ಕೇವಲ 3 ವರ್ಷದಲ್ಲಿ ದಾಖಲೆಯ ಮಾರಾಟ ಕಂಡ ಟಾಟಾ ಟಿಯಾಗೊ ಕಾರು

ದೇಶಿಯವಾಗಿ ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಸಂಸ್ಥೆಯು, ಟಿಯಾಗೊ ಕಾರು ಮಾರಾಟದಲ್ಲಿ ಹೊಸ ದಾಖಲೆ ಮಾಡಿದೆ. ಅಲ್ಲದೇ ಕಾರು ಖರೀದಿಗೆ ವಿಶೇಷ ಬೇಡಿಕೆ ಬಂದಿದ್ದು, 3 ವರ್ಷದ ಅವಧಿಯಲ್ಲಿ 2 ಲಕ್ಷ ಕಾರುಗಳು ಮಾರಾಟಗೊಂಡಿದೆ.

ಕೇವಲ 3 ವರ್ಷದಲ್ಲಿ ದಾಖಲೆಯ ಮಾರಾಟ ಕಂಡ ಟಾಟಾ ಟಿಯಾಗೊ ಕಾರು

2016ರಲ್ಲಿ ಬಿಡುಗಡೆಯಾಗಿ ಭರ್ಜರಿ ಮಾರಾಟ ಪ್ರಕ್ರಿಯೆ ಕಂಡಿರುವ ಟಾಟಾ ವಿನೂತನ ಟಿಯಾಗೊ, ಒಂದು ವರ್ಷದ ಅವಧಿಯಲ್ಲಿ 2 ಲಕ್ಷ ಬುಕ್ಕಿಂಗ್ ಪಡೆದುಕೊಳ್ಳುವ ಮೂಲಕ ಹೊಸ ಸಾಧನೆ ಮಾಡಿದೆ. ಸದ್ಯ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿರುವ ಟಿಯಾಗೊ ಮಾದರಿ ಮಾತ್ರ ಖರೀದಿಗೆ ಲಭ್ಯವಿದ್ದು, ಅತಿ ಹೆಚ್ಚು ಬೇಡಿಕೆ ಹಿನ್ನೆಲೆ ಟಿಯಾಗೊ ಎಎಂಟಿ, ಸಿಎನ್‍ಜಿ ಆವೃತಿಯ ಕಾರುಗಳನ್ನು ಸಂಸ್ಥೆ ಬಿಡುಗಡೆ ಮಾಡಿದೆ.

ಕೇವಲ 3 ವರ್ಷದಲ್ಲಿ ದಾಖಲೆಯ ಮಾರಾಟ ಕಂಡ ಟಾಟಾ ಟಿಯಾಗೊ ಕಾರು

ಟಾಟಾ ಟಿಯಾಗೊ ಕಾರು ಇತ್ತೀಚೆಗೆ ಹೊಸ ಎಕ್ಸ್ ಜೇಡ್+ ವೇರಿಯಂಟ್‍ನಲ್ಲಿ ಬಿಡುಗಡೆಗೊಂಡಿದ್ದು, ರೂ. 5.57 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ. ರೆಗ್ಯುಲರ್ ಟಿಯಾಗೊ ವೇರಿಯಂಟ್‍ಗಳಿಗಿಂತಲೂ ಈ ವೇರಿಯಂಟ್‍ನಲ್ಲಿ ಹೊಸದಾಗಿ 7 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಮತ್ತು 15 ಇಂಚಿನ ಅಲಾಯ್ ವ್ಹೀಲ್ಸ್ ಅನ್ನಿ ಅಳವಡಿಸಲಾಗಿದೆ.

ಕೇವಲ 3 ವರ್ಷದಲ್ಲಿ ದಾಖಲೆಯ ಮಾರಾಟ ಕಂಡ ಟಾಟಾ ಟಿಯಾಗೊ ಕಾರು

ಇನ್ನು ಹ್ಯಾಚ್‌ಬ್ಯಾಕ್ ಶೈಲಿಯನ್ನು ಹೊಂದಿರುವ ಟಾಟಾ ಟಿಯಾಗೊ ಕಾರು ಮಾದರಿಯೂ 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 1.05-ಲೀಟರ್ ಡೀಸೆಲ್ ಎಂಜಿನ್ ವ್ಯವಸ್ಥೆಯನ್ನು ಪಡೆದುಕೊಂಡಿದೆ. ಪೆಟ್ರೋಲ್ ಕಾರುಗಳು 85ಬಿಹೆಚ್‍ಪಿ ಮತ್ತು 114ಎನ್ಎಂ ಟಾರ್ಕ್ ಅನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಇನ್ನು ಡೀಸೆಲ್ ಕಾರುಗಳು 70ಬಿಹೆಚ್‍ಪಿ ಮತ್ತು 140ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಕೇವಲ 3 ವರ್ಷದಲ್ಲಿ ದಾಖಲೆಯ ಮಾರಾಟ ಕಂಡ ಟಾಟಾ ಟಿಯಾಗೊ ಕಾರು

ಇನ್ನು ಸ್ಟ್ಯಾಂಡರ್ಡ್ ಟಿಯಾಗೊ ಹ್ಯಾಚ್‍‍ಬ್ಯಾಕ್ ಕಾರಿಗಿಂತಾ ಹೊಸ ಎನ್‍ಆರ್‍‍ಜಿ ಕಾರು ಗುರುತರ ಬದಲಾವಣೆಗಳನ್ನು ಪಡೆದುಕೊಂಡಿದೆ. ಬಿಡುಗಡೆಗೊಂಡ ಹೊಸ ಟಾಟಾ ಟಿಯಾಗೊ ಎನ್ಆರ್‍‍ಜಿ ಕಾರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 5.49 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

ಕೇವಲ 3 ವರ್ಷದಲ್ಲಿ ದಾಖಲೆಯ ಮಾರಾಟ ಕಂಡ ಟಾಟಾ ಟಿಯಾಗೊ ಕಾರು

ಟಾಟಾ ಟೊಯಾಗೊ ಎನ್‍ಆರ್‍‍ಜಿ ಕಾರು ಪೆಟ್ರೋಲ್ ಮತ್ತು ಡೀಸೆಲ್ ಮಾದರಿಯಲ್ಲಿ ಖರೀದಿಗೆ ಲಭ್ಯವಿದ್ದು, ಪೆಟ್ರೋಲ್ ಮಾದರಿಯ ಕಾರುಗಳ ಬೆಲೆಯು ರೂ. 5.49 ಲಕ್ಷ ಮತ್ತು ಡೀಸೆಲ್ ಮಾದರಿಯ ಕಾರುಗಳು ರೂ. 6.31 ಲಕ್ಷದ ಪ್ರಾರಂಭಿಕ ಬೆಲೆಯನ್ನು ನಿಗದಿಪಡಿಸಲಾಗಿದೆ.

ಕೇವಲ 3 ವರ್ಷದಲ್ಲಿ ದಾಖಲೆಯ ಮಾರಾಟ ಕಂಡ ಟಾಟಾ ಟಿಯಾಗೊ ಕಾರು

ಪ್ರಯಾಣಿಕರ ಸುರಕ್ಷತೆಗಾಗಿ ಟಾಟಾ ಟಿಯಾಗೊ ಎನ್‍ಆರ್‍‍ಜಿ ಕಾರಿನಲ್ಲಿ ಡ್ಯುಯಲ್ ಫ್ರಂಟ್ ಏರ್‍‍ಬ್ಯಾಗ್ಸ್, ಎಬಿಎಸ್, ಇಬಿಡಿ, ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್, ರಿವರ್ಸ್ ಪಾರ್ಕಿಂಗ್ ಅಸ್ಸಿಸ್ಟ್, ಡ್ರೈವರ್ ಸೀಟ್ ಬೆಲ್ಟ್ ರಿಮೈಂಡರ್, ಆರ್ಮೌರ್ಡ್ ಬಾಡಿ ಮತ್ತು ಕ್ಯಾಬಿನ್, ಸ್ಮಾರ್ಟ್ ರಿಯರ್ ವೈಪರ್ ಹಾಗು ಫಾಲೊ ಮೀ ಹೆಡ್‍‍ಲ್ಯಾಂಪ್‍‍ಗಳನ್ನು ವಿಷೇಷವಾಗಿ ಅಳವಡಿಸಲಾಗಿದೆ.

ಕೇವಲ 3 ವರ್ಷದಲ್ಲಿ ದಾಖಲೆಯ ಮಾರಾಟ ಕಂಡ ಟಾಟಾ ಟಿಯಾಗೊ ಕಾರು

ಎಂಜಿನ್ ಸಾಮರ್ಥ್ಯ

ಮೇಲೆ ಹೇಳಿರುವ ಹಾಗೆ ಟಾಟಾ ಟಿಗೊರ್ ಎನ್‍ಆರ್‍‍ಜಿ ಕಾರು ಪೆಟ್ರೋಲ್ ಹಾಗು ಡೀಸೆಲ್ ಮಾದರಿಗಳಲ್ಲಿ ಲಭ್ಯವಿದ್ದು, ಪೆಟ್ರೋಲ್ ಆಧಾರಿತ ಕಾರುಗಳು 1.2 ರೆವಾಲ್ಟ್ರಾನ್ ಪೆಟ್ರೋಲ್ ಎಂಜಿನ್ ಸಹಾಯದಿಂದ 84ಬಿಹೆಚ್‍‍ಪಿ ಮತ್ತು 114ಎನ್ಎಮ್ ಟಾರ್ಕ್ ಅನ್ನು ಉಪ್ದಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಕೇವಲ 3 ವರ್ಷದಲ್ಲಿ ದಾಖಲೆಯ ಮಾರಾಟ ಕಂಡ ಟಾಟಾ ಟಿಯಾಗೊ ಕಾರು

ಇನ್ನು ಡೀಸೆಲ್ ಆಧಾರಿತ ಕಾರುಗಳು 1.5 ರೆವಾಲ್ಟ್ರಾನ್ ಡೀಸೆಲ್ ಎಂಜಿನ್ ಸಹಾಯದಿಂದ 69ಬಿಹೆಚ್‍‍ಪಿ ಮತ್ತು 140ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್‍‍ಗಳನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

Most Read Articles

Kannada
English summary
Tata Tiago’s Sales Figures Cross Two Lakh — A New Sales Milestone. Read In Kannada
Story first published: Saturday, February 16, 2019, 11:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X