ಹೆಚ್ಚು ಮಾರಾಟವಾದ ಟಾಪ್-10 ಎಂಪಿ‍ವಿಗಳಿವು

ದೇಶಿಯ ಮಾರುಕಟ್ಟೆಯಲ್ಲಿ ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಎಂಪಿ‍ವಿ ವಿಭಾಗದ ಕಾರುಗಳ ಟಾಪ್-10 ಪಟ್ಟಿ ಬಿಡುಗಡೆಯಾಗಿದೆ. ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಮಾರುತಿ ಸುಜುಕಿ ಕಂಪನಿಯ ಎರ್ಟಿಗಾ ಕಾರು ಮೊದಲ ಸ್ಥಾನದಲ್ಲಿದೆ.

ಹೆಚ್ಚು ಮಾರಾಟವಾದ ಟಾಪ್-10 ಎಂಪಿ‍ವಿಗಳಿವು

ಆಟೋಮೊಬೈಲ್ ಕ್ಷೇತ್ರವು ಕುಸಿತ ಕಾಣುತ್ತಿರುವ ಈ ಸಂದರ್ಭದಲ್ಲಿ ಮಾರುತಿ ಸುಜುಕಿ ಎರ್ಟಿಗಾ ಕಾರು ದೇಶಿಯ ಮಾರುಕಟ್ಟೆಯಲ್ಲಿ ಶೇ.139ರಷ್ಟು ಬೆಳವಣಿಗೆ ಕಂಡಿದೆ. ಈ ವರ್ಷದ ಆಗಸ್ಟ್ ತಿಂಗಳಲ್ಲಿ ಎರ್ಟಿಗಾ ಕಾರಿನ 8,391 ಯು‍ನಿ‍ಟ್‍ಗಳು ಮಾರಾಟವಾಗಿವೆ. ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ 3,515 ಯುನಿ‍ಟ್‍ಗಳು ಮಾರಾಟವಾಗಿದ್ದವು. ಎರಡನೇ ತಲೆಮಾರಿನ ಎರ್ಟಿಗಾ ಕಾರು ಬಿಡುಗಡೆಯಾದ ಬಳಿಕ ಮಾರಾಟದಲ್ಲಿ ಬೆಳವಣಿಗೆ ಕಂಡಿದೆ.

ಹೆಚ್ಚು ಮಾರಾಟವಾದ ಟಾಪ್-10 ಎಂಪಿ‍ವಿಗಳಿವು

ಹೊಸ ಎರ್ಟಿಗಾ ಕಾರ್ ಅನ್ನು ಕಳೆದ ವರ್ಷ ಹಲವಾರು ಬದಲಾವಣೆಗಳೊಂದಿಗೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು. ಆಕರ್ಷಕ ಪ್ರೀಮಿಯಂ ಲುಕ್ ಮತ್ತು ಹೊಸ ವೈಶಿಷ್ಟ್ಯಗಳೊಂದಿಗೆ ಅಪ್‍‍ಗ್ರೇಡ್ ಆಗಿ ಬಿಡುಗಡೆಯಾದ ಹೊಸ ಎರ್ಟಿಗಾ ಮತ್ತಷ್ಟು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಸ್ಥಾನ ಮಾದರಿಗಳು ಮಾರಾಟಸಂಖ್ಯೆ
1 ಮಾರುತಿ ಸುಜುಕಿ ಎರ್ಟಿಗಾ 8,391
2 ಟೊಯೊಟಾ ಇನೋವಾ ಕ್ರಿಸ್ಟಾ 4,796
3 ಮಹೀಂದ್ರಾ ಬೊಲೆರೊ 3,993
4 ರೆನಾಲ್ಟ್ ಟ್ರೈಬರ್ 2,490
5 ಮಾರುತಿ ಸುಜುಕಿ ಎಕ್ಸ್ಎಲ್6 2,356
6 ಮಹೀಂದ್ರಾ ಮೊರಾಜೊ 697
7 ಮಹೀಂದ್ರಾ ಝೈಲೊ 356
8 ಹೋಂಡಾ ಬಿಆರ್-ವಿ 175
9 ಡಸ್ಟನ್ ಗೋ 169
10 ಟಾಟಾ ಹೆಕ್ಸಾ 136
ಹೆಚ್ಚು ಮಾರಾಟವಾದ ಟಾಪ್-10 ಎಂಪಿ‍ವಿಗಳಿವು

ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಎಂಪಿ‍ವಿ ವಿಭಾಗದ ಕಾರುಗಳ ಪಟ್ಟಿಯಲ್ಲಿ ಟೊಯೊಟಾ ಇನೋವಾ ಕ್ರಿಸ್ಟಾ ಎರಡನೇ ಸ್ಥಾನವನ್ನು ವಶಪಡಿಸಿಕೊಂಡಿದೆ. ಕಳೆದ ತಿಂಗಳು ಟೊಯೊಟಾ ಇನೋವಾ ಕ್ರಿಸ್ಟಾದ 4,796 ಯು‍ನಿ‍ಟ್‍ಗಳು ಮಾರಾಟವಾಗಿವೆ. ಕಳೆದ ವರ್ಷದ ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಶೇ.29 ರಷ್ಟು ಕುಸಿತ ಕಂಡಿದೆ. ಇನೋವಾ ಕ್ರಿಸ್ಟಾ, ಕಳೆದ 10 ವರ್ಷಗಳಿಂದ ಜಪಾನ್ ಮೂಲದ ಟೊಯೊಟಾ ಕಂಪನಿಯ ಅತೀ ಹೆಚ್ಚು ಮಾರಾಟವಾಗುವ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಹೆಚ್ಚು ಮಾರಾಟವಾದ ಟಾಪ್-10 ಎಂಪಿ‍ವಿಗಳಿವು

ಈ ಪಟ್ಟಿಯಲ್ಲಿ ಮಹೀಂದ್ರಾ ಬೊಲೆರೊ ಮೂರನೇ ಸ್ಥಾನದಲ್ಲಿದೆ. ಮಹೀಂದ್ರಾ ಬೊಲೆರೊವನ್ನು ಎಲ್ಲಾ ರಸ್ತೆಗಳಿಗೂ ಸಹಕಾರಿಯಾಗುವಂತೆ ತಯಾರಿಸಲಾಗಿದೆ. ಮಹೀಂದ್ರಾ ಬೊಲೆರೊ ಕಾರು ಸ್ಥಿರವಾಗಿ ಮಾರಾಟವಾಗುತ್ತಿದ್ದು, ಕಂಪನಿಯ ಬೆಳವಣಿಗೆಗೆ ಸಹಕಾರಿಯಾಗಿದೆ. ಈ ವರ್ಷದ ಆಗಸ್ಟ್ ತಿಂಗಳಲ್ಲಿ ಮಹೀಂದ್ರಾ ಬೊಲೆರೊದ 3.933 ಯು‍‍ನಿ‍ಟ್‍ಗಳ ಮಾರಾಟವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.39 ರಷ್ಟು ಕುಸಿತ ದಾಖಲಾಗಿದೆ.

ಹೆಚ್ಚು ಮಾರಾಟವಾದ ಟಾಪ್-10 ಎಂಪಿ‍ವಿಗಳಿವು

ನಾಲ್ಕನೇ ಸ್ಥಾನಕ್ಕಾಗಿ ರೆನಾಲ್ಟ್ ಟ್ರೈಬರ್ ಮತ್ತು ಮಾರುತಿ ಸುಜುಕಿ ಎಕ್ಸ್ಎಲ್6 ಕಾರುಗಳ ನಡುವೆ ಪ್ರಬಲ ಪೈಪೋಟಿಯಿದೆ. ದೇಶಿಯ ಮಾರುಕಟ್ಟೆಗೆ ರೆನಾಲ್ಟ್ ಟ್ರೈಬರ್ ಮತ್ತು ಮಾರುತಿ ಸುಜುಕಿ ಎಕ್ಸ್ಎಲ್6 ಕಾರುಗಳು ಹೊಸದಾಗಿ ಸೇರ್ಪಡೆಯಾಗಿವೆ. ಆಗಸ್ಟ್ ತಿಂಗಳಿನಲ್ಲಿ ರೆನಾಲ್ಟ್ ಟ್ರೈಬರ್ ಕಾರಿನ 2,490 ಯು‍ನಿಟ್‍ಗಳು ಮಾರಾಟವಾಗುವ ಮೂಲಕ ನಾಲ್ಕನೇ ಸ್ಥಾನದಲ್ಲಿದೆ. ಮಾರುತಿ ಸುಜುಕಿ ಎಕ್ಸ್ಎಲ್6 ಕಾರು 2,356 ಯುನಿ‍‍ಟ್‍‍ಗಳ ಮಾರಾಟದ ಮೂಲಕ ಐದನೇ ಸ್ಥಾನವನ್ನು ಪಡೆದುಕೊಂಡಿದೆ.

ಹೆಚ್ಚು ಮಾರಾಟವಾದ ಟಾಪ್-10 ಎಂಪಿ‍ವಿಗಳಿವು

ಟಾಪ್-10 ಪಟ್ಟಿಯಲ್ಲಿ ಕೆಳಗಿನ 5 ಸ್ಥಾನಗಳನ್ನು ಪಡೆದ ಕಾರುಗಳ ಪಟ್ಟಿಯಲ್ಲಿ ಕ್ರಮವಾಗಿ ಮಹೀಂದ್ರಾ ಮೊರಾಜೊ, ಮಹೀಂದ್ರಾ ಝೈಲೊ, ಹೋಂಡಾ ಬಿಆರ್-ವಿ, ಡಸ್ಟನ್ ಗೋ-ಟಾಟಾ ಹೆಕ್ಸಾ ಕಾರುಗಳಿವೆ. ಈ ವರ್ಷದ ಆಗಸ್ಟ್ ತಿಂಗಳ ಎಂಪಿವಿ ವಿಭಾಗದಲ್ಲಿ ಅತೀ ಹೆಚ್ಚು ಮಾರಾಟವಾದ ಕಾರುಗಳ ಟಾಪ್-10 ಪಟ್ಟಿಯಲ್ಲಿ ಮೊದಲ ಐದು ಸ್ಥಾನದ ನಂತರದಲ್ಲಿರುವ ಕಂಪನಿಗಳ ಕಾರುಗಳ ಮಾರಾಟವು ಮೂರಂಕಿಗೆ ಸೀಮಿತವಾಗಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಹೆಚ್ಚು ಮಾರಾಟವಾದ ಟಾಪ್-10 ಎಂಪಿ‍ವಿಗಳಿವು

ಮಹೀಂದ್ರಾ ಮರಾಜೊವಿನ 697 ಯು‍ನಿಟ್‍ಗಳು, ಮಹೀಂದ್ರಾ ಝೈಲೊವಿನ 356 ಯುನಿ‍ಟ್‍ಗಳು, ಹೋಂಡಾ ಬಿಆರ್-ವಿಯ 175 ಯು‍ನಿಟ್‍ಗಳು ಮಾರಾಟವಾಗಿದೆ. ಒಂಭತ್ತನೇ ಸ್ಥಾನದಲ್ಲಿರುವ ಡಸ್ಟನ್ ಗೋದ 169 ಯು‍ನಿ‍ಟ್‍ಗಳು ಮಾರಾಟವಾಗಿದ್ದರೆ 136 ಯುನಿ‍ಟ್‍ಗಳ ಮಾರಾಟದೊಂದಿಗೆ ಟಾಟಾ ಹೆಕ್ಸಾ ಕೊನೆ ಸ್ಥಾನದಲ್ಲಿದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಹೆಚ್ಚು ಮಾರಾಟವಾದ ಟಾಪ್-10 ಎಂಪಿ‍ವಿಗಳಿವು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ದೇಶಿಯ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಮಾರಾಟವಾದ ಟಾಪ್-10 ಎಂ‍ಪಿ‍ವಿ ವಿಭಾಗದ ಕಾರುಗಳಲ್ಲಿ ಮಾರುತಿ ಸುಜುಕಿ ತನ್ನ ಪಾರುಪತ್ಯವನ್ನು ಮುಂದುವರೆಸಿದೆ. ಟಾಪ್-10 ಪಟ್ಟಿಯಲ್ಲಿ ಮಾರುತಿ ಸುಜುಕಿಯ ಎರ್ಟಿಗಾ ಕಾರು ಮೊದಲ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಜನಪ್ರಿಯ ಟೊಯೊಟಾ ಸಂಸ್ಥೆಯ ಟೊಯೊಟಾ ಇನೋವಾ ಕ್ರಿಸ್ಟಾ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಒಟ್ಟಿನಲ್ಲಿ ಎಂಪಿ‍ವಿ ವಿಭಾಗದಲ್ಲೂ ಮಾರುತಿ ಸುಜುಕಿ ಕಂಪನಿಯು ಪಾರುಪತ್ಯ ಮೆರೆಯುವ ಮೂಲಕ ಭಾರತೀಯರ ಮೆಚ್ಚಿನ ಆಯ್ಕೆಯಾಗಿದೆ.

Most Read Articles

Kannada
English summary
Top-Selling MPVs In India For August 2019: Renault Triber Enters Top-5 While Maruti Ertiga Leads -Read in Kannada
Story first published: Monday, September 23, 2019, 15:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X