ಸೆಪ್ಟೆಂಬರ್ ಅವಧಿಯ ಟಾಟಾ ಕಾರು ಮಾರಾಟದಲ್ಲಿ ಶೇ.50ರಷ್ಟು ಕುಸಿತ

ದೇಶಿಯ ಮಾರುಕಟ್ಟೆಯಲ್ಲಿ ಕೆಲವು ಹೊಸ ಕಾರುಗಳ ಮಾರಾಟದಲ್ಲಿ ದಾಖಲೆ ಪ್ರಮಾಣದ ಬೇಡಿಕೆ ಕಂಡುಬರುತ್ತಿದ್ದರೂ ಕೂಡಾ ಟಾಟಾ ಕಾರುಗಳ ಬೇಡಿಕೆಯಲ್ಲಿ ಭಾರೀ ಪ್ರಮಾಣದ ಕುಸಿತ ಕಂಡುಬಂದಿದ್ದು, 2018ರ ಸೆಪ್ಟೆಂಬರ್ ಅವಧಿಯಲ್ಲಿನ ಕಾರು ಮಾರಾಟಕ್ಕೂ ಮತ್ತು 2019ರ ಸೆಪ್ಟೆಂಬರ್ ಅವಧಿಯಲ್ಲಿ ಕಾರು ಮಾರಾಟಕ್ಕೂ ಶೇ.50ರಷ್ಟು ಹಿನ್ನಡೆ ಅನುಭವಿಸಿದೆ.

ಸೆಪ್ಟೆಂಬರ್ ಅವಧಿಯ ಟಾಟಾ ಕಾರು ಮಾರಾಟದಲ್ಲಿ ಶೇ.50ರಷ್ಟು ಕುಸಿತ

2018ರ ಸೆಪ್ಟೆಂಬರ್ ಅವಧಿಯಲ್ಲಿ ಒಟ್ಟು 64,598 ಕಾರುಗಳನ್ನು ಮಾರಾಟ ಮಾಡಿದ್ದ ಸಂಸ್ಥೆಯು ಪ್ರಸಕ್ತ ವರ್ಷದ ಸೆಪ್ಟೆಂಬರ್ ಅವಧಿಯಲ್ಲಿ ಕೇವಲ 32,376 ಕಾರುಗಳನ್ನು ಮಾರಾಟ ಮಾಡಿದ್ದು, ಪ್ರಯಾಣಿಕರ ಕಾರು ಮಾರಾಟದಲ್ಲಿ ದಾಖಲೆ ಪ್ರಮಾಣದ ಹಿನ್ನಡೆ ಕಂಡಿದೆ. ಗ್ರಾಹಕರ ಬೇಡಿಕೆಯಲ್ಲಿ ಮುಂಚೂಣಿಯಲ್ಲಿದ್ದ ಕಾರುಗಳೇ ಕನಿಷ್ಠ ಪ್ರಮಾಣದಲ್ಲಿ ಮಾರಾಟಗೊಂಡಿದ್ದು, ಹೊಸ ಕಾರ್ ಬ್ರಾಂಡ್ ಅಬ್ಬರದ ಮುಂದೆ ಟಾಟಾ ಕಾರುಗಳ ಮಾರಾಟವು ನೆಲಕಚ್ಚಿದೆ.

ಸೆಪ್ಟೆಂಬರ್ ಅವಧಿಯ ಟಾಟಾ ಕಾರು ಮಾರಾಟದಲ್ಲಿ ಶೇ.50ರಷ್ಟು ಕುಸಿತ

ಟಾಟಾ ಸಂಸ್ಥೆಯು ಪ್ರಸಕ್ತ ವರ್ಷದ ಸೆಪ್ಟೆಂಬರ್ ಅವಧಿಯಲ್ಲಿ 8,097 ಕಾರುಗಳನ್ನು ಮಾತ್ರವೇ ಮಾರಾಟ ಮಾಡಲು ಶಕ್ತವಾಗಿದ್ದು, ಇದು ಕಳೆದ ವರ್ಷದ ಸೆಪ್ಟೆಂಬರ್ ಅವಧಿಯಲ್ಲಿ 18,429 ಕಾರುಗಳು ಮಾರಾಟಗೊಂಡಿದ್ದವು.

ಸೆಪ್ಟೆಂಬರ್ ಅವಧಿಯ ಟಾಟಾ ಕಾರು ಮಾರಾಟದಲ್ಲಿ ಶೇ.50ರಷ್ಟು ಕುಸಿತ

ಹೊಸ ಕಾರ್ ಬ್ರಾಂಡ್‌ಗಳ ಅಬ್ಬರದಿಂದಾಗಿ ಸೆಪ್ಟೆಂಬರ್ ಅವಧಿಯಲ್ಲಿ ಶೇ.56ರಷ್ಟು ಬೇಡಿಕೆ ಕಳೆದುಕೊಂಡಿರುವ ಟಾಟಾ ಸಂಸ್ಥೆಯು ದೀಪಾವಳಿಗೂ ಮುನ್ನ ವಿವಿಧ ಆಫರ್‌ಗಳ ಮೂಲಕ ಬೇಡಿಕೆಯಲ್ಲಿ ಚೇತರಿಕೆ ಕಾಣುವ ನೀರಿಕ್ಷೆಯಲ್ಲಿದೆ.

ಸೆಪ್ಟೆಂಬರ್ ಅವಧಿಯ ಟಾಟಾ ಕಾರು ಮಾರಾಟದಲ್ಲಿ ಶೇ.50ರಷ್ಟು ಕುಸಿತ

ಇನ್ನು ಕಾರು ಮಾರಾಟವನ್ನು ಸುಧಾರಣೆ ತರಲು ಟಾಟಾ ಸಂಸ್ಥೆಯು ಹ್ಯಾರಿಯರ್ ಎಸ್‌ಯುವಿ, ಹೆಕ್ಸಾ ಎಸ್‌ಯುವಿ, ನೆಕ್ಸಾನ್ ಕಂಪ್ಯಾಕ್ಟ್ ಎಸ್‌ಯುವಿ, ಟಿಗೋರ್ ಕಂಪ್ಯಾಕ್ಟ್ ಸೆಡಾನ್, ಟಿಯಾಗೋ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಪ್ರೊ ಎಡಿಷನ್ ಪ್ಯಾಕೇಜ್ ಘೋಷಣೆ ಮಾಡಲಾಗಿದ್ದು, ಹೊಸ ಕಾರುಗಳಲ್ಲಿ ಮಾತ್ರವಲ್ಲದೇ ಈಗಾಗಲೇ ಖರೀದಿ ಮಾಡಲಾಗಿರುವ ಕಾರುಗಳಲ್ಲೂ ಸಹ ಹೊಸ ಪ್ರೊ ಎಡಿಷನ್ ಪ್ಯಾಕೇಜ್ ಮೂಲಕ ಹಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಅಪ್‌ಗ್ರೆಡ್ ಮಾಡಿಕೊಳ್ಳಬಹುದಾಗಿದೆ.

ಸೆಪ್ಟೆಂಬರ್ ಅವಧಿಯ ಟಾಟಾ ಕಾರು ಮಾರಾಟದಲ್ಲಿ ಶೇ.50ರಷ್ಟು ಕುಸಿತ

ಪ್ರೊ ಎಡಿಷನ್ ಪ್ಯಾಕೇಜ್ ರೂ.29,999 ರಿಂದ ಆರಂಭವಾಗಿ ಹೈ ಎಂಡ್ ಮಾದರಿಗೆ ರೂ. 1,09,999 ದರ ನಿಗದಿ ಮಾಡಲಾಗಿದ್ದು, ದರಗಳಿಗೆ ಅನುಗುಣವಾಗಿ ವಿವಿಧ ಮಾದರಿಯ ಪ್ರೀಮಿಯಂ ಫೀಚರ್ಸ್ ಪ್ಯಾಕೇಜ್ ನೀಡಲಾಗಿದೆ.

ಸೆಪ್ಟೆಂಬರ್ ಅವಧಿಯ ಟಾಟಾ ಕಾರು ಮಾರಾಟದಲ್ಲಿ ಶೇ.50ರಷ್ಟು ಕುಸಿತ

ಟಾಟಾ ಸಂಸ್ಥೆಯು ಹ್ಯಾರಿಯರ್ ಎಸ್‌ಯುವಿ ಕಾರಿಗೆ 1,09,999, ಹೆಕ್ಸಾ ಎಸ್‌ಯುವಿ ಕಾರಿಗೆ 99,999, ನೆಕ್ಸಾನ್ ಕಂಪ್ಯಾಕ್ಟ್ ಎಸ್‌ಯುವಿ ಕಾರಿಗೆ 37,999, ಟಿಗೋರ್ ಕಂಪ್ಯಾಕ್ಟ್ ಸೆಡಾನ್ ಕಾರಿಗೆ 29,999 ಮತ್ತು ಟಿಯಾಗೋ ಹ್ಯಾಚ್‌ಬ್ಯಾಕ್ ಕಾರಿಗೆ 29,999 ದರ ನಿಗದಿ ಮಾಡಲಿದೆ.

ಸೆಪ್ಟೆಂಬರ್ ಅವಧಿಯ ಟಾಟಾ ಕಾರು ಮಾರಾಟದಲ್ಲಿ ಶೇ.50ರಷ್ಟು ಕುಸಿತ

ಪ್ರೊ ಎಡಿಷನ್ ಪ್ಯಾಕೇಜ್‌ನಲ್ಲಿ ಘೋಷಣೆ ಮಾಡಿರುವಂತೆ ವಿವಿಧ ಮಾದರಿಗಳ ಮೇಲೆ ದರಗಳಿಗೆ ಅನುಗುಣವಾಗಿ ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಲಾಗಿದ್ದು, ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಆಸಕ್ತ ಗ್ರಾಹಕರಿಗಾಗಿ ಈ ಹೊಸ ಅಪ್‌ಗ್ರೆಡ್ ಆಯ್ಕೆಯನ್ನು ನೀಡುತ್ತಿದೆ. ಪ್ರೋ ಎಡಿಷನ್‌ನಲ್ಲಿ ಪ್ರತ್ಯೇಕವಾದ ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಲಾಗುತ್ತಿದ್ದು, ಪ್ಯಾಕೇಜ್‌ನಲ್ಲಿರುವ ಸೌಲಭ್ಯಗಳನ್ನು ಹೊರತುಪಡಿಸಿ ಹೆಚ್ಚುವರಿ ಸೌಲಭ್ಯಗಳು ಬೇಕಿದ್ದಲ್ಲಿ ಹೆಚ್ಚುವರಿ ದರ ಪಾವತಿ ಮಾಡಬೇಕಾಗುತ್ತೆ.

ಸೆಪ್ಟೆಂಬರ್ ಅವಧಿಯ ಟಾಟಾ ಕಾರು ಮಾರಾಟದಲ್ಲಿ ಶೇ.50ರಷ್ಟು ಕುಸಿತ

ಗ್ರಾಹಕರ ಬೇಡಿಕೆಯೆಂತೆ ಟಾಟಾ ಸಂಸ್ಥೆಯು ಹ್ಯಾರಿಯರ್ ಎಸ್‌ಯುವಿ ಮಾದರಿಯಲ್ಲಿ ಈಗಾಗಲೇ ಹಲವಾರು ಬದಲಾವಣೆಗಳನ್ನು ಪರಿಚಯಿಸಿದ್ದು, ಇದೀಗ ಪ್ರೊ ಎಡಿಷನ್ ಪ್ಯಾಕೇಜ್ ಮೂಲಕ ಆಟೋಮ್ಯಾಟಿಕ್ ಸನ್‌ರೂಫ್, ಸನ್‌ಶೈಡ್ಸ್, ಫ್ರಂಟ್ ಪಾರ್ಕಿಂಗ್ ಕ್ಯಾಮೆರಾ, ವೈರ್‌ಲೆಸ್ ಮೊಬೈಲ್ ಹೋಲ್ಡರ್, ಆ್ಯಪ್ ಬೇಸ್ಡ್ ಟಿಪಿಎಂಎಸ್, ಆ್ಯಂಬಿಯೆಂಟ್ ಮೂಡ್ ಲೈಟಿಂಗ್, ಬ್ಯಾನೆಟ್ ಮಸ್ಕಾಟ್, ಹ್ಯುಮಾನಿಟಿ ಲೈನ್ ಕ್ರೋಮ್ ಮತ್ತು ಎಕ್ಸಾಸ್ಟ್ ಕ್ರೋಮ್ ಪಡೆದುಕೊಂಡಿದೆ.

ಸೆಪ್ಟೆಂಬರ್ ಅವಧಿಯ ಟಾಟಾ ಕಾರು ಮಾರಾಟದಲ್ಲಿ ಶೇ.50ರಷ್ಟು ಕುಸಿತ

ಇನ್ನುಳಿದಂತೆ ಸ್ಟ್ಯಾಂಡರ್ಡ್ ಆಗಿ ನೀಡಲಾಗುವ ಫೀಚರ್ಸ್‌ಗಳು ಸಹ ಹ್ಯಾರಿಯರ್ ಖರೀದಿಯಲ್ಲಿ ಸಾಮಾನ್ಯವಾಗಿದ್ದು, ವೆರಿಯೆಂಟ್‍ಗಳಿಗೆ ಅನುಗುಣವಾಗಿ ಹ್ಯಾರಿಯರ್ ಕಾರು ರೂ.13 ಲಕ್ಷದಿಂದ ಹೈ ಎಂಡ್ ಮಾದರಿಯು 16.75 ಲಕ್ಷ ಬೆಲೆ ಹೊಂದಿದೆ. ಪ್ರೊ ಎಡಿಷನ್‌ ಪ್ಯಾಕೇಜ್‌ಗೆ ಹೆಚ್ಚುವರಿಯಾಗಿ ರೂ. 1,09,999 ಪಾವತಿಸಬೇಕು.

Most Read Articles

Kannada
English summary
Tata Motors September 2019 Sales Analysis. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X