ಹೆಕ್ಸಾ ಕಾರು ಮಾರಾಟವನ್ನು ಸ್ಥಗಿತಗೊಳಿಸುವ ಬಗ್ಗೆ ಸ್ಪಷ್ಟನೆ ನೀಡಿದ ಟಾಟಾ ಮೋಟಾರ್ಸ್

ಹೆಕ್ಸಾ ಮಾರಾಟ ಬಂದ್ ಆಗಲಿದೆ ಎನ್ನುವ ಸುದ್ದಿಗೆ ಕಿವಿಗೊಡದಂತೆ ಗ್ರಾಹಕರಲ್ಲಿ ಮನವಿ ಮಾಡಿರುವ ಟಾಟಾ ಮೋಟಾರ್ಸ್, ಮುಂಬರುವ ದಿನಗಳಲ್ಲಿ ಹೆಕ್ಸಾ ಕಾರು ಮತ್ತಷ್ಟು ಹೊಸತನ ಮತ್ತು ಗರಿಷ್ಠ ಮಟ್ಟದ ಸುರಕ್ಷಾ ಸೌಲಭ್ಯಗಳೊಂದಿಗೆ ಹೊಸ ಆವೃತ್ತಿಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ. ಹೀಗಾಗಿ ಹೆಕ್ಸಾ ಮಾರಾಟವನ್ನು ಬಂದ್ ಮಾಡಲಾಗುತ್ತೆ ಎನ್ನುವ ಸುದ್ದಿಗಳಿಗೆ ಟಾಟಾ ಸಂಸ್ಥೆಯೇ ಅಧಿಕೃತವಾಗಿ ಸ್ಪಷ್ಟನೆ ನೀಡುವ ಮೂಲಕ ಗ್ರಾಹಕರಲ್ಲಿ ಉಂಟಾಗಿದ್ದ ಗೊಂದಲಕ್ಕೆ ತೆರೆಎಳೆದಿದೆ.

ಇನ್ನು ಹೆಕ್ಸಾ ಮಾರಾಟವನ್ನು ಬಂದ್ ಮಾಡಲಾಗುತ್ತಿದೆ ಎನ್ನುವ ವಿಚಾರಕ್ಕೆ ಕಾರಣವಾಗಿದ್ದ ಎರಡು ಪ್ರಮುಖ ಸಂಗತಿಗಳು ಇಂತದೊಂದು ಗೊಂದಲವನ್ನು ಸೃಷ್ಠಿಸಿದ್ದು ಸುಳ್ಳಲ್ಲ. ಯಾಕೆಂದ್ರೆ ಟಾಟಾ ಸಂಸ್ಥೆಯು ಬಿಎಸ್-6 ವಾಹನಗಳ ಮೇಲೆ ಹೆಚ್ಚು ಆಸಕ್ತಿ ತೊರಿದ್ದು, ಮುಂಬರುವ ದಿನಗಳಲ್ಲಿ ಮಾರುಕಟ್ಟೆಗೆ ಪ್ರವೇಶಿಸುತ್ತಿರುವ ಹೊಸ ಕಾರು ಉತ್ಪನ್ನಗಳು ಹೆಕ್ಸಾಗೆ ಪರ್ಯಾಯವಾಗಿರುವುದು.

ಹೆಕ್ಸಾ ಕಾರು ಮಾರಾಟವನ್ನು ಸ್ಥಗಿತಗೊಳಿಸುವ ಬಗ್ಗೆ ಸ್ಪಷ್ಟನೆ ನೀಡಿದ ಟಾಟಾ ಮೋಟಾರ್ಸ್

ಹೌದು, ಟಾಟಾ ಸಂಸ್ಥೆಯು ಮುಂಬರುವ ಕೆಲವೇ ದಿನಗಳಲ್ಲಿ 7 ಸೀಟರ್ ಮಾದರಿಯ ಹ್ಯಾರಿಯರ್‌(ಕ್ಯಾಸಿನಿ) ಕಾರುನ್ನು ಬಿಡುಗಡೆ ಮಾಡಲು ಈಗಾಗಲೇ ಹಲವು ಸುತ್ತಿನ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದು, ಹೆಕ್ಸಾಗಿಂತಲೂ ಅತ್ಯುತ್ತಮ ಆಯ್ಕೆಯಾಗಿ ಈ ಕಾರು ಮಾರುಕಟ್ಟೆಗೆ ಪ್ರವೇಶಿಸುತ್ತಿದೆ.

ಹೆಕ್ಸಾ ಕಾರು ಮಾರಾಟವನ್ನು ಸ್ಥಗಿತಗೊಳಿಸುವ ಬಗ್ಗೆ ಸ್ಪಷ್ಟನೆ ನೀಡಿದ ಟಾಟಾ ಮೋಟಾರ್ಸ್

ಇದರಿಂದ ಬಿಎಸ್-6 ನಿಯಮಗಳಿಗೆ ಅನುಸಾರವಾಗಿ ಇದುವರೆಗೂ ಉನ್ನತಿಕರಣಗೊಳ್ಳದ ಹೆಕ್ಸಾ ಕಾರುನ್ನು ಕೈಬಿಟ್ಟು 7 ಸೀಟರ್ ಹ್ಯಾರಿಯರ್ ಮಾದರಿಯ ಮೇಲೆ ಟಾಟಾ ಹೆಚ್ಚು ಗಮನಹರಿಸುತ್ತಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಹೆಕ್ಸಾ ಮಾರಾಟವನ್ನು ಸ್ಥಗಿತಗೊಳಿಸುವುದಿಲ್ಲ ಎನ್ನುವ ಬಗ್ಗೆ ಸ್ಪಷ್ಟನೆ ಸಿಕ್ಕಿದ್ದು, ಬಿಎಸ್-6 ಜಾರಿ ನಂತರ ಎಸ್‌ಯುವಿ ವಿಭಾಗದಲ್ಲಿ ಹ್ಯಾರಿಯರ್, ಹೆಕ್ಸಾ ಮತ್ತು 7 ಸೀಟರ್ ಹ್ಯಾರಿಯರ್ ಮಾದರಿಯು ಮಾರಾಟಕ್ಕೆ ಲಭ್ಯವಿರುವುದು ಬಹುತೇಕ ಖಚಿತವಾಗಿದೆ.

ಹೆಕ್ಸಾ ಕಾರು ಮಾರಾಟವನ್ನು ಸ್ಥಗಿತಗೊಳಿಸುವ ಬಗ್ಗೆ ಸ್ಪಷ್ಟನೆ ನೀಡಿದ ಟಾಟಾ ಮೋಟಾರ್ಸ್

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಹಾಗೆಯೇ ಟಾಟಾ ಹೆಕ್ಸಾ ಮಾದರಿಯು 7 ಸೀಟರ್ ಹ್ಯಾರಿಯರ್ ಕಾರಿನಲ್ಲಿ ಜೋಡಿಸಲು ಉದ್ದೇಶಿಸಲಾಗಿರುವ ಸುಧಾರಿತ ತಂತ್ರಜ್ಞಾನ ಪ್ರೇರಿತ 2.2-ಲೀಟರ್ ವಾರಿಕೊರ್ ಡೀಸೆಲ್ ಎಂಜಿನ್ ಅನ್ನೇ ಪಡೆದುಕೊಳ್ಳಲಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ 2.2-ಲೀಟರ್ ಟರ್ಬೋ ಡೀಸೆಲ್ ಎಂಜಿನ್ ಬಳಕೆ ಮಾಡಲಾಗುತ್ತಿದೆ.

ಹೆಕ್ಸಾ ಕಾರು ಮಾರಾಟವನ್ನು ಸ್ಥಗಿತಗೊಳಿಸುವ ಬಗ್ಗೆ ಸ್ಪಷ್ಟನೆ ನೀಡಿದ ಟಾಟಾ ಮೋಟಾರ್ಸ್

ಇದರೊಂದಿಗೆ ಪ್ರೀಮಿಯಂ ಫೀಚರ್ಸ್‌ಗಳು ಮತ್ತು ಆಲ್ ವೀಲ್ಹ್ ಡ್ರೈವ್ ಸಿಸ್ಟಂ ಸೌಲಭ್ಯವನ್ನು ಹೊಂದಿರುವ ಹೆಕ್ಸಾ ಕಾರು ಟಾಟಾ ಸಂಸ್ಥೆಯ ಹೆಮ್ಮೆಯ ಎಸ್‌ಯುವಿ ಮಾದರಿಯಾಗಿದ್ದು, ಬಿಎಸ್-6 ಎಂಜಿನ್ ಮಾದರಿಯ ಹೆಕ್ಸಾ ಕಾರು ಪ್ರಸ್ತುತ ಆವೃತ್ತಿಗಿಂತ ಮತ್ತಷ್ಟು ಹೊಸ ಫೀಚರ್ಸ್‌ಗಳೊಂದಿಗೆ ಅಧಿಕ ಮಟ್ಟದ ಗ್ರಾಹಕರನ್ನು ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಹೆಕ್ಸಾ ಕಾರು ಮಾರಾಟವನ್ನು ಸ್ಥಗಿತಗೊಳಿಸುವ ಬಗ್ಗೆ ಸ್ಪಷ್ಟನೆ ನೀಡಿದ ಟಾಟಾ ಮೋಟಾರ್ಸ್

ಸದ್ಯ ಮಾರುಕಟ್ಟೆಯಲ್ಲಿ ಹೆಕ್ಸಾ ಕಾರು ಆನ್‌ ರೋಡ್ ಬೆಲೆಗಳ ಪ್ರಕಾರ ಆರಂಭಿಕವಾಗಿ ರೂ.16.86 ಲಕ್ಷ ಬೆಲೆ ಹೊಂದಿದ್ದರೆ, ಟಾಪ್ ಎಂಡ್ ಮಾದರಿಯು ರೂ. 23.36 ಲಕ್ಷ ಬೆಲೆ ಪಡೆದುಕೊಂಡಿದೆ. ಹೀಗಾಗಿ ಇದು ದುಬಾರಿಯಾಗಿದ್ದರೂ ಎಸ್‌ಯುವಿ ಪ್ರಿಯರಿಗೆ ಅನುಕೂಲಕರವಾದ ಹಲವು ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಬಿಎಸ್-6 ಎಂಜಿನ್ ಜೋಡಣೆ ನಂತರ ಹೆಕ್ಸಾ ಮಾರಾಟದಲ್ಲಿ ಮತ್ತು ಚೇತರಿಕೆ ಕಾಣುವ ನೀರಿಕ್ಷೆಯಿದೆ.

ಹೆಕ್ಸಾ ಕಾರು ಮಾರಾಟವನ್ನು ಸ್ಥಗಿತಗೊಳಿಸುವ ಬಗ್ಗೆ ಸ್ಪಷ್ಟನೆ ನೀಡಿದ ಟಾಟಾ ಮೋಟಾರ್ಸ್

ಇದರೊಂದಿಗೆ ಟಾಟಾ ಸಂಸ್ಥೆಯ 7 ಸೀಟರ್ ಹ್ಯಾರಿಯರ್(ಕ್ಯಾಸಿನಿ) ಮಾದರಿಯು ಸದ್ಯ ಭಾರೀ ನೀರಿಕ್ಷೆ ಹುಟ್ಟುಹಾಕಿದ್ದು, ಟೊಯೊಟಾ ಇನೋವಾ ಕ್ರಿಸ್ಟಾ ಕಾರಿಗೆ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆಗೆ ಪ್ರವೇಶ ಪಡೆಯುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿರುವ 5 ಸೀಟರ್ ಹ್ಯಾರಿಯರ್ ಮಾದರಿಯಲ್ಲೇ ಹೊರ ವಿನ್ಯಾಸ ಹೊಂದಿರುವ 7 ಸೀಟರ್ ಮಾದರಿಯು ಅನುಕೂಲಕರ ಒಳಾಂಗಣ ವಿನ್ಯಾಸ ಪಡೆದಿದೆ.

ಹೆಕ್ಸಾ ಕಾರು ಮಾರಾಟವನ್ನು ಸ್ಥಗಿತಗೊಳಿಸುವ ಬಗ್ಗೆ ಸ್ಪಷ್ಟನೆ ನೀಡಿದ ಟಾಟಾ ಮೋಟಾರ್ಸ್

ಇನೋವಾ ಕ್ರಿಸ್ಟಾಗಿಂತ ಕಡಿಮೆ ಮತ್ತು ಮಹೀಂದ್ರಾ ಮರಾಜೋಗಿಂತ ಹೆಚ್ಚಿನ ಬೆಲೆ ಪಡೆದುಕೊಳ್ಳಲಿರುವ 7 ಸೀಟರ್ ಹ್ಯಾರಿಯರ್ ಮಾದರಿಯು 2020ರ ಆರಂಭದಲ್ಲಿ ಮಾರುಕಟ್ಟೆಗೆ ಪ್ರವೇಶಿಸಲಿದ್ದು, ಆಕರ್ಷಕ ಡಿಸೈನ್‌ನೊಂದಿಗೆ ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.15 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ.19 ಲಕ್ಷ ಪಡೆದುಕೊಳ್ಳಬಹುದು ಎನ್ನಲಾಗಿದೆ.

Most Read Articles

Kannada
English summary
Tata Hexa Will Not Be Discontinued Even In BS-VI Era Says Statement By Tata Motors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X