ಮತ್ತಷ್ಟು ಸ್ಪೋರ್ಟಿ ಲುಕ್ ಪಡೆದುಕೊಂಡ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ವರ್ಷನ್

ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸಿರುವ ಟಾಟಾ ಮೋಟಾರ್ಸ್ ನಿರ್ಮಾಣದ ನೆಕ್ಸಾನ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮುಂಬರುವ ಕೆಲವೇ ದಿನಗಳಲ್ಲಿ ಫೇಸ್‌ಲಿಫ್ಟ್ ಆವೃತ್ತಿಯಲ್ಲಿ ಬಿಡುಗಡೆಗಾಗಿ ಸಿದ್ದವಾಗುತ್ತಿದ್ದು, ಫೇಸ್‌ಲಿಫ್ಟ್ ಕಾರು ಹಲವಾರು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.

ಮತ್ತಷ್ಟು ಸ್ಪೋರ್ಟಿ ಲುಕ್ ಪಡೆದುಕೊಂಡ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ವರ್ಷನ್

ಟಾಟಾ ಮೋಟಾರ್ಸ್ ಸಂಸ್ಥೆಯು ಈಗಾಗಲೇ ಹೊಸ ಕಾರುಗಳ ಅಭಿವೃದ್ದಿಯಲ್ಲಿ ಭಾರೀ ಬದಲಾವಣೆ ತರುವ ಮೂಲಕ ಗ್ರಾಹಕರ ಆಕರ್ಷಣೆಗೆ ಕಾರಣವಾಗಿದ್ದು, ಮುಂಬರುವ ದಿನಗಳಲ್ಲಿ ಸದ್ಯ ಮಾರಾಟಕ್ಕಿರುವ ಟಿಗೋರ್, ಟಿಯಾಗೋ ಮತ್ತು ನೆಕ್ಸಾನ್ ಕಾರುಗಳ ಫೇಸ್‌ಲಿಫ್ಟ್ ಆವೃತ್ತಿಗಳನ್ನು ಸಹ ಹೊಸ ತಂತ್ರಜ್ಞಾನ ಪ್ರೇರಿತ ಅಲ್ಫಾ ಪ್ಲ್ಯಾಟ್‌ಫಾರ್ಮ್ ಡಿಸೈನ್‌ನಡಿಯಲ್ಲಿ ಅಭಿವೃದ್ಧಿಗೊಳಿಸುತ್ತಿರುವುದು ರೋಡ್ ಟೆಸ್ಟಿಂಗ್‌ನಲ್ಲಿ ಬಹಿರಂಗವಾಗಿದೆ.

ಮತ್ತಷ್ಟು ಸ್ಪೋರ್ಟಿ ಲುಕ್ ಪಡೆದುಕೊಂಡ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ವರ್ಷನ್

ಸದ್ಯ ಹೊಸ ಕಾರುಗಳ ಅಭಿವೃದ್ಧಿಗಾಗಿ ಟಾಟಾ ಸಂಸ್ಥೆಯು ಸುಧಾರಿತ ತಂತ್ರಜ್ಞಾನ ಪ್ರೇರಿತ ಅಲ್ಫಾ(ALFA) ಮತ್ತು ಒಮೇಗಾ(OMEGA) ಕಾರು ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಬಳಕೆ ಮಾಡುತ್ತಿದ್ದು, ಫೇಸ್‌ಲಿಫ್ಟ್ ಕಾರುಗಳ ವಿನ್ಯಾಸದಲ್ಲಿ ಮತ್ತಷ್ಟು ಹೊಸ ಮೆರಗು ತಂದಿದೆ.

ಮತ್ತಷ್ಟು ಸ್ಪೋರ್ಟಿ ಲುಕ್ ಪಡೆದುಕೊಂಡ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ವರ್ಷನ್

ಕಳೆದ ಜನವರಿಯಲ್ಲಿ ಬಿಡುಗಡೆಯಾದ ಹ್ಯಾರಿಯರ್ ಕೂಡಾ ಒಮೇಗಾ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಸಿದ್ದಗೊಂಡಿರುವುದು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಆಲ್‌ಟ್ರೊಜ್, ಬಝರ್ಡ್ ಮತ್ತು ಹಾರ್ನ್‌ಬಿಲ್ ಕಾರುಗಳು ಸಹ ಅಲ್ಫಾ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲೇ ಅಭಿವೃದ್ಧಿಗೊಳಿಸಲಾಗುತ್ತಿದೆ.

ಮತ್ತಷ್ಟು ಸ್ಪೋರ್ಟಿ ಲುಕ್ ಪಡೆದುಕೊಂಡ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ವರ್ಷನ್

ಹೀಗಾಗಿಯೇ ಟಾಟಾ ಸಂಸ್ಥೆಯು ಸದ್ಯ ಮಾರುಕಟ್ಟೆಯಲ್ಲಿರುವ ಟಿಗೋರ್, ಟಿಯಾಗೋ ಮತ್ತು ನೆಕ್ಸಾನ್ ಫೇಸ್‌ಲಿಫ್ಟ್ ಕಾರುಗಳನ್ನು ಕೂಡಾ ಹೊಸ ತಂತ್ರಜ್ಞಾನ ಪ್ರೇರಿತ ಅಲ್ಫಾ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಮರುಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಸ್ಪಾಟ್ ಟೆಸ್ಟಿಂಗ್ ವೇಳೆ ಹೊಸ ನೆಕ್ಸಾನ್ ಕಾರು ಮತ್ತಷ್ಟು ಸ್ಪೋರ್ಟಿ ಲುಕ್ ಮೂಲಕ ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಭಾರೀ ಬೇಡಿಕೆ ಗಿಟ್ಟಿಸಿಕೊಳ್ಳುವ ಸುಳಿವು ನೀಡಿದೆ.

ಮತ್ತಷ್ಟು ಸ್ಪೋರ್ಟಿ ಲುಕ್ ಪಡೆದುಕೊಂಡ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ವರ್ಷನ್

ಇನ್ನು ವಿಶ್ವಾದ್ಯಂತ ಈಗಾಗಲೇ ಮಾಲಿನ್ಯ ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದ ಹೆಚ್ಚು ಹೊಗೆ ಉಗುಳುವ ವಾಹನಗಳಿಗೆ ಬ್ರೇಕ್ ಹಾಕಲು ಯುರೋಪ್‌ನಲ್ಲಿ ಯುರೋ-6 ಮಾದರಿಯಲ್ಲಿ ಇತರೆ ಖಂಡಗಳಲ್ಲೂ ವಿವಿಧ ಮಾದರಿಯ ಗುಣಮಟ್ಟದ ವಾಹನಗಳ ಮಾರಾಟಕ್ಕೆ ಮಾತ್ರವೇ ಅವಕಾಶವಿದ್ದು, ಇದರ ಭಾಗವಾಗಿ ಭಾರತದಲ್ಲೂ 2020ರ ಏಪ್ರಿಲ್ 1ರಿಂದ ಬಿಎಸ್-6 ವಾಹನಗಳು ರಸ್ತೆಗಿಳಿಯುತ್ತಿವೆ.

ಮತ್ತಷ್ಟು ಸ್ಪೋರ್ಟಿ ಲುಕ್ ಪಡೆದುಕೊಂಡ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ವರ್ಷನ್

ಈ ಹಿನ್ನಲೆಯಲ್ಲಿ ಟಾಟಾ ಸಂಸ್ಥೆಯು ಕೂಡಾ ಫೇಸ್‌ಲಿಫ್ಟ್ ನೆಕ್ಸಾನ್ ಸೇರಿದಂತೆ ಹೊಸ ಕಾರುಗಳನ್ನು ಬಿಎಸ್-6 ನಿಯಮಕ್ಕೆ ಅನುಗುಣವಾಗಿ ಎಂಜಿನ್ ಉನ್ನತೀಕರಿಸಿದ್ದು, 2020ರ ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಎಕ್ಸ್‌ಪೋ ನಂತರ ಬಿಎಸ್-6 ಹೊಸ ಕಾರುಗಳ ಮಾರಾಟವು ಜೋರಾಗಲಿದೆ.

MOST READ: ಟೊಯೊಟಾ ವೆಲ್‌ಫೈರ್ ಖರೀದಿಗೆ ಬುಕ್ಕಿಂಗ್ ಶುರು- ಬೆಲೆ ರೂ. 80 ಲಕ್ಷ ಅಷ್ಟೆ ಅಂತೆ..!

ಮತ್ತಷ್ಟು ಸ್ಪೋರ್ಟಿ ಲುಕ್ ಪಡೆದುಕೊಂಡ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ವರ್ಷನ್

ಸದ್ಯ ಮಾರುಕಟ್ಟೆಯಲ್ಲಿ 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿರುವ ನೆಕ್ಸಾನ್ ಕಾರು ಫೇಸ್‌ಲಿಫ್ಟ್ ಆವೃತ್ತಿಯಲ್ಲೂ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಂಜಿನ್ ಆಯ್ಕೆಗಳನ್ನೇ ಉನ್ನತೀಕರಿಸಲಾಗಿದೆ.

MOST READ: ದುಬಾರಿ ಬೆಲೆಯ ಹಾರ್ಲೆ ಡೇವಿಡ್‍‍ಸನ್ ಬೈಕ್ ಖರೀದಿಸಿದ ರಾಜ್‍‍ಕುಮಾರ್ ರಾವ್

ಮತ್ತಷ್ಟು ಸ್ಪೋರ್ಟಿ ಲುಕ್ ಪಡೆದುಕೊಂಡ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ವರ್ಷನ್

ಅದರ ಹೊರತಾಗಿ ಹೊಸ ನೆಕ್ಸಾನ್ ಕಾರಿನಲ್ಲಿ ಈ ಬಾರಿ ಮರುವಿನ್ಯಾಸಗೊಳಿಸಲಾದ ಫ್ರಂಟ್ ಬ್ಯಾನೆಟ್, ಬಂಪರ್ ಡಿಸೈನ್, ಫುಲ್ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಹೊಸ ತಂತ್ರಜ್ಞಾನ ಪ್ರೇರಿತ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸೇರಿದಂತೆ ಕ್ಯಾಬಿನ್ ವಿನ್ಯಾಸದಲ್ಲಿ ಮಹತ್ವದ ಬದಲಾವಣೆ ಪಡೆದುಕೊಂಡಿದ್ದು, ಬಿಎಸ್-6 ವೈಶಿಷ್ಟ್ಯತೆಯಿಂದಾಗಿ ಹೊಸ ಕಾರಿನ ಬೆಲೆಯಲ್ಲಿ ಪ್ರಸ್ತುತ ಮಾರುಕಟ್ಟೆಗಿಂತ ರೂ.30 ಸಾವಿರದಿಂದ ರೂ.1.20 ಲಕ್ಷದ ತನಕ ದುಬಾರಿ ಬೆಲೆ ಪಡೆಯಲಿದೆ.

MOST READ: ಜಿಎಸ್‌ಟಿ ಇಳಿಕೆ ಹಿನ್ನಲೆಯಲ್ಲಿ ಟೆಕ್ನೊ ಎಲೆಕ್ಟ್ರಾ ಸ್ಕೂಟರ್‌ಗಳ ಬೆಲೆ ಕಡಿತ

ಮತ್ತಷ್ಟು ಸ್ಪೋರ್ಟಿ ಲುಕ್ ಪಡೆದುಕೊಂಡ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ವರ್ಷನ್

ಇನ್ನು ಟಾಟಾ ಸಂಸ್ಥೆಯು ನೆಕ್ಸಾನ್ ಫೇಸ್‌ಲಿಫ್ಟ್ ಜೊತೆಗೆ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಸಹ ಅಭಿವೃದ್ದಿಗೊಳಿಸಿ ಬಿಡುಗಡೆಗಾಗಿ ಸಿದ್ದಪಡಿಸಿದ್ದು, ಹೊಸ ಕಾರು ಅತ್ಯುತ್ತಮ ಬ್ಯಾಟರಿ ಸೌಲಭ್ಯದೊಂದಿಗೆ 300ಕಿ.ಮೀ ಮೈಲೇಜ್ ರೇಂಜ್ ಪಡೆದುಕೊಂಡಿದೆ. ಮಾಹಿತಿ ಪ್ರಕಾರ ನೆಕ್ಸಾನ್ ಎಲೆಕ್ಟ್ರಿಕ್ ಕೂಡಾ 2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡ ಕೆಲವು ತಿಂಗಳ ಬಳಿಕ ಬಿಡುಗಡೆಯಾಗಲಿದ್ದು, ಕಾರಿನ ಬೆಲೆಯು ರೂ.15 ಲಕ್ಷದಿಂದ ರೂ.17 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Source: Rushlane

Most Read Articles

Kannada
English summary
2020 Tata Nexon Spied Testing Ahead Of Launch. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X