ಶೀಘ್ರವೇ ಬರಲಿದೆ ಎಲೆಕ್ಟ್ರಿಕ್ ವರ್ಷನ್ 'ಭಾರತದ ಸೇಫೆಸ್ಟ್ ಎಸ್‍ಯುವಿ' ಟಾಟಾ ನೆಕ್ಸಾನ್

ಟಾಟಾ ಮೋಟಾರ್ಸ್ ಸಂಸ್ಥೆಯು ಸಧ್ಯ ತಮ್ಮ ಉತ್ಪಾದನ ಗುಣಮಟ್ಟದ ಬಗ್ಗೆ ಹೆಚ್ಚು ಸುದ್ದಿಯಾಗುತ್ತಿದ್ದು, ಈ ಸುದ್ದಿಗೆ ಪ್ರಮುಖ ಕಾರಣವೆಂದರೆ ಅದು ಟಾಟಾ ನೆಕ್ಸಾನ್. ಎಕೆಂದರೆ ಇದು ಕಳೆದ ವರ್ಷ ಗ್ಲೋಬಲ್ ಎನ್‍ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ 5ಕ್ಕೆ 5 ಅಂಕವನ್ನು ಪಡೆದು ಭಾರತದ ಸೇಫೆಸ್ಟ್ ಎಸ್‍ಯುವಿ ಎಂಬ ಬಿರುದನ್ನು ಪಡೆದುಕೊಂಡಿದೆ.

ಶೀಘ್ರವೇ ಬರಲಿದೆ ಎಲೆಕ್ಟ್ರಿಕ್ ವರ್ಷನ್ 'ಭಾರತದ ಸೇಫೆಸ್ಟ್ ಕಾರ್' ಟಾಟಾ ನೆಕ್ಸಾನ್

ಹೀಗಿರುವಾಗ ಟಾಟಾ ಮೋಟಾರ್ಸ್ ಸಂಸ್ಥೆಯು ಇದೇ ಮಾರ್ಚ್‍ನಲ್ಲಿ ನಡೆದ 2019ರ ಜೆನೆವಾ ಮೋಟಾರ್ ಶೋನಲ್ಲಿ ಟಾಟಾ ನೆಕ್ಸಾನ್ ಕಾರು ಉತ್ಪಾದನಾ ಗುಣಮಟ್ಟವನ್ನು ಹೋಲುವ ಆಲ್‍ಟ್ರೋಜ್, ಬಝಾರ್ಡ್ ಮತ್ತು ಹೆಚ್‍2ಎಕ್ಸ್ ಕಾರುಗಳನ್ನು ಪ್ರದರ್ಶಿಸಲಾಗಿತ್ತು ಮತ್ತು ಇನ್ನು ಮುಂದೇ 5 ಸ್ಟಾರ್ ರೇಟಿಂಗ್ ಹೊಂದಿರುವ ಕಾರುಗಳನ್ನು ಮಾತ್ರ ಉತ್ಪಾದನೆ ಮಾಡುವುದಾಗಿ ಹೇಳಿಕೊಂಡಿದೆ.

ಶೀಘ್ರವೇ ಬರಲಿದೆ ಎಲೆಕ್ಟ್ರಿಕ್ ವರ್ಷನ್ 'ಭಾರತದ ಸೇಫೆಸ್ಟ್ ಕಾರ್' ಟಾಟಾ ನೆಕ್ಸಾನ್

ಅಷ್ಟೆ ಅಲ್ಲದ್ಯೆ ಟಾಟಾ ಮೋಟಾರ್ಸ್ ಸಂಸ್ಥೆಯು ತಮ್ಮ ಜನಪ್ರಿಯ ಕಾರುಗಳ ಎಲೆಕ್ಟ್ರಿಕ್ ವರ್ಷನ್ ಅನ್ನು ಬಿಡುಗಡೆ ಮಾಡಲಿದ್ದು, ಸಧ್ಯ ಆಲ್‍ಟ್ರೋಜ್ ಕಾರಿನ ಎಲೆಕ್ಟ್ರಿಕ್ ಮಾದರಿಯನ್ನು ಪ್ರದರ್ಶಿಸಲಾಗುತ್ತು. ಇದರ ಜೊತೆಗೆ ಇದಿಗ ಲಭ್ಯವಾದ ಮಾಹಿತಿಗಳ ಪ್ರಕಾರ ಟಾಟಾ ಮೋಟಾರ್ಸ್ ಸಂಸ್ಥೆಯು ತಮ್ಮ ನೆಕ್ಸಾನ್ ಕಾರಿನ ಎಲೆಕ್ಟ್ರಿಕ್ ಮಾದರಿಯನ್ನು ಸಹ ಬಿಡುಗಡೆ ಮಾಡಲಿದೆಯಂಯತೆ.

ಶೀಘ್ರವೇ ಬರಲಿದೆ ಎಲೆಕ್ಟ್ರಿಕ್ ವರ್ಷನ್ 'ಭಾರತದ ಸೇಫೆಸ್ಟ್ ಕಾರ್' ಟಾಟಾ ನೆಕ್ಸಾನ್

ಟಾಟಾ ಮೋಟಾರ್ಸ್‍ನ 74ನೇ ಆನ್ಯುವಲ್ ಜೆನರಲ್ ಮೀಟಿಂಗ್‍‍ನಲ್ಲಿ ಸಂಸ್ಥೆಯ ಚೇರ್‍‍‍ಮೆನ್ ಆದ ಎನ್. ಚಂದ್ರಶೇಕರನ್‍‍ರವರು ಟಾಟಾ ನೆಕ್ಸಾನ್ ಕಾರಿನ ಎಲೆಕ್ಟ್ರಿಕ್ ಮಾದರಿಯನ್ನು ಪರಿಚಯುವುದರ ಬಗ್ಗೆ ಖಚಿಪಡಿಸಲಾಗಿದ್ದು, ಮುಂದಿನ 18 ತಿಂಗಳಿನಲ್ಲಿ ಎಲೆಕ್ಟ್ರಿಕ್ ಮಾದರಿಯ ನೆಕ್ಸಾನ್ ಕಾರುಗಳನ್ನು ಬಿಡುಗಡೆ ಮಾಡಲಿದ್ದಾರಂತೆ.

ಶೀಘ್ರವೇ ಬರಲಿದೆ ಎಲೆಕ್ಟ್ರಿಕ್ ವರ್ಷನ್ 'ಭಾರತದ ಸೇಫೆಸ್ಟ್ ಕಾರ್' ಟಾಟಾ ನೆಕ್ಸಾನ್

ಈ ಜೆನರಲ್ ಮೀಟಿಂಗ್‍ನಲ್ಲಿ ಟಾಟಾ ನೆಕ್ಸಾನ್ ಎಸ್‍ಯುವಿ ಕಾರಿನ ಎಲೆಕ್ಟ್ರಿಕ್ ಮಾದರಿಯ ಕುರಿತಾಗಿ ಇಷ್ಟೆ ಮಾಹಿತಿಗಳು ಲಭ್ಯವಾಗಿದ್ದು, ಆಲ್‍‍ಟ್ರೋಜ್ ಇವಿ ಕಾರಿನಲ್ಲಿ ಬಳಸಲಾದ ಬ್ಯಾಟರಿ ಟೆಕ್ನಾಲಜಿ ಮತ್ತು ಟಿಗೋರ್ ಇವಿ ಕಾರಿನಲ್ಲಿ ಬಳಸಲಾದ ಲೀಥಿಯಂ ಐಯಾನ್ ಬ್ಯಾಟರಿಯ ಪ್ಯಾಕೇಜ್ ಅನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ.

ಶೀಘ್ರವೇ ಬರಲಿದೆ ಎಲೆಕ್ಟ್ರಿಕ್ ವರ್ಷನ್ 'ಭಾರತದ ಸೇಫೆಸ್ಟ್ ಕಾರ್' ಟಾಟಾ ನೆಕ್ಸಾನ್

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಇಷ್ಟೆ ಅಲ್ಲದೆಯೆ ಟಾಟಾ ನೆಕ್ಸಾನ್ ಎಲ್ಕೆಕ್ಟ್ರಿಕ್ ಮಾದರಿಯ ಕಾರು ಆಲ್‍ಟ್ರೋಜ್ ಎಲೆಕ್ಟ್ರಿಕ್ ಕಾರಿನ ಮಾದರಿಯಲ್ಲಿ ಡಿಸಿ ಮತ್ತು ಎಸಿ ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿಯನ್ನು ಸಹ ಹೊಂದಿರಲಿದ್ದು, ಆಲ್‍ಟ್ರೋಜ್ ಇವಿ ಕಾರು ಮೇಲೆ ಹೇಳಿರುವ ಹಾಗೆ ಈ ವರ್ಷದ ಜೆನೆವಾ ಮೋಟಾರ್ ಶೋನಲ್ಲಿ ಸಾಧಾರಣ ಪ್ರೀಮಿಯಂ ಆಲ್‍ಟ್ರೋಜ್ ಕಾರಿನ ಜೊತೆಗೆ ಕಾನಿಸಿಕೊಂಡಿತ್ತು.

ಶೀಘ್ರವೇ ಬರಲಿದೆ ಎಲೆಕ್ಟ್ರಿಕ್ ವರ್ಷನ್ 'ಭಾರತದ ಸೇಫೆಸ್ಟ್ ಕಾರ್' ಟಾಟಾ ನೆಕ್ಸಾನ್

ಜೊತೆಗೆ ಆಲ್‌ಟ್ರೊಜ್ ಎಲೆಕ್ಟ್ರಿಕ್ ಕಾರಿನ ಬೆಲೆಯು ರೂ.10 ಲಕ್ಷದೊಳಗೆ ಇರಲಿದೆ ಎನ್ನುವ ಮಹತ್ವದ ಮಾಹಿತಿ ಹಂಚಿಕೊಂಡಿದ್ದು, ಅತಿ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಪ್ರೀಮಿಯಂ ಸೌಲಭ್ಯಗಳೊಂದಿಗೆ ಹೊಂದಿರುವ ಕಾರು ಮಾದರಿ ಇದಾಗಿರಲಿದೆ ಎಂದಿದ್ದಾರೆ. ಹೀಗಾಗಿ ಇದು ಬಲೆನೊ ಮತ್ತು ಐ20 ಕಾರುಗಳಿಗೆ ತೀವ್ರ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಶೀಘ್ರವೇ ಬರಲಿದೆ ಎಲೆಕ್ಟ್ರಿಕ್ ವರ್ಷನ್ 'ಭಾರತದ ಸೇಫೆಸ್ಟ್ ಕಾರ್' ಟಾಟಾ ನೆಕ್ಸಾನ್

ಇನ್ನು ಹೊಸ ಆಲ್‌ಟ್ರೊಜ್ ಎಲೆಕ್ಟ್ರಿಕ್ ಕಾರು ಪ್ರತಿ ಚಾರ್ಜ್‌ಗೆ 250-300 ಕಿ.ಮಿ ಮೈಲೇಜ್ ರೇಂಜ್ ಬ್ಯಾಟರಿ ಸೌಲಭ್ಯ ಹೊಂದಿರಲಿದ್ದು, ಫಾಸ್ಟ್ ಚಾರ್ಜಿಂಗ್ ಸೌಲಭ್ಯದ ಮೂಲಕ ಕೇವಲ 60 ನಿಮಿಷಗಳಲ್ಲಿ ಶೇ.80 ಚಾರ್ಜ್ ಮಾಡಬಹುದಾದ ಗುಣಮಟ್ಟದ ಬ್ಯಾಟರಿ ಜೋಡಣೆ ಮಾಡಲಿದೆ.

ಶೀಘ್ರವೇ ಬರಲಿದೆ ಎಲೆಕ್ಟ್ರಿಕ್ ವರ್ಷನ್ 'ಭಾರತದ ಸೇಫೆಸ್ಟ್ ಕಾರ್' ಟಾಟಾ ನೆಕ್ಸಾನ್

ಸದ್ಯ ಕೇಂದ್ರ ಸರ್ಕಾರವು ಸಹ ಎಲೆಕ್ಟ್ರಿಕ್ ಕಾರುಗಳನ್ನು ಉತ್ತೇಜಿಸುವ ಸಂಬಂಧ ಬರೋಬ್ಬರಿ 10 ಸಾವಿರ ಕೋಟಿ ಬಿಡುಗಡೆ ಮಾಡಿದ್ದು, ಎಲೆಕ್ಟ್ರಿಕ್ ಕಾರುಗಳಿ ಸಬ್ಸಡಿ ಸೇರಿದಂತೆ ತ್ವರಿತ ಗತಿಯಲ್ಲಿ ಚಾರ್ಜಿಂಗ್ ಸ್ಟೆಷನ್‌ಗಳ ನಿರ್ಮಾಣಕ್ಕಾಗಿ ಬೃಹತ್ ಯೋಜನೆಗಳನ್ನು ರೂಪಿಸುತ್ತಿದೆ. ಹೀಗಾಗಿ ಟಾಟಾ ಆಲ್‌ಟ್ರೊಜ್ ಕಾರು ಗ್ರಾಹಕರ ಆಕರ್ಷಣೆಗೆ ಕಾರಣವಾಗಲಿದ್ದು, 2020ರ ಆರಂಭದಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ವರ್ಷನ್ ಆಲ್‌ಟ್ರೊಜ್ ಬಿಡುಗಡೆಯಾದ ನಂತವಷ್ಟೇ ಎಲೆಕ್ಟ್ರಿಕ್ ಕಾರು ಕೂಡಾ ಗ್ರಾಹಕರ ಕೈ ಸೇರಲಿದೆ.

ಶೀಘ್ರವೇ ಬರಲಿದೆ ಎಲೆಕ್ಟ್ರಿಕ್ ವರ್ಷನ್ 'ಭಾರತದ ಸೇಫೆಸ್ಟ್ ಕಾರ್' ಟಾಟಾ ನೆಕ್ಸಾನ್

ಇನ್ನು ವರದಿಗಳ ಪ್ರಕಾರ ಟಾಟಾ ಮೋಟಾರ್ಸ್ ಅಭಿವೃದ್ಧಿಗೊಳಿಸುತ್ತಿರುವ ಟಾಟಾ ಟಿಗೋರ್ ಇವಿ ಕಾರು ಎಕ್ಸ್ ಶೋರುಂ ಪ್ರಕಾರ ರೂ. 9.99 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದಿರಲಿದ್ದು, ಸುಮಾರು 10.90 ಲಕ್ಷದ ವರೆಗೂ ಮಾರಾಟವಾಗುವ ಸಾಧ್ಯತೆಗಳಿವೆ. ಹಾಗಯೆ ಮತ್ತೊಂದು ವಿಚಾರ ಏನಪ್ಪ ಅಂದ್ರೆ ಈ ಕಾರು ಕೇವಲ ಟ್ಯಾಕ್ಸಿ ಆಪರೇಟರ್‍‍ಗಳಿಗೆ ಮಾತ್ರ ಲಭ್ಯವಿರಲಿದ್ದು, ಸ್ವಂತ ಬಳಕೆಗೆ ಲಭ್ಯವಿರುವುದಿಲ್ಲ ಎಂದು ಹೇಳಲಾಗಿದೆ.

ಶೀಘ್ರವೇ ಬರಲಿದೆ ಎಲೆಕ್ಟ್ರಿಕ್ ವರ್ಷನ್ 'ಭಾರತದ ಸೇಫೆಸ್ಟ್ ಕಾರ್' ಟಾಟಾ ನೆಕ್ಸಾನ್

ಟಿಗೋರ್ ಇವಿ ಕಾರು- ಟಿಗೋರ್ ಇವಿ ಎಕ್ಸ್ಎಂ ಮತ್ತು ಟಿಗೋರ್ ಎಕ್ಸ್ಟಿ ಎಂಬ ಎರಡು ವೇರಿಯೆಂಟ್‍ಗಳಲಿ ಖರೀದಿಗೆ ಲಭ್ಯವಿರಲಿದ್ದು, ವೈಟ್, ಬ್ಲೂ ಮತ್ತು ಸಿಲ್ವರ್ ಎಂಬ ಮೂರು ಬಣ್ಣಗಳಲ್ಲಿ ದೊರೆಯಲಿದೆ. ಅಷ್ಟೆ ಅಲ್ಲದೆಯೆ ಪ್ರಯಾಣಿಕರ ಸುರಕ್ಷತೆಗಾಗಿ ಈ ಕಾರಿನಲ್ಲಿ ಡ್ಯುಯಲ್ ಫ್ರಂಟ್ ಏರ್‍‍ಬ್ಯಾಗ್ಸ್, ಎಬಿಎಸ್, ರಿಯರ್ ಪಾರ್ಕಿಂಗ್ ಸೆನ್ಸಾರ್ಸ್ ಹಾಗು ಇನಿತರೆ ವೈಶಿಷ್ಟ್ಯತೆಗಳನ್ನು ಒಳಗೊಂಡ ಸಾಧಾರಣ ಸೇಫ್ಟಿ ಕಿಟ್ ಅನ್ನು ಹೊಂದಿರಲಿದೆ.

ಶೀಘ್ರವೇ ಬರಲಿದೆ ಎಲೆಕ್ಟ್ರಿಕ್ ವರ್ಷನ್ 'ಭಾರತದ ಸೇಫೆಸ್ಟ್ ಕಾರ್' ಟಾಟಾ ನೆಕ್ಸಾನ್

ಎಂಜಿನ್ ಸಾಮರ್ಥ್ಯ

ಟಿಗೋರ್ ಇವಿಯು ಎಲೆಕ್ಟ್ರಲ್ ಇವಿಯಿಂದ ತಯಾರಾದ 216 ಎಹೆಚ್ ಬ್ಯಾಟರಿ ಹೊಂದಿದ್ದು, 40ಬಿಹೆಚ್‍ಪಿ ಚಲಿಸಬಲ್ಲ ಸಾಮರ್ಥ್ಯವನ್ನು ಪಡೆದಿವೆ. ಜೊತೆಗೆ 130 ಕಿಲೋಮೀಟರ್ ಡ್ರೈವಿಂಗ್ ರೇಂಜನ್ನು ಪಡೆದಿದ್ದು, ಗಂಟೆಗೆ 100ಕಿಲೋಮೀಟರ್ ಚಲಿಸಬಲ್ಲವು. ಕಾರಿನ ಬ್ಯಾಟರಿಯು ಸ್ಟ್ಯಾಂಡರ್ಡ್ ಚಾರ್ಜರ್ ಮೂಲಕ 6 ಗಂಟೆಗಳ ಸಮಯದಲ್ಲಿ ಪೂರ್ಣ ಚಾರ್ಜ್ ಆಗಲಿದ್ದು, ಫಾಸ್ಟ್ ಚಾರ್ಜರ್ ಸಹಾಯದಿಂದ 90 ನಿಮಿಷದಲ್ಲಿ ಶೇಕಡ 80ರಷ್ಟು ಚಾರ್ಜ್ ಆಗಲಿದೆ.

Most Read Articles

Kannada
English summary
Tata Motors Confirms Nexon EV For India — To Be One Of Four EVs To Arrive In India From The Brand
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X