ರೋಡ್ ಟೆಸ್ಟಿಂಗ್‍‍ನಲ್ಲಿ ಕಂಡು ಬಂದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಭಾರತದ ಮೂಲದ ಟಾಟಾ ಮೋಟಾರ್ಸ್ ಇನ್ನು ಕೆಲವೇ ದಿನಗಳಲ್ಲಿ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದರ ಜೊತೆಗೆ ಟಾಟಾ ಮೋಟಾರ್ಸ್ ನೆಕ್ಸಾನ್ ಹಿನ್ನೆಲೆಯಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ಒಳನೋಟವನ್ನು ನೀಡಲು ವೀಡಿಯೊಗಳನ್ನು ಬಿಡುಗಡೆಗೊಳಿಸಿದೆ.

ರೋಡ್ ಟೆಸ್ಟಿಂಗ್‍‍ನಲ್ಲಿ ಕಂಡು ಬಂದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಈ ವೀಡಿಯೊ, ಕಾರು ಪ್ರಿಯರಿಗಾಗಿ ಹಲವು ಮಾಹಿತಿಯನ್ನು ಒದಗಿಸುತ್ತದೆ. ಟಾಟಾ ನೆಕ್ಸಾನ್ ಕಾರ್ ಅನ್ನು ಮೊದಲು ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳಲ್ಲಿ ಬಿಡುಗಡೆಗೊಳಿಸಲಾಯಿತು. ಈಗ ಈ ಕಾರ್ ಅನ್ನು ಎಲೆಕ್ಟ್ರಿಕ್ ವಾಹನವಾಗಿ ಬಿಡುಗಡೆಗೊಳಿಸಲಾಗುತ್ತಿದೆ.

ರೋಡ್ ಟೆಸ್ಟಿಂಗ್‍‍ನಲ್ಲಿ ಕಂಡು ಬಂದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಈ ಎಲೆಕ್ಟ್ರಿಕ್ ಕಾರಿನಲ್ಲಿ ಯಾವ ಭಾಗಗಳನ್ನು ಅಳವಡಿಸಲಾಗಿದೆ. ಈ ಎಲೆಕ್ಟ್ರಿಕ್ ಕಾರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆಯೆ ಎಂದು ಖಚಿತಪಡಿಸಿಕೊಳ್ಳಲು ಈ ವೀಡಿಯೊವನ್ನು ಟಾಟಾ ಮೋಟಾರ್ಸ್ ನಿರ್ಮಿಸಿದೆ.

ರೋಡ್ ಟೆಸ್ಟಿಂಗ್‍‍ನಲ್ಲಿ ಕಂಡು ಬಂದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರ್ ಅನ್ನು ಕಡ್ಡಾಯವಾಗಿರುವ ಹಲವು ಪರೀಕ್ಷೆಗಳಿಗೆ ಒಳಪಡಿಸಲಾಗಿದೆ. ಈ ಪರೀಕ್ಷೆಗಳಲ್ಲಿ ಟಾರ್ಚರ್ ಟ್ರ್ಯಾಕ್, ಗ್ರೇಡೆಬಿಲಿಟಿ ಟೆಸ್ಟ್, ವಾಟರ್ ವೇಡಿಂಗ್ ಟೆಸ್ಟ್, ಕ್ಲೈಮೇಟ್ ಚೇಂಬರ್, ರೊಬೊಟಿಕ್ ಸ್ಟೀಯರಿಂಗ್, ಲೇನ್ ಚೇಂಜ್, ಸ್ಕಿಡ್ ಪ್ಯಾಡ್, ಆಕ್ಸಿಲೆರೇಶನ್ ಹಾಗೂ ಬ್ರೇಕಿಂಗ್‌‍‍ಗಳು ಸೇರಿವೆ.

ರೋಡ್ ಟೆಸ್ಟಿಂಗ್‍‍ನಲ್ಲಿ ಕಂಡು ಬಂದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಹೊಸ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಐಪಿ 67 ರೇಟಿಂಗ್ ಧೂಳು ಹಾಗೂ ವಾಟರ್‍‍ಪ್ರೂಫ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಭಾರತದಲ್ಲಿ ಟಾಟಾ ಮೋಟಾರ್ಸ್‌ನ ಎಲೆಕ್ಟ್ರಿಕ್ ವೆಹಿಕಲ್‍ ಡ್ರೈವ್ ಇಇಎಸ್ಎಲ್ ಟೆಂಡರ್‌ನ ಭಾಗವಾಗಿ ಟಿಗೋರ್ ಎಲೆಕ್ಟ್ರಿಕ್ ವಾಹನಗಳ ಪೂರೈಕೆಯೊಂದಿಗೆ ಆರಂಭಿಸಲಾಯಿತು.

ರೋಡ್ ಟೆಸ್ಟಿಂಗ್‍‍ನಲ್ಲಿ ಕಂಡು ಬಂದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

2018ರ ಜೂನ್‍‍ನಲ್ಲಿ, ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾ, ಭಾರತ್ ಇವಿ ಸ್ಪೆಸಿಫಿಕೇಷನ್ ಸ್ಟಾಂಡರ್ಡ್ ಪ್ರಕಾರ 15 ಕಿ.ವ್ಯಾ ಸಾಮರ್ಥ್ಯದೊಂದಿಗೆ ಎಆರ್‍‍ಎಐ ಪ್ರಮಾಣೀಕೃತ ಡಿಸಿ ಫಾಸ್ಟ್ ಚಾರ್ಜರ್ ಕೇಂದ್ರಗಳನ್ನು ಸ್ಥಾಪಿಸಿತು. ಒಮ್ಮೆ ಪೂರ್ತಿಯಾಗಿ ಚಾರ್ಜ್ ಮಾಡಿದ ನಂತರ, ಈ ಕಾರು 100ರಿಂದ 120 ಕಿ.ಮೀ.ವರೆಗೆ ಚಲಿಸುತ್ತದೆ.

ರೋಡ್ ಟೆಸ್ಟಿಂಗ್‍‍ನಲ್ಲಿ ಕಂಡು ಬಂದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಕಳೆದ ತಿಂಗಳು, ಎಕ್ಸ್ ಟೆಂಟೆಡ್ ಡ್ರೈವ್ ಶ್ರೇಣಿಯೊಂದಿಗೆ 213 ಕಿ.ಮೀ ದೂರ ಚಲಿಸುವ ಟಿಗೋರ್ ಎಲೆಕ್ಟ್ರಿಕ್ ಕಾರ್ ಅನ್ನು ಮಾಸ್ ಮಾರ್ಕೆಟ್ ಗ್ರಾಹಕರಿಗಾಗಿ ಬಿಡುಗಡೆಗೊಳಿಸಲಾಯಿತು. ಈ ದೂರವನ್ನು ಎಆರ್‍ಎ‍ಐ ಪ್ರಮಾಣೀಕರಿಸಿದೆ.

MOST READ: ಖಾಸಗಿ ವಿಮಾನ ಹೊಂದಿರುವ ಉದ್ಯಮಿಗಳಿವರು..!

ರೋಡ್ ಟೆಸ್ಟಿಂಗ್‍‍ನಲ್ಲಿ ಕಂಡು ಬಂದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

21.5 ಕಿ.ವ್ಯಾ ಬ್ಯಾಟರಿ ಪ್ಯಾಕ್ ಬಳಸಿದರೆ ಹೆಚ್ಚು ದೂರದವರೆಗೆ ಚಲಿಸುವಂತೆ ಚಾರ್ಚ್ ಮಾಡುತ್ತದೆ. 2 ಚಾರ್ಜಿಂಗ್ ಪೋರ್ಟ್‌ಗಳಿದ್ದು, ವೇಗದ ಚಾರ್ಜಿಂಗ್ ಹಾಗೂ ನಿಧಾನಗತಿಯ ಎಸಿ ಚಾರ್ಜಿಂಗ್ ಮಾಡುತ್ತವೆ. ಇದು ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಹಾಗೂ ವ್ಯಾಪ್ತಿಯ ವಿಷಯದಲ್ಲಿ ಟಾಟಾ ಮೋಟಾರ್ಸ್ ಇದುವರೆಗೂ ನೀಡುತ್ತಿರುವ ಉತ್ತಮವಾದ ಕೊಡುಗೆಯಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ರೋಡ್ ಟೆಸ್ಟಿಂಗ್‍‍ನಲ್ಲಿ ಕಂಡು ಬಂದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಈಗ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಸುಮಾರು 300 ಕಿ.ಮೀ ದೂರ ಚಲಿಸುವ ನಿರೀಕ್ಷೆಯಿದೆ. ನೆಕ್ಸಾನ್ ಎಲೆಕ್ಟ್ರಿಕ್ ಕಾರಿನಲ್ಲಿ ಜಿಪ್ಟ್ರಾನ್ ಪವರ್‌ಟ್ರೇನ್ ಅಳವಡಿಸಲಾಗಿದೆ. ಇದು ನೆಕ್ಸಾನ್ ಎಲೆಕ್ಟ್ರಿಕ್‌ನಲ್ಲಿ ಭವಿಷ್ಯದ ವೈಶಿಷ್ಟ್ಯಗಳನ್ನು ನೀಡಲು ಟಾಟಾಗೆ ಅವಕಾಶ ನೀಡುತ್ತದೆ.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ರೋಡ್ ಟೆಸ್ಟಿಂಗ್‍‍ನಲ್ಲಿ ಕಂಡು ಬಂದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ನೆಕ್ಸಾನ್ ಕಾರಿನ ಬೆಲೆ ರೂ.15ರಿಂದ 17 ಲಕ್ಷಗಳವರೆಗೆ ಇರಲಿದೆ ಎಂದು ಟಾಟಾ ಮೋಟಾರ್ಸ್ ತಿಳಿಸಿದೆ. ಸರ್ಕಾರದ ಚಾರ್ಜಿಂಗ್ ಮೂಲಸೌಕರ್ಯ ನೀತಿಯಂತೆ, ಟಾಟಾ ಮೋಟಾರ್ಸ್ ಟಾಟಾ ಪವರ್‌ನ ಜೊತೆಯಲ್ಲಿ 2021ರ ವೇಳೆಗೆ 500 ಸಾರ್ವಜನಿಕ ಇವಿ ಚಾರ್ಜಿಂಗ್ ಕೇಂದ್ರಗಳನ್ನು ವೇಗವಾಗಿ ಚಾರ್ಜಿಂಗ್ ಸೌಲಭ್ಯದೊಂದಿಗೆ ಅಭಿವೃದ್ಧಿಪಡಿಸುತ್ತದೆ.

ಈ ವರ್ಷದ ಜುಲೈನಲ್ಲಿ, ಟಾಟಾ ಮೋಟಾರ್ಸ್, ಮುಂದಿನ ಎರಡು ವರ್ಷಗಳಲ್ಲಿ ನಾಲ್ಕು ಎಲೆಕ್ಟ್ರಿಕ್ ನಾಲ್ಕು ಚಕ್ರ ವಾಹನಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತು. ಈ ಕಾರುಗಳನ್ನು ಒಂದು ಬಾರಿ ಚಾರ್ಜ್‌ ಮಾಡಿದರೆ 200 ಕಿ.ಮೀ ದೂರ ಚಲಿಸುತ್ತವೆ.

ರೋಡ್ ಟೆಸ್ಟಿಂಗ್‍‍ನಲ್ಲಿ ಕಂಡು ಬಂದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಟಿಗೋರ್ ಎಲೆಕ್ಟ್ರಿಕ್ ಕಾರ್ ಅನ್ನು ಕಳೆದ ತಿಂಗಳು ಬಿಡುಗಡೆಗೊಳಿಸಲಾಯಿತು. ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರ್ ಅನ್ನು ಮುಂದಿನ ತಿಂಗಳು ಬಿಡುಗಡೆಗೊಳಿಸಲಾಗುವುದು. ಅದಾದ ನಂತರ ಟಾಟಾ ಆಲ್ಟ್ರೋಜ್ ಹ್ಯಾಚ್‍‍ಬ್ಯಾಕ್ ಕಾರ್ ಅನ್ನು ಬಿಡುಗಡೆಗೊಳಿಸಲಾಗುವುದು.

ರೋಡ್ ಟೆಸ್ಟಿಂಗ್‍‍ನಲ್ಲಿ ಕಂಡು ಬಂದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ನಾಲ್ಕನೆಯ ಮಾದರಿ ಯಾವುದೆಂದು ಇನ್ನೂ ತಿಳಿದು ಬಂದಿಲ್ಲ. ಆದರೆ ಅದು ಹೆಚ್‍ 2 ಎಕ್ಸ್ ಕಾನ್ಸೆಪ್ಟ್ ಕಾರಿನ ಮೇಲೆ ಆಧಾರಿತವಾಗಿರುವ ಚಿಕ್ಕ ಎಸ್‍‍ಯುವಿಯಾಗಿರುವ ಸಾಧ್ಯತೆಗಳಿವೆ.

Most Read Articles

Kannada
English summary
Tata nexon electric undergoes testing video details - Read in Kannada
Story first published: Thursday, November 14, 2019, 18:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X