ಜನವರಿ 1ರಿಂದ ಟಾಟಾ ಕಾರುಗಳ ಖರೀದಿ ಮತ್ತಷ್ಟು ದುಬಾರಿ

ಉತ್ಪಾದನಾ ವೆಚ್ಚಗಳನ್ನು ಸರಿದೂಗಿಸುವ ಸಂಬಂಧ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಬೆಲೆ ಹೆಚ್ಚಳಕ್ಕೆ ಮುಂದಾಗಿದ್ದು, ಮಾರುತಿ ಸುಜುಕಿಯು ಕಾರು ಬೆಲೆ ಏರಿಕೆ ಮಾಡಿದ ಬೆನ್ನಲ್ಲೇ ಟಾಟಾ ಮೋಟಾರ್ಸ್ ಕೂಡಾ ಕಾರುಗಳ ಬೆಲೆ ಏರಿಕೆ ಮಾಡುವುದಾಗಿ ಹೇಳಿಕೊಂಡಿದೆ.

ಜನವರಿ 1ರಿಂದ ಟಾಟಾ ಕಾರುಗಳ ಖರೀದಿ ಮತ್ತಷ್ಟು ದುಬಾರಿ

ಪಿಟಿಐ ಸುದ್ದಿಸಂಸ್ಥೆಯ ಸಂದರ್ಶನವೊಂದರಲ್ಲಿ ಮಾತನಾಡಿರುವ ಟಾಟಾ ಮೋಟಾರ್ಸ್ ಅಧ್ಯಕ್ಷ ಮಯಾಂಕ್ ಪರೀಕ್ ಜನವರಿ 1ರಿಂದ ಕಾರುಗಳ ಬೆಲೆ ಏರಿಕೆಗೆ ನಿರ್ಧರಿಸಲಾಗಿದ್ದು, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಉತ್ಪಾದನಾ ವೆಚ್ಚಗಳನ್ನು ಸರಿದೂಗಿಸಲು ಬೆಲೆ ಏರಿಕೆ ಅನಿವಾರ್ಯ ಎಂದಿದ್ದಾರೆ. ಹೊಸ ದರಗಳು ಜನವರಿ 1ರಿಂದ ಅನ್ವಯವಾಗಲಿದ್ದು, ಯಾವ ಕಾರಿನ ಬೆಲೆಯಲ್ಲಿ ಎಷ್ಟು ಹೆಚ್ಚಳವಾಗಲಿದೆ ಎನ್ನುವ ಮಾಹಿತಿ ಜನವರಿ 1ರಂದೇ ಲಭ್ಯವಾಗಲಿದೆ.

ಜನವರಿ 1ರಿಂದ ಟಾಟಾ ಕಾರುಗಳ ಖರೀದಿ ಮತ್ತಷ್ಟು ದುಬಾರಿ

ಮಾಹಿತಿಗಳ ಪ್ರಕಾರ, ಟಾಟಾ ಸಂಸ್ಥೆಯು ಪ್ರತಿ ಕಾರಿನ ಬೆಲೆಯಲ್ಲೂ ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ.10 ಸಾವಿರದಿಂದ ರೂ.15 ಸಾವಿರ ತನಕ ಹೆಚ್ಚಳ ಮಾಡುವ ಸಾಧ್ಯತೆಗಳಿದ್ದು, ಬಿಎಸ್-6 ನಂತರ ಮತ್ತಷ್ಟು ದುಬಾರಿ ಬೆಲೆ ಪಡೆದುಕೊಳ್ಳಲಿವೆ.

ಜನವರಿ 1ರಿಂದ ಟಾಟಾ ಕಾರುಗಳ ಖರೀದಿ ಮತ್ತಷ್ಟು ದುಬಾರಿ

ಇನ್ನು 2020ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಯಾಗಲಿರುವ ಬಿಎಸ್-6 ನಿಯಮ ಅನುಸಾರ ಹೊಸ ಕಾರುಗಳ ಉನ್ನತೀಕರಣದ ಬಗ್ಗೆಯೂ ಮಾತನಾಡಿರುವ ಮಯಾಂಕ್ ಪರೀಕ್ ಅವರು, ಹೊಸ ನಿಯಮ ಅನುಸಾರ ಪ್ರಸ್ತುತ ಮಾರುಕಟ್ಟೆಯಲ್ಲಿ ಎಂಜಿನ್ ಅನ್ನು ಉನ್ನತೀಕರಿಸುವುದು ಒಂದು ಬಹು ದೊಡ್ಡ ಸವಾಲು ಎಂದಿದ್ದಾರೆ.

ಜನವರಿ 1ರಿಂದ ಟಾಟಾ ಕಾರುಗಳ ಖರೀದಿ ಮತ್ತಷ್ಟು ದುಬಾರಿ

ಪ್ರಸ್ತುತ ಆಟೋ ಮಾರುಕಟ್ಟೆಯಲ್ಲಿ ಈಗಾಗಲೇ ಬಿಎಸ್-6 ಕಾರುಗಳ ಮಾರಾಟಕ್ಕೆ ಚಾಲನೆ ದೊರೆತಿದ್ದು, ಸದ್ಯ ಟಾಟಾ ಮೋಟಾರ್ಸ್ ಕೂಡಾ ಆಲ್‌ಟ್ರೊಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮೂಲಕ ಬಿಎಸ್-6 ಕಾರುಗಳ ಅಧಿಕೃತ ಮಾರಾಟಕ್ಕೆ ಚಾಲನೆ ನೀಡಲಿದೆ. ಅದಕ್ಕೂ ಮುನ್ನ ಹೊಸ ಕಾರುಗಳ ಎಂಜಿನ್ ಉನ್ನತೀಕರಣಕ್ಕಾಗಿ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿರುವ ಟಾಟಾ ಸಂಸ್ಥೆಯು ಇಂಧನ ಆಧಾರಿತ ವಾಹನಗಳ ಜೊತೆ ಜೊತೆಯಲ್ಲಿ ಎಲೆಕ್ಟ್ರಿಕ್ ಕಾರುಗಳ ಅಭಿವೃದ್ದಿ ಮೇಲೂ ಹೆಚ್ಚಿನ ಗಮನಹರಿಸಿದೆ.

ಜನವರಿ 1ರಿಂದ ಟಾಟಾ ಕಾರುಗಳ ಖರೀದಿ ಮತ್ತಷ್ಟು ದುಬಾರಿ

ಬಿಎಸ್-6 ನಿಯಮ ಜಾರಿಯಾಗುತ್ತಿರುವುದರಿಂದ ಟಾಟಾ ನಿರ್ಮಾಣದ ಹಲವು ಜನಪ್ರಿಯ ಕಾರುಗಳು ಮಾರಾಟದಿಂದ ಸ್ಥಗಿತಗೊಳ್ಳಲಿದ್ದು, ಸುಮೊ ಮತ್ತು ಇಂಡಿಕಾ ನಂತರ ಇದೀಗ ಸಫಾರಿ ಕಾರಿಗೂ ಗುಡ್ ಬೈ ಹೇಳಿದೆ.

ಜನವರಿ 1ರಿಂದ ಟಾಟಾ ಕಾರುಗಳ ಖರೀದಿ ಮತ್ತಷ್ಟು ದುಬಾರಿ

ಮುಂಬರುವ ದಿನಗಳಲ್ಲಿ ಜೆಸ್ಟ್, ಬೊಲ್ಟ್ ಮತ್ತು ನ್ಯಾನೋ ಕಾರುಗಳನ್ನು ಅಧಿಕೃತವಾಗಿ ಮಾರಾಟವನ್ನು ಬಂದ್ ಮಾಡಲು ನಿರ್ಧರಿಸಿದ್ದು, ಪ್ರಯಾಣಿಕ ಸುರಕ್ಷತೆಗಾಗಿ ಗುಣಮಟ್ಟದ ಕಾರುಗಳ ಉತ್ಪಾದನೆ ಮತ್ತು ಮಾರಾಟದ ಹೆಚ್ಚಿನ ಗಮನಹರಿಸಲಿದೆ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಜನವರಿ 1ರಿಂದ ಟಾಟಾ ಕಾರುಗಳ ಖರೀದಿ ಮತ್ತಷ್ಟು ದುಬಾರಿ

ಸದ್ಯ ಮಾರುಕಟ್ಟೆಯಲ್ಲಿ ಟಿಗೋರ್, ಟಿಯಾಗೋ, ನೆಕ್ಸಾನ್, ಹ್ಯಾರಿಯರ್, ಹೆಕ್ಸಾ ಕಾರುಗಳು ಉತ್ತಮ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದ್ದು, ಬಿಡುಗಡೆಗೆ ಸಿದ್ದವಾಗಿರುವ ಆಲ್‌ಟ್ರೊಜ್, ಗ್ರಾವಿಟಾಸ್, ಆಲ್‌ಟ್ರೊಜ್ ಎಲೆಕ್ಟ್ರಿಕ್ ಮತ್ತು ನೆಕ್ಸಾನ್ ಎಲೆಕ್ಟ್ರಿಕ್ ಕಾರುಗಳು ಟಾಟಾ ಸಂಸ್ಥೆಗೆ ಮತ್ತಷ್ಟು ಜನಪ್ರಿಯತೆ ತಂದುಕೊಡಲಿವೆ.

MOST READ: ಟಾಟಾ ಸಂಸ್ಥೆಯ ಈ 10 ಕಾರುಗಳನ್ನು ನಾವೆಲ್ಲರೂ ಮರೆತು ಬಿಟ್ಟಿದ್ದೇವೆ..!

ಜನವರಿ 1ರಿಂದ ಟಾಟಾ ಕಾರುಗಳ ಖರೀದಿ ಮತ್ತಷ್ಟು ದುಬಾರಿ

ಬಿಡುಗಡೆಯಾಗಲಿರುವ ಕಾರುಗಳಲ್ಲಿ ಬಿಎಸ್-6 ಮಾದರಿಗಳು ಸಹ ಸೇರಿದ್ದು, ಹೊಸ ನಿಯಮದಿಂದಾಗಿ ಕಾರುಗಳ ಎಂಜಿನ್ ಪರ್ಫಾಮೆನ್ಸ್ ಮತ್ತು ಮಾಲಿನ್ಯ ಹೊರಸೂಸುವಿಕೆಯ ಪ್ರಮಾಣದಲ್ಲಿ ಮಹತ್ವದ ಬದಲಾವಣೆಗಳಾಗಲಿವೆ.

MOST READ: ನ್ಯಾನೋ ಬರುವುದಕ್ಕೂ ಮುನ್ನವೇ ಬಂದು ಹೋದ ಅಗ್ಗದ ಬೆಲೆಯ 'ಮೀರಾ' ಕಾರಿನ ಕಥೆ ಗೊತ್ತಾ?

ಜನವರಿ 1ರಿಂದ ಟಾಟಾ ಕಾರುಗಳ ಖರೀದಿ ಮತ್ತಷ್ಟು ದುಬಾರಿ

ಜೊತೆಗೆ ಬಿಎಸ್-6 ನಿಯಮದಿಂದಾಗಿ ಹೊಸ ಕಾರುಗಳ ಬೆಲೆಯಲ್ಲೂ ತುಸು ದುಬಾರಿಯಾಗಲಿದ್ದು, ಪೆಟ್ರೋಲ್ ಕಾರುಗಳ ಬೆಲೆಯಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿ ಬೆಲೆಗಿಂತ ರೂ.15 ಸಾವಿರದಿಂದ ರೂ.30 ಸಾವಿರ ತನಕ ಏರಿಕೆಯಾದಲ್ಲಿ ಡೀಸೆಲ್ ಕಾರುಗಳ ಬೆಲೆಯು ರೂ.90 ಸಾವಿರದಿಂದ ರೂ.2 ಲಕ್ಷದ ತನಕ ಹೆಚ್ಚುವರಿ ಬೆಲೆ ಪಡೆದುಕೊಳ್ಳಲಿವೆ.

Most Read Articles

Kannada
English summary
Tata Motors to hike car prices from January. Read in Kannada.
Story first published: Thursday, December 5, 2019, 19:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X