ವಿನೂತನ ಸೌಲಭ್ಯಗಳೊಂದಿಗೆ ಟಾಟಾ ಇನ್ಟ್ರಾ ಕಂಪ್ಯಾಕ್ಟ್ ಟ್ರಕ್ ಬಿಡುಗಡೆ

ಟಾಟಾ ಮೋಟಾರ್ಸ್ ಸಂಸ್ಥೆಯು ತನ್ನ ಜನಪ್ರಿಯ ವಾಣಿಜ್ಯ ಬಳಕೆಯ ವಾಹನವಾದ ಏಸ್ ಆವೃತ್ತಿಗಿಂತಲೂ ಅತಿವಿನೂತನ ಮಾದರಿಯ ಕಂಪ್ಯಾಕ್ಟ್ ಟ್ರಕ್ ಇನ್ಟ್ರಾ ಪರಿಚಯಿಸಿದ್ದು, ಹೊಸ ವಾಣಿಜ್ಯ ವಾಹನದ ಬೆಲೆಯನ್ನು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.5.35 ಲಕ್ಷ ಮತ್ತು ಹೈ ಎಂಡ್ ಮಾದರಿಯನ್ನು 5.85 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ವಿನೂತನ ಸೌಲಭ್ಯಗಳೊಂದಿಗೆ ಟಾಟಾ ಇನ್ಟ್ರಾ ಕಂಪ್ಯಾಕ್ಟ್ ಟ್ರಕ್ ಬಿಡುಗಡೆ

ಸಣ್ಣ ಗಾತ್ರದ ವಾಣಿಜ್ಯ ವಾಹನಗಳ ಪೈಕಿ ಅತಿ ಹೆಚ್ಚು ಪ್ರೀಮಿಯಂ ಸೌಲಭ್ಯಗಳನ್ನು ಪಡೆದುಕೊಂಡಿರುವ ಇನ್ಟ್ರಾ ಟ್ರಕ್ ಮಾದರಿಯು ಕಾರುಗಳ ಮಾದರಿಯಲ್ಲಿ ಕ್ಯಾಬಿನ್ ಮತ್ತು ಇನ್ಪೋಟೈನ್ ಸಿಸ್ಟಂ ಪಡೆದುಕೊಂಡಿದ್ದು, ವಾಣಿಜ್ಯ ಬಳಕೆಯ ಜೊತೆಗೆ ವ್ಯಯಕ್ತಿಕ ಬಳಕೆಗೂ ಈ ವಾಹನವನ್ನು ಬಳಕೆ ಮಾಡಬಹುದಾದ ಸೌಲಭ್ಯ ಈ ವಾಹನದಲ್ಲಿದೆ ಎಂದ ಟಾಟಾ ಹೇಳಿಕೊಂಡಿದೆ.

ವಿನೂತನ ಸೌಲಭ್ಯಗಳೊಂದಿಗೆ ಟಾಟಾ ಇನ್ಟ್ರಾ ಕಂಪ್ಯಾಕ್ಟ್ ಟ್ರಕ್ ಬಿಡುಗಡೆ

ಚಿತ್ರಗಳಲ್ಲಿ ನೋಡುವಂತೆ ಆಕರ್ಷಕ ಗ್ರಿಲ್, ಕ್ರೋಮ್ ಸ್ಲಾಟ್, ಗ್ಲ್ಯಾಸ್ ಹೆಡ್‌ಲ್ಯಾಂಪ್, ಹೊಲೊಜೆನ್ ಲೈಟ್ಸ್, ಇಂಟ್ರಾಗೆಟೆಡ್ ಟರ್ನ್ ಇಂಡಿಕೇಟರ್, ಗಮನ ಸೆಳೆಯುವ ಬಂಪರ್, ಸೆಂಟ್ರಲ್ ಏರ್ ಡ್ರ್ಯಾಮ್, 14-ಇಂಚಿನ ಸ್ಟೀಲ್ ವೀಲ್ಹ್‌ಗಳು, ಡ್ಯುಯಲ್ ಟೋನ್ ವೀಲ್ಹ್ ಕವರ್, ಮ್ಯಾನುವಲ್ ORVMs ಮತ್ತು ಡ್ಯುಯಲ್ ವೈಪರ್ ನೀಡಲಾಗಿದೆ.

ವಿನೂತನ ಸೌಲಭ್ಯಗಳೊಂದಿಗೆ ಟಾಟಾ ಇನ್ಟ್ರಾ ಕಂಪ್ಯಾಕ್ಟ್ ಟ್ರಕ್ ಬಿಡುಗಡೆ

ಹಾಗೆಯೇ ಇನ್ಟ್ರಾ ವಾಹನ ಒಳಭಾಗವು ಕೂಡಾ ಆಕರ್ಷಕವಾಗಿದ್ದು, ಡ್ಯುಯಲ್ ಟೋನ್ ಡ್ಯಾಶ್ ಬೋರ್ಡ್, ಸೆಂಟರ್ ಕನ್ಸೊಲ್, ಏರ್ ಕಾನ್ ವೆಂಟ್ಸ್, ಚಾರ್ಜಿಂಗ್ ಸ್ಯಾಕೆಟ್, ಆಕ್ಸ್ ಇನ್, ಯುಎಸ್‌ಬಿ ಕನೆಕ್ಟಿವಿಟಿ, ಫುಲ್ ಡಿಜಿಟಲ್ ಇನ್ಟ್ರುಮೆಂಟ್ ಕ್ಲಸ್ಟರ್, ಸ್ಪೀಡೋ ಮೀಟರ್, ಓಡೊ ಮೀಟರ್, ಟೈಮ್, ಫ್ಯೂಲ್ ಗೇಜ್, ಗೇರ್ ಶಿಫ್ಟ್ ಇಂಡಿಕೇಟರ್ ಇದರಲ್ಲಿದೆ.

ವಿನೂತನ ಸೌಲಭ್ಯಗಳೊಂದಿಗೆ ಟಾಟಾ ಇನ್ಟ್ರಾ ಕಂಪ್ಯಾಕ್ಟ್ ಟ್ರಕ್ ಬಿಡುಗಡೆ

ಇನ್ನು ಟಾಟಾ ಇನ್ಟ್ರಾ ವಾಹನವು 4,316 ಎಂಎಂ ಉದ್ದವಿದ್ದು, 1,639 ಎಂಎಂ ಅಗಲ, 1,918 ಎಂಎಂ ಎತ್ತರವನ್ನು ಹೊಂದಿದ್ದು, ಇದರಲ್ಲಿ 2, 512 ಎಂಎಂ ನಷ್ಟು ಹಿಂಭಾಗದಲ್ಲಿ ಗೂಡ್ಸ್ ತುಂಬುವುದಕ್ಕಾಗಿ ಸ್ಥಳಾವಕಾಶ ನೀಡಲಾಗಿದೆ. ಈ ಮೂಲಕ ಏಸ್ ವಾಹನದ ಎಕ್ಸ್ಎಲ್ ಮಾದರಿಗಿಂತಲೂ ಇದು 100 ಕೆ.ಜಿ ಸಾಮರ್ಥ್ಯದೊಂದಿಗೆ ಒಟ್ಟು 1,100 ಕೆಜಿ ಯಷ್ಟು ಸರಕು ಸಾಗಾಣಿಕಾ ಗುಣಲಕ್ಷಣ ಪಡೆದಿದೆ.

ವಿನೂತನ ಸೌಲಭ್ಯಗಳೊಂದಿಗೆ ಟಾಟಾ ಇನ್ಟ್ರಾ ಕಂಪ್ಯಾಕ್ಟ್ ಟ್ರಕ್ ಬಿಡುಗಡೆ

ಇನ್ಟ್ರಾ ವೆರಿಯೆಂಟ್‌ಗಳು

ಟಾಟಾ ಇನ್ಟ್ರಾ ಟ್ರಕ್ ಮಾದರಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿ10 (ರೂ.5.35 ಲಕ್ಷ) ಮತ್ತು ವಿ20 (ರೂ.2. 85 ಲಕ್ಷ) ಬೆಲೆ ಹೊಂದಿದ್ದು, ಎರಡು ಮಾದರಿಯಲ್ಲೂ ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಲಾಗಿದೆ.

ವಿನೂತನ ಸೌಲಭ್ಯಗಳೊಂದಿಗೆ ಟಾಟಾ ಇನ್ಟ್ರಾ ಕಂಪ್ಯಾಕ್ಟ್ ಟ್ರಕ್ ಬಿಡುಗಡೆ

ಏಂಜಿನ್ ಸಾಮಾರ್ಥ್ಯ

ವಿ20 ಮಾದರಿಯು 1.4-ಲೀಟರ್(1,396 ಸಿಸಿ) ಡೈರೆಕ್ಟ್ ಇಂಜೆಕ್ಷನ್(ಡಿಐ) ಡೀಸೆಲ್ ಎಂಜಿನ್ ಹೊಂದಿದ್ದು, 69-ಬಿಎಚ್‌ಪಿ, 140-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ, ವಿ10 ಮಾದರಿಯು 0.8-ಲೀಟರ್(800 ಸಿಸಿ) ಟು ಸಿಲಿಂಡರ್ ಡಿಸೇಲ್ ಮೋಟಾರ್‌ನೊಂದಿಗೆ 39 ಬಿಎಚ್‌ಪಿ, 90-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ವಿನೂತನ ಸೌಲಭ್ಯಗಳೊಂದಿಗೆ ಟಾಟಾ ಇನ್ಟ್ರಾ ಕಂಪ್ಯಾಕ್ಟ್ ಟ್ರಕ್ ಬಿಡುಗಡೆ

ಎರಡು ವೆರಿಯೆಂಟ್‌ಗಳಲ್ಲೂ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ನೀಡಿರುವ ಟಾಟಾ ಸಂಸ್ಥೆಯು ಹೆವಿ ಡ್ಯುಟಿ ಪರ್ಫಾಮೆನ್ಸ್ ವಾಹನಗಳನ್ನು ಇಷ್ಟಪಡುವ ಗ್ರಾಹಕರ ಉತ್ತಮ ಆಯ್ಕೆಯಾಗುವ ಎಲ್ಲಾ ಗುಣಲಕ್ಷಣಗಳು ಈ ವಾಹನದಲ್ಲಿವೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ವಿನೂತನ ಸೌಲಭ್ಯಗಳೊಂದಿಗೆ ಟಾಟಾ ಇನ್ಟ್ರಾ ಕಂಪ್ಯಾಕ್ಟ್ ಟ್ರಕ್ ಬಿಡುಗಡೆ

ಈ ಮೂಲಕ ಕಂಪ್ಯಾಕ್ಟ್ ಟ್ರಕ್ ಮಾದರಿಗಳಲ್ಲೇ ವಿಶೇಷ ಎನ್ನಿಸಲಿರುವ ಇನ್ಟ್ರಾ ವಾಹನವು ಮಹೀಂದ್ರಾ ಬಲೆರೊ ಪಿಕ್ ಅಪ್, ಅಶೋಕ್ ಲೈಲ್ಯಾಂಡ್ ದೊಸ್ತ್ ಪ್ಲಸ್, ಮಹೀಂದ್ರಾ ಸುಪ್ರೊ ವಾಹನಗಳಿಗೆ ಪೈಪೋಟಿ ನೀಡಲಿದ್ದು, ಕಾರುಗಳ ಮಾದರಿಯಲ್ಲಿ ಇಂಟಿರಿಯರ್ ಮತ್ತು ಮುಂಭಾಗದ ವಿನ್ಯಾಸವು ಇನ್ಟ್ರಾ ವಾಹನಕ್ಕೆ ಮೆರಗು ತಂದಿದೆ.

Most Read Articles

Kannada
English summary
Tata Intra Compact Truck Launched in India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X