ನಿಶ್ಚಿಂತೆಯಿಂದ ಸಂಚರಿಸಿ; ಇಲ್ಲಿವೆ ರೂ.10 ಲಕ್ಷದೊಳಗಿನ ಟಾಪ್ 5 ಸುರಕ್ಷಿತ ಕಾರುಗಳು..!

ಅದೊಂದು ಕಾಲವಿತ್ತು. ಕಾರು ಖರೀದಿಸುವ ಬಹುತೇಕ ಗ್ರಾಹಕರು ಅಗ್ಗದ ಬೆಲೆಯ ಕಾರುಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದರು. ಆದ್ರೆ ಇದೀಗ ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಯ ಕಾರುಗಳಿಂತ ಉತ್ತಮ ಸುರಕ್ಷೆತೆಯುಳ್ಳ ಕಾರು ಖರೀದಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ರೂ.10 ಲಕ್ಷದೊಳಗೆ ಖರೀದಿಸಬಹುದಾದ 5 ಅತ್ಯುತ್ತಮ ಕಾರುಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ನಿಶ್ಚಿಂತೆಯಿಂದ ಸಂಚರಿಸಿ; ಇಲ್ಲಿವೆ ರೂ.10 ಲಕ್ಷದೊಳಗಿನ ಟಾಪ್ 5 ಸುರಕ್ಷಿತ ಕಾರುಗಳು..!

ಆಧುನಿಕ ಕಾಲಘಟ್ಟದಲ್ಲಿ ಪ್ರಯಾಣಿಕರ ಸುರಕ್ಷತೆಗೂ ಅತಿ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಲಾಗುತ್ತಿದ್ದು, ಇದರ ಭಾಗವಾಗಿ ಕಾರುಗಳ ಸುರಕ್ಷತಾ ಗುಣಮಟ್ಟದ ವೃದ್ಧಿಗೆ ಆದ್ಯತೆ ಕೊಡಲಾಗಿದೆ. ಇನ್ನೊಂದೆಡೆ ಯುರೋಪ್ ಎನ್‌ಸಿಎಪಿ ಮಾದರಿಯಲ್ಲಿ ಭಾರತೀಯ ಪ್ರಯಾಣಿಕ ಕಾರುಗಳಿಗೂ ಗರಿಷ್ಠ ಭದ್ರತೆಯನ್ನು ಖಾತ್ರಿಪಡಿಸಲು ಹೊರಟಿರುವ ಭಾರತ ಸರ್ಕಾರವು 2019ರ ಅಕ್ಟೋಬರ್ 1ರಿಂದ ಪ್ರತಿ ಕಾರಿಗೂ ನ್ಯೂ ಕಾರ್ ಅಸ್ಸೆಸ್ಮೆಂಟ್ ಪ್ರೋಗ್ರಾಂ (ಎನ್‌ಸಿಎಪಿ) ಕಡ್ಡಾಯಗೊಳಿಸಲಿದ್ದು, ಸುರಕ್ಷತೆ ಇಲ್ಲದ ಕಾರುಗಳು ಮಾರುಕಟ್ಟೆಯಿಂದ ನಿರ್ಗಮಿಸುವುದು ಬಹುತೇಕ ಖಚಿತವಾಗಿದೆ.

ನಿಶ್ಚಿಂತೆಯಿಂದ ಸಂಚರಿಸಿ; ಇಲ್ಲಿವೆ ರೂ.10 ಲಕ್ಷದೊಳಗಿನ ಟಾಪ್ 5 ಸುರಕ್ಷಿತ ಕಾರುಗಳು..!

ದೇಶದ ಪ್ರತಿಯೊಂದು ವಾಹನ ಸಂಸ್ಥೆಗಳು ಕೂಡಾ ತಮ್ಮ ಕಾರುಗಳಲ್ಲಿ ಉನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ಬದ್ಧವಾಗಿದೆ. ಇದು ವಾಹನಗಳ ಬೆಲೆಗಳಲ್ಲಿ ಸ್ವಲ್ಪ ದುಬಾರಿ ಎನಿಸಿದರೂ ಪ್ರಯಾಣಿಕರ ಸುರಕ್ಷತೆಯನ್ನು ಗಮನಿಸಿದಾಗ ಇದು ಕ್ರಮವೆನಿಸುತ್ತಿದೆ. ಪ್ರಸ್ತುತ ಲೇಖನದಲ್ಲಿ ಸದ್ಯ ದೇಶದ ಮಾರುಕಟ್ಟೆಯಲ್ಲಿರುವ ಟಾಪ್ 5 ಸುರಕ್ಷಿತ ಕಾರುಗಳ ಬಗ್ಗೆ ಚರ್ಚಿಸಲಿದ್ದೇವೆ.

ನಿಶ್ಚಿಂತೆಯಿಂದ ಸಂಚರಿಸಿ; ಇಲ್ಲಿವೆ ರೂ.10 ಲಕ್ಷದೊಳಗಿನ ಟಾಪ್ 5 ಸುರಕ್ಷಿತ ಕಾರುಗಳು..!

ಸದ್ಯ ಮಾರುಕಟ್ಟೆಯಲ್ಲಿ ಉತ್ತಮ ಸುರಕ್ಷಾ ಸೌಲಭ್ಯಗಳನ್ನು ಹೊಂದಿರುವ ಅನೇಕ ಕಾರು ಮಾದರಿಗಳು ಮಾರಾಟಕ್ಕೆ ಲಭ್ಯವಿದ್ದರೂ ಸಹ ದುಬಾರಿ ಬೆಲೆಗಳಿಂದಾಗಿ ಮಧ್ಯಮ ವರ್ಗದ ಗ್ರಾಹಕರು ಅವುಗಳನ್ನು ಖರೀದಿ ಮಾಡುವುದು ಕಷ್ಟಸಾಧ್ಯ.

ನಿಶ್ಚಿಂತೆಯಿಂದ ಸಂಚರಿಸಿ; ಇಲ್ಲಿವೆ ರೂ.10 ಲಕ್ಷದೊಳಗಿನ ಟಾಪ್ 5 ಸುರಕ್ಷಿತ ಕಾರುಗಳು..!

ಹೀಗಾಗಿ ರೂ. 10 ಲಕ್ಷದೊಳಗೆ ಖರೀದಿ ಮಾಡಬಹುದಾದ ಉತ್ತಮ ಸುರಕ್ಷಾ ಸೌಲಭ್ಯವನ್ನು ಹೊಂದಿರುವ ಕಾರುಗಳ ಮಾಹಿತಿ ಇಲ್ಲಿ ನೀಡಲಾಗಿದ್ದು, ಇವು ಐಷಾರಾಮಿ ಕಾರುಗಳಲ್ಲಿರುವ ಸೌಲಭ್ಯಗಳಿಂತ ಕಡಿಮೆ ಎನ್ನಿಸಿದರೂ ವಾಹನ ಚಾಲನೆ ವೇಳೆ ಗರಿಷ್ಠ ಸುರಕ್ಷೆ ನೀಡಬಲ್ಲವು ಎನ್ನುವುದು ನಮ್ಮ ಅಭಿಪ್ರಾಯ.

ನಿಶ್ಚಿಂತೆಯಿಂದ ಸಂಚರಿಸಿ; ಇಲ್ಲಿವೆ ರೂ.10 ಲಕ್ಷದೊಳಗಿನ ಟಾಪ್ 5 ಸುರಕ್ಷಿತ ಕಾರುಗಳು..!

01. ಟಾಟಾ ನೆಕ್ಸಾನ್

ದೇಶದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ ಟಾಟಾ ಸಂಸ್ಥೆಯು ಸದ್ಯ ಕಾರುಗಳ ಸುರಕ್ಷತೆ ಬಹುದೊಡ್ಡ ಬದಲಾವಣೆ ತರುತ್ತಿದ್ದು, ನೆಕ್ಸಾನ್ ಕಂಪ್ಯಾಕ್ಟ್ ಎಸ್‌ಯುವಿಯು ಪ್ರಯಾಣಿಕರ ಸುರಕ್ಷತೆಯಲ್ಲಿ 5 ಸ್ಟಾರ್ ರೇಟಿಂಗ್ ಗಿಟ್ಟಿಸಿಕೊಳ್ಳುವ ಮೂಲಕ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಗಳಿಗೂ ಟಾಂಗ್ ನೀಡಿದೆ.

ನಿಶ್ಚಿಂತೆಯಿಂದ ಸಂಚರಿಸಿ; ಇಲ್ಲಿವೆ ರೂ.10 ಲಕ್ಷದೊಳಗಿನ ಟಾಪ್ 5 ಸುರಕ್ಷಿತ ಕಾರುಗಳು..!

1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೇಲ್ ಎಂಜಿನ್ ಹೊಂದಿರುವ ನೆಕ್ಸಾನ್ ಕಾರು ಆರಂಭಿಕವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 6.49 ಲಕ್ಷ ಮತ್ತು ಟಾಪ್ ಎಂಡ್ ಮಾದರಿಗೆ ರೂ. 10.90 ಲಕ್ಷ ಬೆಲೆ ಹೊಂದಿದೆ.

ನಿಶ್ಚಿಂತೆಯಿಂದ ಸಂಚರಿಸಿ; ಇಲ್ಲಿವೆ ರೂ.10 ಲಕ್ಷದೊಳಗಿನ ಟಾಪ್ 5 ಸುರಕ್ಷಿತ ಕಾರುಗಳು..!

02. ಮಹೀಂದ್ರಾ ಎಕ್ಸ್‌ಯುವಿ 300

ಟಾಟಾ ಸಂಸ್ಥೆಯ ಪ್ರೇರಣೆಯೊಂದಿಗೆ ಎಕ್ಸ್‌ಯುವಿ 300 ಕಾರಿನಲ್ಲಿ ಗರಿಷ್ಠ ಪ್ರಯಾಣಿಕ ಸುರಕ್ಷಾ ಕ್ರಮವನ್ನು ಕೈಗೊಂಡಿರುವ ಮಹೀಂದ್ರಾ ಸಂಸ್ಥೆಯು ಕಂಪ್ಯಾಕ್ಟ್ ಎಸ್‌ಯುವಿಗಳಲ್ಲೇ ವಿಶಿಷ್ಟ ಎನ್ನಿಸುವ ಹಲವು ಐಷಾರಾಮಿ ಸೌಲಭ್ಯಗಳನ್ನು ನೀಡಿದ್ದು, ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಇದು ಕೂಡಾ 5 ಸ್ಟಾರ್ ಗಿಟ್ಟಿಸಿಕೊಳ್ಳುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದೆ.

ನಿಶ್ಚಿಂತೆಯಿಂದ ಸಂಚರಿಸಿ; ಇಲ್ಲಿವೆ ರೂ.10 ಲಕ್ಷದೊಳಗಿನ ಟಾಪ್ 5 ಸುರಕ್ಷಿತ ಕಾರುಗಳು..!

ಎಕ್ಸ್‌ಯುವಿ 300 ಕಾರಿನ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.7.90 ಲಕ್ಷಕ್ಕೆ ಮತ್ತು ಹೈಎಂಡ್ ಮಾದರಿಗೆ ರೂ. 10.80 ಲಕ್ಷ ಬೆಲೆ ಪಡೆದುಕೊಂಡಿದ್ದು, ಅತಿ ಕಡಿಮೆ ಬೆಲೆಯಲ್ಲಿ 7 ಏರ್‌ಬ್ಯಾಗ್, ಆಲ್‌‍‌ವೀಲ್ಹ್ ಡಿಸ್ಕ್ ಬ್ರೇಕ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ಸ್ಮಾರ್ಟ್ ವಾಚ್ ಕನೆಕ್ಟಿವಿಟಿ ಸೇರಿದಂತೆ ಹಲವಾರು ಫೀಚರ್ಸ್‌ಗಳನ್ನು ನೀಡಲಾಗಿದೆ.

ನಿಶ್ಚಿಂತೆಯಿಂದ ಸಂಚರಿಸಿ; ಇಲ್ಲಿವೆ ರೂ.10 ಲಕ್ಷದೊಳಗಿನ ಟಾಪ್ 5 ಸುರಕ್ಷಿತ ಕಾರುಗಳು..!

03. ಮಾರುತಿ ಸುಜುಕಿ ವಿಟಾರಾ ಬ್ರೆಝಾ

ಸುರಕ್ಷಾ ವಿಚಾರವಾಗಿ 4 ಸ್ಟಾರ್ ರೇಟಿಂಗ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ವಿಟಾರಾ ಬ್ರೆಝಾ ಕಂಪ್ಯಾಕ್ಟ್ ಎಸ್‌ಯುವಿ ಕಾರು ಸದ್ಯ ದೇಶದಲ್ಲಿ ಮಾರಾಟವಾಗುತ್ತಿರುವ ಟಾಪ್ 10 ಕಾರುಗಳ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ. 7.58 ಲಕ್ಷಕ್ಕೆ ಹಾಗೂ ಟಾಪ್ ಎಂಡ್ ಮಾದರಿಯು ರೂ. 10.55 ಲಕ್ಷಕ್ಕೆ ಖರೀದಿಗೆ ಲಭ್ಯವಿದೆ.

MOST READ: ಟೊಯೊಟಾ ಬಿಡದಿ ಘಟಕದ ವಿಸ್ತರಣೆಗಾಗಿ 7 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ ಮಾರುತಿ ಸುಜುಕಿ

ನಿಶ್ಚಿಂತೆಯಿಂದ ಸಂಚರಿಸಿ; ಇಲ್ಲಿವೆ ರೂ.10 ಲಕ್ಷದೊಳಗಿನ ಟಾಪ್ 5 ಸುರಕ್ಷಿತ ಕಾರುಗಳು..!

1.3-ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಬ್ರೆಝಾ ಕಾರುಗಳು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಪಡೆದಿದ್ದು, 89-ಬಿಎಚ್‌ಪಿ ಮತ್ತು 200-ಎನ್ಎಂ ಟಾರ್ಕ್‌ನೊಂದಿಗೆ ಉತ್ತಮ ಇಂಧನ ದಕ್ಷತೆ ಹೊಂದಿದೆ.

ನಿಶ್ಚಿಂತೆಯಿಂದ ಸಂಚರಿಸಿ; ಇಲ್ಲಿವೆ ರೂ.10 ಲಕ್ಷದೊಳಗಿನ ಟಾಪ್ 5 ಸುರಕ್ಷಿತ ಕಾರುಗಳು..!

04. ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್

ಕ್ರೇಟಾ ಫೇಸ್‌‌ಲಿಫ್ಟ್ ಕಾರುಗಳು ಪೆಟ್ರೋಲ್ ಎಂಜಿನ್ ಮತ್ತು ಡೀಸೆಲ್ ಎಂಜಿನ್ ಎರಡು ಮಾದರಿಯಲ್ಲೂ ಖರೀದಿಗೆ ಲಭ್ಯವಿದ್ದು, ಇವುಗಳಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪೆಟ್ರೋಲ್ ಆವೃತ್ತಿಯಲ್ಲಿ 6 ವೆರಿಯೆಂಟ್‌ಗಳು ಮತ್ತು ಡೀಸೆಲ್ ಆವೃತ್ತಿಯಲ್ಲಿ 7 ವೆರಿಯೆಂಟ್‌ಗಳನ್ನು ಪರಿಚಯಿಸಲಾಗಿದೆ.

MOST READ: ಮಾಡಿಫೈ ವಾಹನಗಳನ್ನು ಉಳಿಸುವಂತೆ ಬೀದಿಗಿಳಿದು ಪ್ರತಿಭಟಿಸಿದ ಯುವಕರು..!

ನಿಶ್ಚಿಂತೆಯಿಂದ ಸಂಚರಿಸಿ; ಇಲ್ಲಿವೆ ರೂ.10 ಲಕ್ಷದೊಳಗಿನ ಟಾಪ್ 5 ಸುರಕ್ಷಿತ ಕಾರುಗಳು..!

ಸುರಕ್ಷತೆಯಲ್ಲಿ 4 ಸ್ಟಾರ್ ಪಡೆದುಕೊಂಡಿರುವ ಕ್ರೇಟಾ ಕಾರುಗಳಲ್ಲಿ 4 ಏರ್‌ಬ್ಯಾಗ್‌ಗಳು, ಎಬಿಎಸ್, ಇಬಿಡಿ ಸೇರಿದಂತೆ ಹಲವು ಕ್ಲಾಸ್ ಲೀಡಿಂಗ್ ಸೌಲಭ್ಯಗಳನ್ನು ಹೊಂದಿದ್ದು, ಆರಂಭಿಕವಾಗಿ ರೂ.9.43 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ.15. 03 ಲಕ್ಷಕ್ಕೆ ಖರೀದಿಸಬಹುದಾಗಿದೆ.

ನಿಶ್ಚಿಂತೆಯಿಂದ ಸಂಚರಿಸಿ; ಇಲ್ಲಿವೆ ರೂ.10 ಲಕ್ಷದೊಳಗಿನ ಟಾಪ್ 5 ಸುರಕ್ಷಿತ ಕಾರುಗಳು..!

05. ಇಟಿಯಾಸ್ ಲಿವಾ

ಟೊಯೊಟಾ ಸಂಸ್ಥೆಯು ತನ್ನ ಹೊಸ ಕಾರು ಉತ್ಪನ್ನಗಳನ್ನು ಪ್ರಮುಖ ಮೂರು ತತ್ವದಡಿ ನಿರ್ಮಾಣಗೊಳಿಸುತ್ತಿದ್ದು, ವಿನ್ಯಾಸ, ಗುಣಮಟ್ಟ ಮತ್ತು ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಹೊಸ ಉತ್ಪನ್ನಗಳ ಅಭಿವೃದ್ಧಿಗೆ ಬದ್ಧವಾಗಿದೆ. ಹೀಗಾಗಿ ಖರೀದಿಗೆ ಯೋಗ್ಯ ಎನ್ನಿಸುವ ಟೊಯೊಟಾ ಉತ್ಪನ್ನಗಳಲ್ಲಿ ಇದೀಗ ಇಟಿಯಾಸ್ ಲಿವಾ ಡ್ಯುಯಲ್ ಟೋನ್ ಲಿಮಿಟೆಡ್ ಎಡಿಷನ್ ಹೊಸ ಸೇರ್ಪಡೆಯಾಗಿದೆ.

MOST READ: ಭಾರತದಲ್ಲಿ 20 ವರ್ಷ ಪೂರೈಸಿದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್

ನಿಶ್ಚಿಂತೆಯಿಂದ ಸಂಚರಿಸಿ; ಇಲ್ಲಿವೆ ರೂ.10 ಲಕ್ಷದೊಳಗಿನ ಟಾಪ್ 5 ಸುರಕ್ಷಿತ ಕಾರುಗಳು..!

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಇಟಿಯಾಸ್ ಲಿವಾ ಕಾರುಗಳು 4 ಸ್ಟಾರ್ ಸುರಕ್ಷಾ ರೇಟಿಂಗ್ ತನ್ನದಾಗಿಸಿಕೊಂಡಿದ್ದು, ಕಾರಿನ ಬೆಲೆಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಪೆಟ್ರೋಲ್ ಮಾದರಿಯನ್ನು ರೂ.6.50 ಲಕ್ಷಕ್ಕೆ ಮತ್ತು ಡೀಸೆಲ್ ಮಾದರಿಯನ್ನು ರೂ.7.65 ಲಕ್ಷಕ್ಕೆ ನಿಗದಿಗೊಳಿಸಲಾಗಿದೆ.

Most Read Articles

Kannada
English summary
Top 5 Safest Cars in India. Read In Kannada.
Story first published: Wednesday, April 10, 2019, 19:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X