ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಕೇಂದ್ರ ಸರ್ಕಾರವು ಶೀಘ್ರದಲ್ಲೇ 15 ವರ್ಷಕ್ಕೂ ಹಳೆಯ ವಾಹನಗಳನ್ನು ಸ್ಕ್ರಾಪ್ ಮಾಡುವವರಿಗೆ ತೆರಿಗೆ ವಿನಾಯಿತಿಯನ್ನು ಘೋಷಿಸಲಿದೆ. ಈ ಬಗ್ಗೆ ಸಾರಿಗೆ ಇಲಾಖೆಯು ಹೊಸ ಪ್ರಸ್ತಾವನೆಯನ್ನು ಸಲ್ಲಿಸಿದ್ದು, 15 ವರ್ಷ ಹಾಗೂ ಅದಕ್ಕಿಂತ ಹಳೆಯ ವಾಹನಗಳ ಮಾಲೀಕರಿಗೆ ತೆರಿಗೆ ವಿನಾಯಿತಿ ನೀಡಲಿದೆ.

ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಹಳೆಯ ವಾಹನಗಳಿಗಾಗಿ ಕೇಂದ್ರ ಸರ್ಕಾರವು ಹೊಸ ನಿಯಮವನ್ನು ಪ್ರಸ್ತಾಪಿಸಿದೆ. ಈ ನಿಯಮವನ್ನು ಸದ್ಯದಲ್ಲೇ ಬಹಿರಂಗಪಡಿಸಲಾಗುವುದು. ಈ ಬಗ್ಗೆ ಸಾರಿಗೆ ಇಲಾಖೆಯು ಪ್ರಧಾನಿ ಕಾರ್ಯಾಲಯದ ಜೊತೆಗೆ ಮಾತುಕತೆ ನಡೆಸಿದೆ. ಈ ಹೊಸ ಪ್ರಸ್ತಾವನೆಯು ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿರುವ ಆಟೋಮೊಬೈಲ್ ಉದ್ಯಮಕ್ಕೆ ಹೊಸ ಚೈತನ್ಯ ನೀಡುವ ಸಾಧ್ಯತೆಗಳಿವೆ.

ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

15 ವರ್ಷಕ್ಕಿಂತ ಹಳೆಯದಾದ ವಾಹನಗಳ ಮಾಲೀಕರಿಗೆ ತೆರಿಗೆ ವಿನಾಯಿತಿ ನೀಡುವುದರಿಂದ ಹೊಸ ವಾಹನಗಳನ್ನು ಕೊಳ್ಳುವವರು ತಮ್ಮಲಿರುವ ಹಳೆಯ ವಾಹನಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ ಎಂದು ಸಚಿವಾಲಯ ಭಾವಿಸಿದೆ.

ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಇದರಿಂದಾಗಿ ದೇಶಿಯ ಮಾರುಕಟ್ಟೆಯಲ್ಲಿನ ಬೇಡಿಕೆ ಹಾಗೂ ಮಾರಾಟವು ಸುಧಾರಿಸಲಿದೆ. ಭಾರತ ಸರ್ಕಾರದ ಹೊಸ ಸ್ಕ್ರಾಪೇಜ್ ನೀತಿಯು ಹಲವು ಪ್ರಸ್ತಾಪಗಳನ್ನು ಒಳಗೊಂಡಿರಲಿದೆ. ಹಳೆಯ ವಾಹನಗಳು ಪ್ರತಿ ಆರು ತಿಂಗಳಿಗೊಮ್ಮೆ ವಾಹನದ ಫಿಟ್‌ನೆಸ್ ಪ್ರಮಾಣಪತ್ರವನ್ನು ಪಡೆಯುವುದನ್ನು ಕಡ್ಡಾಯಗೊಳಿಸಲಾಗುವುದು.

ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಈ ಬಗ್ಗೆ ಇಟಿ ಆಟೊಗೆ ಮಾಹಿತಿ ನೀಡಿರುವ ಅಧಿಕಾರಿಗಳು ನಾವು ಸ್ಕ್ರ್ಯಾಪಿಂಗ್ ಪ್ರಮಾಣಪತ್ರವನ್ನು ವ್ಯಾಪಾರೀಕರಣಗೊಳಿಸುತ್ತೇವೆ. ಇದರಿಂದಾಗಿ ಗ್ರಾಹಕರು ಹೊಸ ವಾಹನವನ್ನು ಖರೀದಿಸುವಾಗ ಆ ಪ್ರಮಾಣಪತ್ರದ ಬದಲಿಗೆ ರಿಯಾಯಿತಿಯನ್ನು ಪಡೆಯಬಹುದು. ಸ್ಕ್ರ್ಯಾಪಿಂಗ್ ನೀತಿಯ ಭಾಗವಾಗಿ ತೆರಿಗೆ ವಿನಾಯಿತಿಯನ್ನು ನೀಡಲಿದ್ದೇವೆ ಎಂದು ಹೇಳಿದ್ದಾರೆ.

ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಭಾರತೀಯ ವಾಹನ ಉದ್ಯಮವು ಕಳೆದ 20 ವರ್ಷಗಳಲ್ಲಿಯೇ ಮೊದಲ ಬಾರಿಗೆ ಅತ್ಯಂತ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಬಹುತೇಕ ವಾಹನ ತಯಾರಕ ಕಂಪನಿಗಳು ಕಳೆದ ಒಂಭತ್ತು ತಿಂಗಳುಗಳಿಂದ ಸತತವಾಗಿ ಮಾರಾಟದಲ್ಲಿ ಕುಸಿತವನ್ನು ಕಾಣುತ್ತಿವೆ.

ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಮಾರುಕಟ್ಟೆಯಲ್ಲಿನ ಬೇಡಿಕೆಯನ್ನು ಮರಳಿ ತರುವ ಸಲುವಾಗಿ, ಕೇಂದ್ರ ಸರ್ಕಾರವು ಇತ್ತೀಚಿಗೆ ಹಲವಾರು ಕ್ರಮಗಳನ್ನು ಘೋಷಿಸಿದೆ. ಹೊಸ ವಾಹನಗಳ ರಿಜಿಸ್ಟ್ರೇಷನ್ ಶುಲ್ಕದ ಹೆಚ್ಚಳವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿರುವುದು ಇದರಲ್ಲಿ ಸೇರಿದೆ. ಆದರೆ, ನೋಂದಣಿ ನವೀಕರಣ ಶುಲ್ಕವನ್ನು ಯೋಜಿಸಿದಂತೆ ಜಾರಿಗೆ ತರಲಾಗುವುದು.

MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಇದರಿಂದಾಗಿ ಪ್ರಯಾಣಿಕ ವಾಹನಗಳ ಬೆಲೆಯು ಸುಮಾರು ರೂ.15 ಸಾವಿರದಷ್ಟು ಏರಿಕೆಯಾಗಲಿದೆ. ದೇಶಿಯ ಮಾರುಕಟ್ಟೆಯಲ್ಲಿರುವ ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳ ನೋಂದಣಿ ಶುಲ್ಕವನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಈ ಹಿಂದೆ ಪ್ರಸ್ತಾವನೆ ಸಲ್ಲಿಸಿತ್ತು. ಈ ವಾಹನಗಳ ನೋಂದಣಿ ಶುಲ್ಕವು ಪ್ರಸ್ತುತ ದರಗಳಿಗಿಂತ 25%ನಷ್ಟು ಹೆಚ್ಚಾಗಲಿದೆ ಎಂದು ಹೇಳಲಾಗಿತ್ತು.

MOST READ: ಅಚ್ಚರಿಯಾದರೂ ನಿಜ: ಭಾರತದಲ್ಲಿಲ್ಲದ ಈ ಕಾರುಗಳು ಪಾಕಿಸ್ತಾನದಲ್ಲಿವೆ..!

ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಈ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಆದರೆ ಆಟೋಮೊಬೈಲ್ ಉದ್ಯಮವು ನಿಧಾನಗತಿಯಲ್ಲಿರುವ ಕಾರಣಕ್ಕೆ ನೋಂದಣಿ ಶುಲ್ಕ ಹೆಚ್ಚಳವನ್ನು ತಡೆಹಿಡಿಯುವಂತೆ ಸರ್ಕಾರವನ್ನು ಒತ್ತಾಯಿಸಿದ ಕಾರಣ, ಕೇಂದ್ರ ಸರ್ಕಾರವು ಈ ಪ್ರಸ್ತಾಪವನ್ನು 2020ರ ಜುಲೈವರೆಗೆ ಮುಂದೂಡಿದೆ.

MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ನೋಂದಣಿ ಶುಲ್ಕ ಹೆಚ್ಚಳವನ್ನು ತಡೆಹಿಡಿಯುವುದರ ಜೊತೆಗೆ, 2020ರ ಮಾರ್ಚ್ ಅಥವಾ ಅದಕ್ಕೂ ಮೊದಲು ಖರೀದಿಸಲಾಗುವ ಎಲ್ಲಾ ಬಿಎಸ್ 4 ವಾಹನಗಳು ತಮ್ಮ ನೋಂದಣಿ ಅವಧಿ ಮುಗಿಯುವವರೆಗೆ ಕಾನೂನುಬದ್ಧವಾಗಿರುತ್ತವೆ ಎಂದು ಕೇಂದ್ರ ಸರ್ಕಾರವು ಸ್ಪಷ್ಟನೆ ನೀಡಿದೆ.

ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

2020ರ ಏಪ್ರಿಲ್ ನಂತರ ಎಲ್ಲಾ ಬಿಎಸ್4 ವಾಹನಗಳನ್ನು ಸ್ಥಗಿತಗೊಳಿಸಲಾಗುವುದು ಎಂಬ ವದಂತಿಗಳಿಗೆ ಕೇಂದ್ರ ಸರ್ಕಾರವು ಸ್ಪಷ್ಟನೆ ನೀಡಿದೆ. ಇದರ ಜೊತೆಗೆ ನಿರ್ಮಲಾ ಸೀತಾರಾಮನ್ ನೇತೃತ್ವದ ಹಣಕಾಸು ಇಲಾಖೆಯು 2020ರ ಮಾರ್ಚ್‍‍ವರೆಗೂ ಖರೀದಿಸಲಾಗುವ ಎಲ್ಲಾ ವಾಹನಗಳ ಮೇಲೆ ಹೆಚ್ಚುವರಿಯಾಗಿ 15%ನಷ್ಟು ಕಡಿತ ಘೋಷಿಸಿದೆ.

ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಭಾರತದ ಆಟೋಮೊಬೈಲ್ ಉದ್ಯಮವು ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಉದ್ಯಮದ ಬೇಡಿಕೆಯನ್ನು ಸುಧಾರಿಸಲು ಹಾಗೂ ಅದನ್ನು ಸರಿ ದಾರಿಗೆ ತರಲು ಕೇಂದ್ರ ಸರ್ಕಾರವು ಹಲವಾರು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಹೊಸ ಸ್ಕ್ರ್ಯಾಪೇಜ್ ನೀತಿ ಅವುಗಳಲ್ಲಿ ಒಂದಾಗಿದೆ.

ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಕಡ್ಡಾಯ ಸ್ಕ್ರ್ಯಾಪಿಂಗ್ ನೀತಿಯು ಸಾಕಷ್ಟು ಹೊಸ ಅವಕಾಶಗಳನ್ನು ತೆರೆಯಲಿದ್ದು, ಮಾಲಿನ್ಯ ಉತ್ಪಾದನೆಯನ್ನು ತಡೆಯುವುದಲ್ಲದೇ ಹೊಸ ವಾಹನಗಳ ಉತ್ಪಾದನೆಯೂ ಮತ್ತಷ್ಟು ಚುರುಕುಗೊಳ್ಳಲಿದೆ. ಹೀಗಾಗಿ ಸ್ಕ್ರ್ಯಾಪಿಂಗ್ ನೀತಿಯಡಿ ಸಂಗ್ರಹವಾಗುವ ಕಾರುಗಳಿಂದ ಭಾರೀ ಪ್ರಮಾಣದ ಬೀಡಿಭಾಗಗಳು ಸಂಗ್ರಹವಾಗಲಿದ್ದು, ಇದಕ್ಕಾಗಿಯೇ ಮಾರುತಿ ಸುಜುಕಿ ಮತ್ತು ಟೊಯೊಟಾ ಸುಶೋ ಸಂಸ್ಥೆಗಳ ಜೊತೆಗೂಡಿ ಸ್ಕ್ರ್ಯಾಪಿಂಗ್ ಘಟಕ ತೆರಯಲು ಯೋಜನೆ ರೂಪಿಸಿವೆ.

ಶೀಘ್ರದಲ್ಲೇ ಸ್ಕ್ರ್ಯಾಪಿಂಗ್ ನೀತಿ ಜಾರಿ

ಟೊಯೊಟಾ ಸುಶೋ ಸಂಸ್ಥೆಯು ಟೊಯೊಟಾ ಮೋಟಾರ್ಸ್ ಸಂಸ್ಥೆಯ ಅಂಗಸಂಸ್ಥೆಯಾಗಿದ್ದು, ಸ್ಟಿಲ್ ಉತ್ಪನ್ನಗಳ ಉತ್ಪಾದನೆಯಲ್ಲಿ ಜಾಗತಿಕವಾಗಿ ಗುರುತಿಸಿಕೊಂಡಿದೆ. ಇದೇ ಸಂಸ್ಥೆ ಇದೀಗ ಮಾರುತಿ ಸುಜುಕಿ ಜೊತೆಗೆ ಸ್ಕ್ರ್ಯಾಪಿಂಗ್ ಘಟಕ ನಿರ್ಮಾಣಕ್ಕೆ ಮುಂದಾಗಿವೆ.

ಶೀಘ್ರದಲ್ಲೇ ಸ್ಕ್ರ್ಯಾಪಿಂಗ್ ನೀತಿ ಜಾರಿ

ಹೆದ್ದಾರಿ ಮತ್ತು ಸಾರಿಗೆ ಇಲಾಖೆ, ಹಣಕಾಸು ಸಚಿವಾಲಯ ಮತ್ತು ಜಿಎಸ್‌ಟಿ ಕೌನ್ಸಿಲ್ ನೇತೃತ್ವದಲ್ಲಿ ನಡೆಯಲಿರುವ ಮಹತ್ವದ ಸಭೆಯಲ್ಲಿ ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಕುರಿತು ಅಂತಿಮ ತೀರ್ಮಾನ ಪ್ರಕಟವಾಗಲಿದ್ದು, ಹೊಸ ನೀತಿ ಜಾರಿಗೆ ಆಟೋ ಉತ್ಪಾದನಾ ಸಂಸ್ಥೆಗಳು ಒತ್ತಡ ಹೇರುತ್ತಿವೆ.

ಶೀಘ್ರದಲ್ಲೇ ಸ್ಕ್ರ್ಯಾಪಿಂಗ್ ನೀತಿ ಜಾರಿ

ಹೊಸ ನೀತಿಯಿಂದಾಗಿ ಕೇಂದ್ರ ಸರ್ಕಾರಕ್ಕೆ ಪ್ರತಿ ವರ್ಷ 10 ಸಾವಿರ ಕೋಟಿಯಷ್ಟು ಆದಾಯ ಹರಿದುಬರಲಿದ್ದು, ಇದು ಆಟೋ ಉತ್ಪಾದನಾ ಸಂಸ್ಥೆಗಳಿಗೂ ವರದಾನವಾಗಲಿದೆ. ಹಾಗೆಯೇ ಸ್ಕ್ರ್ಯಾಪಿಂಗ್ ನೀತಿ ಅಡಿಯಲ್ಲಿ ಸಂಗ್ರಹವಾಗುವ ಬಿಡಿಭಾಗಗಳ ಮರುಬಳಕೆಗೂ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಇದು ಹೊಸ ವಾಹನಗಳ ಉತ್ಪಾದನಾ ವೆಚ್ಚವನ್ನು ಗಣನೀಯವಾಗಿ ತಗ್ಗಿಸುವುದಲ್ಲದೇ ಗ್ರಾಹಕರಿಗೂ ಬೆಲೆ ಏರಿಕೆಯ ಬಿಸಿ ತಗ್ಗಲು ಸಹಕಾರಿಯಾಗಲಿದೆ.

ಶೀಘ್ರದಲ್ಲೇ ಸ್ಕ್ರ್ಯಾಪಿಂಗ್ ನೀತಿ ಜಾರಿ

ಇನ್ನು 15 ವರ್ಷಕ್ಕಿಂತ ಹಳೆಯದಾದ ವಾಹನಗಳ ಮಾಲೀಕರಿಗೆ ತೆರಿಗೆ ವಿನಾಯ್ತಿ ಸಹ ನೀಡುವ ಪ್ರಸ್ತಾವ ಸಲ್ಲಿಸಲಾಗಿದ್ದು, ಒಂದು ವೇಳೆ ಅವಧಿ ಮುಗಿದ ಹಳೆಯ ವಾಹನಗಳನ್ನು ಮುಂದುವರಿಸುವ ಇಚ್ಚೆಯಿದ್ದಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ವಾಹನದ ಫಿಟ್‌ನೆಸ್ ಪ್ರಮಾಣಪತ್ರವನ್ನು ಪಡೆಯುವುದನ್ನು ಕಡ್ಡಾಯಲಾಗಲಿದೆ.

ಶೀಘ್ರದಲ್ಲೇ ಸ್ಕ್ರ್ಯಾಪಿಂಗ್ ನೀತಿ ಜಾರಿ

ಒಟ್ಟಿನಲ್ಲಿ ಸ್ಕ್ರ್ಯಾಪಿಂಗ್ ನೀತಿಯು ಆಟೋ ಉದ್ಯಮಕ್ಕೆ ಭಾರೀ ಪ್ರಮಾಣದ ಆದಾಯ ತಂದುಕೊಡುವ ನೀರಿಕ್ಷೆಯಿದ್ದು, ಹೊಸ ನೀತಿಯಡಿ ಸ್ಕ್ರ್ಯಾಪಿಂಗ್ ಮಾಡಿಸದ ವಾಹನ ಮಾಲೀಕರಿಗೆ ವಾಹನ ನಿರ್ವಹಣಾ ವೆಚ್ಚವು ಮತ್ತಷ್ಟು ಅಧಿಕಗೊಳ್ಳಲಿದೆ ಎನ್ನಬಹುದು.

ಶೀಘ್ರದಲ್ಲೇ ಸ್ಕ್ರ್ಯಾಪಿಂಗ್ ನೀತಿ ಜಾರಿ

ಇದೇ ಕಾರಣಕ್ಕೆ ಸ್ಕ್ರ್ಯಾಪಿಂಗ್ ಉದ್ಯಮ ಸ್ಥಾಪನೆಗೆ ಮಾರುತಿ ಸುಜುಕಿ ಮತ್ತು ಟೊಯೊಟಾ ಸೇರಿದಂತೆ ಮಹೀಂದ್ರಾ ಕೂಡಾ ಇದೇ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದು, ಸ್ಕ್ರ್ಯಾಪಿಂಗ್ ಉದ್ಯಮದಲ್ಲೂ ಭಾರೀ ಪ್ರಮಾಣದ ಉದ್ಯೋಗ ಸೃಷ್ಠಿಗೆ ಇದು ಸಹಕಾರಿಯಾಗಲಿದೆ.

Most Read Articles

Kannada
English summary
Government Proposes Tax Incentives For Scrapping Old Vehicles In India - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X