ಹೊಸ ರೂಪದಲ್ಲಿರುವ ಹಳೆಯ ಎರ್ಟಿಗಾ ಕಾರುಗಳಿವು

ಮಾರುತಿ ಸುಜುಕಿ ಕಂಪನಿಯು ಹೊಸ ತಲೆಮಾರಿನ ಎರ್ಟಿಗಾ ಕಾರ್ ಅನ್ನು ಕೆಲ ದಿನಗಳ ಹಿಂದಷ್ಟೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಬಿಡುಗಡೆಯಾದಾಗಿನಿಂದ ಈ ಕಾರು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ.

ಹೊಸ ರೂಪದಲ್ಲಿರುವ ಹಳೆಯ ಎರ್ಟಿಗಾ ಕಾರುಗಳಿವು

ಈಗ ಈ ಕಾರು ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಎಂಪಿವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಳೆಯ ತಲೆಮಾರಿನ ಕಾರಿನಷ್ಟೆ ಜನಪ್ರಿಯತೆಯನ್ನು ಪಡೆದಿದೆ. ಆದರೆ ಹಳೆಯ ತಲೆಮಾರಿನ ಕಾರಿಗಿಂತ ದೊಡ್ಡದಾಗಿದ್ದು, ಇನ್ನೂ ಹೆಚ್ಚಿನ ಫೀಚರ್‍‍ಗಳನ್ನು ಹೊಂದಿದೆ.

ಹೊಸ ರೂಪದಲ್ಲಿರುವ ಹಳೆಯ ಎರ್ಟಿಗಾ ಕಾರುಗಳಿವು

ಹೊಸ ಎರ್ಟಿಗಾ ಕಾರಿನ ಮೂಲ ಮಾದರಿಯ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.8.47 ಲಕ್ಷಗಳಾಗಿದೆ. ಟಾಪ್ ಎಂಡ್ ಮಾದರಿಯ ಬೆಲೆಯು ರೂ.13.25 ಲಕ್ಷಗಳಾಗಿದೆ. ಈ ಬೆಲೆಯು ಹೆಚ್ಚಾಯಿತು ಎನ್ನುವವರು ಹಳೆಯ ಮಾದರಿಯ ಕಾರುಗಳನ್ನು ಕೊಳ್ಳಬಹುದು. ಯಾವ ಮಾದರಿಯ ಕಾರುಗಳು ಮಾರಾಟಕ್ಕಿವೆ, ಅವುಗಳ ಬೆಲೆ ಎಷ್ಟಿದೆ ಎಂಬುದನ್ನು ನೋಡೋಣ.

ಹೊಸ ರೂಪದಲ್ಲಿರುವ ಹಳೆಯ ಎರ್ಟಿಗಾ ಕಾರುಗಳಿವು

2018ರ ಮಾದರಿಯ ಅಜ್ಮಿರ್‍‍ನಲ್ಲಿರುವ ಕಾರು

ರಾಜಸ್ತಾನದ ಅಜ್ಮಿರ್‍‍ನಲ್ಲಿರುವ 2018ರ ಝಡ್‍‍ಡಿ‍ಐ ಪ್ಲಸ್ ಮಾದರಿಯ ಎರ್ಟಿಗಾ ಕಾರು 1.5 ಲೀಟರಿನ ಡೀಸೆಲ್ ಎಂಜಿನ್ ಹೊಂದಿದೆ. ಈ ಕಾರಿನಲ್ಲಿ ಮ್ಯಾನುವಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಈ ಕಾರಿಗೆ ರೂ.12 ಲಕ್ಷ ನಿಗದಿಪಡಿಸಲಾಗಿದೆ.

ಹೊಸ ರೂಪದಲ್ಲಿರುವ ಹಳೆಯ ಎರ್ಟಿಗಾ ಕಾರುಗಳಿವು

ಹೊಸ ಕಾರಿನ ಆನ್ ರೋಡ್ ಬೆಲೆಗಿಂತ ಒಂದು ಲಕ್ಷ ಕಡಿಮೆ ಬೆಲೆಯನ್ನು ಹೊಂದಿದೆ. ಈ ಕಾರು ಟಾಪ್ ಎಂಡ್ ಮಾದರಿಯಾದ ಕಾರಣ, ಹಲವಾರು ಫೀಚರ್‍‍ಗಳನ್ನು ಹೊಂದಿದ್ದು, ಆರಾಮದಾಯಕವಾದ ಕ್ಯಾಬಿನ್ ಅನ್ನು ಹೊಂದಿದೆ. ಓಡೊಮೀಟರ್ ಪ್ರಕಾರ ಈ ಕಾರು ಸುಮಾರು 4,500 ಕಿ.ಮೀ ಚಲಿಸಿದೆ. ಈ ಕಾರ್ ಅನ್ನು ಖರೀದಿಸಬಯಸುವವರು ಇಲ್ಲಿ ಸಂಪರ್ಕಿಸಬಹುದು.

ಹೊಸ ರೂಪದಲ್ಲಿರುವ ಹಳೆಯ ಎರ್ಟಿಗಾ ಕಾರುಗಳಿವು

2019ರ ಮಾದರಿಯ ಅಮೋದ್‍‍ನಲ್ಲಿರುವ ಕಾರು

ಗುಜರಾತ್‍‍ನ ಅಮೋದ್‍‍ನಲ್ಲಿರುವ 2019ರ ಮಾದರಿಯ ಎರ್ಟಿಗಾ ಕಾರ್ ಅನ್ನು ರೂ.8.20 ಲಕ್ಷಗಳಿಗೆ ಮಾರಾಟ ಮಾಡಲಾಗುತ್ತಿದೆ. ವಿ‍ಎಕ್ಸ್ ಐ ಮಾದರಿಯ ಈ ಎರ್ಟಿಗಾ ಕಾರಿನಲ್ಲಿರುವ 1.5 ಲೀಟರಿನ ಪೆಟ್ರೋಲ್ ಎಂಜಿನ್‍‍ನಲ್ಲಿ ಮ್ಯಾನುವಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ.

ಹೊಸ ರೂಪದಲ್ಲಿರುವ ಹಳೆಯ ಎರ್ಟಿಗಾ ಕಾರುಗಳಿವು

ಈ ಕಾರು ಹೊಸ ಎರ್ಟಿಗಾ ಕಾರಿಗಿಂತ ಒಂದು ಲಕ್ಷ ಕಡಿಮೆ ಬೆಲೆಯನ್ನು ಹೊಂದಿದೆ. ಕಾರಿನಲ್ಲಿರುವ ಓಡೊಮೀಟರ್ ಪ್ರಕಾರ ಈ ಕಾರು ಸುಮಾರು 6,000 ಕಿ.ಮೀ ಚಲಿಸಿದೆ. ಈ ಕಾರ್ ಅನ್ನು ಖರೀದಿಸಬಯಸುವವರು ಇಲ್ಲಿ ಸಂಪರ್ಕಿಸ ಬಹುದು.

ಹೊಸ ರೂಪದಲ್ಲಿರುವ ಹಳೆಯ ಎರ್ಟಿಗಾ ಕಾರುಗಳಿವು

ಕೊಟ್ಟಕ್ಕಲ್‍‍ನಲ್ಲಿರುವ 2018ರ ಮಾದರಿಯ ಕಾರು

ಕೇರಳದ ಮಲಪುರಂ ಜಿಲ್ಲೆಯ ಕೊಟ್ಟಕ್ಕಲ್‍‍ನಲ್ಲಿರುವ 2018ರ ಮತ್ತೊಂದು ಕಾರ್ ಅನ್ನು ಮಾರಾಟಕ್ಕಿಡಲಾಗಿದೆ. ಝಡ್‍‍ಡಿ‍ಐ ಪ್ಲಸ್ ಮಾದರಿಯ ಈ ಕಾರಿನಲ್ಲಿರುವ ಡೀಸೆಲ್ ಎಂಜಿನ್‍‍‍ನಲ್ಲಿ ಮ್ಯಾನುವಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ.

ಹೊಸ ರೂಪದಲ್ಲಿರುವ ಹಳೆಯ ಎರ್ಟಿಗಾ ಕಾರುಗಳಿವು

ಈ ಕಾರಿಗೆ ರೂ.11.75 ಲಕ್ಷ ನಿಗದಿಪಡಿಸಲಾಗಿದೆ. ಓಡೊಮೀಟರ್‍‍ನಲ್ಲಿರುವ ರೀಡಿಂಗ್ ಪ್ರಕಾರ ಈ ಕಾರು ಸುಮಾರು 25,000 ಕಿ.ಮೀ ಸಂಚರಿಸಿದೆ. ಈ ಕಾರ್ ಅನ್ನು ಖರೀದಿಸ ಬಯಸುವವರು ಇಲ್ಲಿ ಸಂಪರ್ಕಿಸಬಹುದು.

Most Read Articles

Kannada
English summary
Used new shape Maruti Ertiga MPVs. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X