ಗ್ರಾಹಕನ ಕೈ ಸೇರುವ ಮುನ್ನವೇ ಗ್ಯಾರೇಜ್ ಸೇರಿದ ಟಾಟಾ ಹೊಸ ಹ್ಯಾರಿಯರ್ ಕಾರು..!

ಹೊಸ ಕಾರು ಖರೀದಿಸಲು ಬಂದಿದ್ದ ಆ ಗ್ರಾಹಕ ಇನ್ನೆನು ಕೆಲವೇ ನಿಮಿಷಗಳಲ್ಲಿ ತಾನು ಬುಕ್ ಮಾಡಿದ್ದ ಹ್ಯಾರಿಯರ್ ಕಾರನ್ನು ಡೀಲರ್ಸ್ ಯಾರ್ಡ್‌‌ನಿಂದ ಮನೆಗೆ ತೆಗೆದುಕೊಂಡು ಹೋಗುವ ತವಕದಲ್ಲಿದ್ದ. ಆದ್ರೆ ನಡೆದಿದ್ದೇ ಬೇರೆ. ಸಿಬ್ಬಂದಿ ಮಾಡಿದ ಒಂದು ಸಣ್ಣ ತಪ್ಪಿನಿಂದಾಗಿ ಹೊಸ ಕಾರು ಗ್ರಾಹಕನ ಕೈ ಸೇರುವ ಬದಲು ಗ್ಯಾರೇಜ್ ಸೇರಿದೆ.

ಗ್ರಾಹಕನ ಕೈ ಸೇರುವ ಮುನ್ನವೇ ಗ್ಯಾರೇಜ್ ಸೇರಿದ ಟಾಟಾ ಹೊಸ ಹ್ಯಾರಿಯರ್ ಕಾರು..!

ಹೌದು, ಅಪಘಾತವೊಂದರಲ್ಲಿ ಟಾಟಾ ಹೊಚ್ಚ ಹೊಸ ಹ್ಯಾರಿಯರ್ ಕಂಪ್ಯಾಕ್ಟ್ ಎಸ್‌ಯುವಿ ಕಾರನ್ನು ಗ್ರಾಹಕನಿಗೆ ವಿತರಣೆ ಮಾಡುವ ಉದ್ದೇಶದಿಂದ ಸ್ಟಾಕ್ ಯಾರ್ಡ್‌ನಿಂದ ಡೀಲರ್ಸ್ ಯಾರ್ಡ್‌ನತ್ತ ತರುವಾಗ ಅಪಘಾತ ಸಂಭವಿಸಿದ್ದು, ಕಂಬಕ್ಕೆ ಗುದ್ದಿದ ಪರಿಣಾಮ ಹ್ಯಾರಿಯರ್ ಕಾರಿನ ಮುಂಭಾಗವು ಸಂಪೂರ್ಣ ಜಖಂಗೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಗ್ರಾಹಕನ ಕೈ ಸೇರುವ ಮುನ್ನವೇ ಗ್ಯಾರೇಜ್ ಸೇರಿದ ಟಾಟಾ ಹೊಸ ಹ್ಯಾರಿಯರ್ ಕಾರು..!

ಆದ್ರೆ ಅದೃಷ್ಟವಶಾತ್ ಘಟನೆಯಲ್ಲಿ ಕಾರಿನ ಮುಂಭಾಗ ಬಂಪರ್ ಮತ್ತು ಬ್ಯಾನೆಟ್‌ಗೆ ತುಸು ಹಾನಿಯಾಗಿರುವುದನ್ನು ಹೊರತುಪಡಿಸಿ ಯಾವುದೇ ಪ್ರಾಣಹಾನಿ ಉಂಟಾಗಿಲ್ಲ. ಇದಕ್ಕೆ ಕಾರಣ, ಟಾಟಾ ಹ್ಯಾರಿಯರ್ ಕಾರು ಬಲಿಷ್ಠತೆ ಎಂದ್ರೆ ತಪ್ಪಾಗುವುದಿಲ್ಲ.

ಗ್ರಾಹಕನ ಕೈ ಸೇರುವ ಮುನ್ನವೇ ಗ್ಯಾರೇಜ್ ಸೇರಿದ ಟಾಟಾ ಹೊಸ ಹ್ಯಾರಿಯರ್ ಕಾರು..!

ಡೀಲರ್ಸ್ ಯಾರ್ಡ್‌ನಿಂದ ಸ್ವಲ್ಪವೇ ದೂರದಲ್ಲಿದ್ದ ಸ್ಟಾಕ್ ಯಾರ್ಡ್‌ನಿಂದ ಗ್ರಾಹಕನಿಗೆ ವಿತರಣೆ ಮಾಡುವ ಸಂಬಂಧ ಡೀಲರ್ಸ್ ಯಾರ್ಡ್ ಬಳಿ ತರುವಾಗ ಈ ಘಟನೆ ನಡಿದ್ದಿದ್ದು, ಸಿಬ್ಬಂದಿಯ ಮಾಡಿದ ಒಂದು ಸಣ್ಣ ತಪ್ಪಿನಿಂದಾಗಿ ಕಾರು ರಸ್ತೆ ಬದಿಯಿದ್ದ ಟೆಲಿಫೋನ್ ಕಂಬಕ್ಕೆ ಗುದ್ದಿದೆ.

ಗ್ರಾಹಕನ ಕೈ ಸೇರುವ ಮುನ್ನವೇ ಗ್ಯಾರೇಜ್ ಸೇರಿದ ಟಾಟಾ ಹೊಸ ಹ್ಯಾರಿಯರ್ ಕಾರು..!

ಕಾರ್ಯನಿರ್ವಹಣೆಯಿಲ್ಲದ ಟೆಲಿಫೋನ್ ಕಂಬವಾಗಿದ್ದರಿಂದ ಯಾವುದೇ ರೀತಿ ತೊಂದರೆಯಾಗಿಲ್ಲ ಎಂದು ಹೇಳಲಾಗಿದ್ದು, ಆಟೋಮ್ಯಾಟಿಕ್ ವರ್ಷನ್ ಹ್ಯಾರಿಯರ್ ಮಾದರಿಯ ಪೂರ್ಣಮಾಹಿತಿಯಿಲ್ಲದ ಸಿಬ್ಬಂದಿಯು ಡ್ರೈವ್ ಮಾಡಿದ್ದೆ ಇದಕ್ಕೆ ಮೂಲಕಾರಣವಾಗಿದೆ.

ಗ್ರಾಹಕನ ಕೈ ಸೇರುವ ಮುನ್ನವೇ ಗ್ಯಾರೇಜ್ ಸೇರಿದ ಟಾಟಾ ಹೊಸ ಹ್ಯಾರಿಯರ್ ಕಾರು..!

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ಮಾದರಿಯಾಗಿ ಹೊರಹೊಮ್ಮಿರುವ ನೆಕ್ಸಾನ್ ಕಾರುಗಳ ಮಾದರಿಯಲ್ಲೇ ಹ್ಯಾರಿಯರ್ ಕೂಡಾ ನಿರ್ಮಾಣಗೊಂಡಿದ್ದು, ಮುಂದಿನ ತಿಂಗಳು ನಡೆಯಲಿರುವ ಕ್ರ್ಯಾಶ್ ಟೆಸ್ಟಿಂಗ್‌ಗೂ ಮುನ್ನ ಈ ಅಪಘಾತ ಸಂಭವಿಸಿರುವುದು ಕಾಕತಾಳೀಯವೇ ಇರಬಹುದು.

ಗ್ರಾಹಕನ ಕೈ ಸೇರುವ ಮುನ್ನವೇ ಗ್ಯಾರೇಜ್ ಸೇರಿದ ಟಾಟಾ ಹೊಸ ಹ್ಯಾರಿಯರ್ ಕಾರು..!

ನೆಕ್ಸಾನ್ ಕಾರುಗಳಂತೆ ಹ್ಯಾರಿಯರ್ ಕಾರು ಕೂಡಾ ಕ್ರ್ಯಾಶ್ ಟೆಸ್ಟಿಂಗ್ ಪೂರ್ಣಪ್ರಮಾಣದಲ್ಲಿ 5 ಸ್ಟಾರ್ ಗಿಟ್ಟಿಸಿಕೊಳ್ಳುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ಹೊಸ ಕಾರಿನಲ್ಲಿ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆಯನ್ನು ಒದಗಿಸಲಾಗಿದೆ.

ಗ್ರಾಹಕನ ಕೈ ಸೇರುವ ಮುನ್ನವೇ ಗ್ಯಾರೇಜ್ ಸೇರಿದ ಟಾಟಾ ಹೊಸ ಹ್ಯಾರಿಯರ್ ಕಾರು..!

ಗ್ರಾಹಕರಿಗೆ ಹೊಸ ಕಾರು ವಿತರಣೆ..!

ಘಟನೆ ಬಳಿಕ ಹೊಸ ಕಾರು ಪಡೆಯಲು ಕಾಯುತ್ತಿದ್ದ ಗ್ರಾಹಕರಿನಿಗೆ ಟಾಟಾ ಡೀಲರ್ಸ್ ಕ್ಷಮೆ ಕೊರಿದ್ದು, ಮುಂದಿನ ಒಂದು ವಾರದೊಳಗಾಗಿ ಅಪಘಾತವಾದ ಕಾರನ್ನು ಬದಲಿಸಿ ಮತ್ತೊಂದು ಹೊಸ ಕಾರುನ್ನು ವಿತರಣೆ ಮಾಡುವುದಾಗಿ ಭರವಸೆ ನೀಡಿದೆ.

ಗ್ರಾಹಕನ ಕೈ ಸೇರುವ ಮುನ್ನವೇ ಗ್ಯಾರೇಜ್ ಸೇರಿದ ಟಾಟಾ ಹೊಸ ಹ್ಯಾರಿಯರ್ ಕಾರು..!

ಮುಂಬೈನ ಅಂಧೇರಿ ಬಳಿಯಿರುವ ಕಾನ್ಕೋರ್ಡ್ ಪ್ರಭಾದೇವಿ ಡೀಲರ್ಸ್‌ ಸಿಬ್ಬಂದಿಯಿಂದಲೇ ಈ ಅಚಾತುರ್ಯ ನಡೆದಿದ್ದು, ಗ್ರಾಹಕರ ಕೈ ಸೇರುವ ಬದಲು ಹೊಸ ಕಾರು ಗ್ಯಾರೇಜ್ ಸೇರಿದ್ದು ಮಾತ್ರ ವಿಪರ್ಯಾಸವೇ ಸರಿ.

MOST READ: ಹಾಸನದ ಬಳಿ ಬರೋಬ್ಬರಿ 300ಕಿ.ಮೀ ಸ್ಪೀಡ್‌‌ನಲ್ಲಿ ಬೈಕ್ ರೈಡ್ ಮಾಡಿದ ಯುವಕ

ಗ್ರಾಹಕನ ಕೈ ಸೇರುವ ಮುನ್ನವೇ ಗ್ಯಾರೇಜ್ ಸೇರಿದ ಟಾಟಾ ಹೊಸ ಹ್ಯಾರಿಯರ್ ಕಾರು..!

ಇನ್ನು ಹ್ಯಾರಿಯರ್ ಕಾರು ಕಳೆದ ತಿಂಗಳು 23ರಂದು ಬಿಡುಗಡೆಯಾಗಿರುವುದಲ್ಲದೇ ಕೇವಲ 10 ದಿನಗಳಲ್ಲಿ ಬರೋಬ್ಬರಿ 420 ಕಾರುಗಳು ಮಾರಾಟವಾಗುವ ಮೂಲಕ ಸಬ್ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನ ಮೂಡಿಸಿದೆ.

ಗ್ರಾಹಕನ ಕೈ ಸೇರುವ ಮುನ್ನವೇ ಗ್ಯಾರೇಜ್ ಸೇರಿದ ಟಾಟಾ ಹೊಸ ಹ್ಯಾರಿಯರ್ ಕಾರು..!

ಭಾರತೀಯ ಗ್ರಾಹಕರೊಂದಿಗೆ ಭಾವನಾತ್ಮಕ ನಂಟು ಹೊಂದಿರುವ ಟಾಟಾ ಸಂಸ್ಥೆಯು ವಾಹನ ಉತ್ಪನ್ನಗಳಲ್ಲಿ ಕಾಲಕ್ಕೆ ತಕ್ಕಂತೆ ಹೊಸತ ಹುಟ್ಟುಹಾಕುವ ಮೂಲಕ ಗ್ರಾಹಕರ ವಿಶ್ವಾಸ ಗಳಿಸುತ್ತಿದ್ದು, ಇದೀಗ ಬಿಡುಗಡೆಯಾಗಿರುವ ಹ್ಯಾರಿಯರ್ ಕೂಡಾ ಟಾಟಾ ಸಂಸ್ಥೆಗೆ ಮತ್ತಷ್ಟು ಜನಪ್ರಿಯತೆ ತಂದುಕೊಡುವ ನೀರಿಕ್ಷೆಯಲ್ಲಿದೆ.

MOST READ: ಕಾರ್ ಬ್ರೇಕ್ ಫೇಲ್ ಆದ್ರೆ ಕೇವಲ 8 ಸೇಕೆಂಡುಗಳಲ್ಲಿ ಕಂಟ್ರೋಲ್ ಮಾಡುಬಹುದು ನೋಡಿ..!

ಗ್ರಾಹಕನ ಕೈ ಸೇರುವ ಮುನ್ನವೇ ಗ್ಯಾರೇಜ್ ಸೇರಿದ ಟಾಟಾ ಹೊಸ ಹ್ಯಾರಿಯರ್ ಕಾರು..!

ಇಂಪ್ಯಾಕ್ಟ್ ಡಿಸೈನ್ 2.0 ತಂತ್ರಜ್ಞಾನ ಆಧಾರದ ಮೇಲೆ ಹ್ಯಾರಿಯರ್ ಕಾರುಗಳನ್ನು ನಿರ್ಮಾಣ ಮಾಡಲಾಗಿದ್ದು, ಹೊಸ ಕಾರುಗಳಲ್ಲಿ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್ (OMEGA)" ಆರ್ಕಿಟೆಕ್ಚರ್ ಬಳಕೆ ಮಾಡಿರುವುದೇ ಹೊಸ ಕಾರಿನ ವಿನ್ಯಾಸಕ್ಕೆ ಮೆರಗು ತಂದಿವೆ.

ಗ್ರಾಹಕನ ಕೈ ಸೇರುವ ಮುನ್ನವೇ ಗ್ಯಾರೇಜ್ ಸೇರಿದ ಟಾಟಾ ಹೊಸ ಹ್ಯಾರಿಯರ್ ಕಾರು..!

ಇಲ್ಲಿ ಇನ್ನೊಂದು ವಿಶೇಷ ಅಂದ್ರೆ, ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಜೊತೆ ಕೈಜೋಡಿಸಿರುವ ಜೆಎಲ್ಆರ್ ಕೂಡಾ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್" ಆರ್ಕಿಟೆಕ್ಚರ್ ತಂತ್ರವನ್ನೇ ಬಳಕೆ ಮಾಡುತ್ತಿದ್ದು, ಇದೇ ಕಾರಣಕ್ಕೆ ಟಾಟಾ ಕಾರುಗಳಲ್ಲೂ ಜೆಎಲ್ಆರ್ ಹೊಸ ಪ್ರಯೋಗ ಮಾಡಿರುವುದು ಹ್ಯಾರಿಯರ್ ವಿನ್ಯಾಸಕ್ಕೆ ಐಷಾರಾಮಿ ಕಳೆ ಬಂದಿದೆ.

ಗ್ರಾಹಕನ ಕೈ ಸೇರುವ ಮುನ್ನವೇ ಗ್ಯಾರೇಜ್ ಸೇರಿದ ಟಾಟಾ ಹೊಸ ಹ್ಯಾರಿಯರ್ ಕಾರು..!

ಹೊಸ ಡಿಸೈನ್ ತಂತ್ರಜ್ಞಾನದಿಂದಾಗಿ ಕಾರು ಸಾಕಷ್ಟು ಸ್ಟೈಲಿಷ್ ಆಗಿ ಕಾಣುವಂತಾಗಿದ್ದು, ಕಾರಿನ ಮುಂಭಾಗದಲ್ಲಿ ಹನಿಕೊಂಬ್ ಗ್ರೀಲ್ ಮತ್ತು ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಪಾಲಿಜೊನಲ್ ಮಾದರಿಯ ಎಲ್‌ಇಡಿ ಲೈಟ್ಸ್ ಮಾದರಿಯು ಕಾರಿಗೆ ಸ್ಪೋರ್ಟಿ ಲುಕ್ ನೀಡಿವೆ.

ಗ್ರಾಹಕನ ಕೈ ಸೇರುವ ಮುನ್ನವೇ ಗ್ಯಾರೇಜ್ ಸೇರಿದ ಟಾಟಾ ಹೊಸ ಹ್ಯಾರಿಯರ್ ಕಾರು..!

ಟಾಟಾ ಹ್ಯಾರಿಯರ್ ಕಾರುಗಳು ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿ ಮತ್ತು ಎಕ್ಸ್‌ಜೆಡ್ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ವೇರಿಯೆಂಟ್‍ಗಳಿಗೆ ಅನುಗುಣವಾಗಿ ಕಾರಿನ ಬೆಲೆಗಳು ಆರಂಭಿಕವಾಗಿ ರೂ.12.69 ಲಕ್ಷಕ್ಕೆ ಮತ್ತು ಹೈ ಎಂಡ್ ಮಾದರಿಯ ಬೆಲೆಯನ್ನು ರೂ.16.25 ಲಕ್ಷಕ್ಕೆ ನಿಗದಿ ಮಾಡಲಾಗಿದೆ.

ಗ್ರಾಹಕನ ಕೈ ಸೇರುವ ಮುನ್ನವೇ ಗ್ಯಾರೇಜ್ ಸೇರಿದ ಟಾಟಾ ಹೊಸ ಹ್ಯಾರಿಯರ್ ಕಾರು..!

ಹಾಗೆಯೇ ಸುರಕ್ಷತೆಗಾಗಿ ಹೆಚ್ಚಿನ ಆಯ್ಕೆಗಳಿದ್ದು, ಆರು ಏರ್‍‍ಬ್ಯಾಗ್‍ಗಳು, ಇಎಸ್‍ಪಿ ಮತ್ತು ಐಎಸ್ಒ ಚೈಲ್ಡ್ ಸೀಟ್ ಮೌಂಟ್ಸ್, ಹಿಲ್-ಹೋಲ್ಡ್, ಹಿಲ್ ಡಿಸ್ಸೆಂಟ್ ರೋಲ್-ಓವರ್, ಕಾರ್ನರಿಂಗ್ ಸ್ಟ್ಯಾಬಿಲಿಟಿ ಕಂಟ್ರೋಲ್ ಟ್ರಾಕ್ಷನ್, ಕಂಟ್ರೋಲ್ ಹೈಡ್ರಾಲಿಕ್ ಬ್ರೇಕ್ ಅಸ್ಸಿಸ್ಟ್ ಪಡೆದುಕೊಂಡಿದೆ.

Most Read Articles

Kannada
English summary
Tata Harrier’s First Crash Happens In Mumbai — No Casualties Involved. Read in Kannada.
Story first published: Tuesday, February 5, 2019, 18:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X