ಟಾಟಾ ಮೋಟಾರ್ಸ್‌ನಿಂದ ಭಾರತದಲ್ಲಿ ಮತ್ತೊಂದು ಗೇಮ್‌ಚೆಂಜರ್ ಕಾರು..!

ಟಾಟಾ ಮೋಟಾರ್ಸ್ ಸಂಸ್ಥೆಯು ಸದ್ಯ ಹ್ಯಾರಿಯರ್ ಮತ್ತು 45ಎಕ್ಸ್ ಹೆಸರಿನ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬಿಡುಗಡೆಗೆ ಸಜ್ಜಾಗುತ್ತಿದ್ದು, ಈ ಮಧ್ಯೆ ಮತ್ತೊಂದು ಹೊಸ ಕಾರಿನ ಬಗೆಗೆ ಮಾಹಿತಿ ಬಿಟ್ಟುಕೊಟ್ಟಿದೆ. ಹಾರ್ನ್‌ಬಿಲ್ ಹೆಸರಿನ ಮೈಕ್ರೊ ಎಸ್‌ಯುವಿ ಕಾರು ಬಿಡುಗಡೆ ಬಗ್ಗೆ ಮಾಹಿತಿ ಲಭ್ಯವಾಗಿದ್ದು, 2020ರ ವೇಳೆಗೆ ಹೊಸ ಕಾರು ರಸ್ತೆಗಿಳಿಯುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಟಾಟಾ ಮೋಟಾರ್ಸ್‌ನಿಂದ ಭಾರತದಲ್ಲಿ ಮತ್ತೊಂದು ಗೇಮ್‌ಚೆಂಜರ್ ಕಾರು..!

2019ರ ಮೇ ನಲ್ಲಿ ನಡೆಯಲಿರುವ ಜಿನೇವಾ ಆಟೋ ಎಕ್ಸ್‌ಪೋದಲ್ಲಿ ಹೊಸ ಹಾರ್ನ್‌ಬಿಲ್ ಕಾರನ್ನ ಪ್ರದರ್ಶನ ಮಾಡಲು ನಿರ್ಧರಿಸಿರುವ ಟಾಟಾ ಸಂಸ್ಥೆಯ ತದನಂತರವಷ್ಟೇ ಬಿಡುಗಡೆ ಮಾಹಿತಿಯನ್ನ ಹೊರಹಾಕಲಿದೆಯೆಂತೆ. ಅದುವರೆಗೆ ತನ್ನ ಹೊಸ ಉತ್ಪನ್ನಗಳಾದ ಹ್ಯಾರಿಯರ್ ಮತ್ತು 45ಎಕ್ಸ್ ಸೇರಿದಂತೆ ಕೆಲವು ಎಲೆಕ್ಟ್ರಿಕ್ ವರ್ಷನ್‌ಗಳನ್ನು ಸಹ ಬಿಡುಗಡೆ ಮಾಡಲಿದೆ.

ಟಾಟಾ ಮೋಟಾರ್ಸ್‌ನಿಂದ ಭಾರತದಲ್ಲಿ ಮತ್ತೊಂದು ಗೇಮ್‌ಚೆಂಜರ್ ಕಾರು..!

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮುಂದಿನ 5 ವರ್ಷಗಳಲ್ಲಿ ಮತ್ತಷ್ಟು ಹೊಸ ಉತ್ಪನ್ನಗಳನ್ನು ಪರಿಚಯಿಸಲಿರುವ ಟಾಟಾ ಸಂಸ್ಥೆಯು ಗೇಮ್‌ಚೇಂಜರ್ ಕಾರುಗಳನ್ನು ಅಭಿವೃದ್ಧಿಗೊಳಿಸುವ ಸುಳಿವು ನೀಡಿದೆ.

ಟಾಟಾ ಮೋಟಾರ್ಸ್‌ನಿಂದ ಭಾರತದಲ್ಲಿ ಮತ್ತೊಂದು ಗೇಮ್‌ಚೆಂಜರ್ ಕಾರು..!

ಪಿಟಿಐ ಜೊತೆ ಸಂದರ್ಶನವೊಂದರಲ್ಲಿ ಹೊಸ ಕಾರುಗಳ ಬಿಡುಗಡೆ ಕುರಿತಂತೆ ಮಾತನಾಡಿರುವ ಟಾಟಾ ಮೋಟಾರ್ಸ್ ಹಿರಿಯ ಅಧಿಕಾರಿಯೊಬ್ಬರು ಆಟೋ ಉದ್ಯಮದಲ್ಲಿ ತ್ರೀವ ಬೆಳವಣಿಗೆ ಕಾಣುತ್ತಿರುವ ಭಾರತದಲ್ಲಿ ಮುಂದಿನ 5 ವರ್ಷಗಳಲ್ಲಿ 15 ವಿನೂತನ ಮಾದರಿಯ ಕಾರುಗಳು ರಸ್ತೆಗಿಳಿಯಲಿವೆ ಎಂದಿದ್ದಾರೆ.

ಟಾಟಾ ಮೋಟಾರ್ಸ್‌ನಿಂದ ಭಾರತದಲ್ಲಿ ಮತ್ತೊಂದು ಗೇಮ್‌ಚೆಂಜರ್ ಕಾರು..!

ಹೀಗಾಗಿ ಪ್ಯಾಸೆಂಜರ್ ವಿಭಾಗದಲ್ಲಿ ಬಹುದೊಡ್ಡ ಬದಲಾವಣೆಗಾಗಿ ಯೋಜನೆ ರೂಪಿಸಿರುವ ಟಾಟಾ ಸಂಸ್ಥೆಯು ಸಾಮಾನ್ಯ ಕಾರುಗಳ ಜೊತೆಗೆ ಕೆಲವು ಐಷಾರಾಮಿ ಕಾರುಗಳನ್ನು ಅಭಿವೃದ್ಧಿ ಮಾಡಲಿದೆ ಎನ್ನಬಹುದು.

ಟಾಟಾ ಮೋಟಾರ್ಸ್‌ನಿಂದ ಭಾರತದಲ್ಲಿ ಮತ್ತೊಂದು ಗೇಮ್‌ಚೆಂಜರ್ ಕಾರು..!

ಟಾಟಾ ಸಂಸ್ಥೆಯು ಸದ್ಯ ಹೊಸ ಉತ್ಪನ್ನಗಳ ಅಭಿವೃದ್ಧಿಯಾಗಿ ಜೆಎಲ್ಆರ್(ಜಾಗ್ವಾರ್, ಲ್ಯಾಂಡ್ ರೋವರ್, ರೇಂಜ್ ರೋವರ್) ಸಂಸ್ಥೆಯೊಂದಿಗೆ ಕೈಜೋಡಿಸಿದ್ದು, ಅಲ್ಫಾ ಮತ್ತು ಒಮೇಗಾ ಎನ್ನುವ ಕಾರು ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಹೊಸ ಕಾರುಗಳನ್ನು ಸಿದ್ದಗೊಳಿಸಿದೆ.

ಟಾಟಾ ಮೋಟಾರ್ಸ್‌ನಿಂದ ಭಾರತದಲ್ಲಿ ಮತ್ತೊಂದು ಗೇಮ್‌ಚೆಂಜರ್ ಕಾರು..!

ಇದಲ್ಲದೇ ಭಾರತದಲ್ಲಿ ಸದ್ಯ ಪ್ಯಾಸೆಂಜರ್ ಕಾರು ವಿಭಾಗದಲ್ಲಿ ಮಾರುತಿ ಸುಜುಕಿ ಮತ್ತು ಹ್ಯುಂಡೈ ಸಂಸ್ಥೆಗಳು ಶೇ.75ರಷ್ಟು ಕಾರು ಮಾರಾಟ ಪಾಲನ್ನು ತಮ್ಮದಾಗಿಸಿಕೊಂಡಿದ್ದು, ಮುಂಬರುವ ದಿನಗಳಲ್ಲಿ ಟಾಟಾ ಹೊಸ ಕಾರುಗಳು ಹೊಸ ಸಂಚಲನಕ್ಕೆ ಕಾರಣವಾಗಲಿದೆ.

ಟಾಟಾ ಮೋಟಾರ್ಸ್‌ನಿಂದ ಭಾರತದಲ್ಲಿ ಮತ್ತೊಂದು ಗೇಮ್‌ಚೆಂಜರ್ ಕಾರು..!

ಜೆಎಲ್ಆರ್ ಸಂಸ್ಥೆಯು ಟಾಟಾ ಸಂಸ್ಥೆಗೆ ತಂತ್ರಜ್ಞಾನ ಅಭಿವೃದ್ದಿ ಜೊತೆ ಡಿಸೈನ್ ವಿಭಾಗದಲ್ಲಿ ಸಹಾಯ ಮಾಡುವ ಹೊಸ ಒಪ್ಪಂದ ಸಹಿ ಹಾಕಿದ್ದು, ಇದರಿಂದ ಜೆಎಲ್ಆರ್ ಸಂಸ್ಥೆಯು ಟಾಟಾ ಹೊಸ ಕಾರುಗಳ ಅಭಿವೃದ್ಧಿ ಪ್ರಮುಖ ಪಾತ್ರ ವಹಿಸಲಿದೆ ಎನ್ನಬಹುದು.

ಟಾಟಾ ಮೋಟಾರ್ಸ್‌ನಿಂದ ಭಾರತದಲ್ಲಿ ಮತ್ತೊಂದು ಗೇಮ್‌ಚೆಂಜರ್ ಕಾರು..!

ವಿಶೇಷ ಅಂದ್ರೆ ಇದೀಗ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗುತ್ತಿರುವ ಟಾಟಾ ಹೊಸ ಕಾರುಗಳನ್ನು ಗಮನಿಸಿದ್ದಲ್ಲಿ ಈ ಹಿಂದಿಗಿಂತಲೂ ಹೆಚ್ಚಿನ ಬದಲಾವಣೆ ಪಡೆದುಕೊಂಡಿದ್ದು, ಇದು ಜೆಎಲ್ಆರ್ ಸಂಸ್ಥೆಯ ಹೊಸ ಪ್ರಯೋಗ ಅಂದ್ರೆ ತಪ್ಪಾಗುದಿಲ್ಲ.

MOST READ: ನ್ಯಾನೋ ಬರುವುದಕ್ಕೂ ಮುನ್ನ ಬಂದು ಹೋದ 'ಮೀರಾ' ಕಾರಿನ ಕಥೆ ಗೊತ್ತಾ?

ಟಾಟಾ ಮೋಟಾರ್ಸ್‌ನಿಂದ ಭಾರತದಲ್ಲಿ ಮತ್ತೊಂದು ಗೇಮ್‌ಚೆಂಜರ್ ಕಾರು..!

ಇದರಿಂದ ಮುಂದಿನ 5 ವರ್ಷಗಳ ಅವಧಿಯಲ್ಲಿ ಶೇ.70ರಷ್ಟು ಕಾರು ಮಾರಾಟ ಪಾಲನ್ನ ತನ್ನದಾಗಿಸಿಕೊಳ್ಳುವ ಯೋಜನೆಯಲ್ಲಿರುವ ಟಾಟಾ ಸಂಸ್ಥೆಯು ಕಾರುಗಳ ವಿನ್ಯಾಸ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಸಾಕಷ್ಟು ಬದಲಾವಣೆ ತರುತ್ತಿರುವುದು ಕಾರು ಆಯ್ಕೆಯ ಮೌಲ್ಯವನ್ನ ಹೆಚ್ಚಿಸಲಿದೆ.

Most Read Articles

Kannada
English summary
Tata Hornbill Micro-SUV Concept To Be Showcased At Upcoming 2019 Geneva Motor Show. Read in Kannada.
Story first published: Thursday, January 3, 2019, 11:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X