ಕಾರು ಉತ್ಪಾದನೆಯಲ್ಲಿ ಟಾಟಾ ನೆಕ್ಸಾನ್ ಹೊಸ ಮೈಲಿಗಲ್ಲು

ಕಳೆದ 2017ರ ಅಂತ್ಯದಲ್ಲಿ ದೇಶಿಯ ಮಾರುಕಟ್ಟೆಯನ್ನು ಪ್ರವೇಶಿಸಿದ್ದ ಟಾಟಾ ನೆಕ್ಸಾನ್ ಆವೃತ್ತಿಯು ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಅತಿಕಡಿಮೆ ಅವಧಿಯಲ್ಲಿ 1 ಲಕ್ಷ ಉತ್ಪಾದನಾ ಗುರಿತಲುಪಿದೆ.

ಕಾರು ಉತ್ಪಾದನೆಯಲ್ಲಿ ಟಾಟಾ ನೆಕ್ಸಾನ್ ಹೊಸ ಮೈಲಿಗಲ್ಲು

ಹೌದು, ಟಾಟಾ ಸಂಸ್ಥೆಯು ನೆಕ್ಸಾನ್ ಕಾರು ಉತ್ಪಾದನೆಯಲ್ಲಿ ಮತ್ತು ಮಾರಾಟದಲ್ಲಿ ಹಲವು ಬದಲಾವಣೆಗಳನ್ನು ತರುವ ಮೂಲಕ ಕಂಪ್ಯಾಕ್ಟ್ ಎಸ್‌ಯುವಿ ಕಾರು ಖರೀದಿದಾರರನ್ನು ಸೆಳೆಯುತ್ತಿದ್ದು, ಬಿಡುಗಡೆಯಾಗಿ 20 ತಿಂಗಳ ಅವಧಿಯಲ್ಲಿ ಬರೋಬ್ಬರಿ 1 ಲಕ್ಷ ಕಾರುಗಳು ಉತ್ಪಾದನೆಗೊಂಡಿವೆ. ಹಾಗೆಯೇ ಮಾರಾಟದಲ್ಲೂ 95 ಸಾವಿರ ಗಡಿದಾಟಿರುವ ನೆಕ್ಸಾನ್ ಕಾರು ಮುಂಬರುವ ಕೆಲವೇ ದಿನಗಳಲ್ಲಿ ಮಾರಾಟದಲ್ಲೂ ಹೊಸ ಮೈಲಿಗಲ್ಲು ಸಾಧಿಸಲಿದ್ದು, ಖರೀದಿಗೆ ಅತ್ಯುತ್ತಮ ಕಾರು ಮಾದರಿಯಾಗಿದೆ.

ಕಾರು ಉತ್ಪಾದನೆಯಲ್ಲಿ ಟಾಟಾ ನೆಕ್ಸಾನ್ ಹೊಸ ಮೈಲಿಗಲ್ಲು

ಸದ್ಯ ಮಾರುಕಟ್ಟೆಯಲ್ಲಿ ನೆಕ್ಸಾನ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಹ್ಯುಂಡೈ ವೆನ್ಯೂ, ಮಹೀಂದ್ರಾ ಎಕ್ಸ್‌ಯುವಿ300 ಮತ್ತು ಮಾರುತಿ ಸುಜುಕಿ ಬ್ರೆಝಾ ಕಾರುಗಳು ಸಾಕಷ್ಟು ಪೈಪೋಟಿ ನೀಡುತ್ತಿದ್ದು, ಗ್ರಾಹಕರನ್ನು ಸೆಳೆಯಲು ಪ್ರಸ್ತುತ ಮಾರುಕಟ್ಟೆಯಲ್ಲಿ ಬೇಡಿಕೆಯೆಂತೆ ನೆಕ್ಸಾನ್‌ನಲ್ಲಿ ಕೆಲವು ಹೊಸ ತಾಂತ್ರಿಕ ಸೌಲಭ್ಯಗಳನ್ನು ಪರಿಚಯಿಸಲಾಗಿದೆ.

ಕಾರು ಉತ್ಪಾದನೆಯಲ್ಲಿ ಟಾಟಾ ನೆಕ್ಸಾನ್ ಹೊಸ ಮೈಲಿಗಲ್ಲು

ಟಾಟಾ ನೆಕ್ಸಾನ್ ಕಂಪ್ಯಾಕ್ಟ್ ಎಸ್‌ಯುವಿ ಕಾರಿನಲ್ಲಿ ಹೆಚ್ಚುವರಿಯಾಗಿ ಹಿಂಬದಿಯ ಸೀಟುಗಳಲ್ಲಿ ಈ ಬಾರಿ 12ವಿ ಪವರ್ ಔಟ್‌ಲೆಟ್ ಜೊತೆಗೆ ಹಿಂಬದಿಯ ಸವಾರರಿಗಾಗಿ ಇರುವ ಎಸಿ ಯುನಿಟ್ ಅನ್ನು ಮರುವಿನ್ಯಾಸದೊಂದಿಗೆ ವಿವಿಧ ಹಂತವಾಗಿ ಹೊಂದಾಣಿಕೆ ಮಾಡಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ.

ಕಾರು ಉತ್ಪಾದನೆಯಲ್ಲಿ ಟಾಟಾ ನೆಕ್ಸಾನ್ ಹೊಸ ಮೈಲಿಗಲ್ಲು

ಹಾಗೆಯೇ ಟಚ್‌ಸ್ಕೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಅನ್ನು ಸಹ ವಿನ್ಯಾಸಗೊಳಿಸಲಾಗಿದ್ದು, ಗೇರ್ ನಾಬ್ ಬಣ್ಣ ಕೂಡಾ ಬದಲಾಗಿದೆ. ಜೊತೆಗೆ ವಾರ್ಮ್ ಗ್ರೇ ಬಣ್ಣ ಪಡೆದ ಡ್ಯಾಶ್‌ಬೋರ್ಡ್ ಮಿಡ್ ಪ್ಯಾಡ್ ಮತ್ತು ಪಿಯಾನೋ ಬ್ಲ್ಯಾಕ್ ಬಣ್ಣ ಪಡೆದ ಎಸಿ ಯುನಿಟ್ ಸೌಲಭ್ಯವು ನೆಕ್ಸಾನ್ ಕಾರಿಗೆ ಮತ್ತಷ್ಟು ಮೆರಗು ತಂದಿದೆ. ಇದು ಪ್ರೀಮಿಯಂ ಸೌಲಭ್ಯಗಳನ್ನು ಬಯಸುವ ಗ್ರಾಹಕರಿಗೆ ಅನುಕೂಲಕವಾಗಲಿದ್ದು, ಕಾರು ಮಾರಾಟ ಹೆಚ್ಚಳಕ್ಕೆ ಸಹಕಾರಿಯಾಗಲಿದೆ.

ಕಾರು ಉತ್ಪಾದನೆಯಲ್ಲಿ ಟಾಟಾ ನೆಕ್ಸಾನ್ ಹೊಸ ಮೈಲಿಗಲ್ಲು

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಇದರೊಂದಿಗೆ ನೆಕ್ಸಾನ್ ಕಾರಿನ ಹೊರಭಾಗದ ವಿನ್ಯಾಸದಲ್ಲೂ ಕೆಲವು ಬದಲಾವಣೆಗಳನ್ನು ತರಲಾಗಿದ್ದು, ಮರುವಿನ್ಯಾಸಗೊಂಡ ರೂಫ್ ರೈಲ್ಸ್ ಮತ್ತು ಗ್ಲಾಸಿ ಫಿನಿಷಿಂಗ್ ಹೊಂದಿರುವ ಡೋರ್ ಟ್ರಿಮ್‌ಗಳು ಸಹ ಈಗ ಮತ್ತಷ್ಟು ಗ್ರಾಹಕರನ್ನು ಸೆಳೆಯಲಿದೆ. ಇಲ್ಲದೇ ಮುಂಬರುವ 2020ರ ಏಪ್ರಿಲ್ 1ರಿಂದ ಬಿಎಸ್-6 ಕಡ್ಡಾಯಗೊಳ್ಳುತ್ತಿದ್ದು, ಹೊಸ ನಿಯಮಕ್ಕೆ ಅನುಗುಣವಾಗಿ ಹೊಸ ಎಂಜಿನ್ ಪಡೆದುಕೊಳ್ಳುತ್ತಿದ್ದು, ಇದೀಗ ಬದಲಾವಣೆಗೊಳಿಸಲಾಗುತ್ತಿರುವ ಸೌಲಭ್ಯಗಳು ಮುಂಬರುವ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಕಡ್ಡಾಯವಾಗಲಿವೆ.

ಕಾರು ಉತ್ಪಾದನೆಯಲ್ಲಿ ಟಾಟಾ ನೆಕ್ಸಾನ್ ಹೊಸ ಮೈಲಿಗಲ್ಲು

ಇನ್ನು ನೆಕ್ಸಾನ್ ಕಾರುಗಳು ಸದ್ಯಕ್ಕೆ ಬಿಎಸ್ 4 ಎಂಜಿನ್ ಪ್ರೇರಣೆಯನ್ನೇ ಹೊಂದಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎರಡು ಎಂಜಿನ್ ಮಾದರಿಯಲ್ಲೂ ಖರೀದಿ ಲಭ್ಯವಿರುವ ನೆಕ್ಸಾನ್ ಮಾದರಿಯು ಪೆಟ್ರೋಲ್ ಆವೃತ್ತಿಯಲ್ಲಿ 1.2-ಲೀಟರ್ ರಿವೊಟ್ರೋನ್ ಎಂಜಿನ್ ಹೊಂದಿದ್ದರೆ, ಡೀಸೆಲ್ ಮಾದರಿಯಲ್ಲಿ 1.5-ಲೀಟರ್ ರಿವೋಟ್ರಾಕ್ ಎಂಜಿನ್ ಹೊಂದಿದೆ.

ಕಾರು ಉತ್ಪಾದನೆಯಲ್ಲಿ ಟಾಟಾ ನೆಕ್ಸಾನ್ ಹೊಸ ಮೈಲಿಗಲ್ಲು

ಆಲ್ ವೀಲ್ಹ್ ಡ್ರೈವ್ ಸೌಲಭ್ಯವೊಂದನ್ನು ಹೊರತುಪಡಿಸಿ ಬಲಿಷ್ಠ ಬಾಡಿ ಕಿಟ್ ಹೊಂದಿರುವುದು ಈ ಕಾರಿನ ಆಯ್ಕೆಯ ಮೌಲ್ಯವನ್ನು ಹೆಚ್ಚಿಸಿದ್ದು, ಚಾಲಕ ಮತ್ತು ಪ್ರಯಾಣಿಕ ಸೀಟುಗಳ ಕಡೆಗೆ ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್, ಐಸೋಫೆಕ್ಸ್ ಚೈಲ್ಡ್ ಮೌಟೆಂಡ್ ಸೀಟುಗಳು ಸೌಲಭ್ಯದೊಂದಿಗೆ ಕ್ರ್ಯಾಶ್‌ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ರೆಟಿಂಗ್ ತನ್ನದಾಗಿಸಿಕೊಂಡಿದೆ.

ಕಾರು ಉತ್ಪಾದನೆಯಲ್ಲಿ ಟಾಟಾ ನೆಕ್ಸಾನ್ ಹೊಸ ಮೈಲಿಗಲ್ಲು

ಹೀಗಾಗಿ ಸುರಕ್ಷತೆಯೊಂದಿದೆ ವಿಶಿಷ್ಟ ವಿನ್ಯಾಸಗಳೊಂದಿಗೆ ಕಂಪ್ಯಾಕ್ಟ್ ಎಸ್‌ಯುವಿ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ನೆಕ್ಸಾನ್ ಆವೃತ್ತಿಗಳು ಇಂಪ್ಯಾಕ್ಟ್ 2.0 ಡಿಸೈನ್‌ನೊಂದಿಗೆ ಅಭಿವೃದ್ಧಿಗೊಂಡಿದ್ದು, ಮಲ್ಟಿ ಡ್ರೈವ್ ಮೋಡ್, ತೇಲುವ ಡ್ಯಾಶ್ ಟಾಪ್ ಎಚ್‌ಡಿ ಟಚ್‌ಸ್ಕ್ರೀನ್, ಹರ್ಮನ್ ಇನ್ಫೋಟೈನ್ಮೆಂಟ್ ಸಿಸ್ಟಂ, ದೊಡ್ಡದಾದ ಸೆಂಟ್ರಲ್ ಕನ್ಸೊಲ್ ಪಡೆದುಕೊಂಡಿದೆ.

ಕಾರು ಉತ್ಪಾದನೆಯಲ್ಲಿ ಟಾಟಾ ನೆಕ್ಸಾನ್ ಹೊಸ ಮೈಲಿಗಲ್ಲು

ಸದ್ಯ ಮಾರಕಟ್ಟೆಯಲ್ಲಿ ನೆಕ್ಸಾನ್ ಕಾರಿನಲ್ಲಿ ಎಕ್ಸ್‌ಟಿ, ಎಕ್ಸ್‌ಜೆಡ್, ಎಕ್ಸ್‌ಜೆಡ್ ಪ್ಲಸ್ ಮತ್ತು ಎಕ್ಸ್‌ಜೆಡ್ಎ ಪ್ಲಸ್ ಆವೃತ್ತಿಗಳಲ್ಲಿ 22 ಮಾದರಿಗಳು ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ನೆಕ್ಸಾನ್ ಆರಂಭಿಕ ಆವೃತ್ತಿಯು ರೂ. 6.72 ಲಕ್ಷದಿಂದ ಟಾಪ್ ಎಂಡ್ ಮಾದರಿಯು 11.06 ಲಕ್ಷ ಬೆಲೆ ಪಡೆದುಕೊಂಡಿವೆ.

Most Read Articles

Kannada
English summary
Tata Nexon Compact SUV Crosses 1,00,000 Unit Production Milestone. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X