ಭಾರತದಲ್ಲಿ ಮಾರಾಟವಾಗುತ್ತಿರುವ ಬೆಸ್ಟ್ ಎಸ್‌ಯುವಿ ಕಾರುಗಳಿವು..!

ಭಾರತದಲ್ಲಿ ಕಾರು ಮಾರಾಟ ಪ್ರಮಾಣವು ಜೋರಾಗಿದ್ದು, ಮಧ್ಯಮ ವರ್ಗದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು ವಿವಿಧ ಮಾದರಿಯ ಕಾರು ಆವೃತ್ತಿಗಳನ್ನು ಪರಿಚಯಿಸಿದ್ದು, ಇದರಲ್ಲಿ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಿಗೆ ಭಾರೀ ಬೇಡಿಕೆ ಕಂಡುಬರುತ್ತಿದೆ. ಕಳೆದ ಏಪ್ರಿಲ್ ಅವಧಿಯಲ್ಲಿ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡ ಟಾಪ್ 10 ಕಾರುಗಳ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಬೆಸ್ಟ್ ಎಸ್‌ಯುವಿ ಕಾರುಗಳಿವು..!

01. ಮಾರುತಿ ಸುಜುಕಿ ಬ್ರೆಝಾ

2016ರ ಮಾರ್ಚ್‌ನಲ್ಲಿ ಮೊದಲ ಬಾರಿಗೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿದ್ದ ವಿಟಾರಾ ಬ್ರೆಝಾ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳು ಇದುವರೆಗೆ ಬರೋಬ್ಬರಿ 4 ಲಕ್ಷ ಕಾರುಗಳು ಮಾರಾಟಗೊಂಡಿದ್ದು, ಎಸ್‌ಯುವಿ ವಿಭಾಗದಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುವ ಮೂಲಕ ಸದ್ಯ ಭಾರತೀಯ ಆಟೋ ಉದ್ಯಮದಲ್ಲಿ ಅಗ್ರಸ್ಥಾನದತ್ತ ಹೆಜ್ಜೆ ಹಾಕುತ್ತಿದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಬೆಸ್ಟ್ ಎಸ್‌ಯುವಿ ಕಾರುಗಳಿವು..!

ಕಳೆದ ತಿಂಗಳು ಏಪ್ರಿಲ್‌ನಲ್ಲೂ ಕೂಡಾ 11,785 ಬ್ರೆಝಾ ಕಾರುಗಳು ಮಾರಾಟವಾಗುವ ಮೂಲಕ ಎಸ್‌ಯುವಿ ವಿಭಾಗದಲ್ಲಿ ಮುಂಚೂಣಿಯಲ್ಲಿದ್ದು, 1.2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಮಾತ್ರ ಹೊಂದಿರುವ ಬ್ರೆಝಾ ಕಾರು ಮುಂಬರುವ ಕೆಲವೇ ದಿನಗಳಲ್ಲಿ ಪೆಟ್ರೋಲ್ ಆಯ್ಕೆ ಹೊಂದವ ಮೂಲಕ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ತವಕದಲ್ಲಿದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಬೆಸ್ಟ್ ಎಸ್‌ಯುವಿ ಕಾರುಗಳಿವು..!

02. ಹ್ಯುಂಡೈ ಕ್ರೆಟಾ

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹ್ಯುಂಡೈ ಕ್ರೆಟಾ ಕೂಡಾ ಉತ್ತಮ ಆಯ್ಕೆಯಾಗಿದ್ದು, ಗ್ರಾಹಕರ ಸೆಳೆಯುವಲ್ಲಿ ಯಶಸ್ವಿಯಾಗಿರುವ ಕ್ರೆಟಾ ಕಾರು ಕಳೆದ ಏಪ್ರಿಲ್‌ನಲ್ಲಿ 10,487 ಕಾರುಗಳು ಮಾರಾಟವಾಗುವ ಮೂಲಕ 2ನೇ ಸ್ಥಾನದಲ್ಲಿದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಬೆಸ್ಟ್ ಎಸ್‌ಯುವಿ ಕಾರುಗಳಿವು..!

03. ಮಹೀಂದ್ರಾ ಬೊಲೆರೊ

ಮಧ್ಯಮ ಗಾತ್ರದ ಎಸ್‌ಯುವಿ ಮಾರಾಟದಲ್ಲಿ ಬಹುದಿನಗಳಿಂದಲೂ ಒಂದೇ ಪ್ರಮಾಣದ ಬೇಡಿಕೆ ಪಡೆದುಕೊಂಡ ಕೆಲವೇ ಕಾರುಗಳಲ್ಲಿ ಬೊಲೆರೊ ಕೂಡಾ ಒಂದಾಗಿದ್ದು, ಏಪ್ರಿಲ್ ಅವಧಿಯಲ್ಲಿ 5,310 ಕಾರುಗಳು ಮಾರಾಟವಾಗುವ ಮೂಲಕ 3ನೇ ಸ್ಥಾನದಲ್ಲಿದೆ. ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಲಭ್ಯವಿರುವ ಬಲೆರೊ ಕಾರು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 10 ವೆರಿಯೆಂಟ್‌ಗಳನ್ನು ಪಡೆದುಕೊಂಡಿದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಬೆಸ್ಟ್ ಎಸ್‌ಯುವಿ ಕಾರುಗಳಿವು..!

04. ಮಹೀಂದ್ರಾ ಎಕ್ಸ್‌ಯುವಿ 300

ಕಳೆದ ಫೆಬ್ರುವರಿ 14ರಂದು ಬಿಡುಗಡೆಯಾಗಿರುವ ಮಹೀಂದ್ರಾ ಎಕ್ಸ್‌ಯುವಿ 300 ಕಾರು ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಅತಿ ಕಡಿಮೆ ಅವಧಿಯಲ್ಲಿ ಮುನ್ನುಗ್ಗುತ್ತಿರುವ ಹೊಸ ಕಾರು ಕಳೆದ ತಿಂಗಳು 4,200 ಕಾರುಗಳು ಮಾರಾಟವಾಗುವ ಮೂಲಕ 4ನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಬೆಸ್ಟ್ ಎಸ್‌ಯುವಿ ಕಾರುಗಳಿವು..!

05. ಟಾಟಾ ನೆಕ್ಸಾನ್

ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಸುರಕ್ಷಿತ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಟಾಟಾ ನೆಕ್ಸಾನ್ ಕಾರು ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳ ಮಾರಾಟದಲ್ಲಿ 5ನೇ ಸ್ಥಾನದಲ್ಲಿದ್ದು, ಏಪ್ರಿಲ್ ಅವಧಿಯಲ್ಲಿ 3,976 ಕಾರುಗಳು ಮಾರಾಟಗೊಂಡಿವೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಬೆಸ್ಟ್ ಎಸ್‌ಯುವಿ ಕಾರುಗಳಿವು..!

06. ಮಹೀಂದ್ರಾ ಸ್ಕಾರ್ಪಿಯೋ

ಮಹೀಂದ್ರಾ ಜನಪ್ರಿಯ ಕಾರುಗಳಲ್ಲಿ ಒಂದಾಗಿರುವ ಸ್ಕಾರ್ಪಿಯೋ ಕಾರು ಕೂಡಾ ಬಹುದಿನಗಳಿಂದಲೂ ಬೇಡಿಕೆಯಲ್ಲಿರುವ ಕಾರು ಮಾದರಿಯಾಗಿದ್ದು, ಕಳೆದ ತಿಂಗಳು ಏಪ್ರಿಲ್‌ನಲ್ಲಿ 3,930 ಕಾರು ಮಾರಾಟವಾಗುವ ಮೂಲಕ 6ನೇ ಸ್ಥಾನದಲ್ಲಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಭಾರತದಲ್ಲಿ ಮಾರಾಟವಾಗುತ್ತಿರುವ ಬೆಸ್ಟ್ ಎಸ್‌ಯುವಿ ಕಾರುಗಳಿವು..!

07. ಫೋರ್ಡ್ ಇಕೋಸ್ಪೋರ್ಟ್

ಫೋರ್ಡ್ ಸಂಸ್ಥೆಯ ಜನಪ್ರಿಯ ಕಾರು ಮಾದರಿಯಾಗಿರುವ ಇಕೋಸ್ಪೋರ್ಟ್ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಕಳೆದ ತಿಂಗಳು 3,191 ಕಾರುಗಳು ಮಾರಾಟವಾಗಿವೆ. ಮಹೀಂದ್ರಾ ಎಕ್ಸ್‌ಯುವಿ 300 ಬಿಡುಗಡೆಯಾದ ನಂತರ ಇಕೋಸ್ಪೋರ್ಟ್ ಮಾರಾಟದಲ್ಲಿ ತುಸು ಇಳಿಕೆ ಕಂಡುಬಂದಿದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಬೆಸ್ಟ್ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಿವು...!

08. ಮಾರುತಿ ಎಸ್-ಕ್ರಾಸ್

ಮಾರುತಿ ಸುಜುಕಿ ನಿರ್ಮಾಣದ ಪ್ರೀಮಿಯಂ ಕಾರು ಮಾದರಿಯಾದ ಎಸ್-ಕ್ರಾಸ್ ಕೂಡಾ ಎಸ್‌ಯುವಿ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಹೊಸ ಎಂಜಿನ್ ಆಯ್ಕೆಯಿಂದಾಗಿ ದುಬಾರಿ ಬೆಲೆಯ ಮಧ್ಯದಲ್ಲೂ ಏಪ್ರಿಲ್ ಅವಧಿಯಲ್ಲಿ 2,163 ಕಾರುಗಳು ಮಾರಾಟವಾಗಿವೆ.

MOST READ: ಅಪಘಾತದಲ್ಲಿ ಹ್ಯಾರಿಯರ್ ಕಾರು ಪುಡಿಪುಡಿಯಾದ್ರು ಪ್ರಯಾಣಿಕರಿಗೆ ಏನೂ ಆಗಲಿಲ್ಲ..!

ಭಾರತದಲ್ಲಿ ಮಾರಾಟವಾಗುತ್ತಿರುವ ಬೆಸ್ಟ್ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಿವು...!

09. ಟಾಟಾ ಹ್ಯಾರಿಯರ್

ಪ್ರೀಮಿಯಂ ಎಸ್‌ಯುವಿ ಆವೃತ್ತಿಗಳಲ್ಲಿ ಮುಂಚೂಣಿಯಲ್ಲಿರುವ ಟಾಟಾ ಹ್ಯಾರಿಯರ್ ಕಾರು ಸದ್ಯ ಮಹೀಂದ್ರಾ ಎಕ್ಸ್‌ಯುವಿ500 ಮತ್ತು ಜೀಪ್ ಕಂಪಾಸ್ ಕಾರುಗಳಿಗೆ ತೀವ್ರ ಪೈಪೋಟಿ ನೀಡುತ್ತಿದ್ದು, ಕಳೆದ ತಿಂಗಳು 2,075 ಕಾರು ಮಾರಾಟವಾಗುವ ಮೂಲಕ ಹೊಸ ನೀರಿಕ್ಷೆ ಹುಟ್ಟುಹಾಕಿದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಬೆಸ್ಟ್ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಿವು...!

10. ಹೋಂಡಾ ಡಬ್ಲ್ಯುಆರ್‌ವಿ

ಹೋಂಡಾ ನಿರ್ಮಾಣದ ಯಶಸ್ವಿ ಕಾರುಗಳಲ್ಲಿ ಡಬ್ಲ್ಯುಆರ್‌ವಿ ಕೂಡಾ ಒಂದಾಗಿದ್ದು, ಅತ್ಯುತ್ತಮ ತಾಂತ್ರಿಕ ಸೌಲಭ್ಯ ಹೊಂದಿರುವ ಈ ಕಾರು ಕಳೆದ ತಿಂಗಳು ಏಪ್ರಿಲ್‌ನಲ್ಲಿ 1,604 ಕಾರುಗಳ ಮಾರಾಟ ಮೂಲಕ ಟಾಪ್ 10 ಕಾರು ಮಾರಾಟ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.

Most Read Articles

Kannada
English summary
Best selling SUVs for April 2019. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X