ನೆಕ್ಸಾನ್ ನಂತರ ಸುರಕ್ಷತೆಯಲ್ಲಿ 5 ಅಂಕಗಳನ್ನು ಪಡೆಯಲಿದೆಯೆ ಟಾಟಾ ಆಲ್‍ಟ್ರೋಜ್ ಕಾರು..?

ಇತ್ತಿಚೆಗೆ ನಡೆದ ಅಪಘಾತಗಳಲ್ಲಿ ಟಾಟಾ ಹ್ಯಾರಿಯರ್, ನೆಕ್ಸಾನ್ ಮತ್ತು ಹೆಕ್ಸಾ ಕಾರುಗಳ ಉತ್ಪಾದನ ಗುಣಮಟ್ಟದ ಬಗ್ಗೆ ನಾವು ಈಗಾಗ್ಲೆ ಮಾಹಿತಿಯನ್ನು ನೀಡಿದ್ದೆವು. ಇದೀಗ ಟಾಟಾ ಮೋಟಾರ್ಸ್ ಸಂಸ್ಥೆಯು ತಮ್ಮ ಆಲ್‍ಟ್ರೋಜ್ ಕಾರಿನಲ್ಲಿಯು ಸಹ ಉನ್ನತ್ತ ಮಟ್ಟದ ಸುರಕ್ಷಾ ಸಾಧನಗಳನ್ನು ಅಳವಡಿಸಿ ಕ್ರ್ಯಾಷ್ ಟೆಸ್ಟಿಂಗ್ ವೇಳೆ 5 ಕ್ಕೆ 5 ಅಂಕಗಳನ್ನು ಪಡೆಯುವ ಹಾಗೆ ಸಜ್ಜುಗೊಳಿಸುತ್ತೇವೆ ಎಂದು ಟಾಟಾ ಮೋಟಾರ್ಸ್ ಸಂಸ್ಥೆಯು ಹೇಳಿಕೊಂಡಿದೆ.

ನೆಕ್ಸಾನ್ ನಂತರ ಸುರಕ್ಷತೆಯಲ್ಲಿ 5 ಅಂಕಗಳನ್ನು ಪಡೆಯಲಿದೆಯೆ ಟಾಟಾ ಆಲ್ಟ್ರೋಜ್ ಕಾರು..?

ಹತ್ತುಹಲವು ವಿಶೇಷತೆಗಳನ್ನು ಹೊತ್ತು ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿರುವ ಟಾಟಾ ಆಲ್‍ಟ್ರೋಜ್ ಕಾರು ಜೂನ್ ತಿಂಗಳಿನಲ್ಲಿ ಡೀಲರ್‍‍ಗಳ ಯಾರ್ಡ್ ತಲಪುವ ಸಾಧ್ಯತೆಗಳಿದ್ದು, ಆಗಸ್ಟ್ ತಿಂಗಳೊಳಗೆ ಮಾರುಕಟ್ಟೆಗೆ ಲಗ್ಗೆ ಇಡುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ. ಈ ನಿಟ್ಟಿನಲ್ಲಿ ಟಾಟಾ ಆಲ್ಟ್ರೋಜ್ ಕಾರು ಏನೆಲ್ಲಾ ಉಪಕರಣಗಳು ಮತ್ತು ವೈಶಿಷ್ಟ್ಯತೆಗಳನ್ನು ಹೊತ್ತು ಬರಲಿದೆ ಎಂದು ನೀವೆ ನೋಡಿ..

ನೆಕ್ಸಾನ್ ನಂತರ ಸುರಕ್ಷತೆಯಲ್ಲಿ 5 ಅಂಕಗಳನ್ನು ಪಡೆಯಲಿದೆಯೆ ಟಾಟಾ ಆಲ್ಟ್ರೋಜ್ ಕಾರು..?

ಸಧ್ಯ ತನ್ನ ಎಂಜಿನ್ ಕಾರ್ಯಕ್ಷಮತೆಯನ್ನು ಪರೀಕ್ಷಿಸಲು ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದ್ದು, ಪುಣೆಯಲ್ಲಿ ಮುಸುಕಿಲ್ಲದೇ ಅನಾವರಣಗೊಂಡಾಗ ಹೇಗೆ ಕಾಣಿಸುತ್ತಿತ್ತೋ, ಹಾಗೆಯೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದೆ. ಈ ಕಾರು ಟಾಟಾ ಮೋಟಾರ್ಸ್‍‍ನಲ್ಲಿರುವ ಬೇರೆಲ್ಲಾ ಹ್ಯಾಚ್‍‍ಬ್ಯಾಕ್ ಕಾರುಗಳಿಗಿಂತಲೂ ವಿನ್ಯಾಸದಲ್ಲಿ ವಿಭಿನ್ನವಾಗಿದೆ ಎಂದು ನೋಡಿದ ತಕ್ಷಣವೇ ತಿಳಿಯುತ್ತದೆ.

ನೆಕ್ಸಾನ್ ನಂತರ ಸುರಕ್ಷತೆಯಲ್ಲಿ 5 ಅಂಕಗಳನ್ನು ಪಡೆಯಲಿದೆಯೆ ಟಾಟಾ ಆಲ್ಟ್ರೋಜ್ ಕಾರು..?

ಆಲ್ಬಾಟ್ರೊಸ್ ಎನ್ನುವ ಸಮುದ್ರ ಹಕ್ಕಿಯ ಬಲಿಷ್ಠತೆ ಮತ್ತು ಚತುರತೆಯ ಪ್ರೇರಣೆಯೊಂದಿಗೆ ಆಲ್‌ಟ್ರೊಜ್ ಕಾರನ್ನು ನಿರ್ಮಾಣ ಮಾಡಿರುವ ಟಾಟಾ ಸಂಸ್ಥೆಯು ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಬಲೆನೊ ಮತ್ತು ಹ್ಯುಂಡೈ ಐ20 ಕಾರುಗಳಿಗೆ ಪ್ರಬಲ ಪೈಪೋಟಿಯಾಗಿ ಮಾರುಕಟ್ಟೆಗೆ ಪ್ರವೇಶ ಪಡೆಯುವುದು ಬಹುತೇಕ ಖಚಿತವಾಗಿದೆ. ಇದಕ್ಕೆ ಕಾರಣ, ಆಲ್‌ಟ್ರೊಜ್ ಕಾರಿನ ಎಂಜಿನ್ ಪರ್ಫಾಮೆನ್ಸ್ ಗುಣಲಕ್ಷಣಗಳು ಇತರೆ ಹ್ಯಾಚ್‌ಬ್ಯಾಕ್ ಆವೃತ್ತಿಗಳಿಂತಲೂ ಉತ್ತಮವಾಗಿರುವುದಲ್ಲದೇ ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತುಬರಲಿದೆ.

ನೆಕ್ಸಾನ್ ನಂತರ ಸುರಕ್ಷತೆಯಲ್ಲಿ 5 ಅಂಕಗಳನ್ನು ಪಡೆಯಲಿದೆಯೆ ಟಾಟಾ ಆಲ್ಟ್ರೋಜ್ ಕಾರು..?

ಸಧ್ಯ ಸಿಕ್ಕ ಮಾಹಿತಿಗಳ ಪ್ರಕಾರ ಟಾಟಾ ಅಲ್‍ಟ್ರೋಜ್ ಕಾರಿನಲ್ಲಿ ಸ್ಲಿಮ್ ಹೆಡ್‍ಲ್ಯಾಂಪ್ಸ್, ಆಕರ್ಷಕವಾದ ಫ್ರಂತ್ ಗ್ರಿಲ್, ಪಿಯಾನೊ ಬ್ಲಾಕ್ ಒಆರ್‍‍ವಿಎಂ, ಮತ್ತು ಸಿಗ್ನೇಚರ್ ಗ್ರಿಲ್ ಅನ್ನು ಹೊಂದಿರಲಿದ್ದು, ಇವುಗಳ ಜೊತೆಗೆ ಈ ಕಾರಿನ ಟಾಪ್ ಸ್ಪೆಕ್ ಮಾಡಲ್‍‍ನಲ್ಲಿ 16 ಇಂಚಿನ ಅಲಾಯ್ ವ್ಹೀಲ್ಸ್ ಅನ್ನು ಸಹ ಅಳವಡಿಸಲಾಗಿದೆ.

ನೆಕ್ಸಾನ್ ನಂತರ ಸುರಕ್ಷತೆಯಲ್ಲಿ 5 ಅಂಕಗಳನ್ನು ಪಡೆಯಲಿದೆಯೆ ಟಾಟಾ ಆಲ್ಟ್ರೋಜ್ ಕಾರು..?

ಇನ್ನು ಕಾರಿನ ಒಳಭಾಗದಲ್ಲಿ 7 ಇಂಚಿನ ಫ್ಲೋತಿಂಗ್ ಇನ್ಫೋಟನ್ಮೆಂಟ್ ಸಿಸ್ಟಂ, ಟಿಎಫ್‍ಟಿ ಕ್ಲಸ್ಟರ್ ಡಿಸ್ಪ್ಲೇ, ರಿಯರ್ ಎಸಿ ವೆಂಟ್ಸ್ ಅನ್ನು ಪಡೆದುಕೊಂಡಿರಲಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ ಇದರಲ್ಲಿ ಕ್ರೂಸ್ ಕಂತ್ರೋಲ್, ಡ್ರೈವರ್ ಮತ್ತು ಕೋ ಡ್ರೈವರ್ ಏರ್‍‍ಬ್ಯಾಗ್ಸ್, ಸೀಟ್ ಬೆಲ್ಟ್ ರಿಮೈಂಡರ್, ಪಾರ್ಕಿಂಗ್ ಅಸಿಸ್ಟ್, ಎಬಿಡಿ, ಇಬಿಡಿ, ಐಎಸ್ಒಫಿಕ್ಸ್ ಚೈಲ್ಡ್ ಸೀಟ್ ಮೌಂಟ್ಸ್ ಮತ್ತು ರಿಯರ್ ಸೆನ್ಸಾರ್ಸ್ ಹಾಗು ಕ್ಯಾಮೆರಾವನ್ನು ನೀಡಲಾಗಿದೆ.

ನೆಕ್ಸಾನ್ ನಂತರ ಸುರಕ್ಷತೆಯಲ್ಲಿ 5 ಅಂಕಗಳನ್ನು ಪಡೆಯಲಿದೆಯೆ ಟಾಟಾ ಆಲ್ಟ್ರೋಜ್ ಕಾರು..?

ಹೌದು, ಆಲ್‌ಟ್ರೊಜ್ ಕಾರು ಪೆಟ್ರೋಲ್ ಆವೃತ್ತಿಯಲ್ಲಿ ಎರಡು ಎಂಜಿನ್ ಆಯ್ಕೆಗಳು ಇರಲಿದ್ದು, ಡೀಸೆಲ್‌ ಆವೃತ್ತಿಯಲ್ಲಿ ಒಂದು ಆಯ್ಕೆ ಮಾತ್ರ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಪೆಟ್ರೋಲ್ ಆವೃತ್ತಿಯಲ್ಲಿ 1.2-ಲೀಟರ್ ಮತ್ತು 1.5-ಲೀಟರ್ ಎಂಜಿನ್ ಮಾದರಿಗಳು ಅಭಿವೃದ್ಧಿಯಾಗುತ್ತಿದ್ದು, ಡೀಸೆಲ್ ಮಾದರಿಯಲ್ಲಿ 1.5-ಲೀಟರ್ ಎಂಜಿನ್ ಲಭ್ಯವಾಗಲಿದೆ.

ನೆಕ್ಸಾನ್ ನಂತರ ಸುರಕ್ಷತೆಯಲ್ಲಿ 5 ಅಂಕಗಳನ್ನು ಪಡೆಯಲಿದೆಯೆ ಟಾಟಾ ಆಲ್ಟ್ರೋಜ್ ಕಾರು..?

ಪೆಟ್ರೋಲ್ ಆವೃತ್ತಿಗಾಗಿ ಆಯ್ಕೆ ಮಾಡಲಾಗಿರುವ 1.2-ಲೀಟರ್ ಎಂಜಿನ್ ಮಾದರಿಯನ್ನು ಟಿಯಾಗೋದಿಂದ ಎರವಲು ಪಡೆದಿದ್ದಲ್ಲಿ 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಮಾದರಿಗಳನ್ನು ನೆಕ್ಸಾನ್ ಎಸ್‌ಯುವಿಯಿಂದ ಎರವಲು ಪಡೆದಿರುವ ಟಾಟಾ ಸಂಸ್ಥೆಯು ಎಂಜಿನ್ ಪರ್ಫಾಮೆನ್ಸ್‌ನಲ್ಲಿ ಕೆಲವು ಗಮನಸೆಳೆಯಬಹುದಾದ ಬದಲಾವಣೆಗಳನ್ನು ಮಾಡಿದೆ.

ನೆಕ್ಸಾನ್ ನಂತರ ಸುರಕ್ಷತೆಯಲ್ಲಿ 5 ಅಂಕಗಳನ್ನು ಪಡೆಯಲಿದೆಯೆ ಟಾಟಾ ಆಲ್ಟ್ರೋಜ್ ಕಾರು..?

ಪ್ರಮುಖ ವಿಚಾರ ಅಂದ್ರೆ, ಟಾಟಾ ಸಂಸ್ಥೆಯು ಸದ್ಯ ಜೆಎಲ್ಆರ್ ಸಂಸ್ಥೆಯ ಜೊತೆಗೂಡಿ ಕಾರು ನಿರ್ಮಾಣದಲ್ಲಿ ಭಾರೀ ಬದಲಾವಣೆ ತರುತ್ತಿದ್ದು, ಹ್ಯಾರಿಯರ್ ಕಾರು ಮಾದರಿಯಲ್ಲೇ ಹೊಸ ಆಲ್‌ಟ್ರೊಜ್ ಕಾರನ್ನು ಸಹ ಇಂಪ್ಯಾಕ್ಟ್ ಡಿಸೈನ್ 2.0 ಅಡ್ವಾನ್ಸ್ ಆಕ್ಟಿಟೆಕ್ಕರ್ ವಿನ್ಯಾಸದೊಂದಿಗೆ ಅಭಿವೃದ್ಧಿಗೊಳಿಸಿರುವುದು ಕಾರಿನ ತೂಕವನ್ನು ಕಡಿತಗೊಳಿಸುವಲ್ಲಿ ಸಾಕಷ್ಟು ನೆರವಾಗಿದೆ. ಇದು ನೆರವಾಗಿ ಕಾರಿನ ಎಂಜಿನ್ ಪರ್ಫಾಮೆನ್ಸ್ ಪರಿಣಾಮ ಬೀರುವುದಲ್ಲದೇ ಮೈಲೇಜ್ ಪ್ರಮಾಣ ಕೂಡಾ ಹೆಚ್ಚಳವಾಗಲಿದೆ.

ನೆಕ್ಸಾನ್ ನಂತರ ಸುರಕ್ಷತೆಯಲ್ಲಿ 5 ಅಂಕಗಳನ್ನು ಪಡೆಯಲಿದೆಯೆ ಟಾಟಾ ಆಲ್ಟ್ರೋಜ್ ಕಾರು..?

ಆದ್ರೆ ಕಾರಿನ ಒಳವಿನ್ಯಾಸಗಳ ಬಗ್ಗೆ ಯಾವುದೇ ತಾಂತ್ರಿಕ ಮಾಹಿತಿಗಳನ್ನು ಬಿಟ್ಟುಕೊಡದ ಟಾಟಾ ಮೋಟಾರ್ಸ್ ಸಂಸ್ಥೆಯು ಇದೇ ವರ್ಷ ಜೂನ್ ಅಥವಾ ಜುಲೈ ಅಂತ್ಯಕ್ಕೆ ಬಿಡುಗಡೆಗೊಳಿಸುವ ಸುಳಿವು ನೀಡಿದ್ದು, ಹೊಸ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 5 ಲಕ್ಷದಿಂದ ರೂ.7 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Source: rushlane

Most Read Articles

Kannada
English summary
Tata Altroz to arrive in showrooms by June 2019 – Colour options imagined. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X