ಗುಡ್ ನ್ಯೂಸ್- ವಾಹನ ವಿಮೆ ಬೆಲೆ ಏರಿಕೆಗೆ ಕೇಂದ್ರದಿಂದ ಬ್ರೇಕ್

ಕಳೆದ ವಾರವಷ್ಟೇ ವಾಹನಗಳ ವಿಮಾ ದರಗಳು ಏರಿಕೆ ಕುರಿತಂತೆ ಡ್ರೈವ್‌ಸ್ಪಾರ್ಕ್ ವರದಿ ಮಾಡಿತ್ತು. ಇದೀಗ ಈ ಕುರಿತಂತೆ ಸ್ಪಷ್ಟನೆ ನೀಡಿರುವ ಇನ್ಸುರೆನ್ಸ್ ರೆಗ್ಯೂಲೆಟರಿ ಆ್ಯಂಡ್ ಡೆವೆಲಪ್ಮೆಂಟ್ ಅಥಾರಟಿ ಆಫ್ ಇಂಡಿಯಾ (IRDAI) ಸಂಸ್ಥೆಯು 2019-20ರ ಆರ್ಥಿಕ ವರ್ಷದಲ್ಲಿ ಯಾವುದೇ ರೀತಿಯಲ್ಲೂ ದರ ಏರಿಕೆ ಮಾಡದಿರಲು ನಿರ್ಧರಿಸಿದೆ.

ಗುಡ್ ನ್ಯೂಸ್- ವಾಹನ ವಿಮೆ ಬೆಲೆ ಏರಿಕೆಗೆ ಕೇಂದ್ರದಿಂದ ಬ್ರೇಕ್

ಸದ್ಯ ಮಾರ್ಚ್ ಅಂತ್ಯಕ್ಕೆ 2018-19ರ ಹಣಕಾಸು ವರ್ಷ ಕೊನೆಗೊಳ್ಳುತ್ತಿದ್ದು, 2019-20ರ ಹಣಕಾಸು ವರ್ಷಕ್ಕೆ ಅನ್ವಯವಾಗುವಂತೆ ಏಪ್ರಿಲ್ 1ರಿಂದಲೇ ಹೊಸ ಥರ್ಡ್ ಪಾರ್ಟಿ ವಿಮಾ ಪ್ರೀಮಿಯಂ ಮೊತ್ತಗಳನ್ನು ಜಾರಿಗೆ ಮಾಡುವುದು ಬಹುತೇಕ ಖಚಿತವಾಗಿತ್ತು. ಆದ್ರೆ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವು ಬೆಲೆ ಏರಿಕೆಯ ನಿರ್ಧಾರವನ್ನು ತಟಸ್ಥವಾಗಿಟ್ಟಿದ್ದು, ಮುಂದಿನ ಹಣಕಾಸು ವರ್ಷದ ತನಕ ಯಾವುದೇ ರೀತಿಯ ಬೆಲೆ ಏರಿಕೆ ಮಾಡದಿರುವಂತೆ ಮಹತ್ವ ಸೂಚನೆ ನೀಡಿದೆ.

ಗುಡ್ ನ್ಯೂಸ್- ವಾಹನ ವಿಮೆ ಬೆಲೆ ಏರಿಕೆಗೆ ಕೇಂದ್ರದಿಂದ ಬ್ರೇಕ್

ಈ ಹಿಂದೆ ಇನ್ಸುರೆನ್ಸ್ ರೆಗ್ಯೂಲೆಟರಿ ಆ್ಯಂಡ್ ಡೆವೆಲಪ್ಮೆಂಟ್ ಅಥಾರಟಿ ಆಫ್ ಇಂಡಿಯಾ ಸಂಸ್ಥೆಯು ಪ್ರತಿ ವರ್ಷ ಏಪ್ರಿಲ್ 1ರಿಂದ ವಿಮಾ ಮೊತ್ತದಲ್ಲಿ ಶೇ.10ರಿಂದ ಶೇ.30 ರಷ್ಟು ಏರಿಕೆ ಮಾಡುತ್ತಲೇ ಬಂದಿದ್ದು, ಈ ವರ್ಷವು ಕೂಡಾ ವಿಮಾ ದರಗಳನ್ನು ಏರಿಕೆ ಮಾಡಲು ಅನುಮತಿ ಕೋರಿ ಕೇಂದ್ರಕ್ಕೆ ಮನವಿ ಸಲ್ಲಿತ್ತು.

ಗುಡ್ ನ್ಯೂಸ್- ವಾಹನ ವಿಮೆ ಬೆಲೆ ಏರಿಕೆಗೆ ಕೇಂದ್ರದಿಂದ ಬ್ರೇಕ್

ಸದ್ಯ ಲೋಕಸಭಾ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ವಾಹನ ಮಾಲೀಕರಿಗೆ ವಿಮೆ ಹೊರೆಯನ್ನು ತಗ್ಗಿಸಿರುವ ಕೇಂದ್ರ ಸರ್ಕಾರವು ಈ ಹಿಂದಿನ ದರಗಳನ್ನೇ ಮುಂದುವರಿಸುವಂತೆ ಸೂಚನೆ ನೀಡಿದ್ದು, 2019-20ರ ಅವಧಿಯ ತನಕ ಯಾವುದೇ ಬದಲಾವಣೆ ಬೇಡ ಎಂದಿದೆ.

ಗುಡ್ ನ್ಯೂಸ್- ವಾಹನ ವಿಮೆ ಬೆಲೆ ಏರಿಕೆಗೆ ಕೇಂದ್ರದಿಂದ ಬ್ರೇಕ್

ಇನ್ನು ಹೊಸ ವಾಹನ ಖರೀದಿಸುವ ವಾಹನಗಳ ರಕ್ಷಣೆ ಮತ್ತು ಅದರಿಂದಾಗಿ ದುರಂತಗಳನ್ನು ತಡೆಯಲು ವಿಮೆ ತಂಬಾ ಮುಖ್ಯವಾಗಿರುತ್ತೆ. ಹೊಸ ವಾಹನ ಖರೀದಿ ವೇಳೆ ಥರ್ಡ್ ಪಾರ್ಟಿ ವಿಮೆ ಹೊಂದಿರಲೇಬೇಕಾದ ಅನಿವಾರ್ಯತೆಗಳಿದ್ದರೂ ಇನ್ನು ಹಲವು ಉಪಯುಕ್ತ ವಿಮೆಗಳು ಜಾರಿಯಲ್ಲಿದ್ದು, ವಿಮೆ ಮಾಡಿಸುವ ಮುನ್ನ ಈ ಬಗ್ಗೆ ಕೂಲಂಕುಶವಾಗಿ ತಿಳಿದುಕೊಳ್ಳುವುದು ಮುಖ್ಯ.

ಗುಡ್ ನ್ಯೂಸ್- ವಾಹನ ವಿಮೆ ಬೆಲೆ ಏರಿಕೆಗೆ ಕೇಂದ್ರದಿಂದ ಬ್ರೇಕ್

ಮೋಟಾರು ವಿಮೆ ಎಂದರೇನು?

ಮೋಟಾರು ವಿಮೆ ಎಂಬುದು ವಾಹನ ವಿಮೆ, ಜಿಎಪಿ ವಿಮೆ, ಕಾರು ವಿಮೆ ಎಂಬ ಹೆಸರಿನಿಂದಲೂ ಅರಿಯಲ್ಪಡುತ್ತದೆ. ಇದು ಪ್ರಮುಖವಾಗಿಯೂ ಕಾರು, ಟ್ರಕ್, ಮೋಟಾರ್ ಸೈಕಲ್ ಅಥವಾ ಇತರ ರಸ್ತೆ ಅಪಘಾತಗಳಿಗೆ ಸುರಕ್ಷತೆಯನ್ನು ಒದಗಿಸುತ್ತದೆ.

ಗುಡ್ ನ್ಯೂಸ್- ವಾಹನ ವಿಮೆ ಬೆಲೆ ಏರಿಕೆಗೆ ಕೇಂದ್ರದಿಂದ ಬ್ರೇಕ್

ವಾಹನ ಅಪಘಾತ ಸಂಭವಿಸಿದಂತಹ ಪರಿಸ್ಥಿತಿಯಲ್ಲಿ ದೈಹಿಕ ಗಾಯ ಅಥವಾ ವಾಹನಗಳಿಗೆ ಹಾನಿಯಂಟಾದ ಸಂದರ್ಭದಲ್ಲಿ ಹಣಕಾಸಿನ ರಕ್ಷಣೆ ಒದಗಿಸುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ. ವಾಹನ ವಿಮೆ ನೆರವಿನಿಂದ ವಾಹನಗಳಿಗೆ ಹಾನಿ ಸಂಭವಿಸಿದ್ದಲ್ಲಿ ಅದರ ದುರಸ್ತಿಗೆ ಸಂಭವಿಸಬಹುದಾದ ವೆಚ್ಚವನ್ನು ಹಾಗೆಯೇ ವ್ಯಕ್ತಿಯ ಚಿಕಿತ್ಸೆಗೆ ಬೇಕಾಗಿರುವ ಆರ್ಥಿಕ ರಕ್ಷಣೆಯನ್ನು ಒದಗಿಸುತ್ತದೆ.

ಗುಡ್ ನ್ಯೂಸ್- ವಾಹನ ವಿಮೆ ಬೆಲೆ ಏರಿಕೆಗೆ ಕೇಂದ್ರದಿಂದ ಬ್ರೇಕ್

ಮೋಟಾರು ವಿಮಾ ಪಾಲಿಸಿಗಳ ಅವಧಿಯೆಷ್ಟು?

ಎಲ್ಲ ಸಂದರ್ಭದಲ್ಲಿಯೂ ನಿಮ್ಮ ಕಾರಿಗೆ ರಕ್ಷಣೆ ಒದಗಿಸುವುದು ಅತಿ ಅಗತ್ಯವಾಗಿದೆ. ಸಾಮಾನ್ಯವಾಗಿ ಮೋಟಾರು ವಿಮೆ ಕರಾರು ಒಂದು ವರ್ಷಕ್ಕೆ ಮಾತ್ರ ಅನ್ವಯವಾಗಿರುತ್ತದೆ. ಆದ್ರೆ ಇದೀಗ ಹೊಸ ವಾಹನಗಳಿಗೆ ನೀಡಲಾಗುತ್ತಿರುವ ವಿಮೆಗಳು ಬೈಕ್‌ಗೆ ಐದು ವರ್ಷ ಮತ್ತು ಕಾರಿಗೆ ಮೂರು ವರ್ಷ ಅನ್ವಯಿಸುತ್ತೆ.

MOST READ: ಕಾರು ಖರೀದಿಸಲು ಬಂದ ಮಹಿಳೆ ಮಾಡಿದ ಎಡವಟ್ಟಿನಿಂದ ಡೀಲರ್ಸ್ ಕಕ್ಕಾಬಿಕ್ಕಿ

ಗುಡ್ ನ್ಯೂಸ್- ವಾಹನ ವಿಮೆ ಬೆಲೆ ಏರಿಕೆಗೆ ಕೇಂದ್ರದಿಂದ ಬ್ರೇಕ್

ಮೋಟಾರು ವಿಮಾ ಪಾಲಿಸಿಗಳಲ್ಲಿ ಎಷ್ಟು ವಿಧ?

ಕಾರು ವಿಮಾ ಪಾಲಿಸಿಯಲ್ಲಿ ಎರಡು ವಿಧಗಳಿವೆ. ಪಾಲಿಸಿ 'ಎ' ಎಂಬುದು ಮೂರನೇ ವ್ಯಕ್ತಿ ವಿಮಾ ಹಾಗೂ ಪಾಲಿಸಿ 'ಬಿ' ಎಂಬುದು ಸಮಗ್ರ ಪಾಲಿಸಿಯಾಗಿದೆ. ಮೊದಲನೆಯ ಪಾಲಿಸಿಯಲ್ಲಿ ವಿಮೆಯೂ ಅಪಘಾತಕ್ಕೆ ಪರಿಹಾರ ನೀಡುವುದು ಮೂರನೇ ವ್ಯಕ್ತಿಗೆ ಮಾತ್ರ. ಅಂದರೆ ಕಾರಿಗೆ ಆಗುವ ಹಾನಿಯನ್ನು ಇದು ಒಳಗೊಂಡಿರುವುದಿಲ್ಲ. ಎರಡನೇಯದ್ದಲ್ಲಿ ವಾಹನಕ್ಕಾಗುವ ನಷ್ಟವನ್ನು ಭರಿಸುತ್ತದೆ. ಇದರಂತೆ ಪಾಲಿಸಿ ಆಧಾರದಲ್ಲಿ ನಷ್ಟ ಪರಿಹಾರ ದೊರಕುತ್ತದೆ.

ಗುಡ್ ನ್ಯೂಸ್- ವಾಹನ ವಿಮೆ ಬೆಲೆ ಏರಿಕೆಗೆ ಕೇಂದ್ರದಿಂದ ಬ್ರೇಕ್

ಮೂರನೇ ವ್ಯಕ್ತಿ ವಿಮೆಯು ಕೆಳಗಿನ ನಷ್ಟಗಳನ್ನು ಒಳಗೊಳ್ಳುತ್ತದೆ..!

ನಿಮ್ಮ ವಿಮಾ ವಾಹನದಿಂದಾಗಿ ಮೂರನೇ ವ್ಯಕ್ತಿಗೆ ಯಾವುದೇ ಶಾಶ್ವತ ಗಾಯ ಅಥವಾ ಮರಣ ಸಂಭವಿಸಿದ್ದಲ್ಲಿ ಹಾಗೆಯೇ ನಿಮ್ಮ ವಿಮಾ ವಾಹನದಿಂದಾಗಿ ಯಾವುದೇ ಹಾನಿ ಸಂಭವಿಸಿದ್ದಲ್ಲಿ (ವಾಹನ ಹೊರತುಪಡಿಸಿ) ಇದು ರಕ್ಷಣೆಯನ್ನು ಒದಗಿಸುತ್ತದೆ. ಈ ಪಾಲಿಸಿಯಲ್ಲಿ ವಿಮೆಯೂ ಮೂರನೇ ವ್ಯಕ್ತಿಯ ಆಸ್ತಿಯ ಯಾವುದೇ ನಷ್ಟ ಸಂಭವಿಸಿದ್ದಲ್ಲಿ ಖಾಸಗಿ ಕಾರಿಗೆ 7.5 ಲಕ್ಷ ರು. ಹಾಗೂ ದ್ವಿಚಕ್ರವಾಗಿದ್ದಲ್ಲಿ ರು. 1 ಲಕ್ಷದ ವರಗೆ ರಕ್ಷಣೆಯನ್ನು ಒದಗಿಸುತ್ತದೆ.

MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ಗುಡ್ ನ್ಯೂಸ್- ವಾಹನ ವಿಮೆ ಬೆಲೆ ಏರಿಕೆಗೆ ಕೇಂದ್ರದಿಂದ ಬ್ರೇಕ್

ಸಮಗ್ರ ಮೋಟಾರ್ ವಿಮಾ ನೀತಿ ಎಂದರೇನು?

ಸಮಗ್ರ ವಾಹನ ವಿಮೆಯು ಮೂರನೇ ವ್ಯಕ್ತಿ ಪಾಲಿಸಿಗಿಂತ ತುಂಬಾ ವಿಭಿನ್ನವಾಗಿದ್ದು, ವಾಹನಕ್ಕಾಗುವ ಎಲ್ಲ ನಷ್ಟವನ್ನು ಭರಿಸುತ್ತದೆ. ಇದರಂತೆ ಪಾಲಿಸಿ ಆಧಾರದಲ್ಲಿ ನಷ್ಟ ಪರಿಹಾರ ದೊರಕುತ್ತದೆ. ಇದರಲ್ಲಿ ಥರ್ಡ್ ಪಾರ್ಟಿ ಜತೆಗೆ ಬೆಂಕಿ, ಅಪಘಾತ, ಕಳವು, ಪ್ರವಾಹ, ಭೂಕಂಪ, ಗಲಭೆ ಇತ್ಯಾದಿ ಅನಿಷ್ಟಗಳಿಂದಾಗಿ ವಾಹನಕ್ಕಾಗುವ ನಷ್ಟಗಳ ಜತೆಗೆ ಸಹ ಪ್ರಯಾಣಿಕ ಸೇರಿದಂತೆ ಮಾಲಿಕರಿಗಾಗುವ ನಷ್ಟವನ್ನು ಭರಿಸುತ್ತದೆ.

Most Read Articles

Kannada
English summary
Third Party Motor Insurance Unchanged—Relief For Vehicle Owners Through 2020.
Story first published: Saturday, March 30, 2019, 18:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X