ಬಿಡುಗಡೆಗೂ ಮುನ್ನವೇ ಬುಕ್ಕಿಂಗ್ ಪಡೆದುಕೊಳ್ಳುವಲ್ಲಿ ಟೆಸ್ಲಾ ಸೈಬರ್‌ಟ್ರಕ್ ಹೊಸ ದಾಖಲೆ

ಕಳೆದ ವಾರವಷ್ಟೇ ಅನಾವರಣಗೊಂಡಿರುವ ಟೆಸ್ಲಾ ನಿರ್ಮಾಣದ ಮೊದಲ ಎಲೆಕ್ಟ್ರಿಕ್ ಪಿಕ್ಅಪ್ ಟ್ರಕ್ ಮಾದರಿಯು ಆಟೋ ಉದ್ಯಮದಲ್ಲಿ ಹೊಸ ದಾಖಲೆಗೆ ಕಾರಣವಾಗಿದ್ದು, ಹಲವಾರು ಸುಧಾರಿತ ತಂತ್ರಜ್ಞಾನ ಬಳಕೆ ಮತ್ತು ಭರ್ಜರಿ ಮೈಲೇಜ್ ಪ್ರೇರಣೆ ಹೊಂದಿರುವ ಹೊಸ ವಾಹನದ ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದಾರೆ.

ಬಿಡುಗಡೆಗೂ ಮುನ್ನವೇ ಬುಕ್ಕಿಂಗ್ ಪಡೆದುಕೊಳ್ಳುವಲ್ಲಿ ಟೆಸ್ಲಾ ಸೈಬರ್‌ಟ್ರಕ್ ಹೊಸ ದಾಖಲೆ

ಮಾಡೆಲ್ ಎಸ್, ಮಾಡೆಲ್ 3, ಮಾಡೆಲ್ ಎಕ್ಸ್, ಮಾಡೆಲ್ ವೈ ಮತ್ತು ರೋಡ್‌ಸ್ಟರ್ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳ ಮಾರಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವ ಟೆಸ್ಲಾ ಸಂಸ್ಥೆಯು ಶೀಘ್ರದಲ್ಲೇ ಸೈಬರ್‌ಟ್ರಕ್ ಪಿಕ್ಅಪ್ ವಾಹನವನ್ನು ಬಿಡುಗಡೆಯ ಸುಳಿವು ನೀಡಿದ್ದು, ಈಗಾಗಲೇ ಹೊಸ ಎಲೆಕ್ಟ್ರಿಕ್ ವಾಹನ ಖರೀದಿಗೆ ಬುಕ್ಕಿಂಗ್ ಆರಂಭಿಸಲಾಗಿದೆ. ಅಮೆರಿಕದಲ್ಲಿ ಮಾತ್ರವಲ್ಲದೇ ವಿಶ್ವದ ನಾನಾ ದೇಶಗಳಿಂದಲೂ ಸೈಬರ್‌ಟ್ರಕ್ ಮಾದರಿಗೆ ಬೇಡಿಕೆ ಬರುತ್ತಿದ್ದು, ಅನಾವರಣಗೊಂಡ ಕೇವಲ ಒಂದೇ ವಾರದಲ್ಲಿ ಬರೋಬ್ಬರಿ 2.50 ಲಕ್ಷ ಗ್ರಾಹಕರು ಬುಕ್ಕಿಂಗ್ ಸಲ್ಲಿಸಿದ್ದಾರೆ.

ಬಿಡುಗಡೆಗೂ ಮುನ್ನವೇ ಬುಕ್ಕಿಂಗ್ ಪಡೆದುಕೊಳ್ಳುವಲ್ಲಿ ಟೆಸ್ಲಾ ಸೈಬರ್‌ಟ್ರಕ್ ಹೊಸ ದಾಖಲೆ

ಮಾಡೆಲ್ ವೈ ಮತ್ತು ರೋಡ್‌ಸ್ಟರ್ ಕಾರಿನ ನಡುವಿನ ಸ್ಥಾನ ಪಡೆದುಕೊಂಡಿರುವ ಸೈಬರ್‌ಟ್ರಕ್ ಪಿಕ್ಅಪ್ ವಾಹನವು ವಿಶೇಷ ವಿನ್ಯಾಸದೊಂದಿಗೆ ರಸ್ತೆಗಿಳಿಯಲಿದ್ದು, ಹೊರಭಾಗದ ವಿನ್ಯಾಸವು ತುಸು ವಿಚಿತ್ರ ಎನ್ನಿಸಿದರೂ ಸಹ ಸುಧಾರಿತ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳೊಂದಿಗೆ ಬಿಡುಗಡೆಗೊಳ್ಳಲಿದೆ.

ಬಿಡುಗಡೆಗೂ ಮುನ್ನವೇ ಬುಕ್ಕಿಂಗ್ ಪಡೆದುಕೊಳ್ಳುವಲ್ಲಿ ಟೆಸ್ಲಾ ಸೈಬರ್‌ಟ್ರಕ್ ಹೊಸ ದಾಖಲೆ

ಸಾಮಾನ್ಯ ರಸ್ತೆಗಳಲ್ಲಿ ಮಾತ್ರವಲ್ಲದೇ ಆಪ್ ರೋಡ್‌ಗಳಲ್ಲೂ ಬಲಶಾಲಿ ಡ್ರೈವ್ ಸೌಲಭ್ಯವನ್ನು ಹೊಂದಿರುವ ಸೈಬರ್‌ಟ್ರಕ್ ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿ ಪಡೆದುಕೊಂಡಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ವಿವಿಧ ವೆರಿಯೆಂಟ್‌ಗಳನ್ನು ಆಯ್ಕೆ ಮಾಡಬಹುದಾಗಿದೆ.

ಬಿಡುಗಡೆಗೂ ಮುನ್ನವೇ ಬುಕ್ಕಿಂಗ್ ಪಡೆದುಕೊಳ್ಳುವಲ್ಲಿ ಟೆಸ್ಲಾ ಸೈಬರ್‌ಟ್ರಕ್ ಹೊಸ ದಾಖಲೆ

ಆರಂಭಿಕ ಆವೃತ್ತಿಯು ಸಿಂಗಲ್ ಮೋಟಾರ್ ಪ್ರೇರಣೆಯೊಂದಿಗೆ ಪ್ರತಿ ಚಾರ್ಜ್‌ಗೆ 400ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಕೇವಲ 6.5 ಸೇಕೆಂಡುಗಳಲ್ಲಿ ಸೊನ್ನೆಯಿಂದ 100ಕಿ.ಮೀ ವೇಗದ ಪಡೆದುಕೊಳ್ಳುವ ಮೂಲಕ ಗರಿಷ್ಠ 3,400 ಕೆ.ಜಿ ಎಳೆಯುವ ಸಾಮರ್ಥ್ಯವನ್ನು ಹೊಂದಿದೆ. ಮಧ್ಯಮ ಗಾತ್ರದ ಆವೃತ್ತಿಯು ಡ್ಯುಯಲ್ ಮೋಟಾರ್ ಸೌಲಭ್ಯದೊಂದಿಗೆ ಪ್ರತಿ ಚಾರ್ಜ್‌ಗೆ 482 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಕೇವಲ 4.5 ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗವನ್ನು ಪಡೆಯುವ ಮೂಲಕ 4,500 ಕೆ.ಜಿ ಎಳೆಯುವ ಸಾಮರ್ಥ್ಯವನ್ನು ಹೊಂದಿದೆ.

ಬಿಡುಗಡೆಗೂ ಮುನ್ನವೇ ಬುಕ್ಕಿಂಗ್ ಪಡೆದುಕೊಳ್ಳುವಲ್ಲಿ ಟೆಸ್ಲಾ ಸೈಬರ್‌ಟ್ರಕ್ ಹೊಸ ದಾಖಲೆ

ಕೊನೆಯದಾಗಿ ಹೈ ಎಂಡ್ ಮಾದರಿಯು ತ್ರಿಬಲ್ ಮೋಟಾರ್ ಸೌಲಭ್ಯದೊಂದಿಗೆ ಪ್ರತಿ ಚಾರ್ಜ್‌ಗೆ 800ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಕೇವಲ 3 ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ ಪಡೆದುಕೊಳ್ಳುತ್ತದೆ.

ಬಿಡುಗಡೆಗೂ ಮುನ್ನವೇ ಬುಕ್ಕಿಂಗ್ ಪಡೆದುಕೊಳ್ಳುವಲ್ಲಿ ಟೆಸ್ಲಾ ಸೈಬರ್‌ಟ್ರಕ್ ಹೊಸ ದಾಖಲೆ

ಜೊತೆಗೆ ಹೈ ಎಂಡ್ ಮಾದರಿಯಲ್ಲಿ ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿ ಸೇರಿದಂತೆ ವಿವಿಧ ಡ್ರೈವ್ ಮೋಡ್‌ಗಳನ್ನು ಸಹ ನೀಡಲಾಗಿದ್ದು, ಇದು 6,350 ಕೆ.ಜಿ ಸರಕು ಎಳೆಯುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಹೈ ಎಂಡ್ ಮಾದರಿಯ ವೇಗವು ಪೋರ್ಷೆ 911 ಸೂಪರ್ ಕಾರಿನ ವೇಗಕ್ಕೆ ಸಮನಾಗಿದ್ದು, ಆಟೋ ಉದ್ಯಮದಲ್ಲಿ ಹೊಸ ಅಲೆ ಸೃಷ್ಠಿಸಲಿದೆ.

ಬಿಡುಗಡೆಗೂ ಮುನ್ನವೇ ಬುಕ್ಕಿಂಗ್ ಪಡೆದುಕೊಳ್ಳುವಲ್ಲಿ ಟೆಸ್ಲಾ ಸೈಬರ್‌ಟ್ರಕ್ ಹೊಸ ದಾಖಲೆ

ಸದ್ಯ ಇದು ಅನಾವರಣಗೊಳಿಸಿರುವ ಪಿಕ್ಅಪ್ ಟ್ರಕ್ ಆವೃತ್ತಿಯಾಗಿದ್ದು, ಬಿಡುಗಡೆಯ ಹೊತ್ತಿಗೆ ಇನ್ನು ಕೆಲವು ಬದಲಾವಣೆಗಳಾಗುವ ಸಾಧ್ಯತೆಗಳಿವೆ. ಆದರೂ ಶೇ.90 ರಷ್ಟು ಉತ್ಪಾದನಾ ಆವೃತ್ತಿಯಲ್ಲೂ ಇದೇ ವಿನ್ಯಾಸವನ್ನೇ ಪಡೆದುಕೊಳ್ಳಲಿದ್ದು, ಬೆಲೆ ಕೂಡಾ ಆಕರ್ಷಕವಾಗಿರಲಿವೆ.

ಬಿಡುಗಡೆಗೂ ಮುನ್ನವೇ ಬುಕ್ಕಿಂಗ್ ಪಡೆದುಕೊಳ್ಳುವಲ್ಲಿ ಟೆಸ್ಲಾ ಸೈಬರ್‌ಟ್ರಕ್ ಹೊಸ ದಾಖಲೆ

ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಸೈಬರ್‌ಟ್ರಕ್ ನಿರ್ಮಾಣಕ್ಕೆ ಬಳಸಲಾಗಿರುವ ಸ್ಟೈನ್ ಲೆಸ್ ಸ್ಟೀಲ್ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ನೀಡಲಿದ್ದು, ಸ್ಪೇಸ್‌ ಎಕ್ಸ್‌ ರಾಕೆಟ್‌ ಗಳಲ್ಲಿ ಬಳಸಲಾಗುವ ದಪ್ಪ ಸ್ಟೈನ್‌ ಲೆಸ್ ಸ್ಟೀಲ್ ಇದಾಗಿದೆಯೆಂತೆ.

ಬಿಡುಗಡೆಗೂ ಮುನ್ನವೇ ಬುಕ್ಕಿಂಗ್ ಪಡೆದುಕೊಳ್ಳುವಲ್ಲಿ ಟೆಸ್ಲಾ ಸೈಬರ್‌ಟ್ರಕ್ ಹೊಸ ದಾಖಲೆ

ಬಿಡುಗಡೆಯ ಅವಧಿ ಮತ್ತು ಬೆಲೆ (ಅಂದಾಜು)

2021ರ ಕೊನೆಯಲ್ಲಿ ಅಥವಾ 2022ರ ಆರಂಭದಲ್ಲಿ ಸೈಬರ್‌ಟ್ರಕ್ ಅಧಿಕೃತವಾಗಿ ಖರೀದಿಗೆ ಲಭ್ಯವಿರಲಿದ್ದು, ಆರಂಭಿಕ ಆವೃತ್ತಿಯು ಭಾರತೀಯ ಬೆಲೆಯಲ್ಲಿ ರೂ.35 ಲಕ್ಷದಿಂದ ಹೈ ಎಂಡ್ ಮಾದರಿಯು ರೂ.55 ಲಕ್ಷ ಬೆಲೆ ಪಡೆದುಕೊಳ್ಳಲಿದೆ ಎನ್ನಲಾಗಿದೆ.

Most Read Articles

Kannada
Read more on ಟೆಸ್ಲಾ tesla
English summary
Tesla Bags 250,000 Orders For The Electric Pickup, Cybertruck. Read in Kannada.
Story first published: Thursday, November 28, 2019, 14:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X