ಗ್ರಾಹಕರ ಬೇಡಿಕೆಯೆಂತೆ ಹೊಸ ಸೌಲಭ್ಯಗಳನ್ನು ಪಡೆದುಕೊಂಡ ಟಾಟಾ ನೆಕ್ಸಾನ್

ಟಾಟಾ ಮೋಟಾರ್ಸ್ ಸಂಸ್ಥೆಯು ತನ್ನ ಜನಪ್ರಿಯ ಕಂಪ್ಯಾಕ್ಟ್ ಎಸ್‌ಯುವಿ ಆವೃತ್ತಿಯಾದ ನೆಕ್ಸಾನ್ ಕಾರಿನ ತಾಂತ್ರಿಕ ಸೌಲಭ್ಯಗಳಲ್ಲಿ ಕೆಲವು ಬದಲಾವಣೆಗಳನ್ನು ತಂದಿದ್ದು, ಪ್ರಸ್ತುತ ಮಾರುಕಟ್ಟೆಯ ಗ್ರಾಹಕರ ಬೇಡಿಕೆಯೆಂತೆ ಕೆಲವು ಹೊಸ ತಾಂತ್ರಿಕ ಸೌಲಭ್ಯಗಳನ್ನು ಉನ್ನತಿಕರಿಸಿದೆ.

ಗ್ರಾಹಕರ ಬೇಡಿಕೆಯೆಂತೆ ಹೊಸ ಸೌಲಭ್ಯಗಳನ್ನು ಪಡೆದುಕೊಂಡ ಟಾಟಾ ನೆಕ್ಸಾನ್

ಕಳೆದ ವಾರವಷ್ಟೇ ಕಾರುಗಳ ಬೆಲೆಯಲ್ಲಿ ಏರಿಕೆ ಮಾಡಿರುವ ಟಾಟಾ ಸಂಸ್ಥೆಯು ಇದೀಗ ನೆಕ್ಸಾನ್‌ ಕಾರಿನ ಕೆಲವು ತಾಂತ್ರಿಕ ಅಂಶಗಳನ್ನು ಉನ್ನತಿಕರಣಗೊಳಿಸಿದ್ದು ಈ ಹಿಂದೆ ನೀಡಲಾಗಿದ್ದ ತಾಂತ್ರಿಕ ಅಂಶಗಳಲ್ಲೇ ತುಸು ಬದಲಾವಣೆ ಮಾಡಿ ಮಾರುಕಟ್ಟೆಗೆ ಪರಿಚಯಿಸಿದೆ. ಗ್ರಾಹಕರ ಬಹುದಿನಗಳ ಬೇಡಿಕೆಯೆಂತೆ ನೆಕ್ಸಾನ್ ಆವೃತ್ತಿಯ ತಾಂತ್ರಿಕ ಅಂಶಗಳನ್ನು ಸುಧಾರಿತ ತಂತ್ರಜ್ಞಾನದೊಂದಿಗೆ ಪರಿಚಯಿಸಲಾಗಿದ್ದು, ಹೊಸ ಬದಲಾವಣೆಗಾಗಿ ಯಾವುದೇ ಹೆಚ್ಚುವರಿ ಮೊತ್ತವನ್ನು ವಿಧಿಸಿಲ್ಲ.

ಗ್ರಾಹಕರ ಬೇಡಿಕೆಯೆಂತೆ ಹೊಸ ಸೌಲಭ್ಯಗಳನ್ನು ಪಡೆದುಕೊಂಡ ಟಾಟಾ ನೆಕ್ಸಾನ್

ಮಾಹಿತಿಗಳ ಪ್ರಕಾರ, ಟಾಟಾ ನೆಕ್ಸಾನ್ ಕಂಪ್ಯಾಕ್ಟ್ ಎಸ್‌ಯುವಿ ಕಾರಿನಲ್ಲಿ ಹೆಚ್ಚುವರಿಯಾಗಿ ಹಿಂಬದಿಯ ಸೀಟುಗಳಲ್ಲಿ ಈ ಬಾರಿ 12ವಿ ಪವರ್ ಔಟ್‌ಲೆಟ್ ಜೊತೆಗೆ ಹಿಂಬದಿಯ ಸವಾರರಿಗಾಗಿ ಇರುವ ಎಸಿ ಯುನಿಟ್ ಅನ್ನು ಮರುವಿನ್ಯಾಸದೊಂದಿಗೆ ವಿವಿಧ ಹಂತವಾಗಿ ಹೊಂದಾಣಿಕೆ ಮಾಡಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ.

ಗ್ರಾಹಕರ ಬೇಡಿಕೆಯೆಂತೆ ಹೊಸ ಸೌಲಭ್ಯಗಳನ್ನು ಪಡೆದುಕೊಂಡ ಟಾಟಾ ನೆಕ್ಸಾನ್

ಹಾಗೆಯೇ ಟಚ್‌ಸ್ಕೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಅನ್ನು ಸಹ ವಿನ್ಯಾಸಗೊಳಿಸಲಾಗಿದ್ದು, ಗೇರ್ ನಾಬ್ ಬಣ್ಣ ಕೂಡಾ ಬದಲಾಗಿದೆ. ಜೊತೆಗೆ ವಾರ್ಮ್ ಗ್ರೇ ಬಣ್ಣ ಪಡೆದ ಡ್ಯಾಶ್‌ಬೋರ್ಡ್ ಮಿಡ್ ಪ್ಯಾಡ್ ಮತ್ತು ಪಿಯಾನೋ ಬ್ಲ್ಯಾಕ್ ಬಣ್ಣ ಪಡೆದ ಎಸಿ ಯುನಿಟ್ ಸೌಲಭ್ಯವು ನೆಕ್ಸಾನ್ ಕಾರಿಗೆ ಮತ್ತಷ್ಟು ಮೆರಗು ತಂದಿದೆ.

ಗ್ರಾಹಕರ ಬೇಡಿಕೆಯೆಂತೆ ಹೊಸ ಸೌಲಭ್ಯಗಳನ್ನು ಪಡೆದುಕೊಂಡ ಟಾಟಾ ನೆಕ್ಸಾನ್

ಇದರೊಂದಿಗೆ ನೆಕ್ಸಾನ್ ಕಾರಿನ ಹೊರಭಾಗದ ವಿನ್ಯಾಸದಲ್ಲೂ ಕೆಲವು ಬದಲಾವಣೆಗಳನ್ನು ತರಲಾಗಿದ್ದು, ಮರುವಿನ್ಯಾಸಗೊಂಡ ರೂಫ್ ರೈಲ್ಸ್ ಮತ್ತು ಗ್ಲಾಸಿ ಫಿನಿಷಿಂಗ್ ಹೊಂದಿರುವ ಡೋರ್ ಟ್ರಿಮ್‌ಗಳು ಸಹ ಈಗ ಮತ್ತಷ್ಟು ಗ್ರಾಹಕರನ್ನು ಸೆಳೆಯಲಿದೆ. ಇಲ್ಲದೇ ಮುಂಬರುವ 2020ರ ಏಪ್ರಿಲ್ 1ರಿಂದ ಬಿಎಸ್-6 ಕಡ್ಡಾಯಗೊಳ್ಳುತ್ತಿದ್ದು, ಹೊಸ ನಿಯಮಕ್ಕೆ ಅನುಗುಣವಾಗಿ ಹೊಸ ಎಂಜಿನ್ ಪಡೆದುಕೊಳ್ಳುತ್ತಿದ್ದು, ಇದೀಗ ಬದಲಾವಣೆಗೊಳಿಸಲಾಗುತ್ತಿರುವ ಸೌಲಭ್ಯಗಳು ಮುಂಬರುವ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಕಡ್ಡಾಯವಾಗಲಿವೆ.

ಗ್ರಾಹಕರ ಬೇಡಿಕೆಯೆಂತೆ ಹೊಸ ಸೌಲಭ್ಯಗಳನ್ನು ಪಡೆದುಕೊಂಡ ಟಾಟಾ ನೆಕ್ಸಾನ್

ಇನ್ನು ನೆಕ್ಸಾನ್ ಕಾರುಗಳು ಸದ್ಯಕ್ಕೆ ಬಿಎಸ್ 4 ಎಂಜಿನ್ ಪ್ರೇರಣೆಯನ್ನೇ ಹೊಂದಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎರಡು ಎಂಜಿನ್ ಮಾದರಿಯಲ್ಲೂ ಖರೀದಿ ಲಭ್ಯವಿರುವ ನೆಕ್ಸಾನ್ ಮಾದರಿಯು ಪೆಟ್ರೋಲ್ ಆವೃತ್ತಿಯಲ್ಲಿ 1.2-ಲೀಟರ್ ರಿವೊಟ್ರೋನ್ ಎಂಜಿನ್ ಹೊಂದಿದ್ದರೆ, ಡೀಸೆಲ್ ಮಾದರಿಯಲ್ಲಿ 1.5-ಲೀಟರ್ ರಿವೋಟ್ರಾಕ್ ಎಂಜಿನ್ ಹೊಂದಿದೆ.

MOST READ: ಅಪಘಾತದ ವೇಳೆ ಏರ್‌ಬ್ಯಾಗ್ ಇದ್ರು ಫ್ಲಾಪ್- ಟೊಯೊಟಾ ವಿರುದ್ಧ ಕಾರು ಮಾಲೀಕನ ಆಕ್ರೋಶ..!

ಗ್ರಾಹಕರ ಬೇಡಿಕೆಯೆಂತೆ ಹೊಸ ಸೌಲಭ್ಯಗಳನ್ನು ಪಡೆದುಕೊಂಡ ಟಾಟಾ ನೆಕ್ಸಾನ್

ಆಲ್ ವೀಲ್ಹ್ ಡ್ರೈವ್ ಸೌಲಭ್ಯವೊಂದನ್ನು ಹೊರತುಪಡಿಸಿ ಬಲಿಷ್ಠ ಬಾಡಿ ಕಿಟ್ ಹೊಂದಿರುವುದು ಈ ಕಾರಿನ ಆಯ್ಕೆಯ ಮೌಲ್ಯವನ್ನು ಹೆಚ್ಚಿಸಿದ್ದು, ಚಾಲಕ ಮತ್ತು ಪ್ರಯಾಣಿಕ ಸೀಟುಗಳ ಕಡೆಗೆ ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್, ಐಸೋಫೆಕ್ಸ್ ಚೈಲ್ಡ್ ಮೌಟೆಂಡ್ ಸೀಟುಗಳು ಸೌಲಭ್ಯದೊಂದಿಗೆ ಕ್ರ್ಯಾಶ್‌ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ರೆಟಿಂಗ್ ತನ್ನದಾಗಿಸಿಕೊಂಡಿದೆ.

ಗ್ರಾಹಕರ ಬೇಡಿಕೆಯೆಂತೆ ಹೊಸ ಸೌಲಭ್ಯಗಳನ್ನು ಪಡೆದುಕೊಂಡ ಟಾಟಾ ನೆಕ್ಸಾನ್

ಹೀಗಾಗಿ ಸುರಕ್ಷತೆಯೊಂದಿದೆ ವಿಶಿಷ್ಟ ವಿನ್ಯಾಸಗಳೊಂದಿಗೆ ಕಂಪ್ಯಾಕ್ಟ್ ಎಸ್‌ಯುವಿ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ನೆಕ್ಸಾನ್ ಆವೃತ್ತಿಗಳು ಇಂಪ್ಯಾಕ್ಟ್ 2.0 ಡಿಸೈನ್‌ನೊಂದಿಗೆ ಅಭಿವೃದ್ಧಿಗೊಂಡಿದ್ದು, ಮಲ್ಟಿ ಡ್ರೈವ್ ಮೋಡ್, ತೇಲುವ ಡ್ಯಾಶ್ ಟಾಪ್ ಎಚ್‌ಡಿ ಟಚ್‌ಸ್ಕ್ರೀನ್, ಹರ್ಮನ್ ಇನ್ಫೋಟೈನ್ಮೆಂಟ್ ಸಿಸ್ಟಂ, ದೊಡ್ಡದಾದ ಸೆಂಟ್ರಲ್ ಕನ್ಸೊಲ್ ಪಡೆದುಕೊಂಡಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಗ್ರಾಹಕರ ಬೇಡಿಕೆಯೆಂತೆ ಹೊಸ ಸೌಲಭ್ಯಗಳನ್ನು ಪಡೆದುಕೊಂಡ ಟಾಟಾ ನೆಕ್ಸಾನ್

ಸದ್ಯ ಮಾರಕಟ್ಟೆಯಲ್ಲಿ ನೆಕ್ಸಾನ್ ಕಾರಿನಲ್ಲಿ ಎಕ್ಸ್‌ಟಿ, ಎಕ್ಸ್‌ಜೆಡ್, ಎಕ್ಸ್‌ಜೆಡ್ ಪ್ಲಸ್ ಮತ್ತು ಎಕ್ಸ್‌ಜೆಡ್ಎ ಪ್ಲಸ್ ಆವೃತ್ತಿಗಳಲ್ಲಿ 22 ಮಾದರಿಗಳು ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ನೆಕ್ಸಾನ್ ಆರಂಭಿಕ ಆವೃತ್ತಿಯು ರೂ. 6.72 ಲಕ್ಷದಿಂದ ಟಾಪ್ ಎಂಡ್ ಮಾದರಿಯು 11.06 ಲಕ್ಷ ಬೆಲೆ ಪಡೆದುಕೊಂಡಿವೆ.

Most Read Articles

Kannada
English summary
Tata Nexon Updated Based On Customers Feedback. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X