ಬಿಡುಗಡೆಗೊಂಡ ಟಾಟಾ ಮೋಟಾರ್ಸ್‍ನ ಮೊದಲ ಇವಿ ಕಾರು

ಕೇಂದ್ರ ಸರ್ಕಾರವು ವಾಹನ ತಯಾರಕ ಸಂಸ್ಥೆಗಳಿಗೆ ವಿದ್ಯುತ್ ವಾಹನಗಳನ್ನು ಉತ್ಪಾದನೆ ಮಾಡಲು ನೀಡುವ ಗಡುವು ಸಮೀಪದಲ್ಲಿದ್ದು, ಒಂದೊಂದೆ ವಾಹನ ತಯಾರಕ ಸಂಸ್ಥೆಗಳು ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಪ್ರದರ್ಶಿಸಲು ಶುರು ಮಾಡಿದ್ದೂ, ಇನ್ನು ಕೆಲವು ಸಂಸ್ಥೆಗಳು ತಮ್ಮ ಮೊದಲ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸುವ ತವಕದಲ್ಲಿದ್ದಾರೆ.

ಬಹಿರಂಗವಾಯ್ತು ಟಾಟಾ ಟಿಗೋರ್ ಇವಿ ಕಾರಿನ ಬೆಲೆಯ ಮಾಹಿತಿ

ಅವುಗಳಲ್ಲಿ ಹ್ಯುಂಡೈ ಕೂಡಾ ಒಂದು. ಹ್ಯುಂಡೈ ಸಂಸ್ಥೆಯು ಜುಲೈ ತಿಂಗಳಿನಲ್ಲಿ ತಮ್ಮ ಕೋನಾ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲಿದೆ. ಹಾಗೆಯೆ ದೇಶಿಯ ವಾಹನ ತಯಾರಕ ಟಾಟಾ ಮೋಟಾರ್ಸ್ ಕೂಡಾ ತಮ್ಮ ಮೊದಲ ಎಲೆಕ್ಟ್ರಿಕ್ ವಾಹನವನ್ನಾಗಿ ಟಿಗೋರ್ ಕಾರಿನ ಮಾದರಿಯನ್ನು ಪರಿಚಯಿಸಿದ್ದು, ಟಿಗೋರ್ ಎಲೆಕ್ಟ್ರಿಕ್ ಸೆಡಾನ್ ಕಾರಿನ ಬೆಲೆಯ ಕುರಿತಾಗಿ ಮಾಹಿತಿಯನ್ನು ಬಹಿರಂಗಪಡಿಸಿದೆ.

ಬಹಿರಂಗವಾಯ್ತು ಟಾಟಾ ಟಿಗೋರ್ ಇವಿ ಕಾರಿನ ಬೆಲೆಯ ಮಾಹಿತಿ

ಆಟೋಕಾರ್‍ಇಂಡಿಯಾ ವರದಿಗಳ ಪ್ರಕಾರ ಟಾಟಾ ಮೋಟಾರ್ಸ್ ಅಭಿವೃದ್ಧಿಗೊಳಿಸುತ್ತಿರುವ ಟಾಟಾ ಟಿಗೋರ್ ಇವಿ ಕಾರು ಎಕ್ಸ್ ಶೋರುಂ ಪ್ರಕಾರ ರೂ. 9.99 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದಿರಲಿದ್ದು, ಸುಮಾರು 10.90 ಲಕ್ಷದ ವರೆಗೂ ಮಾರಾಟವಾಗುವ ಸಾಧ್ಯತೆಗಳಿವೆ. ಹಾಗಯೆ ಮತ್ತೊಂದು ವಿಚಾರ ಏನಪ್ಪ ಅಂದ್ರೆ ಈ ಕಾರು ಕೇವಲ ಟ್ಯಾಕ್ಸಿ ಆಪರೇಟರ್‍‍ಗಳಿಗೆ ಮಾತ್ರ ಲಭ್ಯವಿರಲಿದ್ದು, ಸ್ವಂತ ಬಳಕೆಗೆ ಲಭ್ಯವಿರುವುದಿಲ್ಲ ಎಂದು ಹೇಳಲಾಗಿದೆ.

ಬಹಿರಂಗವಾಯ್ತು ಟಾಟಾ ಟಿಗೋರ್ ಇವಿ ಕಾರಿನ ಬೆಲೆಯ ಮಾಹಿತಿ

ಈ ಎಕ್ಸ್‌ಶೋರೂಂ ಬೆಲೆಯಲ್ಲಿ ಟಿಸಿಎಸ್ (10 ಲಕ್ಷ ರೂ.ಗಿಂತ ಹೆಚ್ಚಿನ ವೆಚ್ಚದ ಕಾರುಗಳ ಮೇಲೆ 1 ಶೇಕಡಾ ತೆರಿಗೆ ವಿಧಿಸಲಾಗುತ್ತದೆ) ಮತ್ತು ಭಾರತ ಸರ್ಕಾರದ ಫೇಮ್ II ಯೋಜನೆ (1.62 ಲಕ್ಷ ರೂ.) ಒದಗಿಸುವ ಪ್ರೋತ್ಸಾಹಕಗಳನ್ನು ಒಳಗೊಂಡಿದೆ. ಅಂದರೆ ಎಲೆಕ್ಟ್ರಿಕ್ ವಾಹನಗಳಿಗೆ ಸರ್ಕಾರದ ಯೋಜನೆ ನೀಡುವ ವಿರಾಮಗಳಿಲ್ಲದೆ ಟಿಗೋರ್ ಇವಿ ಬೆಲೆ 11.61ರಿಂದ11.71 ಲಕ್ಷದ ಬೆಲೆಯನ್ನು ಪಡೆಯಬಹುದಾಗಿದೆ. ತೆರಿಗೆಗಳು ಮತ್ತು ಇನ್ಸೆಂಟೀವ್‍ಗಳನ್ನು ಲೆಕ್ಕ ಹಾಕಿದರೆ ಸಾಧಾರಣ ಮಾದರಿಯ ಟಿಗೋರ್ ಕಾರಿಗಿಂತಲೂ, ಇವಿ ಮಾದರಿಯ ಕಾರು ಸುಮಾರು 4 ಲಕ್ಷ ಅಧಿಕವಾಗಿರಲಿದೆ.

ಬಹಿರಂಗವಾಯ್ತು ಟಾಟಾ ಟಿಗೋರ್ ಇವಿ ಕಾರಿನ ಬೆಲೆಯ ಮಾಹಿತಿ

ಟಿಗೋರ್ ಇವಿ ಕಾರು- ಟಿಗೋರ್ ಇವಿ ಎಕ್ಸ್ಎಂ ಮತ್ತು ಟಿಗೋರ್ ಎಕ್ಸ್ಟಿ ಎಂಬ ಎರಡು ವೇರಿಯೆಂಟ್‍ಗಳಲಿ ಖರೀದಿಗೆ ಲಭ್ಯವಿರಲಿದ್ದು, ವೈಟ್, ಬ್ಲೂ ಮತ್ತು ಸಿಲ್ವರ್ ಎಂಬ ಮೂರು ಬಣ್ಣಗಳಲ್ಲಿ ದೊರೆಯಲಿದೆ. ಅಷ್ಟೆ ಅಲ್ಲದೆಯೆ ಪ್ರಯಾಣಿಕರ ಸುರಕ್ಷತೆಗಾಗಿ ಈ ಕಾರಿನಲ್ಲಿ ಡ್ಯುಯಲ್ ಫ್ರಂಟ್ ಏರ್‍‍ಬ್ಯಾಗ್ಸ್, ಎಬಿಎಸ್, ರಿಯರ್ ಪಾರ್ಕಿಂಗ್ ಸೆನ್ಸಾರ್ಸ್ ಹಾಗು ಇನಿತರೆ ವೈಶಿಷ್ಟ್ಯತೆಗಳನ್ನು ಒಳಗೊಂಡ ಸಾಧಾರಣ ಸೇಫ್ಟಿ ಕಿಟ್ ಅನ್ನು ಹೊಂದಿರಲಿದೆ.

ಬಹಿರಂಗವಾಯ್ತು ಟಾಟಾ ಟಿಗೋರ್ ಇವಿ ಕಾರಿನ ಬೆಲೆಯ ಮಾಹಿತಿ

ಮೇಲೆ ಹೇಳಿರುವ ಹಾಗೆ ಟಾಟಾ ನಿರ್ಮಾಣ ಮಾಡುತ್ತಿರುವ ಟಿಗೋರ್ ಇವಿ ಕಾರುಗಳು ಎಕ್ಸ್ಎಂ, ಮತ್ತು ಎಕ್ಸ್ ಟಿ ಎಂಬ ಮೂರು ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಮುಂಭಾಗದಲ್ಲಿ ಕ್ರೋಮ್ ಸ್ಟ್ರಿಪ್, ಡ್ಯುಯಲ್ ಟೋನ್ ಇಂಟೀರಿಯರ್, ಸ್ಪ್ಲಿಟ್ ಎಲ್ಇಡಿ ಟೈಲ್‍ ಲ್ಯಾಂಪ್ ಮತ್ತು ಎಲ್ಇಡಿ ಸ್ಟಾಪ್ ಲ್ಯಾಂಪ್ ಮೌಂಟೆಡ್ ಅನ್ನು ಹಿಂಭಾಗದಲ್ಲಿ ಪಡೆದಿದೆ.

MOST READ: ಹೊಸ ಮೋಟಾರ್ ವೆಹಿಕಲ್ ಕಾಯ್ದೆಗೆ ಸಿಕ್ತು ಗ್ರೀನ್ ಸಿಗ್ನಲ್ - ಯಾವ ನಿಯಮ ಉಲ್ಲಂಘನೆಗೆ ಎಷ್ಟು ದಂಡ.?

ಬಹಿರಂಗವಾಯ್ತು ಟಾಟಾ ಟಿಗೋರ್ ಇವಿ ಕಾರಿನ ಬೆಲೆಯ ಮಾಹಿತಿ

ಕಾರಿನ ವೈಶಿಷ್ಟ್ಯತೆಗಳು

ಟಾಟಾ ಟಿಗೋರ್ ಇವಿ ಕಾರು ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್, 15 ಇಂಚಿನ ಅಲಾಯ್ ಚಕ್ರಗಳು, ಎಲೆಕ್ಟ್ರಿಕ್‍ನಿಂದ ಹೊಂದಿಕೊಳ್ಳಬಲ್ಲ ORVMs, ಎಲ್ಇಡಿ ಟರ್ನ್ ಇಂಡಿಕೇಟರ್ಸ್, ಆಟೋಮ್ಯಾಟಿಕ್ ವಾತಾವರಣ ನಿಯಂತ್ರತೆ ಮತ್ತು ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಪಡೆದುಕೊಂಡಿದೆ.

MOST READ: ಪೆಟ್ರೋಲ್ ಬದಲಿಗೆ ಕೋಕಾಕೋಲಾ ತುಂಬಿಸಿದ ಭೂಪ- ಮುಂದೇನಾಯ್ತು?

ಬಹಿರಂಗವಾಯ್ತು ಟಾಟಾ ಟಿಗೋರ್ ಇವಿ ಕಾರಿನ ಬೆಲೆಯ ಮಾಹಿತಿ

ಎಂಜಿನ್ ಸಾಮರ್ಥ್ಯ

ಟಿಗೋರ್ ಇವಿಯು ಎಲೆಕ್ಟ್ರಲ್ ಇವಿಯಿಂದ ತಯಾರಾದ 216 ಎಹೆಚ್ ಬ್ಯಾಟರಿ ಹೊಂದಿದ್ದು, 40ಬಿಹೆಚ್‍ಪಿ ಚಲಿಸಬಲ್ಲ ಸಾಮರ್ಥ್ಯವನ್ನು ಪಡೆದಿವೆ. ಜೊತೆಗೆ 130 ಕಿಲೋಮೀಟರ್ ಡ್ರೈವಿಂಗ್ ರೇಂಜನ್ನು ಪಡೆದಿದ್ದು, ಗಂಟೆಗೆ 100ಕಿಲೋಮೀಟರ್ ಚಲಿಸಬಲ್ಲವು. ಕಾರಿನ ಬ್ಯಾಟರಿಯು ಸ್ಟ್ಯಾಂಡರ್ಡ್ ಚಾರ್ಜರ್ ಮೂಲಕ 6 ಗಂಟೆಗಳ ಸಮಯದಲ್ಲಿ ಪೂರ್ಣ ಚಾರ್ಜ್ ಆಗಲಿದ್ದು, ಫಾಸ್ಟ್ ಚಾರ್ಜರ್ ಸಹಾಯದಿಂದ 90 ನಿಮಿಷದಲ್ಲಿ ಶೇಕಡ 80ರಷ್ಟು ಚಾರ್ಜ್ ಆಗಲಿದೆ.

MOST READ: 2030ರ ನಂತರ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮಾರಾಟ ಸಂಪೂರ್ಣ ಬಂದ್..

ಬಹಿರಂಗವಾಯ್ತು ಟಾಟಾ ಟಿಗೋರ್ ಇವಿ ಕಾರಿನ ಬೆಲೆಯ ಮಾಹಿತಿ

ಆಕರ್ಷಕ ವಾರೆಂಟಿ ಕೂಡಾ ಲಭ್ಯ

ಟಾಟಾ ಮೋಟಾರ್ಸ್ ಬಿಡುಗಡೆಗೊಳಿಸಲಿರುವ ಟಿಗೋರ್ ಇವಿ ಕಾರಿನ ಮೇಲೆ 3 ವರ್ಷ ಅಥವಾ 1.25 ಲಕ್ಷ ಕಿಲೋಮೀಟರ್‍‍ಗಳ ವಾರೆಂಟಿಯನ್ನು ನೀಡಲಿದ್ದು, ಇದು ಕಾರು ಮತ್ತು ಬ್ಯಾಟರಿ ಪ್ಯಾಕ್‍ನ ಮೇಲೆ ಆಧಾರವಾಗಿರಲಿದೆ ಎಂದು ಹೇಳಲಾಗಿದೆ.

ಬಹಿರಂಗವಾಯ್ತು ಟಾಟಾ ಟಿಗೋರ್ ಇವಿ ಕಾರಿನ ಬೆಲೆಯ ಮಾಹಿತಿ

ಹಾಗಯೆ ಟಾಟಾ ಮೋಟಾರ್ಸ್ ಈ ಬಗ್ಗೆ 2018ರ ಆಟೋ ಎಕ್ಸ್ ಪೋದಲ್ಲಿ ಹೊಸ ಮಾದರಿಗಳನ್ನು ಪ್ರದರ್ಶಿಸಿದ ಟಾಟಾ ಮೋಟಾರ್ಸ್ ಸಂಸ್ಥೆಯು ಸಬ್ ಕಂಪ್ಯಾಕ್ಟ್ ಸೆಡಾನ್ ಆವೃತ್ತಿಯಾದ ಟಿಗೋರ್ ಮತ್ತು ಹ್ಯಾಚ್‌ಬ್ಯಾಕ್ ಮಾದರಿಯಾದ ಟಿಯಾಗೋ ಕಾರುಗಳನ್ನು ಎಲೆಕ್ಟ್ರಿಕ್ ವರ್ಷನ್‌ಗಳನ್ನು ಪರಿಚಯಿಸುತ್ತಿದೆ.

Most Read Articles

Kannada
English summary
Tata Tiago EV Price Revelaed - Starts From Rs. 9.99 lakh. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X