2018-29ರ ಆರ್ಥಿಕ ವರ್ಷದಲ್ಲಿ ಮಾರಾಟಗೊಂಡ ಟಾಪ್ 10 ಕಾರುಗಳಿವು

2018-19ರ ಆರ್ಥಿಕ ವರ್ಷದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟಗೊಂಡ ಟಾಪ್ 10 ಕಾರುಗಳ ಪಟ್ತಿ ಇದೀಗ ಬಹಿರಂಗಗೊಂಡಿದ್ದು, ಎಂದಿನಂತೆಯೆ ದೇಶಿಯ ವಾಹನ ತಯಾರಕ ಸಂಸ್ಥಯಾದ ಮಾರುತಿ ಸುಜುಕಿಯೆ ಮೊದಲನೆಯ ಸ್ಥಾನವನ್ನು ಪಡೆದುಕೊಂಡಿದೆ. ಹಾಗಾದರೆ 2018-19ರ ಆರ್ಥಿಕ ವರ್ಷದಲ್ಲಿ ಮಾರಾಟಗೊಂಡ ಟಾಪ್ 10 ಕಾರುಗಳು ಯಾವುವು ಎಂದು ಇಲ್ಲಿ ತಿಳಿಯಿರಿ.

2018-29ರ ಹಣಕಾಸು ವರ್ಷದಲ್ಲಿ ಮಾರಾಟಗೊಂಡ ಟಾಪ್ 10 ಕಾರುಗಳಿವು

2018-19ರ ಆರ್ಥಿಕ ವರ್ಷದಲ್ಲಿ ಮಾರಾಟಗೊಂಡ ಟಾಪ್ 10 ಕಾರುಗಳಲ್ಲಿ ಸುಮಾರು 7 ಕಾರುಗಳು ಮಾರುತಿ ಸುಜುಕಿ ಸಂಸ್ಥೆಯ ಕಾರುಗಳಾಗಿದ್ದು, ಇವುಗಳಿಗೆ ಪೋಟಿಯಾಗಿ ದಕ್ಷಿಣ ಕೊರಿಯಾ ಮೂಲದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈಯ ಕಾರುಗಳು 3 ಸ್ಥಾನವನ್ನು ಪಡೆದುಕೊಂಡೊದೆ. ಮತ್ತು ಟಾಪ್ 10 ಕಾರುಗಳಲ್ಲಿ ಅಧಿಕವಾಗಿ ಹ್ಯಾಚ್‍‍ಬ್ಯಾಕ್ ಕಾರುಗಳೇ ಮಾರಾಟಗೊಂಡಿರುವುದು ಅಚ್ಚರಿ ವಿಷಯ.

2018-29ರ ಹಣಕಾಸು ವರ್ಷದಲ್ಲಿ ಮಾರಾಟಗೊಂಡ ಟಾಪ್ 10 ಕಾರುಗಳಿವು
Rank Model FY19
1 Maruti Alto 2,59,401
2 Maruti Dzire 2,53,859
3 Maruti Swift 2,23,924
4 Maruti Baleno 2,12,330
5 Maruti Vitara Brezza 1,57,880
6 Maruti WagonR 1,51,462
7 Hyundai Elite i20 1,40,225
8 Hyundai Grand i10 1,26,041
9 Hyundai Creta 1,24,300
10 Maruti Celerio 1,03,734
2018-29ರ ಹಣಕಾಸು ವರ್ಷದಲ್ಲಿ ಮಾರಾಟಗೊಂಡ ಟಾಪ್ 10 ಕಾರುಗಳಿವು

ಮಾರುತಿ ಸುಜುಕಿ ಆಲ್ಟೋ

ಮಾರುತಿ ಆಲ್ಟೋ ಹ್ಯಾಚ್‍ಬ್ಯಾಕ್ ಕಾರು ಇಂದಿಗೂ ಸಹ ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಅಚ್ಚುಮೆಚ್ಚಿನ ಕಾರು ಎಂದು ಹೇಳಿದರೆ ತಪ್ಪಾಗಲಾರದು. ಈ ಕಾರು ಮಾರುತಿ 800 ಕಾರಿನ ಉತ್ತರಾಧಿಕಾರಿಯಾಗಿದ್ದು, ಇದು 800cc ಮತ್ತು 1.0-ಲೀಟರ್ ಎಂಜಿನ್ ಆಯ್ಕೆಯಲ್ಲಿ ಹಾಗು ಆಟೋಮ್ಯಾಟಿಕ್ ಆಯ್ಕೆಯಲ್ಲಿ ಕೂಡಾ ಖರೀದಿಗೆ ಲಭ್ಯವಿದೆ. ಇಷ್ಟೆ ಅಲ್ಲದೆಯೆ ಮಾರುತಿ ಸುಜುಕಿ ಸಂಸ್ಥೆಯು ಹೊಸ ಆಲ್ಟೋ ಕಾರನ್ನು ಇದೇ ವರ್ಷದ ಜೂನ್ ತಿಂಗಳಿನಲ್ಲಿ ಬಿಡುಗಡೆ ಮಾಡಲಿದೆ.

2018-29ರ ಹಣಕಾಸು ವರ್ಷದಲ್ಲಿ ಮಾರಾಟಗೊಂಡ ಟಾಪ್ 10 ಕಾರುಗಳಿವು

ಮಾರುತಿ ಸುಜುಕಿ ಡಿಜೈರ್

ಮಾರುತಿ ಡಿಜೈರ್ ಭಾರತದಲ್ಲೇ ಉತ್ತಮ ಮಾರಾಟವಾದ ಕಾಂಪ್ಯಾಕ್ಟ್-ಸೆಡನ್ ಅಲ್ಲ, ಆದರೆ ಅತ್ಯಂತ ಯಶಸ್ವಿ ಸೆಡನ್ ಆಗಿದೆ. ಈ ಕಾರು ರೂ. 5.69 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ. ಈ ಕಾರು ಸ್ವಂತ ಬಳಕೆಗೆ ಮತ್ತು ಟ್ಯಾಕ್ಸಿ ಉಧ್ಯಮದಲ್ಲಿ ಹೆಚ್ಚು ಜನಪ್ರೀಯತೆಯನ್ನು ಪಡೆದುಕೊಂಡಿದ್ದು, ಈ ಕಾರು 1197ಸಿಸಿ ಪೆಟ್ರೋಲ್ ಎಂಜಿನ್ ಸಹಾಯದಿಂದ ಪ್ರತೀ ಲೀಟರ್ ಪೆಟ್ರೋಲ್‍‍ಗೆ ಸುಮಾರು 22 ಕಿಲೋಮೀಟರ್‍‍ನ ಮೈಲೇಜ್ ನೀಡಬಲ್ಲದು.

2018-29ರ ಹಣಕಾಸು ವರ್ಷದಲ್ಲಿ ಮಾರಾಟಗೊಂಡ ಟಾಪ್ 10 ಕಾರುಗಳಿವು

ಮಾರುತಿ ಸುಜುಕಿ ಸ್ವಿಫ್ಟ್

ಮಾರುತಿ ಸುಜುಕಿ ಸ್ವಿಫ್ಟ್ ಕಾರುಗಳು ಮಾರುತಿ ಸುಜುಕಿ ಸಂಸ್ಥೆಯಲ್ಲಿನ ಅತಿ ಹೆಚ್ಚು ಮಾರಾಟವಾಗುತ್ತಿರುವ ಕಾರಾಗಿದ್ದು, 2017ರ ಸ್ವಿಫ್ಟ್ ಕಾರಿನಲ್ಲಿ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್, 15 ಇಂಚಿನ ಅಲಾಯ್ ವ್ಹೀಲ್ಸ್ ಮತ್ತು ಆಂಡ್ರಾಯ್ಡ್ ಆಟೋ ಹಾಗು ಆಪಲ್ ಕಾರ್ ಪ್ಲೇ ಸಪೋರ್ಟ್ ಮಾಡುವ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಒಳಗೊಂಡಿದೆ. 1197ಸಿಸಿ ಪೆಟ್ರೋಲ್ ಎಂಜಿನ್ ಹೊಂದಿರುವ ಈ ಕಾರು ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 4.99 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು, ಪ್ರತೀ ಲೀಟರ್ ಪೆಟ್ರೋಲ್‍ಗೆ ಸುಮಾರು 20.4 ಕಿಲೋಮೀಟರ್ ಮೈಲೇಜ್ ನೀಡಬಲ್ಲದು.

2018-29ರ ಹಣಕಾಸು ವರ್ಷದಲ್ಲಿ ಮಾರಾಟಗೊಂಡ ಟಾಪ್ 10 ಕಾರುಗಳಿವು

ಮಾರುತಿ ಸುಜುಕಿ ಬಲೆನೊ

ಮಾರುತಿ ಸುಜುಕಿ ಬಲೆನೊ ಪ್ರೀಮಿಯಂ ಹ್ಯಾಚ್‍ಬ್ಯಾಕ್ ಕಾರುಗಳ ಮಾರಾಟದಲ್ಲಿ ಪ್ರತೀ ತಿಂಗಳೂ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿರುವ ಮಾರುತಿ ಸುಜುಕಿ ಬಲೆನೊ ಕಾರು ರೂ. 5.55 ಲಕ್ಷದ ಪ್ರಾರಂಭಿಕ ಬಲೆಯನ್ನು ಪಡೆದುಕೊಂಡಿದೆ. ಈ ಕಾರಿನಲ್ಲಿ 16 ಇಂಚಿನ ಅಲಾಯ್ ವ್ಹೀಲ್ಸ್ ಆಟೋ ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್ಸ್ ಮತ್ತು ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ವೈಶಿಷ್ಟ್ಯತೆಯನ್ನು ನೀಡಲಾಗಿದೆ. ಈ ಕಾರು 1197ಸಿಸಿ ಸೆಂಜಿನ್ ಸಹಾಯದಿಂದ ಪ್ರತೀ ಲೀಟರ್‍ ಪೆಟ್ರೋಲ್‍‍ಗೆ ಸುಮಾರು 21.4 ಕಿಲೋಮೀಟರ್ ಮೈಲೇನ್ ನೀಡಬಲ್ಲದು.

2018-29ರ ಹಣಕಾಸು ವರ್ಷದಲ್ಲಿ ಮಾರಾಟಗೊಂಡ ಟಾಪ್ 10 ಕಾರುಗಳಿವು

ಮಾರುತಿ ಸುಜುಕಿ ವಿಟಾರಾ ಬ್ರೆಝಾ

ಮಾರುತಿ ಸುಜುಕಿ ವಿಟಾರಾ ಬ್ರೆಝಾ ಕಾರು ಹೆಚ್ಚಾಗಿ ಹ್ಯಾಚ್‍‍ಬ್ಯಾಕ್ ಕಾರುಗಳಲ್ಲಿ ಇರಬೇಕಾದ ಗುಣಗಳನ್ನು ಹೊಂದಿದ್ದರೂ ಸಹ ಇದಿಂದು ಜನಪ್ರಿಯವಾದ ಸಬ್-4-ಮೀಟರ್ ಕಂಪ್ಯಾಕ್ಟ್ ಎಸ್‍ಯುವಿಯಾಗಿದೆ. ಇದು ಕೇವಲ ಡೀಸೆಲ್ ವೇರಿಯಂಟ್‍ನಲ್ಲಿ ಮಾತ್ರ ಖರೀದಿಗೆ ಲಭ್ಯವಿದ್ದು ಕೂಡಾ, ಈ ಸೆಗ್ಮೆಂಟ್ ಕಾರುಗಳಲ್ಲಿ ಹೆಚ್ಚು ಮಾರಾಟವಾಗುತ್ತಿದೆ.

2018-29ರ ಹಣಕಾಸು ವರ್ಷದಲ್ಲಿ ಮಾರಾಟಗೊಂಡ ಟಾಪ್ 10 ಕಾರುಗಳಿವು

ಮಾರುತಿ ಸುಜುಕಿ ವ್ಯಾಗನ್ ಆರ್

ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಮೊದಲ ಬಾರಿಗೆ 1999 ರಲ್ಲಿ ಬಿಡುಗಡೆಗೊಂಡಿದ್ದರೂ, 20 ವರ್ಶಗಳಾದರು ಈ ಕಾರಿನ ಕ್ರೇಜ್ ಮಾರುಕಟ್ಟೆಯಲ್ಲಿ ಇನ್ನು ಹಾಗೆಯೆ ಇದೆ. ಈ ನಿಟ್ಟಿನಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಹಿಂದಿನ ತಲೆಮಾರಿಗಿಂತಾ ಹೆಚ್ಚಿನ ಬದಲಾವಣೆಗಳನ್ನು ನೀಡಿ ಬಿಡುಗಡೆ ಮಾಡಿದೆ ಮತ್ತು ಈ ಕಾರು ಈ ಬಾರಿ ಸಂಸ್ಥೆಯ ಹಾರ್ಟ್‍ಟೆಕ್ಟ್ ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಿದೆ.

2018-29ರ ಹಣಕಾಸು ವರ್ಷದಲ್ಲಿ ಮಾರಾಟಗೊಂಡ ಟಾಪ್ 10 ಕಾರುಗಳಿವು

ಹ್ಯುಂಡೈ ಎಲೈಟ್ ಐ20

ಪ್ರೀಮಿಯಂ ಹ್ಯಾಚ್‍‍ಬ್ಯಾಕ್‍ನಲ್ಲಿ ಮಾರುತಿ ಸುಜುಕಿ ಬಲೆನೊ ಕರು ನಂತರ ಹ್ಯುಂಡೈ ಸಂಸ್ಥೆಯ ಎಲೈಟ್ ಐ20 ಕಾರು ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಈ ಕಾರು ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, 6 ಏರ್‍‍ಬ್ಯಾಗ್ ಓಳಗೊಂಡಂತೆ ಹಲವಾರು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದ್ದು, ರೂ. 5.50 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ. ಈ ಕಾರು 1197ಸಿಸಿ ಎಂಜಿನ್ ಸಹಾಯದಿಂದ ಪ್ರತೀ ಲೀಟರ್ ಪೆಟ್ರೋಲ್‍‍ಗೆ ಸುಮಾರು 18.6 ಕಿಲೋಮೀಟರ್ ಮೈಲೇಜ್ ನೀಡಬಲ್ಲದು.

2018-29ರ ಹಣಕಾಸು ವರ್ಷದಲ್ಲಿ ಮಾರಾಟಗೊಂಡ ಟಾಪ್ 10 ಕಾರುಗಳಿವು

ಹ್ಯುಂಡೈ ಗ್ರ್ಯಾಂಡ್ ಐ10

ಹುಂಡೈ ಗ್ರ್ಯಾಂಡ್ ಐ10 ಹೊಸ ಸ್ಯಾಂಟ್ರೊ ಮತ್ತು ಪ್ರೀಮಿಯಂ ಎಲೈಟ್ ಐ20 ನಡುವಿನ ಅಂತರವನ್ನು ತುಂಬುತ್ತದೆ. ಇದು ದೊಡ್ಡ ಎಲೈಟ್ ಐ 20 ರಂತೆಯೇ ಸುಮಾರು ಅದೇ ಮಟ್ಟದ ಮೂಲಭೂತ ಸಾಧನಗಳೊಂದಿಗೆ ಬರುತ್ತದೆ ಮತ್ತು ಹೆಚ್ಚಿನದಾಗಿ ಒಳಭಾಗದಲ್ಲಿ ಹಾಗು ಒಳಭಾಗದಲ್ಲಿ ಆಕರ್ಷಕವಾದ ವಿನ್ಯಾಸವನ್ನು ಪಡೆದುಕೊಂಡಿದೆ. ಈ ಕಾರು 4.97 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು, ಇದೂ ಸಹ 1197ಸಿಸಿ ಎಂಜಿನ್ ಸಹಾಯದಿಂದ ಪ್ರತೀ ಲೀಟರ್ ಪೆಟ್ರೋಲ್‍‍ಗೆ 19.77 ಕಿಲೋಮೀಟರ್‍‍ನ ಮೈಲೇಜ್ ನೀಡಬಲ್ಲದು.

2018-29ರ ಹಣಕಾಸು ವರ್ಷದಲ್ಲಿ ಮಾರಾಟಗೊಂಡ ಟಾಪ್ 10 ಕಾರುಗಳಿವು

ಹ್ಯುಂಡೈ ಕ್ರೆಟಾ

ಹ್ಯುಂಡೈ ಕ್ರೆಟಾ ದಕ್ಷಿಣ ಕೊರಿಯಾದ ಬ್ರ್ಯಾಂಡ್‍ನಿಂದ ಪ್ರೀಮಿಯಂ ಕೊಡುಗೆಯಾಗಿದ್ದು, ಈ ಕಾರು ರೂ. 9.6 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡುದುಕೊಂಡಿದೆ. ಈ ಕಾರು ಹಲವಾರು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದ್ದು, ಇದು 1591ಸಿಸಿ ಪೆಟ್ರೋಲ್ ಎಂಜಿನ್ ಸಹಾಯದಿಂದ ಪ್ರತೀ ಲೀಟರ್ ಪೆಟ್ರೋಲ್‍‍ಗೆ ಸುಮಾರು 15.8 ಕಿಲೋಮೀಟರ್‍‍ನ ಮೈಲೇಜ್ ನೀಡಬಲ್ಲದು.

2018-29ರ ಹಣಕಾಸು ವರ್ಷದಲ್ಲಿ ಮಾರಾಟಗೊಂಡ ಟಾಪ್ 10 ಕಾರುಗಳಿವು

ಮಾರುತಿ ಸೆಲೆರಿಯೊ

ಸೆಲೆರಿಯೊ ಎಕ್ಸ್ ಕಾರುಗಳು ಬಿಡುಗಡೆಯ ನಂತರ ಹ್ಯಾಚ್‌ಬ್ಯಾಕ್ ಕಾರು ಮಾರಾಟ ಪಟ್ಟಿಯಲ್ಲಿ ಮಹತ್ವದ ಬದಲಾವಣೆಗಳಾಗಿದ್ದು, ಅತ್ಯುತ್ತಮ ತಾಂತ್ರಿಕ ಅಂಶಗಳೊಂದಿಗೆ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಸೆಲೆರಿಯೊ ಕಾರುಗಳು ಟಾಪ್ 10ರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿವೆ.

Source: ETAuto

Most Read Articles

Kannada
English summary
Top 10 selling Cars and SUVs in FY19. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X