ಡೀಸೆಲ್ ಕಾರುಗಳಿಗೆ ಗುಡ್ ಬೈ ಹೇಳಲಿದೆಯೆ ಟಾಟಾ ಮೋಟಾರ್ಸ್.?

ಸಧ್ಯ ಮಾರುಕಟ್ಟೆಯಲ್ಲಿ ಸೇಫೆಸ್ಟ್ ಕಾರುಗಳನ್ನು ಮಾರಾಟ ಮಾಡುತ್ತಿರುವ ದೇಶಿಯ ಆಟೋಮೊಬೈಲ್ ದಿಗ್ಗಜ ಟಾಟಾ ಮೋಟಾರ್ಸ್, ತಮ್ಮ ಸಂಸ್ಥೆಯಲ್ಲಿರುವ್ ಸಣ್ಣ ಗಾತ್ರದ ಡೀಸೆಲ್ ಕಾರುಗಳಿಗೆ ಗುಡ್ ಬೈ ಹೇಳಲಿದ್ದು, ಮುಂದಿನ ಏಪ್ರಿಲ್ 1, 2019 ರಿಂದ ಜಾರಿಯಾಗುವ ಬಿಎಸ್-6 ಎಮಿಷನ್ ಕಾಯ್ದೆಯೆ ಇದಕ್ಕೆ ಕಾರಣ ಎಂದು ಹೇಳಲಾಗಿದೆ.

ಡೀಸೆಲ್ ಕಾರುಗಳಿಗೆ ಗುಡ್ ಬೈ ಹೇಳಲಿದೆಯೆ ಟಾಟಾ ಮೋಟಾರ್ಸ್.?

ಟಾಟಾ ಮೋಟಾರ್ಸ್ ಸಂಸ್ಥೆಯು ತಮ್ಮ 1.0 ಲೀಟರ್ ಟಿಯಾಗೊ ಡೀಸೆಲ್ ಎಂಜಿನ್ ಮಾದರಿ, ಟಿಗೋರ್ ಕಾರಿನ 1.04 ಲೀಟರ್ ಡೀಸೆಲ್ ಎಂಜಿನ್ ಮತ್ತು ಬೋಲ್ಟ್ ಹಾಗು ಜೆಸ್ಟ್ ಕಾರಿನಲ್ಲಿರುವ 1.3 ಲೀಟರ್ ಡೀಸೆಲ್ ಎಂಜಿನ್ ಕಾರುಗಳನ್ನು ಸ್ಥಗಿತಗೊಳಿಸುವ ಆಲೋಚನೆಯಲಿದ್ದು, ಇನ್ನು ಯಾವ ಯಾವ ಡೀಸೆಲ್ ಮಾದರಿಯ ಕಾರುಗಳನ್ನು ಸ್ಥಗಿತಗೊಳಿಸಲಿದೆ ಎಂಬ ಮಾಹಿತಿಯನ್ನು ಹೊರಹಾಕಲಿಲ್ಲ.

ಡೀಸೆಲ್ ಕಾರುಗಳಿಗೆ ಗುಡ್ ಬೈ ಹೇಳಲಿದೆಯೆ ಟಾಟಾ ಮೋಟಾರ್ಸ್.?

ಮಾರುಕಟ್ಟೆಯಲ್ಲಿ ಶೇಕಡವರು 80ರಷ್ಟು ಪೆಟ್ರೋಲ್ ಆಧಾರಿತ ವಾಹನಗಳಿಗೆ ಬೇಡಿಕೆಯು ಹೆಚ್ಚುತ್ತಿದ್ದು, ಇದರಿಂದಾಗಿ ಡೀಸೆಲ್ ಎಂಜಿನ್‍ಗಳನ್ನು ಅಭಿವೃದ್ಧಿ ಮಾಡುವುದಾಗಲಿ ಹಾಗು, ಮುಂದಿನ ಕಾರುಗಳಲ್ಲಿ ಡೀಸೆಲ್ ಎಂಜಿನ್ ಅನ್ನು ಪರಿಚಯಿಸುವುದಿಲ್ಲವಾಗಿ ಸಂಸ್ಥೆಯು ಹೇಳಿಕೊಂಡಿದೆ.

ಡೀಸೆಲ್ ಕಾರುಗಳಿಗೆ ಗುಡ್ ಬೈ ಹೇಳಲಿದೆಯೆ ಟಾಟಾ ಮೋಟಾರ್ಸ್.?

ಆದ್ರೆ ಟಾಟಾ ಮೋಟಾರ್ಸ್ ಸಂಸ್ಥೆಯಲ್ಲಿರುವ ನೆಕ್ಸಾನ್ ಹಾಗು ಇತ್ತೀಚೆಗೆ ಬಿಡುಗಡೆಗೊಂಡ ಟಾಟಾ ಹ್ಯಾರಿಯರ್ ಕಾರಿನಲಿಲ್ರುವ 1.5 ಲೀಟರ್ ಹಾಗು 2 ಲೀಟರ್ ಡೀಸೆಲ್ ಎಂಜಿನ್‍ಗಳನ್ನು ಶೀಘ್ರವೇ ಬಿಎಸ್-6 ಎಮಿಷನ್‍ಗೆ ಅನುಗುಣವಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ಕೂಡಾ ಹೆಳಿಕೊಂಡಿದೆ. ಇದಲ್ಲದೆಯೆ ಮಾರುತಿ ಸುಜುಕಿ ಸಂಸ್ಥೆಯು ಕೂಡಾ ತಮ್ಮ ಡೀಸೆಲ್ ಕಾರುಗಳಿಗೆ ವಿದಾಯ ಹೇಳಲಿದೆ ಎಂದು ಕೂಡಾ ತಿಳಿದು ಬಂದಿದೆ.

ಡೀಸೆಲ್ ಕಾರುಗಳಿಗೆ ಗುಡ್ ಬೈ ಹೇಳಲಿದೆಯೆ ಟಾಟಾ ಮೋಟಾರ್ಸ್.?

ಈ ಹಿಂದೆ ಕೇಂದ್ರ ಸರ್ಕಾರವು 2017ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ದೇಶಾದ್ಯಂತ ಬಿಎಸ್-3 (ಭಾರತ್ ಸ್ಟೇಜ್) ಸೌಲಭ್ಯಗಳನ್ನು ಒಳಗೊಂಡ ವಾಹನಗಳ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆ ಮೇಲೆ ನಿಷೇಧ ನಿಷೇಧ ಹೇರಿದ್ದಲ್ಲದೆ ಬಿಎಸ್-4 ಮತ್ತು ಅದಕ್ಕೂ ಮೇಲ್ಪಟ್ಟ ವಾಹನ ಮಾದರಿಗಳ ಮಾರಾಟಕ್ಕೆ ಮಾತ್ರವೇ ಅವಕಾಶ ನೀಡಿತ್ತು.

ಡೀಸೆಲ್ ಕಾರುಗಳಿಗೆ ಗುಡ್ ಬೈ ಹೇಳಲಿದೆಯೆ ಟಾಟಾ ಮೋಟಾರ್ಸ್.?

ಇದೀಗ ಮತ್ತೊಂದು ಮಹತ್ವದ ಹೆಜ್ಜೆಯಿಡುತ್ತಿರುವ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್ ಸೂಚನೆಯೆಂತೆ 2020ರ ಏಪ್ರಿಲ್ 1ರಿಂದ ಬಿಎಸ್-4 ವಾಹನಗಳ ಉತ್ಪಾದನೆ ಮತ್ತು ಮಾರಾಟ ಮೇಲೆ ನಿಷೇಧ ಹೇರುವುದು ಖಚಿತವಾಗಿದ್ದು, ಬಿಎಸ್-6 ವಾಹನಗಳು ಮತ್ತು ಅದಕ್ಕೂ ಹೆಚ್ಚಿನ ಮಟ್ಟದ ವಾಹನ ಮಾದರಿಗಳಿಗೆ ಮಾತ್ರವೇ ಅವಕಾಶ ನೀಡಲಿದೆ.

ಡೀಸೆಲ್ ಕಾರುಗಳಿಗೆ ಗುಡ್ ಬೈ ಹೇಳಲಿದೆಯೆ ಟಾಟಾ ಮೋಟಾರ್ಸ್.?

ಹೀಗಾಗಿ ಕೇಂದ್ರ ಸರ್ಕಾರದ ಡೆಡ್‌ಲೈನ್‌ಗೂ ಮುನ್ನವೇ ಬಿಎಸ್ 6 ವೈಶಿಷ್ಟ್ಯತೆಯುಳ್ಳ ಎಂಜಿನ್ ಪ್ರೇರಿತ ಕಾರು ಮಾದರಿಗಳನ್ನು ಬಿಡುಗಡೆಗೊಳಿಸುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು, ಈ ಮೂಲಕ ಮಾಲಿನ್ಯ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ಬಹುದೊಡ್ಡ ಬದಲಾವಣೆ ಮಾಡುತ್ತಿದೆ.

ಡೀಸೆಲ್ ಕಾರುಗಳಿಗೆ ಗುಡ್ ಬೈ ಹೇಳಲಿದೆಯೆ ಟಾಟಾ ಮೋಟಾರ್ಸ್.?

ಈ ಹಿನ್ನೆಲೆ ಬಿಎಸ್-6 ಹೊಸ ನಿಯಮವನ್ನು ಪಾಲಿಸಲು ಸಾಧ್ಯವಾಗದ ಡೀಸೆಲ್ ಎಂಜಿನ್ ಮಾದರಿಗಳ ಮಾರಾಟವನ್ನು 2020ರ ಎಪ್ರಿಲ್ 1ರಿಂದಲೇ ಬಂದ್ ಮಾಡಲು ನಿರ್ಧರಿಸಿರುವ ಮಾರುತಿ ಸುಜುಕಿ ಸಂಸ್ಥೆಯು ಪೆಟ್ರೋಲ್, ಹೈಬ್ರಿಡ್ ಮತ್ತು ಸಿಎನ್‌ಜಿ ಆವೃತ್ತಿಗಳ ಅಭಿವೃದ್ಧಿ ಮೇಲೆ ಹೆಚ್ಚಿನ ಗಮನಹರಿಸುತ್ತಿದ್ದು, ಡೀಸೆಲ್ ಎಂಜಿನ್ ಕೈಬಿಡುತ್ತಿರುವ ಬಗ್ಗೆ ಸ್ವತಃ ಸುಜುಕಿ ಸಂಸ್ಥೆಯ ಅಧ್ಯಕ್ಷ ಆರ್‌ಸಿ ಭಾರ್ಗವ್ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ.

ಡೀಸೆಲ್ ಕಾರುಗಳಿಗೆ ಗುಡ್ ಬೈ ಹೇಳಲಿದೆಯೆ ಟಾಟಾ ಮೋಟಾರ್ಸ್.?

ಇನ್ನು ಬಿಎಸ್ 4 ವಾಹನಗಳಿಂತ ಬಿಎಸ್ 6 ವಾಹನಗಳು ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯ ಪಡೆಯುತ್ತಿರುವ ಹಿನ್ನಲೆಯಲ್ಲಿ ಹೊಸ ವಾಹನಗಳ ಬೆಲೆಯಲ್ಲಿ ಸರಾಸರಿ ರೂ. 1 ಲಕ್ಷದಿಂದ ರೂ. 2.50 ಲಕ್ಷ ಏರಿಕೆಯಾಗಲಿದ್ದು,ಇದರಿಂದ ಅಗ್ಗದ ಬೆಲೆಯ ಕಾರು ಮಾರಾಟ ಮಾಡುವ ಮಾರುತಿ ಸುಜುಕಿ ಇದು ಹಿನ್ನಡೆಯಾಗುವ ಸಾಧ್ಯತೆಗಳಿವೆ.

ಡೀಸೆಲ್ ಕಾರುಗಳಿಗೆ ಗುಡ್ ಬೈ ಹೇಳಲಿದೆಯೆ ಟಾಟಾ ಮೋಟಾರ್ಸ್.?

ಇದರಿಂದ ಬೆಲೆ ಹೆಚ್ಚಳದಿಂದ ಗ್ರಾಹಕರನ್ನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ಡೀಸೆಲ್ ಕಾರುಗಳ ಬದಲಾಗಿ ಪೆಟ್ರೋಲ್, ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ಕಾರುಗಳತ್ತ ಹೆಚ್ಚಿನ ಒತ್ತು ಕೊಡಲು ಮುಂದಾಗಿದೆ.

ಡೀಸೆಲ್ ಕಾರುಗಳಿಗೆ ಗುಡ್ ಬೈ ಹೇಳಲಿದೆಯೆ ಟಾಟಾ ಮೋಟಾರ್ಸ್.?

2020ರ ಆರಂಭದಿಂದಲೇ ಡೀಸೆಲ್ ಕಾರುಗಳಿಂತ ಹೆಚ್ಚು ಪೆಟ್ರೋಲ್ ಮತ್ತು ಸಿಎನ್‌ಜಿ ಆಧರಿತ ವಾಹನ ಮಾರಾಟವನ್ನು ಹೆಚ್ಚಿಸುವ ಸಂಬಂಧ ಕೆಲವು ಮಹತ್ವದ ನಿರ್ಧಾರ ಪ್ರಕಟಿಸಲಾಗುತ್ತಿದ್ದು, ಇದರಿಂದ ಡೀಸೆಲ್ ಕಾರುಗಳನ್ನು ಖರೀದಿಸುವ ಗ್ರಾಹಕರು ಪೆಟ್ರೋಲ್ ಕಾರುಗಳತ್ತ ಆಕರ್ಷಣೆಯಾಗುವಂತೆ ಮಾಡಲಿದೆ.

Source: EtAuto

Most Read Articles

Kannada
English summary
Tata Motors May Discontinue Good Bye To Their Small Diesel Cars. Read In Kannada
Story first published: Monday, May 6, 2019, 10:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X