ಈ ನೆಕ್ಸಾನ್ ಕಾರ್ ಮಾಡಿಫೈಗೆ ಖರ್ಚಾಗಿದ್ದು ಎಷ್ಟು ಗೊತ್ತಾ?

ಭಾರತದ ಕಾರು ತಯಾರಕ ಕಂಪನಿಯಿಂದ ಮೊದಲ ಬಾರಿಗೆ ತಯಾರಿಸಲಾದ ಸಬ್ 4 ಮೀಟರಿನ ಕಾಂಪ್ಯಾಕ್ಟ್ ಎಸ್‍‍ಯು‍‍ವಿ ಟಾಟಾ ನೆಕ್ಸಾನ್, ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯತೆಯನ್ನು ಪಡೆದಿದೆ. ಸಬ್ 4 ಮೀಟರಿನ ಕಾಂಪ್ಯಾಕ್ಟ್ ಎಸ್‍‍ಯು‍‍ವಿ, ಟಾಪ್ ಮಾದರಿಯ ವಾಹನಗಳಲ್ಲಿ, ಹರ್ಮಾನ್ ಕಂಪನಿಯ 8 ಸ್ಪೀಕರ್ ಆಡಿಯೋ ಸೆಟ್ ಅಪ್ ಅಳವಡಿಸಲಾಗಿದೆ.

ಈ ನೆಕ್ಸಾನ್ ಕಾರ್ ಮಾಡಿಫೈಗೆ ಖರ್ಚಾಗಿದ್ದು ಎಷ್ಟು ಗೊತ್ತಾ?

ಆದರೆ ಕೆಲವರಿಗೆ ಈಗಿರುವ ಆಡಿಯೋ ಸಿಸ್ಟಂ ಇಷ್ಟವಾಗಿಲ್ಲ. ಕಾರು ಆಡಿಯೋ ಸೆಟ್ ಅಪ್ ಮತ್ತು ಕ್ಯಾಬಿನ್ ಬದಲಾವಣೆಗಳಲ್ಲಿ ಸಾಕಷ್ಟು ಅನುಭವ ಹೊಂದಿರುವ ಆರ್‍ಎಂ ಕಾರ್ ಡೆಕೊರ್ ಇತ್ತೀಚಿಗೆ ವೀಡಿಯೋವೊಂದನ್ನು ಬಿಡುಗಡೆಗೊಳಿಸಿದೆ. ಈ ವೀಡಿಯೋದರಲ್ಲಿರುವ ವಾಹನವು ನಿಸ್ಸಂದೇಹವಾಗಿ ಭಾರತದ ದುಬಾರಿ ನೆಕ್ಸಾನ್ ವಾಹನವಾಗಿದೆ. ಈ ವಾಹನದ ಮಾಡಿಫಿಕೇಷನ್‍‍ಗಾಗಿ, ಆಡಿಯೋ ಸೆಟ್ ಅಪ್‍ ಸೇರಿದಂತೆ ರೂ.5 ಲಕ್ಷಗಳನ್ನು ಖರ್ಚು ಮಾಡಲಾಗಿದೆ. ಹೊಸ ಬದಲಾವಣೆಗಳಿಂದ ಮ್ಯೂಸಿಕ್ ಸಿಸ್ಟಂ ಅನ್ನು ಅದ್ಭುತವೆನಿಸುವಂತೆ ಮಾಡಿದೆ.

ಈ ಹೊಸ ಆಡಿಯೋ ಸಿಸ್ಟಂನ ಬೆಲೆಯು ರೂ.3 ಲಕ್ಷವಾಗಿದ್ದು, ಉಳಿದ ಬದಲಾವಣೆಗಳಿಗಾಗಿ ರೂ.2 ಲಕ್ಷ ಖರ್ಚು ಮಾಡಲಾಗಿದೆ. ಈ ಕಾರಿನಲ್ಲಿ ಮಾಡಲಾದ ಮಾಡಿಫಿಕೇಷನ್‍‍ಗಳ ವಿವರ ಇಲ್ಲಿದೆ.

ಆರ್‍ಎಂ ಕಾರ್ ಡೆಕೋರ್‍‍ನ ಹೇಳಿಕೆಗಳ ಪ್ರಕಾರ, ಮಾಡಿಫೈ ಆದ ನೆಕ್ಸಾನ್‍‍ನಲ್ಲಿ ವಿಶಿಷ್ಟವಾದ ಹೈ ಎಂಡಿನ ಸೆಟ್ ಅಪ್ ಇದ್ದು, ಇದರಲ್ಲಿ ಲೈವ್ ಕನ್ಸರ್ಟ್ ನ ಅನುಭವವನ್ನು ಪಡೆಯಬಹುದು.

ಈ ನೆಕ್ಸಾನ್ ಕಾರ್ ಮಾಡಿಫೈಗೆ ಖರ್ಚಾಗಿದ್ದು ಎಷ್ಟು ಗೊತ್ತಾ?

ಕಾರಿನಲ್ಲಿ ಥ್ರಿ-ವೇ ಆಕ್ಟಿವ್ ಸೆಟ್ ಅಪ್ ಸ್ಪೀಕರ್‍‍ಗಳನ್ನು ನೀಡಲಾಗಿದೆ. ಈ ಆಕ್ಟಿವ್ ಸೆಟ್ ಅಪ್‍‍ನಲ್ಲಿ ಪ್ರತ್ಯೇಕವಾದ ಔಟ್‍‍ಪುಟ್ ಡಿವೈಸ್‍‍ಗಳಾದ ಟ್ವೀಟರ್ಸ್, ಸ್ಪೀಕರ್ಸ್, ಮಿಡ್ ರೇಂಜ್ ಮತ್ತು ಮಿಡ್ ವೂಫರ್ ಗಳಿದ್ದು ಪ್ರತ್ಯೇಕವಾದ ಆಂಪ್ಲಿಫೈಯರ್‍‍ಗಳನ್ನು ಪವರ್ ಸಪ್ಲೈಗಾಗಿ ನೀಡಲಾಗಿದೆ. ಇದರಿಂದ ಕಾರಿನ ಶಬ್ದವು ಮತ್ತಷ್ಟು ಉತ್ತಮವಾಗಲಿದೆ.

ಈ ನೆಕ್ಸಾನ್ ಕಾರ್ ಮಾಡಿಫೈಗೆ ಖರ್ಚಾಗಿದ್ದು ಎಷ್ಟು ಗೊತ್ತಾ?

ಮಾರಾಟದ ನಂತರದಲ್ಲಿ ಮಾಡಲಾದ ಈ ಆಡಿಯೋ ಸೆಟ್‍ಅಪ್‍‍ನಲ್ಲಿ ಆಡಿಸನ್ ಥ್ರಿ-ವೇ ಕಾಂಪೊನೆಂಟ್, ಆಡಿಸನ್ ಟೂ- ವೇ ಕಾಂಪೊನೆಂಟ್, ಹರ್ಟ್ಸ್ ಆಂಪ್ಲಿಫೈಯರ್, ಜೆ‍ಎಲ್ ಮೊನೊಬ್ಲಾಕ್ ಆಂಪ್ಲಿಫೈಯರ್, ರಾಕ್‍‍ಫೊರ್ಡ್ ಫಾಸ್‍‍ಗೇಟ್ ಪಿ2 ಸಬ್ ವೂಫರ್, ಹೆಲಿಕ್ಸ್ ಡಿ‍ಎಸ್‍‍ಪಿ 2 ಪ್ರಾಸೆಸರ್ ಮತ್ತು ಪಯನಿರ್ ಹೆಡ್ ಯೂನಿಟ್‍‍ಗಳಿವೆ. ಮ್ಯೂಸಿಕ್‍‍ನ ಅನುಭವವನ್ನು ಹೆಚ್ಚು ಮಾಡಲೆಂದು, ಆರ್‍ಎಂ ಡೆಕೊರ್, ಇದರಲ್ಲಿ ಹೆಚ್ಚುವರಿಯಾಗಿ ಆರ್ಟೆಕ್ಸ‍ನ ಡ್ಯಾಂಪಿಂಗ್ ಮೆಟಿರಿಯಲ್‍‍ಗಳನ್ನು ಅಳವಡಿಸಿದೆ.

ಈ ನೆಕ್ಸಾನ್ ಕಾರ್ ಮಾಡಿಫೈಗೆ ಖರ್ಚಾಗಿದ್ದು ಎಷ್ಟು ಗೊತ್ತಾ?

ಇದರಿಂದ ಒಳಗಿರುವ ಕ್ಯಾಬಿನ್‍, ಹೊರಗಡೆಯಿಂದ ಬರುವ ಶಬ್ದವನ್ನು ತಡೆಯಲು ಸಾಧ್ಯವಾಗಿ, ಆಡಿಯೋದ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಹೊಸ ಆಡಿಯೋ ಸೆಟ್‍‍ಅಪ್ ವಾಹನದ, ಬೂಟ್‍‍ನಲ್ಲಿ ಅಧಿಕ ಎಕ್ವಿಪ್‍‍ಮೆಂಟ್‍‍ಗಳನ್ನು ಅಳವಡಿಸಲಾಗಿದೆ. ಬೂಟ್, ಸಂಪೂರ್ಣವಾಗಿ ಲೈಟ್‍‍ಗಳನ್ನು ಹೊಂದಿದ್ದು, ಪ್ರಿಮೀಯಂ ಕಾರಿನಂತೆ ಕಂಗೊಳಿಸುತ್ತದೆ.

MOST READ: ಬಹಿರಂಗಗೊಂಡ ಫೋರ್ಡ್ ಇಕೋಸ್ಪೋರ್ಟ್ ಥಂಡರ್ ಎಡಿಷನ್

ಈ ನೆಕ್ಸಾನ್ ಕಾರ್ ಮಾಡಿಫೈಗೆ ಖರ್ಚಾಗಿದ್ದು ಎಷ್ಟು ಗೊತ್ತಾ?

ಹೆಚ್ಚುವರಿಯಾದ ಆಡಿಯೋ ಸೆಟ್ ಅಪ್ ಇಲ್ಲವೇ ಇಲ್ಲ. ಈ ವಾಹನದ ಇಂಟಿರಿಯರ್ ಅನ್ನು ಅಪ್‍‍ಗ್ರೇಡ್ ಮಾಡಲಾಗಿದ್ದು, ಹೊಸ ಡ್ಯಾಶ್ ಬೋರ್ಡ್ ಅಳವಡಿಸಿರುವುದರಿಂದ ಕಾರಿಗೆ ಎರಡನೇ ಸ್ಕ್ರೀನ್ ದೊರೆತಂತಾಗಿದೆ.

ಈ ನೆಕ್ಸಾನ್ ಕಾರ್ ಮಾಡಿಫೈಗೆ ಖರ್ಚಾಗಿದ್ದು ಎಷ್ಟು ಗೊತ್ತಾ?

ಡೋರ್‍‍ಗಳ ಟ್ರಿಮ್, ಸೀಟು ಮತ್ತು ಸ್ಟೀಯರಿಂಗ್‍‍ಗಳಿಗೆ ಲೆದರ್ ಅಳವಡಿಸಲಾಗಿದ್ದು, ಕಾರಿಗೆ ಕ್ಲಾಸಿಕ್ ಹಾಗೂ ಪ್ರಿಮೀಯಂ ಲುಕ್ ನೀಡುತ್ತವೆ. ರೋಲ್ಸ್ ರಾಯ್ಸ್ ವಾಹನಗಳ ರೀತಿಯಲ್ಲಿ ಕಾರಿಗೆ ಕಸ್ಟಂ ಸೀಟ್ ಕವರ್‍‍ಗಳನ್ನು ಹಾಗೂ ರೂಫ್‍‍ಗೆ ಸ್ಟಾರ್‍‍ಲೈಟ್ ಲೈನಿಂಗ್ ಅಳವಡಿಸಲಾಗಿದೆ. ಇಂಟಿರಿಯರ್‍‍ನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿ ನೆಕ್ಸಾನ್ ಕಾರಿಗೆ ಹೊಸ ರೂಪ ನೀಡಲಾಗಿದೆ. ಅನೇಕ ಎಕ್ವಿಪ್‍‍ಮೆಂಟ್‍‍ಗಳಿರುವ ಕಾರಣ ಕಾರಿನಲ್ಲಿ ಲೈಟುಗಳು ಬೆಳಗಿ, ಕಾರಿನ ಕ್ಯಾಬಿನ್ ವ್ಹೀಲ್‍‍ಗಳ ಮೇಲಿರುವ ಡಿಸ್ಕೊ‍‍ತೆಕ್‍‍ನಂತೆ ಕಾಣಿಸುತ್ತದೆ.

ಈ ನೆಕ್ಸಾನ್ ಕಾರ್ ಮಾಡಿಫೈಗೆ ಖರ್ಚಾಗಿದ್ದು ಎಷ್ಟು ಗೊತ್ತಾ?

ಪ್ರತಿಯೊಂದು ಕೆಲಸವನ್ನು ಸೂಕ್ಷ್ಮವಾಗಿ, ನಿಖರವಾಗಿ ಮಾಡಲಾಗಿದೆ. ಈ ಹಿಂದೆ ಆರ್‍ಎಂ ಕಾರ್ ಡೆಕೊರ್‍, ಹಿಂದೂಸ್ಥಾನ್ ಅಂಬಾಸಡರ್‍‍ನಲ್ಲೂ ಈ ರೀತಿಯ ಮಾಡಿಫಿಕೇಷನ್ ಕೆಲಸಗಳನ್ನು ನಿರ್ವಹಿಸಿತ್ತು. ಹೆಚ್ಚಿನ ಮಾಹಿತಿಗಾಗಿ ಆರ್‍ಎಂ ಕಾರ್ ಡೆಕೊರ್‍‍ನ ಫೇಸ್‍‍ಬುಕ್‍ ಪೇಜಿನಲ್ಲಿ ಅವರ ಸಂಪರ್ಕದ ಮಾಹಿತಿ ಪಡೆಯಬಹುದು.

Most Read Articles

Kannada
English summary
India’s COSTLIEST Nexon has Rs. 5 lakhs worth modifications in it - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X