ಪಬ್ ಜಿ ಸ್ಟೈಲ್‌ನಲ್ಲಿ ಮಿಂಚಿದ ಮಾಡಿಫೈ ಟಾಟಾ ನೆಕ್ಸಾನ್

ಆನ್‌ಲೈನ್ ಗೇಮ್ ಜಗತ್ತಿನಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಪಬ್ ಜಿ ಆಟಕ್ಕೆ ಅಡಿಕ್ಟ್ ಆಗದ ಯುವಕರು ತುಂಬಾ ವಿರಳ ಅಂದ್ರೆ ತಪ್ಪಾಗುವುದಿಲ್ಲ. ಯಾಕೆಂದ್ರೆ ಭಾರತದ ಮೋಸ್ಟ್‌ ಪಾಪ್ಯುಲರ್‌ ಗೇಮ್‌ ಎಂದೇ ಖ್ಯಾತಿ, ಅಪಖ್ಯಾತಿ ಗುರಿಯಾಗಿರುವ ಪಬ್ ಜಿ ಚಟ ಇಂದು ಬಹುತೇಕ ಯುವಕರ ಲೈಫ್‌ಸ್ಟೈಲ್ ಆಗಿ ಮಾರ್ಪಾಡುತ್ತಿರುವುದಕ್ಕೆ ಈ ಮಾಡಿಫೈ ಕಾರಿನ ಸ್ಟೋರಿಯೇ ಸ್ಪಷ್ಟ ನಿದರ್ಶನ.

ಪಬ್ ಜಿ ಸ್ಟೈಲ್‌ನಲ್ಲಿ ಮಿಂಚಿದ ಮಾಡಿಫೈ ಟಾಟಾ ನೆಕ್ಸಾನ್

ಬಹುತೇಕ ವಾಹನ ಮಾಲೀಕರು ಮಾಡಿಫೈಗೆ ಹೆಚ್ಚಿನ ಆಸಕ್ತಿ ತೊರುತ್ತಿದ್ದು, ಸಾವಿರಾರು ರೂಪಾಯಿ ಖರ್ಚು ಮಾಡಿ ವಾಹನದ ಮೂಲ ವಿನ್ಯಾಸವನ್ನೇ ಬದಲಿಸುವುದು ಇದೀಗ ಸಾಕಷ್ಟು ಟ್ರೆಂಡ್ ಆಗುತ್ತಿದೆ. ಹೀಗೆ ಇಲ್ಲೊಬ್ಬ ಟಾಟಾ ನೆಕ್ಸಾನ್ ಕಾರು ಮಾಲೀಕ ಕೂಡಾ ತನ್ನ ಕಾರನ್ನು ಪಬ್ ಜಿ ಸ್ಟೈಲ್‌ನಲ್ಲಿ ಮಾಡಿಫೈ ಮಾಡಿಸಿಕೊಳ್ಳುವ ಮೂಲಕ ಹೊಸ ಟ್ರೆಂಡ್ ಹುಟ್ಟುಹಾಕಿದ್ದಾರೆ.

ಪಬ್ ಜಿ ಸ್ಟೈಲ್‌ನಲ್ಲಿ ಮಿಂಚಿದ ಮಾಡಿಫೈ ಟಾಟಾ ನೆಕ್ಸಾನ್

ಹೌದು, ಮುಂಬೈ ಮೂಲದ ಟಾಟಾ ನೆಕ್ಸಾನ್ ಕಾರು ಮಾಲೀಕನೊಬ್ಬ ತನ್ನ ನೆಚ್ಚಿನ ಆನ್‌ಲೈನ್ ಗೇಮ್ ಪಬ್ ಜಿ ಯಲ್ಲಿನ ಪಾತ್ರಗಳಿಗೆ ಅನುಗುಣವಾಗಿ ಕಾರಿನ ಹೊರ ಮತ್ತು ಒಳಭಾಗದಲ್ಲಿ ಮಾಡಿಫೈ ಮಾಡಿಸಿದ್ದು, ಇದಕ್ಕಾಗಿ ಸಾವಿರಾರು ರೂಪಾಯಿ ಹಣ ಖರ್ಚು ಮಾಡಿದ್ದಾನೆ.

ಪಬ್ ಜಿ ಸ್ಟೈಲ್‌ನಲ್ಲಿ ಮಿಂಚಿದ ಮಾಡಿಫೈ ಟಾಟಾ ನೆಕ್ಸಾನ್

ಪಬ್ ಜಿ ಆಟದಲ್ಲಿ ಅತಿ ಹೆಚ್ಚು ಬಳಕೆಯಾಗುವ ಕೆಲವು ಇನ್‌ಸ್ಟ್ರುಮೆಂಟ್‌ಗಳನ್ನೇ ಕಾರಿನಲ್ಲಿ ಅಲ್ಲಲ್ಲಿ ಜೋಡಿಸಲಾಗಿದ್ದು, ಕಾರಿನ ಹೊರಭಾಗದಲ್ಲಿ ಅಂಟಿಸಲಾಗಿರುವ ಸ್ಟಿಕರ್ಸ್‌ಗಳು ಪಬ್ ಜಿ ಆಟದ ಪ್ರಮುಖ ಪಾತ್ರಗಳನ್ನು ನೆನಪಿಸುತ್ತವೆ.

ಪಬ್ ಜಿ ಸ್ಟೈಲ್‌ನಲ್ಲಿ ಮಿಂಚಿದ ಮಾಡಿಫೈ ಟಾಟಾ ನೆಕ್ಸಾನ್

ಮಾಹಿತಿಗಳ ಪ್ರಕಾರ, ಪಬ್ ಜಿ ಇನ್‌ಸ್ಟ್ರುಮೆಂಟ್‌ಗಳನ್ನು ಜೋಡಿಸಲು ರೂ. 4,500, ಪಬ್ ಜಿ ಸ್ಟಿಕರ್ಸ್‌ಗಳಿಗೆ ರೂ.1,800 ಮತ್ತು ರೆಡ್ ರಿನೊ ಕಿಟ್ ಬೇಕಿದ್ದಲ್ಲಿ ರೂ. 35,000 ಪಾವತಿಸಬೇಕಿದ್ದು, ಗ್ರಾಹಕರ ಬೇಡಿಕೆಯೆಂತೆ ಕೆಲವು ಮಾಡಿಫೈ ಸಂಸ್ಥೆಗಳು ಮತ್ತಷ್ಟು ಕಲರ್‌ಪುಲ್‌ಗಾಗಿ ಮಾಡಿಫಿಕೆಶನ್ ಮಾಡಿ ಪಬ್ ಜಿ ಪ್ರಿಯರನ್ನು ಸೆಳೆಯುತ್ತಿವೆ. ಆದ್ರೆ ಇದು ಸಂಚಾರಿ ನಿಯಮಗಳಿಗೆ ವಿರುದ್ದವಾಗಿದ್ದರೂ ಕೆಲವು ಕಾರು ಮಾಲೀಕರು ಪಬ್ ಜಿ ಸ್ಟೈಲ್ ಮಾಡಿಫೈಗಾಗಿ ಮುಗಿಬಿದ್ದಿದ್ದು, ಇಷ್ಟು ದಿನ ಮೊಬೈಲ್‌ಗೆ ಮಾತ್ರ ಸೀಮಿತವಾಗಿ ಪಬ್ ಜಿ ಚಟ ಇದೀಗ ಆಟೋ ಮಾಡಿಫೈ ಉದ್ಯಮಕ್ಕೂ ಕಾಲಿಟ್ಟಿರುವುದು ಇನ್ಯಾವ ಅನಾಹುತಗಳಿಗೆ ಎಡೆಮಾಡುತ್ತೊ ಗೊತ್ತಿಲ್ಲ.

ಇನ್ನು ಮಾಡಿಫೈಗೊಂಡಿರುವ ಟಾಟಾ ನೆಕ್ಸಾನ್ ಕಾರು ಸದ್ಯ ಮಾರುಕಟ್ಟೆಯಲ್ಲಿ ಯುವ ಗ್ರಾಹಕರ ನೆಚ್ಚಿನ ಕಾರು ಮಾದರಿಯಾಗಿ ಹೊರಹೊಮ್ಮುತ್ತಿದ್ದು, ಸುರಕ್ಷಾ ವಿಚಾರವಾಗಿ ನೀಡಲಾಗುವ ರೇಟಿಂಗ್‌ನಲ್ಲಿ ಐದಕ್ಕೆ ಐದು ಅಂಕಗಳನ್ನು ಗಿಟ್ಟಿಸಿಕೊಳ್ಳುವ ಮೂಲಕ ಅಗ್ಗದ ಬೆಲೆಯ ಸೆಫ್ಟಿ ಕಾರು ಮಾದರಿಯಾಗಿ ಜನಪ್ರಿಯತೆ ಗಳಿಸುತ್ತಿದೆ.

ಪಬ್ ಜಿ ಸ್ಟೈಲ್‌ನಲ್ಲಿ ಮಿಂಚಿದ ಮಾಡಿಫೈ ಟಾಟಾ ನೆಕ್ಸಾನ್

ಇದಕ್ಕೆ ಸಾಕ್ಷಿ ಎಂಬಂತೆ, 2017ರ ಸೆಪ್ಟೆಂಬರ್ ಅವಧಿಯಲ್ಲಿ ಪ್ರಥಮ ಬಾರಿಗೆ ಬಿಡುಗಡೆಯಾದಾಗ ನೆಕ್ಸಾನ್ ಕಾರಿಗೆ ಇದ್ದ ಬೇಡಿಕೆ ಪ್ರಮಾಣಕ್ಕಿಂತ 2018ರ ಡಿಸೆಂಬರ್ ಅವಧಿಯಲ್ಲಿ ಘೋಷಣೆಯಾದ 5 ಸ್ಟಾರ್ ರೇಟಿಂಗ್ ನಂತರದ ನೆಕ್ಸಾನ್ ಕಾರು ಮಾರಾಟ ಪ್ರಮಾಣದಲ್ಲಿ ಶೇ.20ರಷ್ಟು ಏರಿಕೆಯಾಗಿದ್ದು, ರೇಟಿಂಗ್ ಸಿಗುವುದಕ್ಕೂ ಮುನ್ನ ತಿಂಗಳಿಗೆ 3 ರಿಂದ 4 ಸಾವಿರ ಕಾರು ಮಾರಾಟವಾಗಿದ್ದರೆ ರೇಟಿಂಗ್ ನಂತರ ತಿಂಗಳಿಗೆ ಸರಾಸರಿಯಾಗಿ 5 ಸಾವಿರಕ್ಕಿಂತೂ ಹೆಚ್ಚು ಕಾರುಗಳು ಮಾರಾಟವಾಗುತ್ತಿವೆ.

ಪಬ್ ಜಿ ಸ್ಟೈಲ್‌ನಲ್ಲಿ ಮಿಂಚಿದ ಮಾಡಿಫೈ ಟಾಟಾ ನೆಕ್ಸಾನ್

ಇದು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ ಹೆಚ್ಚಿನ ಒತ್ತು ನೀಡುತ್ತಿರುವ ಟಾಟಾ ಸಂಸ್ಥೆಯು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ದೇಶಿಯವಾಗಿ ತಯಾರಿಯಾದ ಅಗ್ಗದ ಬೆಲೆಯ ಕಾರುಗಳಲ್ಲೂ 5 ಸ್ಟಾರ್ ರೇಟಿಂಗ್ ಒದಗಿಸುತ್ತಿರುವ ಏಕೈಕ ಆಟೋ ಉತ್ಪಾದನಾ ಸಂಸ್ಥೆಯಾಗಿ ಟಾಟಾ ಮುನ್ನುಗ್ಗುತ್ತಿದೆ.

MOST READ: ಇನ್ಮುಂದೆ ಮಾಡಿಫೈ ವಾಹನಗಳ ಮಾರಾಟ ಮತ್ತು ಖರೀದಿ ಸಾಧ್ಯವೇ ಇಲ್ಲ..!

ಪಬ್ ಜಿ ಸ್ಟೈಲ್‌ನಲ್ಲಿ ಮಿಂಚಿದ ಮಾಡಿಫೈ ಟಾಟಾ ನೆಕ್ಸಾನ್

#SAFERCARSFORINDIA ಅಭಿಯಾನದಡಿ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಹೊಸ ಕಾರುಗಳ ಸುರಕ್ಷೆ ಕುರಿತಂತೆ ಕ್ರ್ಯಾಶ್ ಟೆಸ್ಟಿಂಗ್‌ಗಳನ್ನು ಹಮ್ಮಿಕೊಂಡಿರುವ ಗ್ಲೋಬಲ್ ಎನ್‌ಸಿಎಪಿ ಸಂಸ್ಥೆಯು ಜನಪ್ರಿಯ ಸಂಸ್ಥೆಯ ಕಾರುಗಳ ಅಸಲಿಯತ್ತು ಬಯಲು ಮಾಡುತ್ತಿದೆ. ಪ್ರತಿ ಹೊಸ ಕಾರು ಮಾದರಿಗಳಿಗೂ ಸುರಕ್ಷೆ ವಿಚಾರವಾಗಿ ಜಾಗತಿಕ ಪ್ರಮಾಣ ಪತ್ರದ ಅವಶ್ಯಕತೆಯಿದ್ದು, ಟಾಟಾ ನೆಕ್ಸಾನ್ ಕಾರು ಪಡೆದುಕೊಂಡಿರುವ ಉತ್ತಮ ರೇಟಿಂಗ್‌ನಿಂದಾಗಿ ಸುರಕ್ಷತೆಯಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂಬುವುದು ಖಾತ್ರಿಯಾಗಿದೆ.

Most Read Articles

Kannada
English summary
Pubg Modified Tata Nexon: Read More in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X