ಪ್ರೀಮಿಯಂ ಫೀಚರ್ಸ್‌ನೊಂದಿಗೆ ಬಿಡುಗಡೆಗೊಂಡ ಟಾಟಾ ಟಿಗೋರ್ ಜೆಟಿಪಿ, ಟಿಯಾಗೋ ಜೆಟಿಪಿ

ಟಾಟಾ ಮೋಟಾರ್ಸ್ ಸಂಸ್ಥೆಯು ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ ವರ್ಷನ್‌ಗಳಲ್ಲಿ ಗ್ರಾಹಕರ ಬೇಡಿಕೆಯೆಂತೆ ಕೆಲವು ಸುಧಾರಿತ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸಿದ್ದು, ನೆಕ್ಸಾನ್ ಕಂಪ್ಯಾಕ್ಟ್ ಎಸ್‌ಯುವಿ ಆವೃತ್ತಿಯ ನಂತರ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ ವರ್ಷನ್‌‌ಗಳಲ್ಲಿ ಮಹತ್ವದ ಬದಲಾವಣೆ ತರಲಾಗಿದೆ.

ಪ್ರೀಮಿಯಂ ಫೀಚರ್ಸ್‌ನೊಂದಿಗೆ ಬಿಡುಗಡೆಗೊಂಡ ಟಾಟಾ ಟಿಗೋರ್ ಜೆಟಿಪಿ, ಟಿಯಾಗೋ ಜೆಟಿಪಿ

ನೆಕ್ಸಾನ್ ಕಾರು ಮಾದರಿಯಲ್ಲೇ ಟಿಯಾಗೋ ಜೆಟಿಪಿ ಮತ್ತು ಟಿಗೋರ್ ಜೆಟಿಪಿ ಕಾರುಗಳಲ್ಲಿ ಹೊಸದಾಗಿ ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ ಪ್ರೇರಣೆ ಹೊಂದಿರುವ 7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಆಟೋಮ್ಯಾಟಿಕ್ ರಿಯರ್ ವ್ಯೂ ಮಿರರ್ ಮತ್ತು ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಪ್ರೀಮಿಯಂ ಫೀಚರ್ಸ್‌ನೊಂದಿಗೆ ಬಿಡುಗಡೆಗೊಂಡ ಟಾಟಾ ಟಿಗೋರ್ ಜೆಟಿಪಿ, ಟಿಯಾಗೋ ಜೆಟಿಪಿ

ಜೊತೆಗೆ ಸಾಮಾನ್ಯ ಮಾದರಿಯ ಟಿಗೋರ್ ಮತ್ತು ಟಿಯಾಗೋ ಟಾಪ್ ಎಂಡ್ ಮಾದರಿಯಲ್ಲೇ ಜೆಟಿಪಿ ವರ್ಷನ್‌ಗಳಲ್ಲೂ ಹೈ ಸ್ಪೀಡ್ ಅಲರ್ಟ್, ಡ್ರೈವರ್ ಮತ್ತು ಸಹ ಪ್ರಯಾಣಿಕರ ಸೀಟ್‌ಬೆಲ್ಟ್ ರಿಮೆಂಡರ್ ಸೌಲಭ್ಯವನ್ನು ಸಹ ನೀಡಲಾಗಿದ್ದು, ಹೊಸ ಫೀಚರ್ಸ್‌ಗಳಿಂದಾಗಿ ಕಾರಿನ ಬೆಲೆಯಲ್ಲೂ ತುಸು ದುಬಾರಿಯಾಗಿರಲಿವೆ.

ಪ್ರೀಮಿಯಂ ಫೀಚರ್ಸ್‌ನೊಂದಿಗೆ ಬಿಡುಗಡೆಗೊಂಡ ಟಾಟಾ ಟಿಗೋರ್ ಜೆಟಿಪಿ, ಟಿಯಾಗೋ ಜೆಟಿಪಿ

ಇನ್ನುಳಿದಂತೆ ಕಾರಿನ ತಾಂತ್ರಿಕ ಅಂಶಗಳನ್ನು ಈ ಹಿಂದಿನಂತೆಯೇ ಮುಂದುವರಿಸಲಾಗಿದ್ದು, ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.6.69 ಲಕ್ಷಕ್ಕೆ(ಟಿಯಾಗೋ ಜೆಟಿಪಿ) ಮತ್ತು ರೂ.7.59 ಲಕ್ಷಕ್ಕೆ(ಟಿಗೋರ್ ಜೆಟಿಪಿ) ನಿಗದಿಪಡಿಸಲಾಗಿದೆ.

ಪ್ರೀಮಿಯಂ ಫೀಚರ್ಸ್‌ನೊಂದಿಗೆ ಬಿಡುಗಡೆಗೊಂಡ ಟಾಟಾ ಟಿಗೋರ್ ಜೆಟಿಪಿ, ಟಿಯಾಗೋ ಜೆಟಿಪಿ

ಸಾಮಾನ್ಯ ಮಾದರಿಯ ಟಿಗೋರ್, ಟಿಯಾಗೊ ಕಾರುಗಳಿಂತಲೂ ಉತ್ತಮ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ ಕಾರುಗಳು ಸ್ಪೋರ್ಟಿ ಲುಕ್‌ನೊಂದಿಗೆ ಮತ್ತಷ್ಟು ಪ್ರೀಮಿಯಂ ಫೀಚರ್ಸ್ ಹೊತ್ತುಬಂದಿದ್ದು, ಹಳೆಯ ಮಾದರಿಗಿಂತ ರೂ.30 ಸಾವಿರದಷ್ಟು ದುಬಾರಿಯಾಗಿರುವ ಹೊಸ ಕಾರುಗಳು ಅರಾಮಾದಾಯಕ ಪ್ರಯಾಣದೊಂದಿಗೆ ಗರಿಷ್ಠ ಮಟ್ಟದ ಸುರಕ್ಷತೆಯನ್ನು ನೀಡಬಲ್ಲವು.

ಪ್ರೀಮಿಯಂ ಫೀಚರ್ಸ್‌ನೊಂದಿಗೆ ಬಿಡುಗಡೆಗೊಂಡ ಟಾಟಾ ಟಿಗೋರ್ ಜೆಟಿಪಿ, ಟಿಯಾಗೋ ಜೆಟಿಪಿ

ಕೊಯಮತ್ತೂರು ಮೂಲದ ಜೇಯಮ್ ಟಾಟಾ ಪರ್ಫಾಮೆನ್ಸ್ (ಜೆಟಿಪಿ) ಸಂಸ್ಥೆಯೊಂದಿಗೆ ಜೊತೆಗೂಡಿರುವ ಟಾಟಾ ಸಂಸ್ಥೆಯು ತನ್ನ ಜನಪ್ರಿಯ ಕಾರು ಆವೃತ್ತಿಗಳಾದ ಟಿಯಾಗೊ ಮತ್ತು ಟಿಗೋರ್ ಆವೃತ್ತಿಗಳನ್ನು ಸ್ಪೋರ್ಟಿ ಲುಕ್ ಜೊತೆಗೆ ಪರ್ಫಾಮೆನ್ಸ್ ಬಳಕೆಯ ಉದ್ದೇಶಕ್ಕಾಗಿ ಹೆಚ್ಚಿನ ಮಟ್ಟದ ಎಂಜಿನ್ ದಕ್ಷತೆಯನ್ನು ಹೊಸ ಜೆಟಿಪಿ ಆವೃತ್ತಿಗಳಲ್ಲಿ ಒದಗಿಸಿದೆ.

ಪ್ರೀಮಿಯಂ ಫೀಚರ್ಸ್‌ನೊಂದಿಗೆ ಬಿಡುಗಡೆಗೊಂಡ ಟಾಟಾ ಟಿಗೋರ್ ಜೆಟಿಪಿ, ಟಿಯಾಗೋ ಜೆಟಿಪಿ

ಟಿಯಾಗೊ ಮತ್ತು ಟಿಗೋರ್ ಕಾರುಗಳಿಂತ ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ ಆವೃತ್ತಿಗಳ ಮುಂಭಾಗದ ಗ್ರಿಲ್‌ನಲ್ಲಿ ನೀಡಲಾಗಿರುವ 'JTP' ಬ್ಯಾಡ್ಜ್ ಆಕರ್ಷಣೆಯಾಗಿದ್ದು, ಇದೀಗ ಅಪ್ಡೆಟ್ ವರ್ಷನ್‌ಗಳು ಮತ್ತಷ್ಟು ಸದ್ದು ಮಾಡಲಿವೆ.

ಪ್ರೀಮಿಯಂ ಫೀಚರ್ಸ್‌ನೊಂದಿಗೆ ಬಿಡುಗಡೆಗೊಂಡ ಟಾಟಾ ಟಿಗೋರ್ ಜೆಟಿಪಿ, ಟಿಯಾಗೋ ಜೆಟಿಪಿ

ಡ್ಯುಯಲ್ ವೇಂಬರ್ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ ಮತ್ತು ರೇಡಿಯೇಟರ್ ಗ್ರಿಲ್ ಅನ್ನು ಬಾನೆಟ್‍ನ ಮೇಲೆ ಅಳವಡಿಸುವ ಮೂಲಕ ಮುಂಭಾಗದ ವಿನ್ಯಾಸಕ್ಕೆ ಮತ್ತಷ್ಟು ಮೆರಗು ತರಲಾಗಿದ್ದು, ಕಾರಿನ ಸೈಡ್‍ನಲ್ಲಿ ಡೈಮಂಡ್ ಕಟ್ ಬ್ಲಾಕ್ ಮತ್ತು ಸಿಲ್ವರ್ ಬಣ್ಣದ 15-ಇಂಚಿನ ಅಲಾಯ್ ಚಕ್ರಗಳನ್ನು ನೀಡಲಾಗಿದೆ.

ಪ್ರೀಮಿಯಂ ಫೀಚರ್ಸ್‌ನೊಂದಿಗೆ ಬಿಡುಗಡೆಗೊಂಡ ಟಾಟಾ ಟಿಗೋರ್ ಜೆಟಿಪಿ, ಟಿಯಾಗೋ ಜೆಟಿಪಿ

ಎಂಜಿನ್ ಸಾಮರ್ಥ್ಯ

ಜೆಟಿಪಿ ಕಾರುಗಳಲ್ಲಿ ದೊಡ್ಡ ಬದಲಾವಣೆ ಎಂದರೆ ಅವು ಎಂಜಿನ್. ಏಕೆಂದರೆ ಈ ಬಾರಿ ನೀಡಲಾಗಿರುವ ಹೆಚ್ಚಿನ ಸಾಮರ್ಥ್ಯದ 1.2 ಲೀಟರ್ ರೆವೊಟ್ರಾನ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‍ಗಳು ಉತ್ತಮ ಟಾರ್ಕ್ ಅನ್ನು ಒದಗಿಸಬಲ್ಲವು.

ಪ್ರೀಮಿಯಂ ಫೀಚರ್ಸ್‌ನೊಂದಿಗೆ ಬಿಡುಗಡೆಗೊಂಡ ಟಾಟಾ ಟಿಗೋರ್ ಜೆಟಿಪಿ, ಟಿಯಾಗೋ ಜೆಟಿಪಿ

ಟಿಯಾಗೊ ಜೆಟಿಪಿ ಹಾಗು ಟಿಗೋರ್ ಜೆಟಿಪಿ ಕಾರುಗಳಲ್ಲಿ ಅಳವಡಿಸಲಾಗಿರುವ 1.2 ರೆವೊಟ್ರಾನ್ ಪೆಟ್ರೋಲ್ ಎಂಜಿನ್‍ಗಳು 112-ಬಿಹೆಚ್‍ಪಿ ಮತ್ತು 150-ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಪ್ರೀಮಿಯಂ ಫೀಚರ್ಸ್‌ನೊಂದಿಗೆ ಬಿಡುಗಡೆಗೊಂಡ ಟಾಟಾ ಟಿಗೋರ್ ಜೆಟಿಪಿ, ಟಿಯಾಗೋ ಜೆಟಿಪಿ

ಇದೇ ಎಂಜಿನ್ ಮಾದರಿಯು ಸಾಮಾನ್ಯ ಕಾರುಗಳಲ್ಲಿ 83.2-ಬಿಎಚ್‌ಪಿ ಮತ್ತು 114ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಜೇಯಮ್ ಟಾಟಾ ಪರ್ಫಾಮೆನ್ಸ್ (ಜೆಟಿಪಿ) ಸಂಸ್ಥೆಯು ಸ್ಪೋರ್ಟಿ ಕಾರು ಪ್ರಿಯರಿಗಾಗಿ ಟಿಗೋರ್ ಮತ್ತು ಟಿಯಾಗೋ ಜೆಟಿಪಿ ಕಾರುಗಳನ್ನು ಅಭಿವೃದ್ಧಿಪಡಿಸಿವೆ.

Most Read Articles

Kannada
English summary
Tata Motors has introduced a mild update to the Tiago and Tigor JTP twins.
Story first published: Wednesday, August 14, 2019, 13:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X