X