ಟಾಟಾ ಹಾಗೂ ಹೋಂಡಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ದೇಶಿಯ ಮಾರುಕಟ್ಟೆಯಲ್ಲಿ ಕಾರುಗಳ ಮಾರಾಟ ಪ್ರಮಾಣದಲ್ಲಿ ಕುಸಿತವಾಗಿರುವುದು ಕಾರು ತಯಾರಕ ಕಂಪನಿಗಳನ್ನು ಕಂಗೆಡಿಸಿದೆ. ಇದರಿಂದಾಗಿ ಬಹುತೇಕ ಕಾರು ಕಂಪನಿಗಳು ನಷ್ಟವನ್ನು ತಪ್ಪಿಸುವ ಸಲುವಾಗಿ ಹಾಗೂ ಕಾರುಗಳನ್ನು ಸ್ಟಾಕ್‍‍ಗಳಲ್ಲಿಡುವುದನ್ನು ತಪ್ಪಿಸಲು ತಮ್ಮ ಉತ್ಪಾದನೆಯನ್ನು ಸ್ಥಗಿತಗೊಳಿಸಿವೆ, ಇಲ್ಲವೇ ಉತ್ಪಾದನೆಯನ್ನು ಕಡಿಮೆಗೊಳಿಸಿವೆ.

ಟಾಟಾ ಹಾಗೂ ಹೋಂಡಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಈ ನಿಟ್ಟಿನಲ್ಲಿ ಟಾಟಾ ಹಾಗೂ ಹೋಂಡಾ ಕಂಪನಿಗಳು ತಮ್ಮ ಕಾರುಗಳ ಮಾರಾಟದ ಮೇಲೆ ಭಾರೀ ರಿಯಾಯಿತಿಯನ್ನು ಘೋಷಿಸಿವೆ. ನೀವು ಈ ಕಂಪನಿಗಳ ಕಾರುಗಳನ್ನು ಖರೀದಿಸುವ ಯೋಜನೆಯಲ್ಲಿದ್ದರೆ, ಈ ಕಂಪನಿಗಳು ನೀಡುತ್ತಿರುವ ರಿಯಾಯಿತಿಗಳ ವಿವರ ಇಲ್ಲಿದೆ.

ಟಾಟಾ ಹಾಗೂ ಹೋಂಡಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಟಾಟಾ ಟಿಯಾಗೋ

ಗರಿಷ್ಟ ರಿಯಾಯಿತಿ: ರೂ.43,000

ಹೆಚ್ಚು ಮಾರಾಟವಾಗುವ ಟಾಟಾ ಕಂಪನಿಯ ಕಾರು ಎಂಬ ಹೆಗ್ಗಳಿಕೆಯ ಜೊತೆಗೆ ಜನಪ್ರಿಯ ಕಾರುಗಳಲ್ಲಿ ಒಂದಾಗಿರುವ ಈ ಸ್ಟೈಲಿಶ್ ಹ್ಯಾಚ್‍‍ಬ್ಯಾಕ್ ಕಾರಿನ ಮೇಲೆ ಈ ತಿಂಗಳಿನಲ್ಲಿ ರೂ.43,000 ಗಳವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಈ ಕಾರಿನ ಎಕ್ಸ್ ಇ, ಎಕ್ಸ್ ಎಂ, ಎಕ್ಸ್ ಟಿ ಹಾಗೂ ಎಕ್ಸ್ ಝಡ್ ಮಾದರಿಗಳನ್ನು ಮೊದಲ ವರ್ಷದ ಉಚಿತ ವಿಮೆಯೊಂದಿಗೆ ಮಾರಾಟ ಮಾಡಲಾಗುತ್ತಿದೆ.

ಟಾಟಾ ಹಾಗೂ ಹೋಂಡಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಜೊತೆಗೆ ವಿನಿಮಯ ಬೋನಸ್ ಆಗಿ ರೂ.10,000ದವರೆಗೆ ರಿಯಾಯಿತಿ ನೀಡಲಾಗುತ್ತದೆ. ಎಕ್ಸ್ ಝಡ್ ಪ್ಲಸ್ ಪೆಟ್ರೋಲ್ ಮಾದರಿಯ ಕಾರುಗಳ ಮೇಲೆ ರೂ.10,000ದವರೆಗೆ ನಗದು ರಿಯಾಯಿತಿ ನೀಡುವುದರ ಜೊತೆಗೆ, ವಿನಿಮಯಕ್ಕಾಗಿ ರೂ.10,000 ಹೆಚ್ಚುವರಿ ರಿಯಾಯಿತಿ ನೀಡಲಾಗುವುದು.

ಟಾಟಾ ಹಾಗೂ ಹೋಂಡಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಟಿಗೋರ್

ಗರಿಷ್ಟ ರಿಯಾಯಿತಿ: ರೂ.50,000

ಸಬ್ 4 ಮೀಟರ್‍‍ನ ಸೆಡಾನ್ ಟಿಗೋರ್ ಕಾರು ಟಿಯಾಗೋ ಹ್ಯಾಚ್‍‍ಬ್ಯಾಕ್ ಕಾರಿನ ಮೇಲೆ ಆಧಾರಿತವಾಗಿದೆ. ಈ ಕಾರು ಮಾರುತಿ ಕಂಪನಿಯ ಡಿಜೈರ್, ಹೋಂಡಾ ಅಮೇಜ್ ಕಾರುಗಳಿಗೆ ಪೈಪೋಟಿ ನೀಡಲಿದೆ. ಈ ತಿಂಗಳಿನಲ್ಲಿ ಟಿಗೋರ್ ಕಾರಿನ ಮೇಲೆ ರೂ.50,000ಗಳವರೆಗೆ ರಿಯಾಯಿತಿ ನೀಡಲಾಗುವುದು.

ಟಾಟಾ ಹಾಗೂ ಹೋಂಡಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಆದರೆ ಈ ರಿಯಾಯಿತಿಗಳನ್ನು ಪೆಟ್ರೋಲ್ ಮಾದರಿಯ ಕಾರುಗಳಿಗೆ ಮಾತ್ರ ನೀಡಲಾಗುವುದು. ಈ ರಿಯಾಯಿತಿ ಯೋಜನೆಯಲ್ಲಿ ರೂ.25,000ದ ನಗದು ರಿಯಾಯಿತಿಯ ಜೊತೆಗೆ, ವಿನಿಮಯಕ್ಕಾಗಿ ರೂ.25,000ಗಳನ್ನು ಹೆಚ್ಚುವರಿಯಾಗಿ ನೀಡಲಾಗುವುದು.

ಟಾಟಾ ಹಾಗೂ ಹೋಂಡಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ನೆಕ್ಸಾನ್

ಗರಿಷ್ಟ ವಿನಾಯಿತಿ: ರೂ.35,000

ಟಾಟಾ ನೆಕ್ಸಾನ್ ಕಾರು ಇತ್ತೀಚಿಗೆ ಬಿಡುಗಡೆಯಾದ ಹ್ಯುಂಡೈ ವೆನ್ಯೂ ಹಾಗೂ ಮಹೀಂದ್ರಾ ಕಂಪನಿಯ ಎಕ್ಸ್ ಯುವಿ300 ಕಾರುಗಳಿಂದ ಪೈಪೋಟಿ ಎದುರಿಸುತ್ತಿದೆ. ತೀವ್ರ ಸ್ಪರ್ಧೆಯಿರುವ ಕಾರಣದಿಂದ ಈ ಕಾರುಗಳ ಮಾರಾಟದಲ್ಲಿ ಕುಸಿತ ಉಂಟಾಗಿದೆ. ಈ ಕಾರಣಕ್ಕಾಗಿ ನೆಕ್ಸಾನ್ ಎಸ್‍‍ಯು‍‍ವಿ ಕಾರಿನ ಮೇಲೆ ಟಾಟಾ ಕಂಪನಿಯು ರೂ.35,000ಗಳವರೆಗೆ ರಿಯಾಯಿತಿ ಘೋಷಿಸಿದೆ.

ಟಾಟಾ ಹಾಗೂ ಹೋಂಡಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಪೆಟ್ರೋಲ್ ಮಾದರಿಯ ಕಾರುಗಳ ಮೇಲೆ ರೂ.15,000ಗಳವರೆಗೆ ಮಾತ್ರ ವಿನಿಮಯ ರಿಯಾಯಿತಿ ನೀಡಲಾಗುತ್ತಿದೆ. ಆದರೆ ಡೀಸೆಲ್ ಮಾದರಿಯ ವಾಹನಗಳ ಮೇಲೆ ರೂ.15,000ಗಳ ನಗದು ರಿಯಾಯಿತಿಯ ಜೊತೆಗೆ ರೂ.20,000ದವರೆಗೆ ವಿನಿಮಯ ರಿಯಾಯಿತಿಗಳನ್ನು ನೀಡುತ್ತಿದೆ.

MOST READ: ಐ‍ಎಂ‍ಎ ಹಗರಣದ ಆರೋಪಿಯ ಕಾರು ವಶಪಡಿಸಿಕೊಂಡ ಪೊಲೀಸರು

ಟಾಟಾ ಹಾಗೂ ಹೋಂಡಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಹೆಕ್ಸಾ

ಗರಿಷ್ಟ ರಿಯಾಯಿತಿ: ರೂ.50,000

ಟಾಟಾ ಹೆಕ್ಸಾ ಕಾರು ಮಧ್ಯಮ ಗಾತ್ರದ ಎಸ್‍‍ಯು‍‍ವಿಯಲ್ಲಿ ಜನಪ್ರಿಯವಾಗಿರುವ ಕಾರುಗಳಲ್ಲಿ ಒಂದಾಗಿದೆ. ಈ ಕಾರಿನಲ್ಲಿ 4x4 ಡ್ರೈವ್‍‍ಟ್ರೇನ್ ಅಳವಡಿಸಲಾಗಿದೆ. ಈ ಸೆಗ್‍‍ಮೆಂಟಿನಲ್ಲಿ ಮಹೀಂದ್ರಾ ಎಕ್ಸ್ ಯುವಿ500, ಟಾಟಾ ಹ್ಯಾರಿಯರ್ ಹಾಗೂ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿರುವ ಎಂ‍‍ಜಿ ಹೆಕ್ಟರ್ ಕಾರುಗಳಿಂದ ಪೈಪೋಟಿ ಎದುರಿಸುತ್ತಿದೆ.

ಟಾಟಾ ಹಾಗೂ ಹೋಂಡಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಈ ತಿಂಗಳಿನಲ್ಲಿ ಈ ಕಾರಿನ ಮೇಲೆ ರೂ.50,000ಗಳವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಇದರಲ್ಲಿ ರೂ.25,000ಗಳನ್ನು ಕ್ಯಾಶ್‍‍ಬ್ಯಾಕ್ ರೂಪದಲ್ಲಿ ನೀಡಿದರೆ, ವಿನಿಮಯ ಬೋನಸ್ ಎಂದು ರೂ.25,000 ನೀಡಲಾಗುವುದು.

MOST READ: ಲೇ ಮನ್ಸ್ ಸೀರಿಸ್‍‍‍ಗೆ ಲಗ್ಗೆಯಿಟ್ಟ ರೇಸರ್ ಅರ್ಜುನ್ ಮೈನಿ

ಟಾಟಾ ಹಾಗೂ ಹೋಂಡಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಹೋಂಡಾ

ಜಾಜ್

ಗರಿಷ್ಟ ರಿಯಾಯಿತಿ ರೂ.50,000

ಹೋಂಡಾ ಜಾಜ್ ಕಾರು ಮಾರುತಿ ಸುಜುಕಿಯ ಬಲೆನೋ ಹಾಗೂ ಹ್ಯುಂಡೈ ಎಲೈಟ್ ಐ20 ಕಾರುಗಳಿಂದ ಪೈಪೋಟಿಯನ್ನು ಎದುರಿಸುತ್ತಿದೆ. ಜೂನ್ ತಿಂಗಳಿನಲ್ಲಿ ಈ ಕಾರಿನ ಮೇಲೆ ರೂ.50,000ಗಳವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಕಂಪನಿಯು ವಿನಿಯಮದ ಮೇಲೆ ರೂ.25,000ಗಳವರೆಗೆ ಹಾಗೂ ಮೊದಲನೇ ವರ್ಷದ ವಿಮೆಗಾಗಿ ರೂ.25,000 ರಿಯಾಯಿತಿ ನೀಡಲಿದೆ.

MOST READ: ಎಲೆಕ್ಟ್ರಿಕರಣದ ವಿರುದ್ಧ ಧ್ವನಿಯೆತ್ತಿದ ದ್ವಿಚಕ್ರ ವಾಹನ ಉದ್ಯಮ

ಟಾಟಾ ಹಾಗೂ ಹೋಂಡಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಅಮೇಜ್

ರಿಯಾಯಿತಿ ಕೊಡುಗೆ: 5ವರ್ಷಗಳ ಉಚಿತ ವಾರಂಟಿ ಹಾಗೂ ಎಕ್ಸ್ ಚೇಂಜ್ ಬೋನಸ್

ಕಾಂಪ್ಯಾಕ್ಟ್ ಸೆಡಾನ್ ಸೆಗ್‍‍ಮೆಂಟಿನಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಹೋಂಡಾ ಅಮೇಜ್ ಸಹ ಒಂದಾಗಿದೆ. ಈ ಕಾರು ಈ ಸೆಗ್‍‍ಮೆಂಟಿನಲ್ಲಿ ಮಾರುತಿ ಸುಜುಕಿಯ ಡಿಜೈರ್ ಹಾಗೂ ಹೋಂಡಾ ಎಕ್ಸೆಂಟ್ ಕಾರುಗಳಿಂದ ಪೈಪೋಟಿಯನ್ನು ಎದುರಿಸುತ್ತಿದೆ.

ಟಾಟಾ ಹಾಗೂ ಹೋಂಡಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ನಿಮ್ಮಲ್ಲಿರುವ ಹಳೆಯ ಕಾರನ್ನು ವಿನಿಮಯ ಮಾಡದೇ ಇದ್ದರೆ ಹೋಂಡಾ ಕಂಪನಿಯು 3 ವರ್ಷಗಳ ಅವಧಿಗೆ ಮೆಂಟೆನೆನ್ಸ್ ಪ್ಯಾಕೇಜ್ ನೀಡಲಿದ್ದು, 4 ಹಾಗೂ 5ನೇ ವರ್ಷಕ್ಕಾಗಿ ಹೆಚ್ಚುವರಿ ವಾರಂಟಿ ಪ್ಯಾಕೇಜ್ ನೀಡಲಿದೆ. ಕಾರನ್ನು ವಿನಿಮಯ ಮಾಡಿದರೆ 4 ಹಾಗೂ 5ನೇ ವರ್ಷಕ್ಕಾಗಿ ವಿಸ್ತರಿಸಿದ ವಾರಂಟಿಯನ್ನು ಹಾಗೂ ರೂ.25,000ಗಳನ್ನು ವಿನಿಮಯ ಬೋನಸ್‍‍ಗಾಗಿ ನೀಡಲಿದೆ.

ಟಾಟಾ ಹಾಗೂ ಹೋಂಡಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಡಬ್ಲ್ಯು‍ಆರ್ - ವಿ

ಗರಿಷ್ಟ ರಿಯಾಯಿತಿ: ರೂ.40,000

ಡಬ್ಲ್ಯು‍ಆರ್ - ವಿ ಕ್ರಾಸ್ ಒವರ್ ಮಾದರಿಯ ಕಾರ್ ಆಗಿದ್ದು, ಮಾರುತಿಯ ವಿಟಾರಾ ಬ್ರಿಝಾ, ಫೋಡ್‍‍ನ ಇಕೋಸ್ಪೋರ್ಟ್ ಹಾಗೂ ಟಾಟಾ ನೆಕ್ಸಾನ್ ಕಾರುಗಳಿಂದ ಪೈಪೋಟಿಯನ್ನು ಎದುರಿಸುತ್ತಿದೆ. ಈ ಕಾರಿನ ಮೇಲೆ ರೂ.30,000ಗಳವರೆಗೆ ರಿಯಾಯಿತಿ ನೀಡಲಾಗುತ್ತದೆ. ವಿನಿಮಯ ಬೋನಸ್ ಎಂದು ರೂ.15,000 ಹಾಗೂ ಮೊದಲ ವರ್ಷದ ವಿಮೆಗಾಗಿ ರೂ.25,000ಗಳ ರಿಯಾಯಿತಿ ನೀಡಲಿದೆ.

ಟಾಟಾ ಹಾಗೂ ಹೋಂಡಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಸಿಟಿ

ಗರಿಷ್ಟ ರಿಯಾಯಿತಿ: ರೂ.57,000

ಹೋಂಡಾ ಸಿಟಿ ಕಾರು ಹ್ಯುಂಡೈ ವರ್ನಾ ಹಾಗೂ ಮಾರುತಿ ಸುಜುಕಿಯ ಸಿಯಾಜ್ ಕಾರುಗಳಿಂದ ಪೈಪೋಟಿಯನ್ನು ಎದುರಿಸುತ್ತಿದೆ. ಈ ಕಾರಿನ ಮೇಲೆ ರೂ.57,000ಗಳವರೆಗೆ ರಿಯಾಯಿತಿ ನೀಡಲಾಗುತ್ತಿದ್ದು, ಇದರಲ್ಲಿ ಮೊದಲ ವರ್ಷದ ಇನ್ಷೂರೆನ್ಸ್ ಗಾಗಿ ರೂ.32,000 ಹಾಗೂ ಎಕ್ಸ್ ಚೇಂಜ್ ಬೋನಸ್‍‍ಗಾಗಿ ರೂ.25,000 ರಿಯಾಯಿತಿ ನೀಡಲಾಗುವುದು.

ಟಾಟಾ ಹಾಗೂ ಹೋಂಡಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಬಿಆರ್-ವಿ

ಗರಿಷ್ಟ ರಿಯಾಯಿತಿ ರೂ.1.10 ಲಕ್ಷ

ಹೋಂಡಾ ಕಂಪನಿಯ ಉಳಿದ ಕಾರುಗಳಂತೆ ಬಿ‍ಆರ್ -ವಿ ಕಾರಿನ ಮೇಲೆಯೂ ಸಹ ಭಾರೀ ರಿಯಾಯಿತಿ ನೀಡಲಾಗುತ್ತಿದೆ. ಈ ಕಾರು ಹ್ಯುಂಡೈ ಕ್ರೆಟಾ ಹಾಗೂ ನಿಸ್ಸಾನ್ ಕಿಕ್ಸ್ ಕಾರುಗಳಿಂದ ಪೈಪೋಟಿ ಎದುರಿಸುತ್ತಿದೆ. ಬೇರೆ ಎಲ್ಲಾ ಕಾರುಗಳಿಗೆ ಹೋಲಿಸಿದರೆ ಈ ಕಾರಿನ ಮೇಲೆ ಅತಿ ಹೆಚ್ಚಿನ ಅಂದರೆ ರೂ.1.10 ಲಕ್ಷಗಳವರೆಗೆ ರಿಯಾಯಿತಿ ನೀಡಲಾಗುತ್ತಿದೆ.

ಟಾಟಾ ಹಾಗೂ ಹೋಂಡಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಹಳೆಯ ಕಾರನ್ನು ವಿನಿಮಯ ಮಾಡಿದಾಗ ರೂ.50,000 ಗಳ ವಿನಿಮಯ ಬೋನಸ್ ಹಾಗೂ ಬಿಡಿಭಾಗಗಳ ಮೇಲೆ ರೂ.26,500ಗಳವರೆಗೆ ರಿಯಾಯಿತಿ ನೀಡಲಾಗುತ್ತದೆ. ಕಾರ್ ಅನ್ನು ವಿನಿಮಯ ಮಾಡದಿದ್ದಲ್ಲಿ ರೂ.36,500ಗಳವರೆಗೆ ಬಿ‍ಆರ್-ವಿ ಬಿಡಿಭಾಗಗಳ ಮೇಲೆ ರಿಯಾಯಿತಿ ನೀಡಲಾಗುತ್ತದೆ. ಇದರ ಜೊತೆಗೆ ಹೋಂಡಾ ಕಂಪನಿಯು ಮೊದಲ ವರ್ಷದ ಇನ್ಶೂರೆನ್ಸ್( ರೂ.33,500) ಅನ್ನು ಉಚಿತವಾಗಿ ನೀಡುತ್ತದೆ.

ಟಾಟಾ ಹಾಗೂ ಹೋಂಡಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಹೋಂಡಾ ಸಿವಿಕ್

ಗರಿಷ್ಟ ರಿಯಾಯಿತಿ: ರೂ.25,000

ಹೋಂಡಾ ಕಂಪನಿಯು ಕೆಲವು ದಿನಗಳ ಹಿಂದಷ್ಟೇ 10ನೇ ತಲೆಮಾರಿನ ಸಿವಿಕ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಬಿಡುಗಡೆಯಾದಾಗಿನಿಂದ ಈ ಸೆಗ್‍‍ಮೆಂಟಿನಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಸೆಡಾನ್ ಆಗಿದೆ. ಈ ಕಾರು ಸ್ಕೋಡಾ ಅಕ್ಟಾವಿಯಾ, ಟೊಯೊಟಾ ಕರೊಲಾ ಆಲ್ಟೀಸ್ ಹಾಗೂ ಹ್ಯುಂಡೈ ವರ್ನಾ ಕಾರುಗಳಿಂದ ಪೈಪೋಟಿಯನ್ನು ಎದುರಿಸುತ್ತಿದೆ.

ಟಾಟಾ ಹಾಗೂ ಹೋಂಡಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಈ ಕಾರಿನ ಮೇಲೆ ರೂ.25,000ಗಳವರೆಗೆ ರಿಯಾಯಿತಿ ನೀಡಲಾಗುತ್ತಿದೆ. ರಿಯಾಯಿತಿಯನ್ನು ಹಳೆಯ ಕಾರಿನ ವಿನಿಮಯದ ಮೇಲೆ ನೀಡಲಾಗುತ್ತಿದ್ದು, ನಿಮ್ಮ ಹಳೆಯ ಕಾರ್ ಅನ್ನು ವಿನಿಮಯ ಮಾಡಿಕೊಂಡು ಈ ರಿಯಾಯಿತಿಯನ್ನು ಪಡೆಯಬಹುದಾಗಿದೆ.

Most Read Articles

Kannada
English summary
Tata & Honda cars selling at BIG discounts this month - Read in kannada
Story first published: Saturday, June 15, 2019, 19:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X