Just In
- 13 min ago ಜನಪ್ರಿಯ ಕಂಪನಿಗಳಿಂದ ಮುಂಬರುವ ಪುಟ್ಟ ಕಾರುಗಳಿವು.. ಇವೇ ಮಿಡಲ್ ಕ್ಲಾಸ್ ಜನರ ಫೇವರಿಟ್ ಆಗುವುದು ಪಕ್ಕಾ!
- 2 hrs ago ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- 2 hrs ago TVS iQube: ಲಕ್ಷಾಂತರ ಭಾರತೀಯರ ನೆಚ್ಚಿನ ಸ್ಕೂಟರ್ನ ಡೌನ್ಪೇಮೆಂಟ್, ಇಎಂಐ, ಲೋನ್ ವಿವರ!
- 2 hrs ago viral video: ಬೆಂಗಳೂರಿನಲ್ಲಿ ಮಾತ್ರ ಸಾಧ್ಯ: ಹೆಣ್ಮಗು.. ಹೆಣ್ಮಗು ಓಹ್.. ಎಂದ ನೆಟ್ಟಿಗರು!
Don't Miss!
- News ವಿರಾಟ್ ಕೊಹ್ಲಿ ಬಳಿ ಬಂದ ಅಭಿಮಾನಿಯನ್ನು ಕಾಲಲ್ಲಿ ತುಳಿದ ಸೆಕ್ಯೂರಿಟಿ ಸಿಬ್ಬಂದಿ-ರೂಪೇಶ್ ರಾಜಣ್ಣ ಹೇಳಿದ್ದೇನು?
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Technology iPhones: ಬೇಕಿತ್ತಾ ಇದೆಲ್ಲ? ನಕಲಿ ಐಫೋನ್ ಮೂಲಕ ಆಪಲ್ಗೆ ಪಂಗನಾಮ ಹಾಕಿದವನಿಗೆ ಜೈಲೂಟ
- Lifestyle ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- Finance 2.3 ಲಕ್ಷ ರೂಪಾಯಿಗೆ 9 ನಿಂಬೆಹಣ್ಣು ಹರಾಜು, ಏನಿದರ ವಿಶೇಷತೆ ತಿಳಿಯಿರಿ
- Movies 'ಉಳಿದವರು ಕಂಡಂತೆ' ದಶಕದ ಸಂಭ್ರಮ; ಟ್ವೀಟ್ ಮಾಡಿ 'ರಿಚರ್ಡ್ ಆಂಟನಿ' ಬಗ್ಗೆ ಮೌನ ಮುರಿದ ರಕ್ಷಿತ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಡುಗಡೆಗಾಗಿ ಅಂತಿಮ ಹಂತದ ರೋಡ್ ಟೆಸ್ಟಿಂಗ್ ನಡೆಸಿದ ಟಾಟಾ ನೆಕ್ಸಾನ್ ಫೇಸ್ಲಿಫ್ಟ್
ಟಾಟಾ ಸದ್ಯ ಹೊಸ ಕಾರುಗಳ ಮಾರಾಟದಲ್ಲಿ ಮಹತ್ವದ ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಹೊಚ್ಚ ಹೊಸ ಕಾರು ಮಾದರಿಗಳಾದ ಆಲ್ಟ್ರೊಜ್, ಕ್ಯಾಸಿನಿ ಜೊತೆಗೆ ಬಿಎಸ್-6 ಕಾರುಗಳಾದ ಹ್ಯಾರಿಯರ್, ನೆಕ್ಸಾನ್, ಟಿಗೋರ್, ಟಿಯಾಗೋ ಮತ್ತು ಹೆಕ್ಸಾ ಕಾರುಗಳನ್ನು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕಾರು ಮಾದರಿಗಳಿಂತಲೂ ಹೊಸ ವಿನ್ಯಾಸ ಮತ್ತು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಬಿಡುಗೊಳಿಸಲು ಸಜ್ಜಾಗುತ್ತಿದೆ.
ಹೊಸ ಕಾರುಗಳ ಉತ್ಪಾದನೆಗಾಗಿ ಟಾಟಾ ಸಂಸ್ಥೆಯು ಒಮೆಗಾ ಮತ್ತು ಅಲ್ಫಾ ಕಾರು ಉತ್ಪಾದನಾ ಪ್ಲ್ಯಾಟ್ಫಾರ್ಮ್ ಬಳಕೆ ಮಾಡುತ್ತಿದ್ದು, ಈ ಹಿಂದಿಗಿಂತಲೂ ಕಾರು ಉತ್ಪಾದನಾ ತಂತ್ರಜ್ಞಾನ ಬಳಕೆ ಮತ್ತು ವಿನ್ಯಾಸಗಳಲ್ಲಿ ಸಾಕಷ್ಟು ಬದಲಾವಣೆಯಾಗುವ ಮೂಲಕ ಗ್ರಾಹಕರನ್ನು ಆಕರ್ಷಣೆಯಾಗುವಂತೆ ಮಾಡಿವೆ. ಈ ಹಿನ್ನಲೆಯಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳ ಉತ್ಪಾದನೆಗಾಗಿ ಒಮೆಗಾ ಮತ್ತು ಅಲ್ಫಾ ಪ್ಲ್ಯಾಟ್ಫಾರ್ಮ್ ಬಳಕೆ ಮಾಡಲಾಗುತ್ತಿದ್ದು, 2020ರ ಆರಂಭದಲ್ಲಿ ಬಿಡುಗಡೆಯಾಗಲಿರುವ ಹೊಸ ಮತ್ತು ಫೇಸ್ಲಿಫ್ಟ್ ಕಾರುಗಳು ಬಿಎಸ್-6 ವೈಶಿಷ್ಟ್ಯತೆಯೊಂದಿಗೆ ರಸ್ತೆಗಿಳಿಯಲಿವೆ.
ಬಿಡುಗಡೆಗಾಗಿ ಹೊಸ ಕಾರುಗಳು ಸದ್ಯ ಅಂತಿಮ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದ್ದು, 2020ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರಲಿರುವ ಬಿಎಸ್-6 ನಿಯಮದಂತೆ ಹೊಸ ಕಾರುಗಳ ಎಂಜಿನ್ ಮತ್ತು ಸುರಕ್ಷಾ ಸೌಲಭ್ಯವನ್ನ ಉನ್ನತೀಕರಿಸಲಾಗಿದೆ.
ಟಾಟಾ ಸಂಸ್ಥೆಯು ಮುಂಬರುವ ಫೆಬ್ರುವರಿ ಅಂತ್ಯದವರೆಗೂ ಬಿಎಸ್-4 ಕಾರುಗಳನ್ನು ಮಾರಾಟ ಮಾಡಲಿದ್ದು, ತದನಂತರವಷ್ಟೇ ಬಿಎಸ್-6 ವೈಶಿಷ್ಟ್ಯತೆಯೊಂದಿಗೆ ಅಭಿವೃದ್ದಿ ಹೊಂದಿರುವ ಹ್ಯಾರಿಯರ್, ನೆಕ್ಸಾನ್, ಹೆಕ್ಸಾ, ಟಿಗೋರ್ ಮತ್ತು ಟಿಯಾಗೋ ಕಾರುಗಳ ಮಾರಾಟಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದೆ.
ಅದಕ್ಕೂ ಮುನ್ನ ಆಲ್ಟ್ರೊಜ್ ಪ್ರೀಮಿಯಂ ಹ್ಯಾಚ್ಬ್ಯಾಕ್ ಕಾರನ್ನು ಇದೇ ವರ್ಷ ಡಿಸೆಂಬರ್ ಅಂತ್ಯದಲ್ಲಿ ಅನಾವರಣಗೊಳಿಸಿ 2020ರ ಆರಂಭದಲ್ಲಿ ಬಿಡುಗಡೆ ನಿರ್ಧರಿಸಿರುವ ಟಾಟಾ ಸಂಸ್ಥೆಯ 7 ಸೀಟರ್ ಎಸ್ಯುವಿ ಮಾದರಿಯಾದ ಕ್ಯಾಸಿನಿ ಕಾರನ್ನು ಕೂಡಾ 2020ರ ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಎಕ್ಸ್ಪೋದಲ್ಲಿ ಪ್ರದರ್ಶನಗೊಳಿಸಿ ಮೇ ಅಥವಾ ಜೂನ್ ಅವಧಿಯಲ್ಲಿ ಬಿಡುಗಡೆ ಮಾಡಲು ಯೋಜನೆ ರೂಪಿಸಿದೆ.
ಹೀಗಾಗಿ ಮೊದಲ ಹಂತವಾಗಿ 2020ರ ಜನವರಿಯಲ್ಲಿ ಆಲ್ಟ್ರೋಜ್ ಕಾರು ಬಿಡುಗಡೆಯಾಗಲಿದ್ದರೆ ಫೆಬ್ರುವರಿ ಅಥವಾ ಮಾರ್ಚ್ ಅಂತ್ಯಕ್ಕೆ ಬಿಎಸ್-6 ಕಾರುಗಳು ಮತ್ತು ತದನಂತರವಷ್ಟೇ ಜೂನ್ ಆರಂಭದಲ್ಲಿ 7 ಸೀಟರ್ ಕ್ಯಾಸಿನಿ ಎಸ್ಯುವಿ ಕಾರು ಖರೀದಿಗೆ ಲಭ್ಯವಾಗಲಿದೆ.
ಸದ್ಯ ಮಾರುಕಟ್ಟೆಯಲ್ಲಿ 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿರುವ ನೆಕ್ಸಾನ್ ಕಾರು ಫೇಸ್ಲಿಫ್ಟ್ ಆವೃತ್ತಿಯಲ್ಲೂ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಂಜಿನ್ ಆಯ್ಕೆಗಳನ್ನೇ ಉನ್ನತೀಕರಿಸಲಾಗಿದೆ.
ಅದರ ಹೊರತಾಗಿ ಹೊಸ ನೆಕ್ಸಾನ್ ಕಾರಿನಲ್ಲಿ ಈ ಬಾರಿ ಮರುವಿನ್ಯಾಸಗೊಳಿಸಲಾದ ಫ್ರಂಟ್ ಬ್ಯಾನೆಟ್, ಬಂಪರ್ ಡಿಸೈನ್, ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹೊಸ ತಂತ್ರಜ್ಞಾನ ಪ್ರೇರಿತ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸೇರಿದಂತೆ ಕ್ಯಾಬಿನ್ ವಿನ್ಯಾಸದಲ್ಲಿ ಮಹತ್ವದ ಬದಲಾವಣೆ ಪಡೆದುಕೊಂಡಿದ್ದು, ಬಿಎಸ್-6 ವೈಶಿಷ್ಟ್ಯತೆಯಿಂದಾಗಿ ಹೊಸ ಕಾರಿನ ಬೆಲೆಯಲ್ಲಿ ಪ್ರಸ್ತುತ ಮಾರುಕಟ್ಟೆಗಿಂತ ರೂ.30 ಸಾವಿರದಿಂದ ರೂ.1.20 ಲಕ್ಷದ ತನಕ ದುಬಾರಿ ಬೆಲೆ ಪಡೆಯಲಿದೆ.
ಇನ್ನು ಟಾಟಾ ಸಂಸ್ಥೆಯು ನೆಕ್ಸಾನ್ ಫೇಸ್ಲಿಫ್ಟ್ ಜೊತೆಗೆ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಸಹ ಅಭಿವೃದ್ದಿಗೊಳಿಸಿ ಬಿಡುಗಡೆಗಾಗಿ ಸಿದ್ದಪಡಿಸಿದ್ದು, ಹೊಸ ಕಾರು ಅತ್ಯುತ್ತಮ ಬ್ಯಾಟರಿ ಸೌಲಭ್ಯದೊಂದಿಗೆ 300ಕಿ.ಮೀ ಮೈಲೇಜ್ ರೇಂಜ್ ಪಡೆದುಕೊಂಡಿದೆ.
ಮಾಹಿತಿ ಪ್ರಕಾರ ನೆಕ್ಸಾನ್ ಎಲೆಕ್ಟ್ರಿಕ್ ಕೂಡಾ 2020ರ ಆಟೋ ಎಕ್ಸ್ಪೋದಲ್ಲಿ ಪ್ರದರ್ಶನಗೊಂಡ ಕೆಲವು ತಿಂಗಳುಗಳ ಬಳಿಕ ಬಿಡುಗಡೆಯಾಗಲಿದ್ದು, ಕಾರಿನ ಬೆಲೆಯು ರೂ.15 ಲಕ್ಷದಿಂದ ರೂ.17 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.
Image Source: Sarthak Shewale/Facebook