ತಂತ್ರಜ್ಞಾನ ದೋಷದಿಂದಲೇ ಟೆಸ್ಲಾ ಕಾರು ಚಾಲಕನ ದುರ್ಮರಣ

ಟೆಸ್ಲಾದ ಆಟೋಪೈಲಟ್ ಸಿಸ್ಟಂ ಅಪಘಾತವನ್ನು ತಡೆಯಲು ವಿಫಲವಾಗಿದೆ ಎಂದು ಎನ್‍‍ಟಿ‍ಎಸ್‍‍ಬಿ ವರದಿ ನೀಡಿದೆ. ಎನ್‍‍ಟಿ‍ಎಸ್‍‍ಬಿ (ನ್ಯಾಷನಲ್ ಟ್ರಾನ್ಸ್ ಪೋರ್ಟೆಷನ್ ಸೇಫ್ಟಿ ಬೋರ್ಡ್) ಚಾಲಕನ ಸಾವಿಗೆ ಕಾರಣವಾದ ಟೆಸ್ಲಾ ಅಪಘಾತದ ಬಗ್ಗೆ ಪ್ರಾಥಮಿಕ ವರದಿ ನೀಡಿದೆ.

ತಂತ್ರಜ್ಞಾನ ದೋಷದಿಂದಲೇ ಟೆಸ್ಲಾ ಕಾರು ಚಾಲಕನ ದುರ್ಮರಣ

ವರದಿಯಲ್ಲಿ ತಿಳಿಸಿರುವಂತೆ, ಕಾರು ಅಪಘಾತವಾದಾಗ ಆಟೋಪೈಲಟ್ ಮೋಡ್‍‍ನಲ್ಲಿದ್ದು, ಅಪಘಾತವನ್ನು ತಡೆಯಲು ವಿಫಲವಾಗಿದೆ. ಈ ಘಟನೆಯು ಅಮೇರಿಕಾದಲ್ಲಿರುವ ಫ್ಲೋರಿಡಾದ ಡೆಲ್ರೆ ಬೀಚಿನ, ಪಾಮ್ ಬೀಚ್ ಕೌಂಟಿಯಲ್ಲಿ 2019ರ ಮಾರ್ಚ್ 01ರಂದು ನಡೆದಿತ್ತು. ಈ ಘಟನೆಯಲ್ಲಿರುವ ಕಾರು ಟೆಸ್ಲಾ ಮಾಡೆಲ್ 3 ಆಗಿದ್ದು, ರಸ್ತೆಯನ್ನು ದಾಟುವಾಗ ಸೆಮಿ-ಟ್ರೇಲರ್ ಟ್ರಕ್ಕಿಗೆ ಡಿಕ್ಕಿ ಹೊಡೆದಿದೆ. ಹತ್ತಿರದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಹಾಗೂ ಕಾರಿನ ಮುಂಭಾಗದಲ್ಲಿರುವ ಕ್ಯಾಮೆರಾದಲ್ಲಿ ಸೆರೆಯಾಗಿರುವಂತೆ ಟೆಸ್ಲಾದ ಮುಂದೆ ನಿಧಾನವಾಗಿ ಬಂದು ನಿಂತ ಟ್ರಕ್, ನಂತರದಲ್ಲಿ ಕಾರಿಗೆ ಅಡ್ಡವಾಗಿ ನಿಂತಿದೆ.

ಟೆಸ್ಲಾದ ಮಾಡೆಲ್ 3 ಕಾರು, ಟ್ರಕ್ಕಿನ ಎಡ ಭಾಗಕ್ಕೆ ಗುದ್ದಿದೆ. ಈ ದುರ್ಘಟನೆ ನಡೆದಾಗ ಕಾರಿನಲ್ಲಿ, 50 ವರ್ಷದ ಚಾಲಕ ಮಾತ್ರ ಇದ್ದನು. ವರದಿಗಳ ಪ್ರಕಾರ, ಚಾಲಕನು ಅಪಘಾತ ನಡೆಯುವ 10 ಸೆಕೆಂಡುಗಳ ಮುಂಚೆ ಆಟೋ ಪೈಲಟ್ ಸಿಸ್ಟಂ ಆನ್ ಮಾಡಿದ್ದಾನೆ. ಅದಾದ ನಂತರ ಸ್ಟೀಯರಿಂಗ್ ಅನ್ನು ಮುಟ್ಟಿರಲಿಲ್ಲ.

ತಂತ್ರಜ್ಞಾನ ದೋಷದಿಂದಲೇ ಟೆಸ್ಲಾ ಕಾರು ಚಾಲಕನ ದುರ್ಮರಣ

ವರದಿಯಲ್ಲಿ ಹೇಳಿರುವಂತೆ, ಟೆಸ್ಲಾದ ಆಟೋ ಪೈಲಟ್ ಸಿಸ್ಟಂ ಆಗಲಿ ಅಥವಾ ಚಾಲಕನೇ ಆಗಲಿ, ಟ್ರಕ್ಕಿಗೆ ಕಾರು ಗುದ್ದುವುದನ್ನು ತಡೆಯುವ ಯತ್ನ ಮಾಡಿಲ್ಲ. ಟೆಸ್ಲಾ ಕಾರು ಟ್ರಕ್ಕಿಗೆ ಗುದ್ದಿದ ನಂತರ ಸುಮಾರು 500 ಮೀಟರ್ ಚಲಿಸಿ ನಿಂತುಕೊಂಡಿದೆ. ಎನ್‍‍ಟಿ‍ಎಸ್‍‍ಬಿ ವರದಿಗಳ ಪ್ರಕಾರ, ಟೆಸ್ಲಾ ಕಾರು ಅಪಘಾತವಾದ ಸಂದರ್ಭದಲ್ಲಿ 109 ಕಿ.ಮೀ ವೇಗದಲ್ಲಿ ಚಲಿಸುತ್ತಿತ್ತು.

ತಂತ್ರಜ್ಞಾನ ದೋಷದಿಂದಲೇ ಟೆಸ್ಲಾ ಕಾರು ಚಾಲಕನ ದುರ್ಮರಣ

ಟೆಸ್ಲಾ ಕಾರುಗಳ ಅಪಘಾತವಾಗುತ್ತಿರುವುದು ಇದು ಮೊದಲ ಸಲವೇನಲ್ಲ. ಎನ್‍‍ಟಿ‍ಎಸ್‍‍ಬಿ ಇದಕ್ಕೆ ಮುಂಚೆ ಎರಡು ಬಾರಿ ಟೆಸ್ಲಾ ಕಾರು ಆಟೋ ಪೈಲಟ್ ಮೋಡಿನಲ್ಲಿ ಅಪಘಾತವಾಗಿದ್ದರ ಬಗ್ಗೆ ತನಿಖೆ ಕೈಗೊಂಡಿತ್ತು. ಮೊದಲನೆಯ ಅಪಘಾತವು 2017ರಲ್ಲಿ ನಡೆದಿದ್ದರೆ, ಎರಡನೇಯದು 2018ರಲ್ಲಿ ನಡೆದಿತ್ತು. ಈಗ ನಡೆದಿರುವ ಅಪಘಾತದ ಬಗ್ಗೆ ಪ್ರಾಥಮಿಕ ವರದಿಯನ್ನು ಮಾತ್ರವೇ ಸಲ್ಲಿಸಲಾಗಿದೆ. ಎನ್‍‍ಟಿ‍ಎಸ್‍‍ಬಿ ಈ ಬಗ್ಗೆ ವಿಸ್ತೃತವಾಗಿ ತನಿಖೆ ನಡೆಸಿ ಸಂಪೂರ್ಣ ವರದಿ ನೀಡಲಿದೆ.

ತಂತ್ರಜ್ಞಾನ ದೋಷದಿಂದಲೇ ಟೆಸ್ಲಾ ಕಾರು ಚಾಲಕನ ದುರ್ಮರಣ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಅಮೇರಿಕಾ ಮೂಲದ ಟೆಸ್ಲಾ ಕಂಪನಿಯು ಆಟೋ ಪೈಲಟ್ ಡ್ರೈವಿಂಗ್ ಸಿಸ್ಟಂ ಅನ್ನು ಪ್ರೊಡಕ್ಷನ್ ಕಾರುಗಳಲ್ಲಿ ಅಳವಡಿಸಿದ ಮೊದಲ ಕಂಪನಿಯಾಗಿದೆ. ಈ ರೀತಿಯಲ್ಲಿ ಆಟೋ ಪೈಲಟ್‍‍ಗಳನ್ನು ಅಳವಡಿಸಿದ ಸಾವಿರಾರು ಕಾರುಗಳನ್ನು ವಿತರಿಸಲಾಗಿದೆ. ಬಹುತೇಕ ಕಾರುಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಕೆಲವು ಕಾರುಗಳ ಆಟೋ ಪೈಲಟ್ ಮೋಡ್‍‍ನಲ್ಲಿ ದೋಷ ಕಾಣಿಸಿಕೊಂಡು ಅಪಘಾತಗಳು ಸಂಭವಿಸುತ್ತಿವೆ.

ತಂತ್ರಜ್ಞಾನ ದೋಷದಿಂದಲೇ ಟೆಸ್ಲಾ ಕಾರು ಚಾಲಕನ ದುರ್ಮರಣ

ಈ ರೀತಿಯ ದುರ್ಘಟನೆಗಳಿಂದ ಜನರು ಮುಂಬರುವ ಟೆಸ್ಲಾ ಕಾರುಗಳಲ್ಲಿ ನಂಬಿಕೆ ಕಳೆದು ಕೊಳ್ಳುವ ಸಾಧ್ಯತೆಗಳಿವೆ. ಟೆಸ್ಲಾ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ ದೋಷವನ್ನು ಸರಿಪಡಿಸುವ ನಿರೀಕ್ಷೆಯಿದೆ. ಕಾದು ನೋಡೋಣ.

Most Read Articles

Kannada
Read more on ಟೆಸ್ಲಾ tesla
English summary
Tesla Autopilot Might Be At Fault In Fatal Tesla Crash According to NTSB Report - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X