Just In
- 4 hrs ago ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- 6 hrs ago Bajaj: ಮುಂಬರಲಿರುವ ಬಜಾಜ್ ಪಲ್ಸರ್ NS 400 ನಿರೀಕ್ಷಿತ ಬೆಲೆ, ವಿಶೇಷತೆಗಳು!
- 6 hrs ago Tata Punch: ಟಾಟಾ ಪಂಚ್ ಕಾರು ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- 8 hrs ago 150KM ರೇಂಜ್, ಸುರಕ್ಷತೆಯ ಮೆಟಲ್ ಬಾಡಿಯ ಮಹಿಂದ್ರಾ ಎಲೆಕ್ಟ್ರಿಕ್ ಆಟೋ ಬಿಡುಗಡೆ: ಹೆಚ್ಚು ಲಾಭ
Don't Miss!
- Movies Srirasthu Shubhamasthu ; ಶಾರ್ವರಿ ಹಿನ್ನೆಲೆ ಹೇಳಿದ ಮಹೇಶ : ಅತ್ತೆಯನ್ನು ಅನಾಥೆ ಎಂದ ದೀಪಿಕಾ..!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಲ್ಟ್ರೊಜ್ ಜೊತೆಗೆ ನೆಕ್ಸಾನ್ ಇವಿ ಕಾರನ್ನು ಅನಾವರಣಗೊಳಿಸಲಿದೆ ಟಾಟಾ ಮೋಟಾರ್ಸ್
ಟಾಟಾ ಮೋಟಾರ್ಸ್ ಸಂಸ್ಥೆಯು ತನ್ನ ಜನಪ್ರಿಯ ನೆಕ್ಸಾನ್ ಕಾರಿನ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಮುಂಬರುವ ತಿಂಗಳು ಡಿಸೆಂಬರ್ ಅಂತ್ಯಕ್ಕೆ ಆಲ್ಟ್ರೊಜ್ ಹ್ಯಾಚ್ಬ್ಯಾಕ್ ಅನಾವರಣ ಸಂದರ್ಭದಲ್ಲೇ ನೆಕ್ಸಾನ್ ಎಲೆಕ್ಟ್ರಿಕ್ ಕಾರನ್ನು ಸಹ ಅನಾವರಣಗೊಳಿಸುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಬಿಡುಗಡೆಗಾಗಿ ಅಂತಿಮ ಹಂತದ ತಯಾರಿ ನಡೆಸುತ್ತಿರುವ ಟಾಟಾ ಸಂಸ್ಥೆಯು ಹಿಮಾಲಯದ ಕಡಿದಾದ ಹಾದಿಗಳಲ್ಲಿ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ಟೆಸ್ಟ್ ಡ್ರೈವ್ ಕೈಗೊಂಡಿದ್ದು, ಜಿಪ್ಟ್ರಾನ್ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಹೊಸ ಕಾರು ಹಲವು ವಿಶೇಷತೆಗಳಿಗೆ ಕಾರಣವಾಗಲಿದೆ. ಕೈಗೆಟುಕುವ ಬೆಲೆಯಲ್ಲಿ ಖರೀದಿ ಲಭ್ಯವಾಗಲಿರುವ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಉತ್ತಮ ಬ್ಯಾಟರಿ ವೈಶಿಷ್ಟ್ಯತೆಯೊಂದಿಗೆ ಎಸ್ಯುವಿ ಪ್ರಿಯರನ್ನು ಸೆಳೆಯುವ ಹಲವು ಪ್ರೀಮಿಯಂ ಫೀಚರ್ಸ್ ಪಡೆದುಕೊಂಡಿದೆ.
ಹೊಸ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಸ್ಪೆಷಲ್ ಟೆಸ್ಟ್ ಡ್ರೈವ್ಗಾಗಿ ಬಾಲಿವುಡ್ ಫಿಟ್ನೆಸ್ ಐಕಾನ್ ಮಿಲಿಂದ್ ಸೋಮನ್ ಜೊಡಿ ಕೂಡಾ ಭಾಗಿಯಾಗಿದ್ದು, ಅನಾವರಣಗೊಂಡ ನಂತರ 2020ರ ಆರಂಭದಲ್ಲಿ ನೆಕ್ಸಾನ್ ಎಲೆಕ್ಟ್ರಿಕ್ ಮತ್ತು ಆಲ್ಟ್ರೋಜ್ ಹ್ಯಾಚ್ಬ್ಯಾಕ್ ಕಾರುಗಳು ಅಧಿಕೃತವಾಗಿ ಖರೀದಿಗೆ ಲಭ್ಯವಿರಲಿವೆ.
ಜೊತೆಗೆ ಹೊಸ ಕಾರಿನ ಬೆಲೆ ಮತ್ತು ಮೈಲೇಜ್ ಮಾಹಿತಿಯನ್ನು ಸಹ ಹಂಚಿಕೊಂಡಿರುವ ಟಾಟಾ ಸಂಸ್ಥೆಯು ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿ,ಸುವ ತವಕದಲ್ಲಿದ್ದು, ಜಿಪ್ಟ್ರಾನ್ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅತ್ಯುತ್ತಮ ಎಂಜಿನ್ ದಕ್ಷತೆ ಹೊಂದಿದೆ.
ಪ್ರತಿ ಚಾರ್ಜ್ಗೆ 300ಕಿ.ಮೀ ಮೈಲೇಜ್
ಟಾಟಾ ನೆಕ್ಸಾನ್ ಇವಿ ಕಾರು ಪ್ರತಿ ಚಾರ್ಜ್ಗೆ 300ಕಿ.ಮೀ ಮೈಲೇಜ್ ಹಿಂದಿರುಗಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ ಹ್ಯಾರಿಯರ್ ಕಾರಿನಲ್ಲಿರುವ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹಲವು ಪ್ರೀಮಿಯಂ ಸೌಲಭ್ಯಗಳು ನೆಕ್ಸಾನ್ ಎಲೆಕ್ಟ್ರಿಕ್ ಕಾರಿನಲ್ಲಿವೆ ಎನ್ನಲಾಗಿದೆ.
ಕಾರಿನ ಬೆಲೆ(ಅಂದಾಜು ದರ)
ನೆಕ್ಸಾನ್ ಇವಿ ಬಿಡುಗಡೆ ಮಾಹಿತಿಯನ್ನು ಹಂಚಿಕೊಳ್ಳುವಾಗ ಹೊಸ ಕಾರಿನ ಬೆಲೆ ಮಾಹಿತಿ ಬಗ್ಗೆಯು ಅಂದಾಜು ದರಗಳನ್ನು ಪ್ರಕಟಿಸಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ಇತರೆ ಎಲೆಕ್ಟ್ರಿಕ್ ಕಾರುಗಳಿಂತಲೂ ಅತ್ಯುತ್ತಮ ತಂತ್ರಜ್ಞಾನ ಹೊಂದಿರುವ ಕಾರಿನ ಬೆಲೆಯು ರೂ.15 ಲಕ್ಷದಿಂದ ರೂ.17 ಲಕ್ಷ ಬೆಲೆ ಅಂತರ ಮಾರುಕಟ್ಟೆಗೆ ಬರಲಿದೆ ಎಂದಿದೆ.
ಇನ್ನು ಟಾಟಾ ಸಂಸ್ಥೆಯು ತನ್ನ ಎಲೆಕ್ಟ್ರಿಕ್ ಕಾರುಗಳಲ್ಲಿ ಬಳಕೆ ಮಾಡಲು ಉದ್ದೇಶಿಸಿರುವ ಜಿಪ್ಟ್ರಾನ್ ತಂತ್ರಜ್ಞಾನವು ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಎಲೆಕ್ಟ್ರಿಕ್ ಕಾರುಗಳನ್ನು ಅತಿ ಕಡಿಮೆ ಅವಧಿಯಲ್ಲಿ ಜನಪ್ರಿಯಗೊಳಿಸುವಲ್ಲಿ ಈ ತಂತ್ರಜ್ಞಾನ ಸಾಕಷ್ಟು ಸಹಕಾರಿಯಾಗಲಿದೆ.
ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಎಂಜಿನಿಯರ್ ತಂಡದೊಂದಿಗೆ ಜಿಪ್ಟ್ರಾನ್ ತಂತ್ರಜ್ಞಾನವನ್ನು ಅಭಿವೃದ್ದಿಪಡಿಸಿರುವ ಟಾಟಾ ಸಂಸ್ಥೆಯು, ಭವಿಷ್ಯದ ಎಲೆಕ್ಟ್ರಿಕ್ ಕಾರುಗಳಿಗೆ ಜಿಪ್ಟ್ರಾನ್ ತಂತ್ರಜ್ಞಾನವು ಹೃದಯವಿದ್ದಂತೆ ಎಂದು ಬಣ್ಣಿಸಿದೆ.
ಜಿಪ್ಟ್ರಾನ್ ಪವರ್ಟ್ರೈನ್ ತಂತ್ರಜ್ಞಾನವು ಹಲವು ಸುಧಾರಿತ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ದಿಗೊಳಿಸಲಾಗಿದ್ದು, ಹೈ ವೊಲ್ಟೆಜ್ ಸಿಸ್ಟಂ, ದೀರ್ಘಕಾಲಿಕ ಬ್ಯಾಟರಿ ಸಾಮಾರ್ಥ್ಯ, ಅತಿಕಡಿಮೆ ಅವಧಿಯಲ್ಲಿ ಚಾರ್ಜಿಂಗ್ ಸಿಸ್ಟಂ ಮತ್ತು ಸೂಪಿರಿಯರ್ ಪರ್ಫಾಮೆನ್ಸ್ ವೈಶಿಷ್ಟ್ಯತೆಗಳನ್ನು ಈ ಪವರ್ಟ್ರೈನ್ನಲ್ಲಿ ಅಳವಡಿಸಲಾಗಿದೆ.
ಜೊತೆಗೆ ರಿಜನರೇಟಿವ್ ಬ್ರೇಕಿಂಗ್ ಸಿಸ್ಟಂ ಅಳವಡಿಕೆ ಹಿನ್ನಲೆಯಲ್ಲಿ ಕಾರು ಚಾಲನೆ ವೇಳೆ ನೀರ್ದಿಷ್ಟ ಪ್ರಮಾಣದಲ್ಲಿ ಬ್ಯಾಟರಿ ಚಾರ್ಜಿಂಗ್ ಪ್ರಕ್ರಿಯೆಯು ಮರಳಿಪಡೆಯಬಹುದಾಗಿದ್ದು, ಇದೇ ಕಾರಣಕ್ಕೆ ಹೊಸ ತಂತ್ರಜ್ಞಾನವು ಬ್ಯಾಟರಿ ದೀರ್ಘಕಾಲ ಬಾಳಿಕೆಗೆ ಸಹಕರಿಸಲಿದೆ.
8 ವರ್ಷಗಳ ವಾರಂಟಿ..!
ಇದು ನಿಮಗೆ ಅಚ್ಚರಿಯಾದರೂ ನಿಜ. ಟಾಟಾ ಸಂಸ್ಥೆಯು ತನ್ನ ವಿನೂತನ ಜಿಪ್ಟ್ರಾನ್ ತಂತ್ರಜ್ಞಾನದ ಮೇಲೆ ಸುಮಾರು 8 ವರ್ಷಗಳ ವಾರಂಟಿ ನೀಡವುದಾಗಿ ಘೋಷಿಸಿದ್ದು, ಹೊಸ ಪವರ್ಟ್ರೈನ್ನಲ್ಲಿ ಮ್ಯಾಗ್ನೆಟ್ ಎಸಿ ಮೋಟಾರ್ ಜೋಡಿಸಿರುವುದು ಪ್ರಮುಖ ಆಕರ್ಷಣೆಯಾಗಿದೆ.