ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಟಾಟಾ ಹ್ಯಾರಿಯರ್ ಎಎಂಟಿ ವರ್ಷನ್ ಕಾರು

ಟಾಟಾ ಮೋಟಾರ್ಸ್ ಸಂಸ್ಥೆಯು ಜನವರಿ 23ರಂದು ತಮ್ಮ ಬಹುನಿರೀಕ್ಷಿತ ಟಾಟಾ ಹ್ಯಾರಿಯರ್ ಎಸ್‍ಯುವಿ ಕಾರನ್ನು ಬಿಡುಗಡೆಗೊಳಿಸಿದ್ದು, ಆಗ ಕೇವಲ ಮ್ಯಾನುವಲ್ ಗೇರ್‍‍ಬಾಕ್ಸ್ ಆಯ್ಕೆಯಲ್ಲಿ ಮಾತ್ರ ಖರೀದಿಗೆ ಲಭ್ಯವಿತ್ತು. ಆದರೆ ಸಂಸ್ಥೆಯು ತಮ್ಮ ಹ್ಯಾರಿಯರ್ ಕಾರಿನ ಆಟೋಮ್ಯಾಟಿಕ್ ವೇರಿಯಂಟ್ ಅನ್ನು ಸಹ ಪರಿಚಯಿಸುವುದರ ಬಗ್ಗೆ ಸುಳಿವನ್ನು ನೀಡಿದ್ದು, ಇದೀಗ ಮೊದಲ ಬಾರಿಗೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಟಾಟಾ ಹ್ಯಾರಿಯರ್ ಎಎಂಟಿ ವರ್ಷನ್ ಕಾರು

ಸೋರಿಕೆಯಾದ ಎಎಂಟಿ ಆಧಾರಿತ ಟಾಟಾ ಹ್ಯಾರಿಯರ್ ಕಾರಿನ ಚಿತ್ರಗಳಲ್ಲಿ, ಕಾರು ಹ್ಯುಂಡೈ ನಿಂದ ಪಡೆದ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಮತ್ತು 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಸಹ ಸೆರೆಹಿಡಿಯಲಾಗಿದೆ. ಹೆಚ್ಚು ಜನಪ್ರಿಯತೆಯನ್ನು ಪಡೆಯುತ್ತಿರುವ ಮತ್ತು ಎಎಂಟಿ ಗೇರ್‍‍ಬಾಕ್ಸ್ ಆಯ್ಕೆಯ ಹ್ಯಾರಿಯರ್ ಕಾರಿನ ಅನುಸಾರ ಸಂಸ್ಥೆಯು ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಯಲ್ಲಿ ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ.

Image Courtesy: GaadiWaadi

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಟಾಟಾ ಹ್ಯಾರಿಯರ್ ಎಎಂಟಿ ವರ್ಷನ್ ಕಾರು

ಇಂಪ್ಯಾಕ್ಟ್ ಡಿಸೈನ್ 2.0 ತಂತ್ರಜ್ಞಾನ ಆಧಾರದ ಮೇಲೆ ಹ್ಯಾರಿಯರ್ ಕಾರುಗಳನ್ನು ನಿರ್ಮಾಣ ಮಾಡಲಾಗಿದ್ದು, ಹೊಸ ಕಾರುಗಳಲ್ಲಿ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್ (OMEGA)" ಆರ್ಕಿಟೆಕ್ಚರ್ ಬಳಕೆ ಮಾಡಿರುವುದೇ ಹೊಸ ಕಾರಿನ ವಿನ್ಯಾಸಕ್ಕೆ ಮೆರಗು ತಂದಿವೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಟಾಟಾ ಹ್ಯಾರಿಯರ್ ಎಎಂಟಿ ವರ್ಷನ್ ಕಾರು

ಇಲ್ಲಿ ಇನ್ನೊಂದು ವಿಶೇಷ ಅಂದ್ರೆ, ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಜೊತೆ ಕೈಜೋಡಿಸಿರುವ ಜೆಎಲ್ಆರ್ ಕೂಡಾ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್" ಆರ್ಕಿಟೆಕ್ಚರ್ ತಂತ್ರವನ್ನೇ ಬಳಕೆ ಮಾಡುತ್ತಿದ್ದು, ಇದೇ ಕಾರಣಕ್ಕೆ ಟಾಟಾ ಕಾರುಗಳಲ್ಲೂ ಜೆಎಲ್ಆರ್ ಹೊಸ ಪ್ರಯೋಗ ಮಾಡಿರುವುದು ಹ್ಯಾರಿಯರ್ ವಿನ್ಯಾಸಕ್ಕೆ ಐಷಾರಾಮಿ ಕಳೆ ಬಂದಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಟಾಟಾ ಹ್ಯಾರಿಯರ್ ಎಎಂಟಿ ವರ್ಷನ್ ಕಾರು

ಹೊಸ ಡಿಸೈನ್ ತಂತ್ರಜ್ಞಾನದಿಂದಾಗಿ ಕಾರು ಸಾಕಷ್ಟು ಸ್ಟೈಲಿಷ್ ಆಗಿ ಕಾಣುವಂತಾಗಿದ್ದು, ಕಾರಿನ ಮುಂಭಾಗದಲ್ಲಿ ಹನಿಕೊಂಬ್ ಗ್ರೀಲ್ ಮತ್ತು ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಪಾಲಿಜೊನಲ್ ಮಾದರಿಯ ಎಲ್‌ಇಡಿ ಲೈಟ್ಸ್ ಮಾದರಿಯು ಕಾರಿಗೆ ಸ್ಪೋರ್ಟಿ ಲುಕ್ ನೀಡಿವೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಟಾಟಾ ಹ್ಯಾರಿಯರ್ ಎಎಂಟಿ ವರ್ಷನ್ ಕಾರು

ಹೀಗಾಗಿ ಗ್ರಾಹಕರ ಆಕರ್ಷಣೆ ಕಾರಣವಾಗಿರುವ ಹ್ಯಾರಿಯರ್ ಕಾರುಗಳು ಬಿಡುಗಡೆಯಾದ ಮೊದಲ 10 ದಿನಗಳಲ್ಲಿ 420 ಯುನಿಟ್‌ಗಳು ಮಾರಾಟಗೊಂಡಿದ್ದು, ಬೆಲೆ ಹೆಚ್ಚಳ ಎನ್ನಿಸಿದರೂ ಸಹ ಎಸ್‌ಯುವಿ ಪ್ರಿಯರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಿವೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಟಾಟಾ ಹ್ಯಾರಿಯರ್ ಎಎಂಟಿ ವರ್ಷನ್ ಕಾರು

ಇನ್ನು ಟಾಟಾ ಹ್ಯಾರಿಯರ್ ಕಾರುಗಳು ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿ ಮತ್ತು ಎಕ್ಸ್‌ಜೆಡ್ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ವೇರಿಯೆಂಟ್‍ಗಳಿಗೆ ಅನುಗುಣವಾಗಿ ಕಾರಿನ ಬೆಲೆಗಳು ಆರಂಭಿಕವಾಗಿ ರೂ.12.69 ಲಕ್ಷಕ್ಕೆ ಮತ್ತು ಹೈ ಎಂಡ್ ಮಾದರಿಯ ಬೆಲೆಯನ್ನು ರೂ.16.25 ಲಕ್ಷಕ್ಕೆ ನಿಗದಿ ಮಾಡಲಾಗಿದೆ.

MOST READ: ಟ್ರಾಫಿಕ್ ಭರಿತ ಬೆಂಗಳೂರು ರಸ್ತೆಗಳಲ್ಲಿ ಕೆಟಿಎಂ ಡ್ಯೂಕ್ 125 ಮೈಲೇಜ್ ಚೆಕ್

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಟಾಟಾ ಹ್ಯಾರಿಯರ್ ಎಎಂಟಿ ವರ್ಷನ್ ಕಾರು

ಎಂಜಿನ್ ಸಾಮರ್ಥ್ಯ

ಹ್ಯಾರಿಯರ್ ಎಸ್‌ಯುವಿ ಕಾರು 2-ಲೀಟರ್(2 ಸಾವಿರ ಸಿಸಿ) 4 ಸಿಲಿಂಡರ್, ಕ್ರೆಯೊಟೆಕ್ ಡೀಸೆಲ್ ಎಂಜಿನ್ ಹೊಂದಿದ್ದು, 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ 140-ಬಿಹೆಚ್‍ಪಿ, 350-ಎನ್ಎಂ ಶಕ್ತಿಯನ್ನು ಉತ್ಪಾದಿಸುವ ಶಕ್ತಿಯೊಂದಿಗೆ ಪರ್ಫಾಮೆನ್ಸ್ ಪ್ರಿಯರ ಗಮನಸೆಳೆಯುತ್ತವೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಟಾಟಾ ಹ್ಯಾರಿಯರ್ ಎಎಂಟಿ ವರ್ಷನ್ ಕಾರು

ಜೆನಾನ್ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್, ಫ್ರಂಟ್ ಫಾಗ್ ಲ್ಯಾಂಪ್ಸ್ ಮತ್ತು ಕಾರ್ನರಿಂಗ್ ಲೈಟ್ಸ್, ಶಾರ್ಕ್ ಫಿನ್ ಆ್ಯಂಟೆನಾ, 7 ಇಂಚಿನ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್, 8.8 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, 9 ಜೆಬಿಎಲ್ ಸ್ಪೀಕರ್ಸ್‍, 60:40 ವಿಭಜಿತ ಸೀಟ್‍ಗಳು ಮತ್ತು ನಾರ್ಮಲ್, ವೆಟ್ ಮತ್ತು ರಫ್ ಎಂಬ ಮೂರು ಟೆರೈನ್ ರೆಸ್ಪಾನ್ಸ್ ಮೊಡ್ಸ್ ಸೌಲಭ್ಯವಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಟಾಟಾ ಹ್ಯಾರಿಯರ್ ಎಎಂಟಿ ವರ್ಷನ್ ಕಾರು

ಹಾಗೆಯೇ ಸುರಕ್ಷತೆಗಾಗಿ ಹೆಚ್ಚಿನ ಆಯ್ಕೆಗಳಿದ್ದು, ಆರು ಏರ್‍‍ಬ್ಯಾಗ್‍ಗಳು, ಇಎಸ್‍ಪಿ ಮತ್ತು ಐಎಸ್ಒ ಚೈಲ್ಡ್ ಸೀಟ್ ಮೌಂಟ್ಸ್, ಹಿಲ್-ಹೋಲ್ಡ್, ಹಿಲ್ ಡಿಸ್ಸೆಂಟ್ ರೋಲ್-ಓವರ್, ಕಾರ್ನರಿಂಗ್ ಸ್ಟ್ಯಾಬಿಲಿಟಿ ಕಂಟ್ರೋಲ್ ಟ್ರಾಕ್ಷನ್, ಕಂಟ್ರೋಲ್ ಹೈಡ್ರಾಲಿಕ್ ಬ್ರೇಕ್ ಅಸ್ಸಿಸ್ಟ್ ಪಡೆದುಕೊಂಡಿದೆ.

MOST READ: ಟಾಟಾ ನೆಕ್ಸಾನ್ ಕಾರಿನ ಮೇಲೆ ಬಿಲ್‍ಬೋರ್ಡ್ ಬಿದ್ದರೂ, ಕಾರಿನಲ್ಲಿದ್ದವರಿಗೆ ಏನೂ ಆಗಲಿಲ್ಲ..!

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಟಾಟಾ ಹ್ಯಾರಿಯರ್ ಎಎಂಟಿ ವರ್ಷನ್ ಕಾರು

ಒಟ್ಟಿನಲ್ಲಿ ಪ್ರೀಮಿಯಂ ಎಸ್‍ಯುವಿ ಕಾರುಗಳ ಸರಣಿಯಲ್ಲಿ ಟಾಟಾ ಹ್ಯಾರಿಯರ್ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಜೀಪ್ ಕಂಪಾಸ್, ಹ್ಯುಂಡೈ ಕ್ರೆಟಾ ಮತ್ತು ಮಹೀಂದ್ರಾ ಎಕ್ಸ್‌ಯುವಿ500 ಕಾರುಗಳಿಗೆ ಸಾಕಷ್ಟು ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

Most Read Articles

Kannada
English summary
Tata Harrier Automatic Spied Testing — India-Launch Expected Soon. Read In Kannada
Story first published: Wednesday, February 20, 2019, 16:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X