ಎರಡು ಹೊಸ ಮಾದರಿಗಳಲ್ಲಿ ಬಿಡುಗಡೆಯಾದ ಟಾಟಾ ಟಿಗೋರ್

ಇದುವರೆಗೂ ಟಾಟಾ ಟಿಗೋರ್ ಎ‍ಎಂ‍‍ಟಿ ಕಾರ್ ಅನ್ನು ಝಡ್‍ಎಕ್ಸ್ ಎ ಮಾದರಿಯಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿತ್ತು. ಈ ಕಾರಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.7 ಲಕ್ಷಗಳಾಗಿದೆ. ಈಗ ಟಾಟಾ ಮೋಟಾರ್ಸ್ ಟಿಗೋರ್‍‍ನ ಎರಡು ಹೊಸ ಮಾದರಿಗಳನ್ನು ಬಿಡುಗಡೆಗೊಳಿಸಿದೆ.

ಎರಡು ಹೊಸ ಮಾದರಿಗಳಲ್ಲಿ ಬಿಡುಗಡೆಯಾದ ಟಾಟಾ ಟಿಗೋರ್

ಮೊದಲನೇ ಮಾದರಿಯು ಎಕ್ಸ್ ಎಂ‍ಎ ಆಗಿದ್ದು, ಎರಡನೇಯದು ಎಕ್ಸ್ ಝಡ್‍ಎ ಪ್ಲಸ್ ಆಗಿದೆ. ಎಕ್ಸ್ ಎಂ‍ಎ ಮಾದರಿಯ ಕಾರಿನ ಬೆಲೆಯು ರೂ. 6.39 ಲಕ್ಷಗಳಾಗಿದ್ದರೆ, ಎಕ್ಸ್ ಝಡ್‍ಎ ಪ್ಲಸ್ ಬೆಲೆಯು ರೂ.7.24 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ದರಗಳಾಗಿವೆ. ಟಿಗೋರ್ ಸರಣಿಯ ಹೊಸ ಮಾದರಿ ಕಾರುಗಳ ಬಿಡುಗಡೆಯ ಬಗ್ಗೆ ಟಾಟಾ ಮೋಟಾರ್ಸ್‍‍ನ ಪ್ಯಾಸೆಂಜರ್ ವೆಹಿಕಲ್ಸ್ ಬಿಸಿನೆಸ್ ಯೂನಿಟ್‍‍ನ ಸೇಲ್ಸ್, ಮಾರ್ಕೆಟಿಂಗ್ ಹಾಗೂ ಗ್ರಾಹಕರ ಸೇವೆಗಳ ಉಪಾಧ್ಯಕ್ಷರಾದ ಎಸ್ ಎನ್ ಬರ್ಮನ್‍‍ರವರು ಮಾತನಾಡಿದ್ದಾರೆ.

ಎರಡು ಹೊಸ ಮಾದರಿಗಳಲ್ಲಿ ಬಿಡುಗಡೆಯಾದ ಟಾಟಾ ಟಿಗೋರ್

ಮಾರುಕಟ್ಟೆಯಲ್ಲಿನ ನಮ್ಮ ಬೆಳವಣಿಗೆಯ ಸ್ಥಿರತೆಯನ್ನು ಕಾಪಾಡಲು, ನಾವು ಅಭಿವೃದ್ಧಿಪಡಿಸಿರುವ ಟೆಕ್ನಾಲಜಿಯನ್ನು ನಮ್ಮ ಹೊಸ ವಾಹನಗಳಲ್ಲಿ ಹಿಂದಿನಿಂದಲೂ ಅಳವಡಿಸುತ್ತಾ ಬಂದಿದ್ದೇವೆ. ಇದರಿಂದಾಗಿ ನಮ್ಮ ಗ್ರಾಹಕರಿಗೆ ಹೆಚ್ಚಿನ ಫೀಚರ್‍‍ಗಳನ್ನು ನೀಡಿ ಅವರ ನಿರೀಕ್ಷೆಯನ್ನು ಮುಟ್ಟಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಎರಡು ಹೊಸ ಮಾದರಿಗಳಲ್ಲಿ ಬಿಡುಗಡೆಯಾದ ಟಾಟಾ ಟಿಗೋರ್

ಆಟೋಮ್ಯಾಟಿಕ್ ವಾಹನಗಳನ್ನು ಸತತವಾಗಿ ವಿಸ್ತರಿಸಿ, ಬಲಗೊಳಿಸುವುದು ನಮ್ಮ ಯೋಜನೆಯಲ್ಲಿ ಸೇರಿದೆ. ಗ್ರಾಹಕರು ನಮ್ಮ ಹೊಸ ಸೇವೆಗಳ ಪ್ರಯೋಜನವನ್ನು ಪಡೆಯಲಿದ್ದಾರೆ ಎಂಬ ನಂಬಿಕೆಯಿದೆ ಎಂದು ಹೇಳಿದರು.

ಎರಡು ಹೊಸ ಮಾದರಿಗಳಲ್ಲಿ ಬಿಡುಗಡೆಯಾದ ಟಾಟಾ ಟಿಗೋರ್

ಟಾಟಾ ಟಿಗೋರ್ ಎ‍ಎಂ‍‍ಟಿ ಕಾರ್ ಅನ್ನು ಪೆಟ್ರೋಲ್ ಎಂಜಿನ್‍‍ನಲ್ಲಿ ಮಾತ್ರ ಮಾರಾಟ ಮಾಡಲಾಗುವುದು. ಇದೇ ರೀತಿಯ ಎಂಜಿನ್ ಅನ್ನು ಟಿಯಾಗೋ ಕಾರಿನಲ್ಲಿಯೂ ಸಹ ಅಳವಡಿಸಲಾಗಿದೆ. ಈ ಎಂಜಿನ್ 84 ಬಿ‍‍ಹೆಚ್‍‍ಪಿ ಹಾಗೂ 114 ಎನ್‍ಎಂ ಟಾರ್ಕ್ ಉತ್ಪಾದಿಸಲಿದ್ದು, ಪ್ರತಿ ಲೀಟರಿಗೆ 21 ಕಿ.ಮೀ ಮೈಲೇಜ್ ನೀಡಲಿದೆ. ಟಾಟಾ ಕಂಪನಿಯು, ಟಿಗೋರ್ ಕಾರಿನ ಪೆಟ್ರೋಲ್, ಡೀಸೆಲ್ ಮಾದರಿಗಳ ಜೊತೆಗೆ ಎಲೆಕ್ಟ್ರಿಕ್ ಮಾದರಿಯ ಕಾರುಗಳನ್ನು ಸಹ ಮಾರಾಟ ಮಾಡಲಿದೆ.

ಎರಡು ಹೊಸ ಮಾದರಿಗಳಲ್ಲಿ ಬಿಡುಗಡೆಯಾದ ಟಾಟಾ ಟಿಗೋರ್

ಸದ್ಯಕ್ಕೆ ಟಿಗೋರ್‍‍ನ ಎಲೆಕ್ಟ್ರಿಕ್ ಕಾರುಗಳನ್ನು ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ಮಾತ್ರ ಮಾರಾಟ ಮಾಡಲಾಗುತ್ತಿದೆ. ಆದರೆ ಕೆಲವು ಡೀಲರ್‍‍ಗಳು ಟಿಗೋರ್ ಎಲೆಕ್ಟ್ರಿಕ್ ಕಾರ್ ಅನ್ನು ಪ್ರತಿಯೊಬ್ಬರಿಗೂ ಮಾರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಎಲೆಕ್ಟ್ರಿಕ್ ಕಾರಿನ ಬೆಲೆಯು ರೂ.13 ಲಕ್ಷಗಳಾಗಿರಲಿದೆ.

ಎರಡು ಹೊಸ ಮಾದರಿಗಳಲ್ಲಿ ಬಿಡುಗಡೆಯಾದ ಟಾಟಾ ಟಿಗೋರ್

ಇನ್ನು ಟಿಗೋರ್ ಎಲೆಕ್ಟ್ರಿಕ್ ಕಾರಿನ ಬಗ್ಗೆ ಹೇಳುವುದಾದರೆ, ಇತ್ತೀಚಿಗಷ್ಟೆ ಟಾಟಾ ಮೋಟಾರ್ಸ್ ಅಟಲ್ ಇಂದೋರ್ ಸಿಟಿ ಟ್ರಾನ್ಸ್ ಪೋರ್ಟ್ ಸರ್ವಿಸ್ ಲಿಮಿಟಿಡ್ (ಎ‍ಐ‍‍ಸಿ‍‍ಟಿ‍ಎಸ್‍ಎಲ್) ಸಹಭಾಗಿತ್ವದಲ್ಲಿ 50 ಟಿಗೋರ್ ಎಲೆಕ್ಟ್ರಿಕ್ ವಾಹನಗಳನ್ನು ಇಂದೋರ್‍‍ನಲ್ಲಿ ಬಿಡುಗಡೆಗೊಳಿಸಿತ್ತು. ಈ ಯೋಜನೆಯು ಇಇಸಿ‍ಎಲ್‍‍ನ ಭಾಗವಾಗಿದ್ದು, ಈ ವಾಹನಗಳ ಪೂರೈಕೆಯು ಎಲೆಕ್ಟ್ರಿಕ್ ವಾಹನಗಳ ಸಂಚಾರವನ್ನು ಉತ್ತೇಜಿಸುವ ಯೋಜನೆಯ ಭಾಗವಾಗಿದೆ.

MOST READ: ಮಾರಾಟದಲ್ಲಿ ಹಾರ್ಲೆ ಡೇವಿಡ್‍‍ಸನ್ ಹಿಂದಿಕ್ಕಿದ ಕೆ‍‍ಟಿ‍ಎಂ

ಎರಡು ಹೊಸ ಮಾದರಿಗಳಲ್ಲಿ ಬಿಡುಗಡೆಯಾದ ಟಾಟಾ ಟಿಗೋರ್

ಇಂದೋರ್ ಭಾರತದ ಸ್ವಚ್ಛ ನಗರವೆಂಬ ಹೆಗ್ಗಳಿಕೆಯನ್ನು ಹೊಂದಿದೆ. ಈ ಕಾರಣಕ್ಕಾಗಿ, ಪರಿಸರ ಸ್ನೇಹಿಯಾದ 50 ಟಾಟಾ ಟಿಗೋರ್ ಎಲೆಕ್ಟ್ರಿಕ್ ವಾಹನಗಳನ್ನು ಟೆಂಡರ್ ಫ್ಲೋಟೆಡ್ ಯೋಜನೆಯ ಭಾಗವಾಗಿ ಸೇರ್ಪಡೆಗೊಳಿಸಲಾಗಿದೆ.

MOST READ: ವಿನೂತನ ವಿನ್ಯಾಸದೊಂದಿಗೆ ಬಿಡುಗಡೆಯಾದ ಅಪೆ ಸಿಟಿ ಪ್ಲಸ್

ಎರಡು ಹೊಸ ಮಾದರಿಗಳಲ್ಲಿ ಬಿಡುಗಡೆಯಾದ ಟಾಟಾ ಟಿಗೋರ್

ಟಾಟಾ ಟಿಗೋರ್ ಎಲೆಕ್ಟ್ರಿಕ್ ವಾಹನವನ್ನು ಅಸೊಚಾಮ್ ಸಂಸ್ಥೆಯು ವರ್ಷದ ಎಲೆಕ್ಟ್ರಿಕ್ ಕಾರು ಎಂದು ಗುರುತಿಸಿದೆ. ಟಾಟಾ ಮೋಟಾರ್ಸ್ ಕಂಪನಿಯು, ಟಿಗೋರ್ ಹಾಗೂ ಟಿಯಾಗೋ ಕಾರುಗಳಲ್ಲಿರುವ ಎಲೆಕ್ಟ್ರಿಕ್ ಪವರ್‍‍ಟ್ರೇನ್‍‍ಗಳನ್ನು ಮರುವಿನ್ಯಾಸಗೊಳಿಸಿದೆ.

MOST READ: ಮಾಡಿಫೈಗೊಂಡ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 500 ಬೈಕ್

ಎರಡು ಹೊಸ ಮಾದರಿಗಳಲ್ಲಿ ಬಿಡುಗಡೆಯಾದ ಟಾಟಾ ಟಿಗೋರ್

ಟಿಗೋರ್ ಎಲೆಕ್ಟ್ರಿಕ್ ವಾಹನದಲ್ಲಿ 40 ಕೆ‍‍ಡಬ್ಲ್ಯು ಪವರ್ ಹೊಂದಿರುವ ಎಲೆಕ್ಟ್ರಿಕ್ ಮೋಟಾರ್ ಅಳವಡಿಸಲಾಗಿದ್ದು, ಮುಂಭಾಗದಲ್ಲಿರುವ ವ್ಹೀಲ್‍‍ಗಳಿಗೆ ಪವರ್ ನೀಡುವ ಸಿಂಗಲ್ ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಸಿಸ್ಟಂ ಹೊಂದಿದೆ. ಟಾಟಾ ಟಿಗೋರ್‍‍ನ ಎಲೆಕ್ಟ್ರಿಕ್ ಕಾರು ಮಹೀಂದ್ರಾ ಕಂಪನಿಯ ಇ-ವೆರಿಟೋ ಕಾರಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Tata Tigor AMT launched in two more trims - Read in kannada
Story first published: Monday, June 17, 2019, 14:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X