ಹೈಬ್ರಿಡ್ ಎಂಜಿನ್ ಪ್ರೇರಣೆಯೊಂದಿಗೆ ಬಿಡುಗಡೆಯಾಗಲಿದೆಯೆಂತೆ ಟಾಟಾ ನೆಕ್ಸಾನ್?

ನೆಕ್ಸಾನ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯ ಟಾಟಾ ಸಂಸ್ಥೆಗೆ ಈಗಾಗಲೇ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಬೇಡಿಕೆ ಗಿಟ್ಟಿಸಿಕೊಳ್ಳುವ ತವಕದಲ್ಲಿದೆಯ ಯಾಕೆಂದ್ರೆ ಟಾಟಾ ಸಂಸ್ಥೆಯು ಹೊಸ ತಲೆಮಾರಿನ ನೆಕ್ಸಾನ್ ಕಾರುಗಳನ್ನು ಹೈಬ್ರಿಡ್ ಎಂಜಿನ್ ಬಿಡುಗಡೆಗೊಳಿಸುವ ಇರಾದೆಯಲ್ಲಿದೆ ಎನ್ನಲಾಗಿದೆ.

ಹೈಬ್ರಿಡ್ ಎಂಜಿನ್ ಪ್ರೇರಣೆಯೊಂದಿಗೆ ಬಿಡುಗಡೆಯಾಗಲಿದೆಯೆಂತೆ ಟಾಟಾ ನೆಕ್ಸಾನ್?

ಟಾಟಾ ಸಂಸ್ಥೆಯು ಸದ್ಯ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಎಂಜಿನ್ ಪ್ರೇರಿತ ಕಾರುಗಳ ಉತ್ಪಾದನೆ ಮೇಲೆ ಗಮನಹರಿಸಿದ್ದು, 2020ರ ವೇಳೆಗೆ ಒಟ್ಟು 5 ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ. ಜೊತೆಗೆ ಹೈಬ್ರಿಡ್ ಎಂಜಿನ್‌ ಮಾದರಿಯನ್ನು ಸಹ ಸಿದ್ದಗೊಳಿಸುತ್ತಿದ್ದು, ಹೊಸ ಹೈಬ್ರಿಡ್ ಎಂಜಿನ್ ಮಾದರಿಯು ಮುಂಬರುವ ನೆಕ್ಸಾನ್ ಆವೃತ್ತಿಯಲ್ಲಿ ಜೋಡಣೆ ಮಾಡಲಾಗುತ್ತಿದೆ ಎಂಬ ಮಾತು ಕೇಳಿಬರುತ್ತಿವೆ.

ಹೈಬ್ರಿಡ್ ಎಂಜಿನ್ ಪ್ರೇರಣೆಯೊಂದಿಗೆ ಬಿಡುಗಡೆಯಾಗಲಿದೆಯೆಂತೆ ಟಾಟಾ ನೆಕ್ಸಾನ್?

ಆದ್ರೆ ಹೊಸ ತಲೆಮಾರಿನ ನೆಕ್ಸಾನ್ ಕಾರಿನಲ್ಲಿ ಹೈಬ್ರಿಡ್ ಎಂಜಿನ್ ಜೋಡಣೆ ಮಾಡುತ್ತಿರುವ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಡದ ಟಾಟಾ ಸಂಸ್ಥೆಯು ಎಲೆಕ್ಟ್ರಿಕ್ ಕಾರುಗಳ ನಿರ್ಮಾಣದ ಜೊತೆ ಜೊತೆಗೆ ಹೈಬ್ರಿಡ್ ಎಂಜಿನ್ ನಿರ್ಮಾಣಕ್ಕೂ ಕೆಲವು ಆಟೋ ಉತ್ಪಾದನಾ ಸಂಸ್ಥೆಗಳೊಂದಿಗೆ ಕೈಜೋಡಿಸಿರುವುದು ನೆಕ್ಸಾನ್ ಹೈಬ್ರಿಡ್ ಬರವುದು ಖಚಿತ ಎಂದು ಹೇಳಲಾಗುತ್ತಿದೆ.

ಹೈಬ್ರಿಡ್ ಎಂಜಿನ್ ಪ್ರೇರಣೆಯೊಂದಿಗೆ ಬಿಡುಗಡೆಯಾಗಲಿದೆಯೆಂತೆ ಟಾಟಾ ನೆಕ್ಸಾನ್?

ಇದಕ್ಕೆ ಪೂರಕ ಎಂಬಂತೆ ಟಾಟಾ ಸಂಸ್ಥೆಯು ಹೊಸ ತಲೆಮಾರಿನ ನೆಕ್ಸಾನ್ ಕಾರುಗಳನ್ನು ಸ್ಪಾಟ್ ಟೆಸ್ಟಿಂಗ್‌ಗೆ ಸಿದ್ದಗೊಳಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಟುತ್ತಿರುವ ಉತ್ಪಾದನಾ ಆವೃತ್ತಿಯ ಹೊಸ ನೆಕ್ಸಾನ್ ಕಾರಿನ ಚಿತ್ರಗಳು ಇಂತದೊಂದು ಪ್ರಶ್ನೆ ಹುಟ್ಟುಹಾಕಿದೆ.

ಹೈಬ್ರಿಡ್ ಎಂಜಿನ್ ಪ್ರೇರಣೆಯೊಂದಿಗೆ ಬಿಡುಗಡೆಯಾಗಲಿದೆಯೆಂತೆ ಟಾಟಾ ನೆಕ್ಸಾನ್?

ಟಾಟಾ ಕಾರು ಉತ್ಪಾದನಾ ಘಟಕದಿಂದ ಸೋರಿಕೆಯಾಗಿರುವ ಹೊಸ ನೆಕ್ಸಾನ್ ಚಿತ್ರಗಳಲ್ಲಿ ಮಾಹಿತಿ ಪ್ರಕಾರ, ಸಾಮಾನ್ಯ ಕಾರುಗಳಲ್ಲಿರುವ ರೆಡಿಯೇಟರ್ ಮತ್ತು ಹೋಲೊ ಸ್ಪೆಸ್‌ಗಳು ಹೊಸ ಕಾರಿನಲ್ಲಿ ಇಲ್ಲದಿರುವುದರಿಂದ ಇದು ಹೈಬ್ರಿಡ್ ಮಾದರಿ ಇರಬಹುದೆಂದು ಆಟೋ ತಜ್ಞರು ವಿಶ್ಲೇಷಣೆ ಮಾಡುತ್ತಿದ್ದಾರೆ. ಇನ್ನು ಕೆಲವರು ಇದು ಹೈಬ್ರಿಡ್ ಅಲ್ಲ ಎಲೆಕ್ಟ್ರಿಕ್ ಮಾದರಿಯಾಗಿರಲಿದೆ ಎಂಬ ಚರ್ಚೆಗಳು ನಡೆಯುತ್ತಿವೆ.

ಹೈಬ್ರಿಡ್ ಎಂಜಿನ್ ಪ್ರೇರಣೆಯೊಂದಿಗೆ ಬಿಡುಗಡೆಯಾಗಲಿದೆಯೆಂತೆ ಟಾಟಾ ನೆಕ್ಸಾನ್?

ಆದ್ರೆ ಈ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಇಲ್ಲವಾದರೂ, ಮುಂದಿನ ತಲೆಮಾರಿನ ನೆಕ್ಸಾನ್ ಕಾರು ಮಾತ್ರ ಹೈಬ್ರಿಡ್ ಇಲ್ಲವೇ ಎಲೆಕ್ಟ್ರಿಕ್ ಮಾದರಿಯಲ್ಲಿ ಬಿಡುಗಡೆಯಾಗುವುದು ಖಚಿತವಾಗಿದ್ದು, 2020ರ ಫೆಬ್ರುವರಿಯಲ್ಲಿ ನಡೆಯಲಿರುವ 2020 ದೆಹಲಿ ಆಟೋ ಮೇಳದಲ್ಲಿ ಟಾಟಾದ ಬಹುತೇಕ ಎಲೆಕ್ಟ್ರಿಕ್ ಕಾರುಗಳು ಪ್ರದರ್ಶನಗೊಳ್ಳಲಿವೆ.

ಹೈಬ್ರಿಡ್ ಎಂಜಿನ್ ಪ್ರೇರಣೆಯೊಂದಿಗೆ ಬಿಡುಗಡೆಯಾಗಲಿದೆಯೆಂತೆ ಟಾಟಾ ನೆಕ್ಸಾನ್?

ಇನ್ನು ಟಾಟಾ ಸಂಸ್ಥೆಯು 2020ರ ಒಳಗಾಗಿ ಒಟ್ಟು 5 ಎಲೆಕ್ಟ್ರಿಕ್ ಕಾರುಗಳನ್ನು ಹೊರತರುವ ಯೋಜನೆಯಲ್ಲಿದ್ದು, ಟಿಗೋರ್ ಇವಿ, ಟಿಯಾಗೋ ಇವಿ, ಹೆಚ್2ಎಕ್ಸ್ ಇವಿ, ಆಲ್‌ಟ್ರೋಜ್ ಇವಿ ಮತ್ತು ನೆಕ್ಸಾನ್ ಇವಿ ಕಾರುಗಳನ್ನು ಹೊರತರುವ ಯೋಜನೆಯಲ್ಲಿದೆ.

MOST READ: ಮೋಸ ಮಾಡಿದ ಮರ್ಸಿಡಿಸ್ ಡೀಲರ್ಸ್‌ಗೆ ಸರಿಯಾಗಿಯೇ ಬುದ್ದಿಕಲಿಸಿದ ಮಹಿಳೆ

ಹೈಬ್ರಿಡ್ ಎಂಜಿನ್ ಪ್ರೇರಣೆಯೊಂದಿಗೆ ಬಿಡುಗಡೆಯಾಗಲಿದೆಯೆಂತೆ ಟಾಟಾ ನೆಕ್ಸಾನ್?

ಈ ಹಿನ್ನೆಲೆಯಲ್ಲಿ ಕಳೆದ ತಿಂಗಳು ನಡೆದಿದ್ದ ಜಿನೆವಾ ಆಟೋ ಮೇಳದಲ್ಲಿ ಹೆಚ್2ಎಕ್ಸ್ ಇವಿ ಮತ್ತು ಆಲ್‌ಟ್ರೋಜ್ ಇವಿ ಪ್ರದರ್ಶನಗೊಳಿಸಿದ್ದ ಟಾಟಾ ಸಂಸ್ಥೆಯು ಒಟ್ಟು 5 ಎಲೆಕ್ಟ್ರಿಕ್ ಕಾರು ಮಾದರಿಗಳ ಜೊತೆಗೆ ಮುಂದಿನ ಕೆಲವೇ ದಿನಗಳಲ್ಲಿ ಹೈಬ್ರಿಡ್ ಎಂಜಿನ್ ಮಾದರಿಗಳನ್ನು ಬಿಡುಗಡೆ ಮಾಡುವ ವಿಶ್ವಾಸ ವ್ಯಕ್ತಪಡಿಸಿತ್ತು.

ಹೈಬ್ರಿಡ್ ಎಂಜಿನ್ ಪ್ರೇರಣೆಯೊಂದಿಗೆ ಬಿಡುಗಡೆಯಾಗಲಿದೆಯೆಂತೆ ಟಾಟಾ ನೆಕ್ಸಾನ್?

ಜೊತೆಗೆ ಬಿಡುಗಡೆಯಾಗಲಿರುವ ಎಲೆಕ್ಟ್ರಿಕ್ ಕಾರುಗಳು ರೂ.10 ಲಕ್ಷದಿಂದ ರೂ.15 ಲಕ್ಷದೊಳಗೆ ಬಿಡುಗಡೆ ಮಾಡುವ ಸುಳಿವು ನೀಡಿರುವ ಟಾಟಾ ಸಂಸ್ಥೆಯು ಅತ್ಯುತ್ತಮ ಮೈಲೇಜ್ ರೇಂಜ್ ಒದಗಿಸುವ ಸಂಬಂಧ ಹೊಸ ಹೊಸ ಪ್ರಯೋಗಗಳನ್ನು ನಡೆಸುತ್ತಿದೆ.

MOST READ: ಇನ್ಮುಂದೆ ಮಾಡಿಫೈ ವಾಹನಗಳ ಮಾರಾಟ ಮತ್ತು ಖರೀದಿ ಸಾಧ್ಯವೇ ಇಲ್ಲ..!

ಹೈಬ್ರಿಡ್ ಎಂಜಿನ್ ಪ್ರೇರಣೆಯೊಂದಿಗೆ ಬಿಡುಗಡೆಯಾಗಲಿದೆಯೆಂತೆ ಟಾಟಾ ನೆಕ್ಸಾನ್?

ಇದಕ್ಕಾಗಿಯೇ ಯುರೋಪಿನ್ ಟೆಕ್ನಿಕಲ್ ಸೆಂಟರ್‌ನಲ್ಲಿ ಹೊಸ ಹೊಸ ಪ್ರಯೋಗಳನ್ನು ನಡೆಸಿರುವ ಟಾಟಾ ಸಂಸ್ಥೆಯು ಎಲೆಕ್ಟ್ರಿಕ್ ಎಂಜಿನ್ ಜೊತೆಗೆ ಹೈಬ್ರಿಡ್ ಕಾರು ಉತ್ಪನ್ನಗಳ ಮೇಲೂ ಹೆಚ್ಚಿನ ಒತ್ತು ನೀಡುತ್ತಿದ್ದು, ಹೊಸ ಯೋಜನೆ ಬಗೆಗೆ ಮುಂದಿನ ಕೆಲವೇ ದಿನಗಳಲ್ಲಿ ಮತ್ತಷ್ಟು ಮಾಹಿತಿ ದೊರೆಯಲಿದೆ.

Most Read Articles

Kannada
English summary
Tata Nexon Hybrid Or Tata Nexon EV? — Oh Blur! We’re confused!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X