ಅಕ್ಟೋಬರ್‍‍ನಲ್ಲಿ ಹೆಚ್ಚು ಮಾರಾಟವಾದ ಟಿಯಾಗೋ

2019ರ ಅಕ್ಟೋಬರ್ ತಿಂಗಳಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯ ಮಾದರಿವಾರು ಕಾರು ಮಾರಾಟದ ವರದಿ ಬಿಡುಗಡೆಯಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್‍‍ನ ಮಾದರಿವಾರು ಮಾರಾಟದ ವರದಿಯಲ್ಲಿ ಟಾಟಾ ಟಿಯಾಗೊ ಮೊದಲ ಸ್ಥಾನವನ್ನು ಪಡೆದಿದೆ.

ಅಕ್ಟೋಬರ್‍‍ನಲ್ಲಿ ಹೆಚ್ಚು ಮಾರಾಟವಾದ ಟಿಯಾಗೋ

ಕಳೆದ ಅಕ್ಟೋಬರ್ ತಿಂಗಳಲ್ಲಿ ಟಾಟಾ ಟಿಯಾಗೋ ಮಾದರಿಯ 5,460 ಯು‍‍ನಿ‍ಟ್‍ಗಳು ಮಾರಾಟವಾಗಿದೆ. ಟಿಯಾಗೊ ಹ್ಯಾಚ್‍‍ಬ್ಯಾಕ್‍‍ನಲ್ಲಿ 1.2 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. 1.2 ಪೆಟ್ರೋಲ್ ಎಂಜಿನ್ 85 ಬಿ‍ಹೆಚ್‍‍ಪಿ ಪವರ್ ಮತ್ತು 114 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. 1.5 ಡೀಸೆಲ್ ಎಂಜಿನ್ 70 ಬಿ‍‍ಹೆಚ್‍ಪಿ ಪವರ್ ಮತ್ತು 140 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಅಕ್ಟೋಬರ್‍‍ನಲ್ಲಿ ಹೆಚ್ಚು ಮಾರಾಟವಾದ ಟಿಯಾಗೋ

ಟಾಟಾ ಮೋಟಾರ್ಸ್ ಮಾದರಿವಾರು ಮಾರಾಟದಲ್ಲಿ ಟಾಟಾ ನೆಕ್ಸಾನ್ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಟಾಟಾ ನೆಕ್ಸಾನ್ ಕಾಂಪ್ಯಾಕ್ಟ್ ಎಸ್‍‍ಯು‍ವಿಯು ದೇಶಿಯ ಮಾರುಕಟ್ಟೆಯಲ್ಲಿ ಹ್ಯುಂಡೈ ವೆನ್ಯೂ, ಇಕೋಸ್ಪೋರ್ಟ್ ಮತ್ತು ಮಾರುತಿ ಸುಜುಕಿ ವಿಟಾರಾ ಬ್ರಿಝಾ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ಟಾಟಾ ನೆಕ್ಸಾನ್‍‍ನ 4,438 ಯು‍‍ನಿ‍ಟ್‍ಗಳು ಮಾರಾಟವಾಗಿದೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ 4,608 ಯು‍‍ನಿ‍ಟ್‍ಗಳು ಮಾರಾಟವಾಗಿದ್ದವು.

ಅಕ್ಟೋಬರ್‍‍ನಲ್ಲಿ ಹೆಚ್ಚು ಮಾರಾಟವಾದ ಟಿಯಾಗೋ

ಈ ಪಟ್ಟಿಯಲ್ಲಿ ಟಾಟಾ ಹ್ಯಾರಿಯರ್ ಕಾರು ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ಟಾಟಾ ಹ್ಯಾರಿಯರ್ ಮಾದರಿಯ 1,528 ಯು‍‍ನಿ‍‍ಟ್‍ಗಳು ಮಾರಾಟವಾಗಿದೆ. ಟಾಟಾ ಹ್ಯಾರಿಯರ್ ಈ ವರ್ಷದ ಆರಂಭದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಹ್ಯಾರಿಯರ್‍‍ನಲ್ಲಿ ಇಂಪ್ಯಾಕ್ಟ್ 2.0 ಶೈಲಿಯ ವಿನ್ಯಾಸವನ್ನು ಹೊಂದಿದೆ.

ಅಕ್ಟೋಬರ್‍‍ನಲ್ಲಿ ಹೆಚ್ಚು ಮಾರಾಟವಾದ ಟಿಯಾಗೋ

ಟಾಟಾ ಹ್ಯಾರಿಯರ್ ಬಿಡುಗಡೆಯಾದ ಆರಂಭಿಕ ತಿಂಗಳಲ್ಲಿ ಉತ್ತಮವಾಗಿ ಮಾರಾಟವಾಗಿತ್ತು. ನಂತರದ ದಿನಗಳಲ್ಲಿ ಎಂಜಿ ಹೆಕ್ಟರ್ ಮತ್ತು ಕಿಯಾ ಸೆಲ್ಟೋಸ್ ಬಿಡುಗಡೆಯಾದ ನಂತರ ಪೈಪೋಟಿಯು ಹೆಚ್ಚಾಯಿತು. ಪ್ರಸ್ತುತ ಎಸ್‍‍ಯುವಿ ಸೆಗ್‍‍ಮೆಂಟ್‍‍ನಲ್ಲಿ ಪೈಪೋಟಿಯು ಹೆಚ್ಚಾಗಿರುವುದರಿಂದ ಟಾಟಾ ಹ್ಯಾರಿಯರ್ ಮಾರಾಟದಲ್ಲಿ ಮತ್ತೆ ಕುಸಿತ ಉಂಟಾಗಿದೆ. ಕಂಪನಿಯು ಏಳು ಸೀಟ್‍ಗಳ ಎಸ್‍‍ಯು‍ವಿಯನ್ನು ಪರಿಚಯಿಸಲು ಸಜ್ಜಾಗಿದೆ. 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸುವ ಸಾಧ್ಯತೆಗಳಿವೆ.

ಅಕ್ಟೋಬರ್‍‍ನಲ್ಲಿ ಹೆಚ್ಚು ಮಾರಾಟವಾದ ಟಿಯಾಗೋ

ಕಳೆದ ತಿಂಗಳಲ್ಲಿ ಟಾಟಾ ಟಿಗೋರ್ 1,152 ಯು‍‍ನಿ‍‍ಟ್‍‍ಗಳು ಮಾರಾಟವಾಗಿದೆ. ಟಾಟಾ ಟಿಗೋರ್ ಎಲೆಕ್ಟ್ರಿಕ್ ಮಾದರಿಯನ್ನು ಹೊಂದಿದೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಟಾಟಾ ಟಿಗೋರ್ ಮಾದರಿಯ 2,927 ಯುನಿ‍‍ಟ್‍ಗಳು ಮಾರಾಟವಾಗಿದ್ದವು.

ಅಕ್ಟೋಬರ್‍‍ನಲ್ಲಿ ಹೆಚ್ಚು ಮಾರಾಟವಾದ ಟಿಯಾಗೋ

ಈ ಪಟ್ಟಿಯಲಿ ಟಾಟಾ ಝೆಸ್ಟ್ ಐದನೇ ಸ್ಥಾನವನ್ನು ಪಡೆದುಕೊಂಡಿದೆ. ಟಾಟಾ ಝೆಸ್ಟ್ ಕಾಂಪಾಕ್ಟ್ ಸೆಡಾನ್ ಮಾದರಿಯಾಗಿದೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ಟಾಟಾ ಝೆಸ್ಟ್ ನ 443 ಯುನಿ‍‍ಟ್‍ಗಳು ಮಾರಾಟವಾಗಿವೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಅಕ್ಟೋಬರ್‍‍ನಲ್ಲಿ ಹೆಚ್ಚು ಮಾರಾಟವಾದ ಟಿಯಾಗೋ

ಟಾಟಾ ಹೆಕ್ಸಾ ಬ್ರ್ಯಾಂಡ್‍‍ನ ಸರಣಿಯಲ್ಲಿರುವ ಏಳು ಸೀಟಿನ ಏಕೈಕ ಎಸ್‍‍ಯುವಿಯಾಗಿದೆ. ಅಕ್ಟೋಬರ್ ತಿಂಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಹೆಕ್ಸಾದ 229 ಯು‍‍ನಿ‍‍ಟ್‍‍ಗಳು ಮಾರಾಟವಾಗಿದೆ. ಡೀಸೆಲ್ ಎಂಜಿನ್ ಹೊಂದಿರುವ ಈ ಎಸ್‍‍ಯುವಿಯು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಯನ್ನು ಹೊಂದಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಅಕ್ಟೋಬರ್‍‍ನಲ್ಲಿ ಹೆಚ್ಚು ಮಾರಾಟವಾದ ಟಿಯಾಗೋ

ಈ ಪಟ್ಟಿಯಲ್ಲಿ ಕೆಳಗಿನ ಎರಡು ಸ್ಥಾನಗಳನ್ನು ಸಫಾರಿ ಸ್ಟಾರ್ಮ್ ಮತ್ತು ಬೋಲ್ಟ್ ಮಾದರಿಗಳು ಹೊಂದಿವೆ. ಈ ಎರಡೂ ಮಾದರಿಗಳು ಕ್ರಮವಾಗಿ 165 ಮತ್ತು 24 ಯು‍‍ನಿ‍ಟ್‍ಗಳು ಮಾರಾಟವಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಹೊಸ ತಲೆಮಾರಿನ ಮಾದರಿಗಳಿಗೆ ಹೋಲಿಸಿದರೆ ಈ ಎರಡು ಮಾದರಿಗಳಲ್ಲಿ ಹಳೆಯದಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳಿವೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಅಕ್ಟೋಬರ್‍‍ನಲ್ಲಿ ಹೆಚ್ಚು ಮಾರಾಟವಾದ ಟಿಯಾಗೋ

2019ರ ಅಕ್ಟೋಬರ್ ತಿಂಗಳಲ್ಲಿ ಟಾಟಾ ಮೋಟಾರ್ಸ್ ಮಾದರಿವಾರು ಮಾರಾಟ ವರದಿಯಲ್ಲಿ ಟಿಯಾಗೋ ಅತಿ ಹೆಚ್ಚು ಮಾರಾಟವಾದ ವಾಹನವಾಗಿದೆ. ಟಾಟಾ ಮೋಟಾರ್ಸ್ ಕಂಪನಿಯು ತನ್ನ ಟಿಯಾಗೋ ಮತ್ತು ನೆಕ್ಸಾನ್ ಎರಡು ಮಾದರಿಗಳನ್ನು ನವೀಕರಿಸುವ ಕೆಲಸದಲ್ಲಿ ತೊಡಗಿದೆ. ಈ ಎರಡು ಮಾದರಿಗಳು ಮುಂದಿನ ವರ್ಷ ನಡೆಯುವ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳ್ಳುವ ನಿರೀಕ್ಷೆಗಳಿವೆ.

Most Read Articles

Kannada
English summary
Tata Motors Model-Wise Car Sales Report: The Tiago Is The Best-Selling Model In October 2019 - Read in Kannada
Story first published: Monday, November 18, 2019, 15:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X