ಎರಡೂವರೆ ಸಾವಿರ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೆಷನ್‌ಗಳನ್ನು ನಿರ್ಮಾಣ ಮಾಡಲಿದೆ ಟಾಟಾ

ಹೆಚ್ಚುತ್ತಿರುವ ಮಾಲಿನ್ಯಕ್ಕೆ ಕಡಿವಾಣ ಹಾಕಲು ಭಾರತದಲ್ಲಿ ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಮಾರಾಟವನ್ನು ತಗ್ಗಿಸಿ ಎಲೆಕ್ಟ್ರಿಕ್ ಕಾರುಗಳ ಖರೀದಿಯತ್ತ ಗ್ರಾಹಕರನ್ನು ಸೆಳೆಯಲು ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ಮಾಡಲಾಗಿದ್ದು, ಇದೇ ಪೂರಕವಾಗಿ ಆಟೋ ಉತ್ಪಾದನಾ ಸಂಸ್ಥೆಗಳು ಸಹ ವಿವಿಧ ಅಭಿವೃದ್ಧಿ ಕಾರ್ಯಕ್ರಮ ಕೈಗೊಳ್ಳುತ್ತಿರುವುದು ಎಲೆಕ್ಟ್ರಿಕ್ ಕಾರುಗಳ ಆಯ್ಕೆಗೆ ಮತ್ತಷ್ಟು ಪೂರಕ ವಾತಾವರಣ ನಿರ್ಮಾಣವಾಗುತ್ತಿದೆ.

ಎರಡೂವರೆ ಸಾವಿರ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಪೆಷನ್‌ಗಳನ್ನು ನಿರ್ಮಾಣ ಮಾಡಲಿದೆ ಟಾಟಾ

ಸದ್ಯ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳು ಅಭಿವೃದ್ಧಿ ಮತ್ತು ಮಾರಾಟ ಪ್ರಕ್ರಿಯೆ ಪೂರಕವಾದ ವಾತಾವರಣ ಇದ್ದರೂ ಸಹ ಸಮರ್ಪಕವಾದ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೆಷನ್‌ಗಳು ಇಲ್ಲದಿರುವುದು ಮಹತ್ವದ ಯೋಜನೆಗೆ ಹಿನ್ನಡೆ ಉಂಟಾಗುತ್ತಿದೆ. ಹೀಗಾಗಿ ಬಹುತೇಕ ವಾಹನ ಸಂಸ್ಥೆಗಳು ಎಲೆಕ್ಟ್ರಿಕ್ ಕಾರುಗಳ ಅಭಿವೃದ್ಧಿಗಿಂತ ಮೊದಲ ಚಾರ್ಚಿಂಗ್ ಸ್ಟೆಷನ್‌ಗಳನ್ನು ನಿರ್ಮಾಣಕ್ಕೆ ಹೆಚ್ಚಿನ ಗಮನಹರಿಸುತ್ತಿದ್ದು, ಟಾಟಾ ಮೋಟಾರ್ಸ್ ಸಹ ಮುಂದಿನ ಕೆಲವೇ ದಿನಗಳಲ್ಲಿ ದೇಶದ ವಿವಿಧ ನಗರಗಳಲ್ಲಿ ಒಟ್ಟು 2,700 ಚಾರ್ಚಿಂಗ್ ಸ್ಟೆಷನ್‌ಗಳನ್ನು ನಿರ್ಮಾಣ ಮಾಡಲು ಹೊಸ ಒಪ್ಪಂದಕ್ಕೆ ಸಹಿ ಹಾಕಿದೆ.

ಎರಡೂವರೆ ಸಾವಿರ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಪೆಷನ್‌ಗಳನ್ನು ನಿರ್ಮಾಣ ಮಾಡಲಿದೆ ಟಾಟಾ

ಹೌದು, ಎಲೆಕ್ಟ್ರಿಕ್ ಕಾರುಗಳ ನಿರ್ಮಾಣ ಯೋಜನೆಗೆ ಈಗಾಗಲೇ ಚಾಲನೆ ನೀಡಿರುವ ಟಾಟಾ ಸಂಸ್ಥೆಯು ಟಿಗೋರ್ ಇವಿ, ಟಿಯಾಗೋ ಇವಿ ಮತ್ತು ಆಲ್‌ಟ್ರೊಜ್ ಇವಿ ಕಾರುಗಳನ್ನು ಹೊರತಂದಿದ್ದು, ಗ್ರಾಹಕರ ಆಯ್ಕೆಗೆ ಪೂರಕವಾಗುವಂತೆ ಅಗತ್ಯ ಚಾರ್ಜಿಂಗ್ ಸ್ಟೆಷನ್‌ಗಳನ್ನು ತೆರೆಯಲು ನಿರ್ಧರಿಸಿದೆ.

ಎರಡೂವರೆ ಸಾವಿರ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಪೆಷನ್‌ಗಳನ್ನು ನಿರ್ಮಾಣ ಮಾಡಲಿದೆ ಟಾಟಾ

ಇದಕ್ಕಾಗಿಯೇ ಆಸ್ಟ್ರೇಲಿಯಾದ ಟ್ರಿಟಿಯಂ ಪ್ರೈ.ಲಿ ಸಂಸ್ಥೆಯೊಂದಿಗೆ ಹೊಸ ಒಪ್ಪಂದಕ್ಕೆ ಸಹಿ ಹಾಕಿರುವ ಟಾಟಾ ಸಂಸ್ಥೆಯು ದೇಶದ ವಿವಿಧ ನಗರಗಳಲ್ಲಿ ಡಿಸಿ ಫಾಸ್ಟ್ ಚಾರ್ಜಿಂಗ್ ಸ್ಟೆಷನ್‌ಗಳನ್ನು ನಿರ್ಮಾಣ ಮಾಡಲಿದ್ದು, ಕೇಂದ್ರ ಸರ್ಕಾರವು ಜಾರಿಗೆ ಮಾಡಿರುವ FAME ಎರಡನೇ ಹಂತದ ಯೋಜನೆಯಿಂದಲೂ ಟಾಟಾ ಹೊಸ ಯೋಜನೆಗೆ ಆರ್ಥಿಕ ಸಹಾಯ ಸಿಗಲಿದೆ.

ಎರಡೂವರೆ ಸಾವಿರ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಪೆಷನ್‌ಗಳನ್ನು ನಿರ್ಮಾಣ ಮಾಡಲಿದೆ ಟಾಟಾ

ಕೇಂದ್ರ ಸರ್ಕಾರವು 2017ರಿಂದಲೇ ಎಲೆಕ್ಟ್ರಿಕ್ ಕಾರುಗಳ ಅಭಿವೃದ್ಧಿ ಮತ್ತು ಚಾರ್ಜಿಂಗ್ ಸ್ಟೆಷನ್‌ಗಳನ್ನು ತುರ್ತಾಗಿ ನಿರ್ಮಾಣ ಮಾಡಲು FAME ಯೋಜನೆಯನ್ನು ಜಾರಿಗೆ ಮಾಡಲಾಗಿದ್ದು, ಮೊದಲ ಹಂತದಲ್ಲಿ ರೂ. 1700 ಕೋಟಿ ಖರ್ಚು ಮಾಡಿರುವ ಕೇಂದ್ರವು ಎರಡನೇ ಹಂತದ ಯೋಜನೆಗಾಗಿ ಬರೋಬ್ಬರಿ ರೂ. 10 ಸಾವಿರ ಕೋಟಿ ಹಣವನ್ನು ಮೀಸಲು ಇರಿಸಿದೆ.

ಎರಡೂವರೆ ಸಾವಿರ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಪೆಷನ್‌ಗಳನ್ನು ನಿರ್ಮಾಣ ಮಾಡಲಿದೆ ಟಾಟಾ

ಮುಂದಿನ ಮೂರು ವರ್ಷಗಳ ಅವಧಿಗೆ FAME ಎರಡನೇ ಹಂತದ ಯೋಜನೆಯು ಅನುಷ್ಠಾನಗೊಳ್ಳಲಿದ್ದು, ಎಲೆಕ್ಟ್ರಿಕ್ ಕಾರು ಖರೀದಿಸುವ ಗ್ರಾಹಕರಿಗೆ ಸಬ್ಸಡಿ, ಆಕರ್ಷಕ ಬಡ್ಡಿದರಗಳಲ್ಲಿ ಸಾಲ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣವಾಗುವ ಚಾರ್ಜಿಂಗ್ ಸ್ಟೆಷನ್‌ಗಳಿಗೂ ಸಬ್ಸಡಿಯನ್ನು ಈ ಯೋಜನೆ ಅಡಿ ನೀಡಲಾಗುತ್ತೆ.

MOST READ: ಭದ್ರತೆಗಾಗಿ ಮತ್ತೊಂದು ದುಬಾರಿ ಕಾರು ಖರೀದಿಸಿದ ಉದ್ಯಮಿ ಮುಕೇಶ್ ಅಂಬಾನಿ..!

ಎರಡೂವರೆ ಸಾವಿರ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಪೆಷನ್‌ಗಳನ್ನು ನಿರ್ಮಾಣ ಮಾಡಲಿದೆ ಟಾಟಾ

ಹೀಗಾಗಿ ಕೇಂದ್ರ ಸರ್ಕಾರದ ಯೋಜನೆಗೆ ಪೂರಕವಾಗಿ ಆಟೋ ಉತ್ಪಾದನಾ ಸಂಸ್ಥೆಗಳು ಎಲೆಕ್ಟ್ರಿಕ್ ಕಾರುಗಳ ನಿರ್ಮಾಣ ಮತ್ತು ಚಾರ್ಜಿಂಗ್ ಸ್ಟೆಷನ್‌ಗಳ ನಿರ್ಮಾಣದ ಮೇಲೆ ವಿಶೇಷ ಆಸಕ್ತಿ ವಹಿಸುತ್ತಿದ್ದು, 2020ರ ವೇಳೆಗೆ ಕನಿಷ್ಠ ಶೇ.25ರಷ್ಟು ವಾಹನಗಳನ್ನು ಮಾರಾಟ ಮಾಡಬೇಕೆಂಬ ಧ್ಯೇಯ ಹೊಂದಲಾಗಿದೆ.

ಎರಡೂವರೆ ಸಾವಿರ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಪೆಷನ್‌ಗಳನ್ನು ನಿರ್ಮಾಣ ಮಾಡಲಿದೆ ಟಾಟಾ

ಇನ್ನು ಭಾರತೀಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಟಾಟಾ ಮೋಟಾರ್ಸ್, ಮಹೀಂದ್ರಾ, ಮಾರುತಿ ಸುಜುಕಿ, ಹ್ಯುಂಡೈ, ರೆನಾಲ್ಟ್, ನಿಸ್ಸಾನ್, ಅಥೆರ್, ಟೊಯೊಟಾ, ಹೀರೋ, ಹೋಂಡಾ ಸಂಸ್ಥೆಗಳು ವಿವಿಧ ಎಲೆಕ್ಟ್ರಿಕ್ ಆವೃತ್ತಿ ವಾಹನಗಳನ್ನು ಅಭಿವೃದ್ಧಿಗೊಳಿಸಿದ್ದು, 2020ರ ಆರಂಭದಲ್ಲಿ ಬಹುತೇಕ ವಾಹನ ಸಂಸ್ಥೆಯು ಎಲೆಕ್ಟ್ರಿಕ್ ವರ್ಷನ್ ವಾಹನಗಳ ಮಾರಾಟಕ್ಕೆ ಭರ್ಜರಿಯಾಗಿ ಚಾಲನೆ ನೀಡಲಿದೆ.

MOST READ: ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಸ್ಕೂಟರ್ ಮಾಲೀಕ ಮಾಡಿದ್ದೇನು ಗೊತ್ತಾ?

ಎರಡೂವರೆ ಸಾವಿರ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಪೆಷನ್‌ಗಳನ್ನು ನಿರ್ಮಾಣ ಮಾಡಲಿದೆ ಟಾಟಾ

ಇದರಲ್ಲಿ ಸದ್ಯ ಟಾಟಾ ಸಂಸ್ಥೆಯು ಅನಾವರಣಗೊಳಿಸಿರುವ ಆಲ್‌ಟ್ರೊಜ್ ಕಾರು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದ್ದು, ಪ್ರತಿ ಚಾರ್ಜ್‌ಗೆ 250-300 ಕಿ.ಮಿ ಮೈಲೇಜ್ ನೀಡುವ ಈ ಕಾರು ಕೇವಲ ರೂ.10 ಲಕ್ಷದೊಳಗೆ ಖರೀದಿಗೆ ಲಭ್ಯವಾಗುವ ಸುಳಿವು ನೀಡಲಾಗಿದೆ.

Most Read Articles

Kannada
English summary
Tata To Set Up 2,700 Fast Charging Stations India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X