ನೆಕ್ಸಾನ್ ಸುರಕ್ಷತೆ ಬಗ್ಗೆ ಹೊಸ ಜಾಹೀರಾತು ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್..!

ಟಾಟಾ ನೆಕ್ಸಾನ್ ತನ್ನ ಸೆಗ್‍‍ಮೆಂಟಿನಲ್ಲಿರುವ ಅತ್ಯಂತ ಜನಪ್ರಿಯವಾದ ಸಬ್ 4 ಮೀಟರ್ ಕಾಂಪ್ಯಾಕ್ಟ್ ಎಸ್‍‍ಯುವಿಗಳಲ್ಲಿ ಒಂದಾಗಿದೆ. ಟಾಟಾ ನೆಕ್ಸಾನ್ ಗ್ಲೋಬಲ್ ಎನ್‌ಸಿಎಪಿ ಏಜೆನ್ಸಿಯಿಂದ 5 ಸ್ಟಾರ್ ಕ್ರ್ಯಾಶ್ ಟೆಸ್ಟ್ ರೇಟಿಂಗ್ ಪಡೆದ ಭಾರತದ ಮೊದಲ ಹಾಗೂ ಏಕೈಕ ಕಾರ್ ಆಗಿದೆ.

ನೆಕ್ಸಾನ್ ಸುರಕ್ಷತೆ ಬಗ್ಗೆ ಹೊಸ ಜಾಹೀರಾತು ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್..!

ಈ 5 ಸ್ಟಾರ್ ರೇಟಿಂಗ್ ಪಡೆದಾಗಿನಿಂದ ಟಾಟಾ ಮೋಟಾರ್ಸ್, ಕಾರಿನಲ್ಲಿ ಸುರಕ್ಷತಾ ಫೀಚರ್‍‍ಗಳನ್ನು ಹೊಂದಿರುವುದು ಎಷ್ಟು ಮುಖ್ಯ ಎಂದು ಹೇಳಲು ಹೊರಟಿದೆ. ಇದಕ್ಕಾಗಿ ಟಾಟಾ ಮೋಟಾರ್ಸ್ ಹಲವು ಜಾಹೀರಾತುಗಳನ್ನು ತಯಾರಿಸುವ ಮೂಲಕ ಸುರಕ್ಷತೆಯ ಸಂದೇಶವನ್ನು ತಲುಪಿಸಲು ಪ್ರಯತ್ನಿಸುತ್ತಿದೆ.

ನೆಕ್ಸಾನ್ ಸುರಕ್ಷತೆ ಬಗ್ಗೆ ಹೊಸ ಜಾಹೀರಾತು ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್..!

ಅಪಘಾತಗಳು, ಅವು ಸಂಭವಿಸುತ್ತಲೇ ಇರುತ್ತವೆ ಎಂದು ಹೇಳುವಂತಹ ಜಾಹೀರಾತೊಂದು ಇಲ್ಲಿದೆ. ಸುರಕ್ಷತೆಯ ಬಗ್ಗೆ ಹೇಳುವ ಟಾಟಾ ಮೋಟಾರ್ಸ್ ಕಂಪನಿಯ ನಾಲ್ಕನೇ ಜಾಹೀರಾತು ಇದಾಗಿದೆ. ಕೆಲಸದ ನಂತರ ಮನೆಗೆ ಬರುವ ಗಂಡನಿಗೆ ಬಾಗಿಲು ತೆರೆಯುವ ಮಹಿಳೆಯೊಂದಿಗೆ ಇತ್ತೀಚಿನ ಜಾಹೀರಾತು ಪ್ರಾರಂಭವಾಗುತ್ತದೆ.

ನೆಕ್ಸಾನ್ ಸುರಕ್ಷತೆ ಬಗ್ಗೆ ಹೊಸ ಜಾಹೀರಾತು ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್..!

ನಂತರ ಅವಳು ತನ್ನ ಹೆತ್ತವರ ಬಗ್ಗೆ ಮಾತನಾಡಲು ಪ್ರಾರಂಭಿಸುತ್ತಾಳೆ. ಗಂಡನು ಆಕೆಯ ತಂದೆ ಹಾಗೂ ತಾಯಿಯ ಬಗ್ಗೆ ಹೇಳಲು ಶುರು ಮಾಡುತ್ತಾನೆ. ಬೆಳಗಿನ ಪೂಜೆ ಹಾಗೂ ನಿದ್ದೆ ಮಾಡುವಾಗ ಗೊರಕೆ ಶಬ್ದ ಮುಂತಾದ ವಿಷಯಗಳ ಬಗ್ಗೆ ಹೇಳುತ್ತಾನೆ.

ನೆಕ್ಸಾನ್ ಸುರಕ್ಷತೆ ಬಗ್ಗೆ ಹೊಸ ಜಾಹೀರಾತು ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್..!

ಅಷ್ಟರಲ್ಲಿ ಹೆಂಡತಿಯು ತನ್ನ ತಂದೆ ತಾಯಿಯರು ಈಗಾಗಲೇ ಇಲ್ಲಿದ್ದಾರೆ ಎಂದು ಹೇಳುತ್ತಾಳೆ. ಅವನು ಸುತ್ತಲೂ ನೋಡಿ, ಆಕೆಯ ಪೋಷಕರು ಅವರ ಸಂಭಾಷಣೆಯನ್ನು ಕೇಳುತ್ತಿರುವುದನ್ನು ಕಾಣುತ್ತಾನೆ. ಅಲ್ಲಿರುವವರಿಗೆ ಇರುಸು ಮುರಿಸು ಉಂಟಾಗುತ್ತದೆ. ತಕ್ಷಣ ಅಪಘಾತ, ಅವು ಸಂಭವಿಸುತ್ತವೆ ಎಂಬ ಶೀರ್ಷಿಕೆ ಸ್ಕ್ರೀನ್ ಮೇಲೆ ಬರುತ್ತದೆ.

ನೆಕ್ಸಾನ್ ಸುರಕ್ಷತೆ ಬಗ್ಗೆ ಹೊಸ ಜಾಹೀರಾತು ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್..!

ಯಾವುದೇ ಸಮಯದಲ್ಲಿ ಅಪಘಾತಗಳು ಸಂಭವಿಸಬಹುದು. ಅದಕ್ಕಾಗಿ ವಾಹನದಲ್ಲಿ ಪ್ರಯಾಣಿಕರನ್ನು ಉಳಿಸಲು ಸುರಕ್ಷಿತ ಫೀಚರ್ ಇರಬೇಕು ಎಂಬುದನ್ನು ಟಾಟಾ ಮೋಟಾರ್ಸ್ ಈ ಜಾಹೀರಾತಿನ ಮೂಲಕ ತೋರಿಸಲು ಮುಂದಾಗಿದೆ.

ನೆಕ್ಸಾನ್ ಸುರಕ್ಷತೆ ಬಗ್ಗೆ ಹೊಸ ಜಾಹೀರಾತು ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್..!

ಟಾಟಾ ನೆಕ್ಸಾನ್ ತನ್ನ ಸೆಗ್‍‍ಮೆಂಟಿನಲ್ಲಿ ಬಹಳಷ್ಟು ಜನಪ್ರಿಯವಾಗಿದೆ. ಈ ಸೆಗ್‍‍ಮೆಂಟಿನಲ್ಲಿ ಮಾರುತಿ ಸುಜುಕಿ ವಿಟಾರಾ ಬ್ರಿಝಾ, ಮಹೀಂದ್ರಾ ಎಕ್ಸ್‌ಯುವಿ 300, ಫೋರ್ಡ್ ಇಕೋಸ್ಪೋರ್ಟ್, ಹ್ಯುಂಡೈ ವೆನ್ಯೂಗಳಿಗೆ ಪೈಪೋಟಿ ನೀಡುತ್ತದೆ.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ನೆಕ್ಸಾನ್ ಸುರಕ್ಷತೆ ಬಗ್ಗೆ ಹೊಸ ಜಾಹೀರಾತು ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್..!

ಇತ್ತೀಚೆಗೆ ಬಿಡುಗಡೆಯಾದ ವೆನ್ಯೂ ಕಾರಿನ ಮಾರಾಟವು ನೆಕ್ಸಾನ್ ಕಾರಿನ ಮಾರಾಟದ ಮೇಲೆ ಪರಿಣಾಮ ಬೀರಿದೆ. ನೆಕ್ಸಾನ್ ಮಾತ್ರವಲ್ಲದೇ, ಸತತವಾಗಿ ಮೊದಲ ಸ್ಥಾನದಲ್ಲಿದ್ದ ಮಾರುತಿ ಬ್ರಿಝಾ ಕಾರಿನ ಮಾರಾಟದ ಮೇಲೂ ವೆನ್ಯೂವಿನ ಮಾರಾಟವು ಪರಿಣಾಮ ಬೀರಿದೆ. ಈ ಪರಿಸ್ಥಿತಿಯನ್ನು ಎದುರಿಸಲು ಟಾಟಾ ಮೋಟಾರ್ಸ್‌ ತಯಾರಾಗಿದೆ.

MOST READ: ಖಾಸಗಿ ವಿಮಾನ ಹೊಂದಿರುವ ಉದ್ಯಮಿಗಳಿವರು..!

ನೆಕ್ಸಾನ್ ಸುರಕ್ಷತೆ ಬಗ್ಗೆ ಹೊಸ ಜಾಹೀರಾತು ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್..!

ಟಾಟಾ ಮೋಟಾರ್ಸ್ ಸದ್ಯಕ್ಕೆ ಟಾಟಾ ನೆಕ್ಸಾನ್‌ನ ಫೇಸ್ ಲಿಫ್ಟ್‌ ಆವೃತ್ತಿಯನ್ನು ಅಭಿವೃದ್ಧಿ ಪಡಿಸುತ್ತಿದೆ. ಈ ಫೇಸ್‍‍ಲಿಫ್ಟ್ ಕಾರ್ ಅನ್ನು ದೆಹಲಿಯಲ್ಲಿ ನಡೆಯಲಿರುವ ಮುಂದಿನ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸುವ ಸಾಧ್ಯತೆಗಳಿವೆ.

MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಟಾಟಾ ಮೋಟಾರ್ಸ್, ಟಾಟಾ ನೆಕ್ಸಾನ್ ಕಾರಿನ ಎಲೆಕ್ಟ್ರಿಕ್ ಆವೃತ್ತಿಯನ್ನು ಸಹ ಅಭಿವೃದ್ಧಿ ಪಡಿಸುತ್ತಿದೆ. ಕಠಿಣ ರಸ್ತೆಗಳಲ್ಲಿ ಹಾಗೂ ಹೆಚ್ಚು ಎತ್ತರವಿರುವ ಪ್ರದೇಶಗಳಲ್ಲಿ ಈ ಕಾರ್ ಅನ್ನು ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಟಾಟಾ ಮೋಟಾರ್ಸ್, ದೆಹಲಿಯಲ್ಲಿ ನಡೆಯಲಿರುವ ಆಟೋ ಎಕ್ಸ್‌ಪೋದಲ್ಲಿ ನೆಕ್ಸಾನ್ ಎಲೆಕ್ಟ್ರಿಕ್ ವಾಹನವನ್ನೂ ಸಹ ಪ್ರದರ್ಶಿಸುವ ನಿರೀಕ್ಷೆಗಳಿವೆ.

ನೆಕ್ಸಾನ್ ಸುರಕ್ಷತೆ ಬಗ್ಗೆ ಹೊಸ ಜಾಹೀರಾತು ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್..!

ನೆಕ್ಸಾನ್ ಕಾರ್ ಅನ್ನು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‍‍ಗಳಲ್ಲಿ ಮಾರಾಟ ಮಾಡಲಾಗುತ್ತದೆ. ಪೆಟ್ರೋಲ್ ಎಂಜಿನ್ 1.2 ಲೀಟರಿನ ಟರ್ಬೋಚಾರ್ಜ್ಡ್ ಯುನಿಟ್ ಆಗಿದ್ದು, 108 ಬಿ‍‍ಹೆಚ್‍‍ಪಿ ಪವರ್ ಹಾಗೂ 170 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ನೆಕ್ಸಾನ್ ಸುರಕ್ಷತೆ ಬಗ್ಗೆ ಹೊಸ ಜಾಹೀರಾತು ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್..!

ಡೀಸೆಲ್ ಮಾದರಿಯಲ್ಲಿ 1.5 ಲೀಟರಿನ ರೆವೊಟೊರ್ಕ್ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 108 ಬಿ‍‍ಹೆಚ್‍‍ಪಿ ಪವರ್ ಹಾಗೂ 260 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‍‍ಗಳೆರಡೂ ಎಎಂಟಿ ಗೇರ್ ಬಾಕ್ಸ್ ಅನ್ನು ಹೆಚ್ಚುವರಿ ಆಯ್ಕೆಯಾಗಿ ಪಡೆಯುತ್ತವೆ.

Most Read Articles

Kannada
English summary
Tata nexon interesting new ad featuring five star safety rating - Read in Kannada
Story first published: Saturday, November 9, 2019, 18:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X