ಆರೋನ್ ಟ್ರಾವೆಲ್ಸ್ ಜೊತೆ ಕೈಜೋಡಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್, ಪರಿಸರ ಸ್ನೇಹಿಯಾಗುವತ್ತ ಹೆಜ್ಜೆಯಿಡುತ್ತಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಈಗ ಮುಂಬೈನಲ್ಲಿರುವ ಆರೋನ್ ಟ್ರಾವೆಲ್ಸ್ ಜೊತೆ ಕೈ ಜೋಡಿಸಿದ್ದು, ತನ್ನ ಎಲೆಕ್ಟ್ರಿಕ್ ವಾಹನಗಳನ್ನು ಟ್ರಾವೆಲ್ಸ್ ನಲ್ಲಿ ಬಳಸಿಕೊಳ್ಳುವ ಬಗ್ಗೆ ಒಪ್ಪಂದ ಮಾಡಿಕೊಂಡಿದೆ.

ಆರೋನ್ ಟ್ರಾವೆಲ್ಸ್ ಜೊತೆ ಕೈಜೋಡಿಸಿದ ಟಾಟಾ ಮೋಟಾರ್ಸ್

ಈ ನಿಟ್ಟಿನಲ್ಲಿ ಟಾಟಾ ಟಿಗೋರ್‍‍ನ ಇವಿ ವಾಹನವನ್ನು ಮುಂಬೈನ ಕಲ್ಯಾಣ್‍‍ನಲ್ಲಿರುವ ಸುದರ್ಶನ್ ಮೋಟಾರ್ಸ್ ನಲ್ಲಿ ಆರೋನ್ ಟ್ರಾವೆಲ್ಸ್ ಗೆ ಹಸ್ತಾಂತರಿಸಲಾಯಿತು. ಆರೋನ್ ಟ್ರಾವೆಲ್ಸ್ ಮೊದಲ ಬಾರಿಗೆ ಎಲೆಕ್ಟ್ರಿಕ್ ಪಯಣವನ್ನು ಆರಂಭಿಸುತ್ತಿದೆ. ಈ ಬಗ್ಗೆ ಮಾತನಾಡಿದ ಟ್ರಾವೆಲ್ಸ್ ನಾವು ಸೇವೆಯನ್ನು ಮುಂಬೈನಾದ್ಯಂತ ನೀಡಲಿದ್ದು, ಶೂನ್ಯ ಮಾಲಿನ್ಯ ಉಂಟು ಮಾಡಲಿದ್ದೇವೆ ಎಂದು ತಿಳಿಸಿದೆ. ಟಾಟಾ ಮೋಟಾರ್ಸ್‍‍ನ ಸೇಲ್ಸ್, ಮಾರ್ಕೆಟಿಂಗ್, ಕಸ್ಟಮರ್ ಕೇರ್ ಮತ್ತು ಇ ಮೊಬಿಲಿಟಿಯ ಮುಖ್ಯಸ್ಥರಾದ ಆಶೀಷ್ ಧಾರ್‍‍ರವರು ಮಾತನಾಡಿದ್ದಾರೆ.

ಆರೋನ್ ಟ್ರಾವೆಲ್ಸ್ ಜೊತೆ ಕೈಜೋಡಿಸಿದ ಟಾಟಾ ಮೋಟಾರ್ಸ್

ಆರೋನ್ ಟ್ರಾವೆಲ್ಸ್‍‍ನ ಜೊತೆ ಸಹಭಾಗಿತ್ವ ಹೊಂದಲು ನಮಗೆ ಖುಷಿಯಾಗುತ್ತಿದ್ದು, ಅವರು ಮುಂಬೈನಾದ್ಯಂತ ಶೂನ್ಯ ಮಾಲಿನ್ಯ ಉಂಟು ಮಾಡಲು ಪ್ರಯತ್ನಿಸುತ್ತಿದ್ದು, ಇದರ ಭಾಗವಾಗಲು ನಮಗೆ ಹೆಮ್ಮೆಯಾಗುತ್ತಿದೆ.

ಆರೋನ್ ಟ್ರಾವೆಲ್ಸ್ ಜೊತೆ ಕೈಜೋಡಿಸಿದ ಟಾಟಾ ಮೋಟಾರ್ಸ್

ಇದು ನಾವು ಮುಂಬೈನಲ್ಲಿಟ್ಟಿರುವ ಮೊದಲ ಹೆಜ್ಜೆಯಾಗಿದೆ, ನಮ್ಮ ಗ್ರಾಹಕರು ಇವಿಗಳಲ್ಲಿ ಪ್ರಯಾಣಿಸಿ ಅದರ ಸೌಲಭ್ಯವನ್ನು ಅನುಭವಿಸಲಿ. ನಾವು ಪರಿಸರ ಸ್ನೇಹಿಯಾಗುವತ್ತ ಹೆಜ್ಜೆಯಿಡುತ್ತಿದ್ದು, ನಾವು ನಮ್ಮ ಗ್ರಾಹಕರಿಗೆ ಈ ನಿಟ್ಟಿನಲ್ಲಿ ಅನೇಕ ಸೌಲಭ್ಯಗಳನ್ನು ನೀಡಲಿದ್ದೇವೆ ಎಂದು ತಿಳಿಸಿದರು.

ಆರೋನ್ ಟ್ರಾವೆಲ್ಸ್ ಜೊತೆ ಕೈಜೋಡಿಸಿದ ಟಾಟಾ ಮೋಟಾರ್ಸ್

ಆರೋನ್ ಟ್ರಾವೆಲ್ಸ್ ನ ಮಾಲೀಕರಾದ ಆಲ್ಡ್ರಿನ್ ಲೂಯಿಸ್‍‍ರವರು ಮಾತನಾಡಿ, ನಾವು ಇ ಮೊಬಿಲಿಟಿ ಸೇವೆಯ ಪ್ರಯಾಣವನ್ನು ಟಾಟಾ ಮೋಟಾರ್ಸ್‍‍ನೊಂದಿಗೆ ಆರಂಭಿಸಲು ಬಹಳ ಸಂತೋಷವಾಗಿದ್ದು, ಮುಂಬೈನಲ್ಲಿ ಈ ಸೇವೆಯನ್ನು ಆರಂಭಿಸುತ್ತಿರುವವರಲ್ಲಿ ನಾವೇ ಮೊದಲಿಗರಾಗಿದ್ದೇವೆ. ಶೂನ್ಯ ಮಾಲಿನ್ಯ ಮತ್ತು ಕಡಿಮೆ ಆಪರೇಟಿಂಗ್ ಬೆಲೆಗಳಿಂದ ನಾವು ಇವಿಗಳ ಸೇವೆಯನ್ನು ನಮ್ಮ ಗ್ರಾಹಕರಿಗೆ ಒದಗಿಸಲಿದ್ದೇವೆ ಎಂದು ತಿಳಿಸಿದರು.

ಆರೋನ್ ಟ್ರಾವೆಲ್ಸ್ ಜೊತೆ ಕೈಜೋಡಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಭವಿಷ್ಯದಲ್ಲಿನ ಇ ಮೊಬಿಲಿಟಿಗಾಗಿ ಲಭ್ಯವಿರುವ ಎಂಜಿನಿಯರಿಂಗ್ ಹಾಗೂ ಟೆಕ್ ಆಧಾರಿತ ಆಟೋಮೋಟಿವ್ ಸೇವೆಗಳನ್ನು ಬಳಸಿಕೊಳ್ಳಲಿದೆ. ಟಾಟಾ ಮೋಟಾರ್ಸ್ ಭಾರತದಲ್ಲಿ ಕಮರ್ಷಿಯಲ್ ಮತ್ತು ಪ್ಯಾಸೆಂಜರ್ ವಾಹನಗಳ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಕಂಪನಿಗಳಲ್ಲಿ ಒಂದಾಗಿದ್ದು, ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ಹಾಗೂ ಪರಿಸರ ಸ್ನೇಹಿ ಕಾರುಗಳನ್ನು ತಯಾರಿಸುವತ್ತ ಹೆಜ್ಜೆಯಿಟ್ಟಿದೆ.

MOST READ: ಅನಾವರಣಗೊಂಡ ಬಹುನಿರೀಕ್ಷಿತ ಆಡಿ ಕ್ಯೂ5 ಹೈಬ್ರಿಡ್ ಆವೃತ್ತಿ

ಆರೋನ್ ಟ್ರಾವೆಲ್ಸ್ ಜೊತೆ ಕೈಜೋಡಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಆಟೋಮೋಟಿವ್ ಉದ್ಯಮಕ್ಕಾಗಿ ಹೊಸ ಹಾಗೂ ಲಭ್ಯವಿರುವ ತಂತ್ರಜ್ಞಾನವನ್ನು ಸಂಶೋಧಿಸುವ, ಅಭಿವೃದ್ಧಿ ಪಡಿಸುವ ಗುರಿಯಿಟ್ಟು ಕೊಂಡಿದೆ. ಟಾಟಾ ಮೋಟಾರ್ಸ್ ಇತ್ತೀಚಿಗಷ್ಟೆ ಭಾರತ, ಬ್ರಿಟನ್ ಮತ್ತು ಕೊರಿಯಾಗಳಲ್ಲಿರುವ ಆರ್ಟ್ ಡಿಸೈನ್ ಹಾಗೂ ಆರ್ ಅಂಡ್ ಡಿ ಕೇಂದ್ರಗಳಲ್ಲಿ ಬಂಡವಾಳ ಹೂಡಿಕೆ ಮಾಡಿದೆ.

ಆರೋನ್ ಟ್ರಾವೆಲ್ಸ್ ಜೊತೆ ಕೈಜೋಡಿಸಿದ ಟಾಟಾ ಮೋಟಾರ್ಸ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಟಾಟಾ ಮೋಟಾರ್ಸ್ ಹಾಗೂ ಆರೋನ್ ಟ್ರಾವೆಲ್ಸ್ ಶೂನ್ಯ ಮಾಲಿನ್ಯದತ್ತ ಹೆಜ್ಜೆಯನ್ನಿಟ್ಟಿವೆ. ಈ ಸಹಭಾಗಿತ್ವದ ಬಗ್ಗೆ ಹೆಚ್ಚೆನೂ ಮಾಹಿತಿಗಳು ಲಭ್ಯವಾಗಿಲ್ಲ. ಆರೋನ್ ಟ್ರಾವೆಲ್ಸ್ ಕೇಂದ್ರ ಸರ್ಕಾರದ ಫೇಮ್ 2 ಯೋಜನೆಯಡಿ ಸಬ್ಸಿಡಿ ಪಡಿದಿದ್ದು, ವಾಹನಗಳ ಇಂಧನದ ಬಗ್ಗೆ ತಲೆಕೆಡಿಸಿಕೊಳ್ಳುವಂತಿಲ್ಲ. ಈ ಎಲೆಕ್ಟ್ರಿಕ್ ಕಾರುಗಳ ಸೇವೆಯು ಮುಂಬೈ ನಗರದಲ್ಲಿ ಮಾತ್ರವೇ ಇರಲಿದೆ. ಆದರೆ ಮುಂಬೈ ನಗರವನ್ನು ಹಸಿರುಕರಣ ಮಾಡುವತ್ತ ಆರೋನ್ ಟ್ರಾವೆಲ್ಸ್ ಇಟ್ಟಿರುವ ಹೆಜ್ಜೆ ಶ್ಲಾಘನೀಯ. ಇನ್ನೊಂದೆಡೆ ಟಾಟಾ ಮೋಟಾರ್ಸ್ ಕಂಪನಿಗೆ, ಮುಂಬೈನಂತಹ ಹೆಚ್ಚು ಜನ ಸಾಂದ್ರತೆ, ಹೆಚ್ಚಿನ ಟ್ರಾಫಿಕ್ ಹೊಂದಿರುವ ನಗರದಲ್ಲಿ, ಎಲೆಕ್ಟ್ರಿಕ್ ವಾಹನಗಳ ಕಾರ್ಯದಕ್ಷತೆ ಬಗ್ಗೆ, ಇಂಧನ ಕ್ಷಮತೆ ಬಗ್ಗೆ ಮತ್ತು ಮೈಲೇಜ್ ಬಗ್ಗೆ ತಿಳಿಯಲಿದೆ.

Most Read Articles

Kannada
English summary
Tata Motors Partners With Aaron Travels To Deploy The Tigor EV - Read in kannada
Story first published: Thursday, May 23, 2019, 12:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X