ಎಂಪಿವಿ ಸೆಗ್‍‍ಮೆಂಟಿನಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದ ಎರ್ಟಿಗಾ

ಸೆಪ್ಟೆಂಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಎಂ‍‍ಪಿವಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. ಈ ಪಟ್ಟಿಯಲ್ಲಿ ಮಾರುತಿ ಸುಜುಕಿ ಕಂಪನಿಯ ಎರ್ಟಿಗಾ ಎಂದಿನಂತೆ ಮೊದಲ ಸ್ಥಾನದಲ್ಲಿ ಮುಂದುವರೆದಿದೆ.

ಎಂಪಿವಿ ಸೆಗ್‍‍ಮೆಂಟಿನಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದ ಎರ್ಟಿಗಾ

ಸೆಪ್ಟೆಂಬರ್ ತಿಂಗಳಿನಲ್ಲಿ ಮಾರುತಿ ಸುಜುಕಿಯ ಎರ್ಟಿಗಾದ 6,284 ಯುನಿಟ್‍‍ಗಳ ಮಾರಾಟದೊಂದಿಗೆ ಮೊದಲ ಸ್ಥಾನದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಎಂಪಿವಿಯ ಮಾರಾಟದಲ್ಲಿ 60%ನಷ್ಟು ಏರಿಕೆಯಾಗಿದೆ.

ಎಂಪಿವಿ ಸೆಗ್‍‍ಮೆಂಟಿನಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದ ಎರ್ಟಿಗಾ

ಈ ಪಟ್ಟಿಯಲ್ಲಿ ಇತ್ತೀಚಿಗೆ ಬಿಡುಗಡೆಯಾದ ರೆನಾಲ್ಟ್ ಟ್ರೈಬರ್‍ ಎರಡನೇ ಸ್ಥಾನವನ್ನು ಪಡೆದಿದೆ. ಫ್ರಾನ್ಸ್ ಮೂಲದ ರೆನಾಲ್ಟ್ ಕಂಪನಿಯು ತಯಾರಿಸಿರುವ ಈ ಎಂಪಿವಿ ಸಬ್ 4 ಮೀಟರ್ ವಾಹನವನ್ನು ಕ್ವಿಡ್ ಪ್ಲಾಟ್‍‍ಫಾರಂ ಮೇಲೆ ತಯಾರಿಸಲಾಗಿದೆ.

ಎಂಪಿವಿ ಸೆಗ್‍‍ಮೆಂಟಿನಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದ ಎರ್ಟಿಗಾ

ಕಳೆದ ತಿಂಗಳು ರೆನಾಲ್ಟ್ ಟ್ರೈಬರ್‍‍ನ 4,710 ಯುನಿಟ್‍‍ಗಳು ಮಾರಾಟವಾಗಿವೆ. ಇದರಿಂದಾಗಿ ರೆನಾಲ್ಟ್ ಟ್ರೈಬರ್ ಮಾರಾಟದಲ್ಲಿ ಟೊಯೊಟಾ ಇನೊವಾ ಕ್ರಿಸ್ಟಾವನ್ನು ಹಿಂದಿಕ್ಕಿದೆ. ಟೊಯೊಟಾ ಇನೊವಾ ಕ್ರಿಸ್ಟಾದ ಮಾರಾಟದಲ್ಲಿ 35%ನಷ್ಟು ಕುಸಿತವಾಗಿ 4,225 ಯುನಿಟ್‍‍ಗಳು ಮಾರಾಟವಾಗಿವೆ.

ಎಂಪಿವಿ ಸೆಗ್‍‍ಮೆಂಟಿನಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದ ಎರ್ಟಿಗಾ

ಇನೊವಾ ಕ್ರಿಸ್ಟಾ, ಟೊಯೊಟಾ ಕಂಪನಿಯ ಜನಪ್ರಿಯ ವಾಹನಗಳಲ್ಲಿ ಒಂದಾಗಿದೆ. ಈ ವಾಹನದ ಮಾರಾಟದಿಂದಾಗಿ ಕಂಪನಿಯು ಪ್ರತಿ ತಿಂಗಳು ಬೆಳವಣಿಗೆಯನ್ನು ದಾಖಲಿಸುತ್ತಿದೆ. ನಾಲ್ಕನೇ ಸ್ಥಾನದಲ್ಲಿರುವ ಮಹೀಂದ್ರಾ ಬೊಲೆರೊದ 4,179 ಯುನಿಟ್‍‍ಗಳು ಸೆಪ್ಟೆಂಬರ್ ತಿಂಗಳಿನಲ್ಲಿ ಮಾರಾಟವಾಗಿವೆ.

ಎಂಪಿವಿ ಸೆಗ್‍‍ಮೆಂಟಿನಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದ ಎರ್ಟಿಗಾ

ಬೊಲೆರೊ ಹಲವು ದಿನಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಮಹೀಂದ್ರಾ ಕಂಪನಿಯು 2020ರಲ್ಲಿ ಬೊಲೆರೊ ವಾಹನವನ್ನು ಅಪ್‍‍ಡೇಟ್ ಮಾಡಲು ಬಯಸಿದೆ. ಮಹೀಂದ್ರಾ ಕಂಪನಿಯು ದೀಪಾವಳಿ ಹಬ್ಬಕ್ಕಾಗಿ ಹೊಸ ಸ್ಪೆಷಲ್ ಎಡಿಷನ್ ಬೊಲೆರೊ ವಾಹನವನ್ನು ಬಿಡುಗಡೆಗೊಳಿಸಿದೆ.

ಎಂಪಿವಿ ಸೆಗ್‍‍ಮೆಂಟಿನಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದ ಎರ್ಟಿಗಾ

ಕೆಲವು ದಿನಗಳ ಹಿಂದೆ ಬಿಡುಗಡೆಯಾದ ಮಾರುತಿ ಸುಜುಕಿ ಕಂಪನಿಯ ಎಕ್ಸ್ ಎಲ್6 ಐದನೇ ಸ್ಥಾನದಲ್ಲಿದೆ. 6 ಸೀಟರ್‍‍ನ ಎಕ್ಸ್ ಎಲ್6 ಪ್ರೀಮಿಯಂ ವಾಹನವನ್ನು ಜನಪ್ರಿಯ ಎರ್ಟಿಗಾ ವಾಹನದ ಆಧಾರದ ಮೇಲೆ ತಯಾರಿಸಲಾಗಿದೆ.

MOST READ: 35 ಸಾವಿರಕ್ಕೆ ಸಿಗಲಿದೆ ಮ್ಯಾಂಟಿಸ್ ಎಲೆಕ್ಟ್ರಿಕ್ ಬೈಕ್

ಎಂಪಿವಿ ಸೆಗ್‍‍ಮೆಂಟಿನಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದ ಎರ್ಟಿಗಾ

ಸೆಪ್ಟೆಂಬರ್ ತಿಂಗಳಿನಲ್ಲಿ ಎಕ್ಸ್ ಎಲ್6ನ 3,840 ಯುನಿಟ್‍‍ಗಳು ಮಾರಾಟವಾಗಿವೆ. ಎಕ್ಸ್ ಎಲ್6 ವಾಹನವನ್ನು ದೇಶಾದ್ಯಂತವಿರುವ ಮಾರುತಿ ಸುಜುಕಿ ಕಂಪನಿಯ ನೆಕ್ಸಾ ಡೀಲರ್‍‍ಗಳ ಮೂಲಕ ಮಾರಾಟ ಮಾಡಲಾಗುತ್ತದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಎಂಪಿವಿ ಸೆಗ್‍‍ಮೆಂಟಿನಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದ ಎರ್ಟಿಗಾ

ಆರನೇ ಸ್ಥಾನದಿಂದ ಹತ್ತನೇ ಸ್ಥಾನಗಳಲ್ಲಿ ಕ್ರಮವಾಗಿ ಮಹೀಂದ್ರಾ ಮರಾಜೊ, ಹೋಂಡಾ ಬಿ‍ಆರ್ ವಿ, ದಟ್ಸನ್ ಗೊ ಪ್ಲಸ್, ಟಾಟಾ ಹೆಕ್ಸಾ ಹಾಗೂ ರೆನಾಲ್ಟ್ ಲಾಡ್ಜಿಗಳಿವೆ. ಮಹೀಂದ್ರಾ ಮರಾಜೊವನ್ನು ಕಳೆದ ವರ್ಷ ಭಾರತದಲ್ಲಿ ಬಿಡುಗಡೆಗೊಳಿಸಲಾಗಿತ್ತು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಎಂಪಿವಿ ಸೆಗ್‍‍ಮೆಂಟಿನಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದ ಎರ್ಟಿಗಾ

ಮರಾಜೊ ಹಲವು ಫೀಚರ್ಸ್, ಬಲಶಾಲಿಯಾದ ಎಂಜಿನ್ ಹಾಗೂ ಸಾಕಷ್ಟು ಎಕ್ವಿಪ್‍‍ಮೆಂಟ್‍‍ಗಳನ್ನು ಹೊಂದಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಮಹೀಂದ್ರಾ ಮರಾಜೊವಿನ ಕೇವಲ 892 ಯುನಿಟ್‍‍ಗಳು ಮಾರಾಟವಾಗಿವೆ. 2018ರ ಸೆಪ್ಟೆಂಬರ್‍‍‍ನಲ್ಲಿ 2,892 ಯುನಿಟ್‍‍ಗಳು ಮಾರಾಟವಾಗಿದ್ದವು.

ಸ್ಥಾನ ಮಾದರಿಗಳು ಮಾರಾಟ ಪ್ರಮಾಣ
1 ಮಾರುತಿ ಎರ್ಟಿಗಾ 6,284
2 ರೆನಾಲ್ಟ್ ಟ್ರೈಬರ್ 4,710
3 ಟೊಯೊಟಾ ಇನೊವಾ ಕ್ರಿಸ್ಟಾ 4,225
4 ಮಹೀಂದ್ರಾ ಬೊಲೆರೊ 4,179
5 ನೆಕ್ಸಾ ಎಕ್ಸ್ ಎಲ್ 6 3,840
6 ಮಹೀಂದ್ರಾ ಮರಾಜೊ 892
7 ಹೋಂಡಾ ಬಿ‍‍ಆರ್ ವಿ 168
8 ದಟ್ಸನ್ ಗೊ ಪ್ಲಸ್ 160
9 ಟಾಟಾ ಹೆಕ್ಸಾ 148
10 ರೆನಾಲ್ಟ್ ಲಾಡ್ಜಿ 78
ಎಂಪಿವಿ ಸೆಗ್‍‍ಮೆಂಟಿನಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದ ಎರ್ಟಿಗಾ

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 68%ನಷ್ಟು ಕುಸಿತವಾಗಿದೆ. 168 ಯುನಿಟ್‍‍ಗಳ ಮಾರಾಟದೊಂದಿಗೆ ಹೋಂಡಾ ಬಿ‍ಆರ್ ವಿ ಏಳನೇ ಸ್ಥಾನದಲ್ಲಿದೆ. 160 ಯುನಿಟ್‍ಗಳ ಮಾರಾಟದೊಂದಿಗೆ ದಟ್ಸನ್ ಗೊ ಪ್ಲಸ್ ಎಂಟನೇ ಸ್ಥಾನದಲ್ಲಿದೆ.

ಎಂಪಿವಿ ಸೆಗ್‍‍ಮೆಂಟಿನಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದ ಎರ್ಟಿಗಾ

ಸೆಪ್ಟೆಂಬರ್‍‍ನಲ್ಲಿ ಟಾಟಾ ಕಂಪನಿಯ ಪ್ರಮುಖ ಮಾದರಿಯಾದ ಹೆಕ್ಸಾ ಎಂಪಿವಿಯ ಕೇವಲ 148 ಯುನಿಟ್‍‍ಗಳು ಮಾರಾಟವಾಗಿವೆ. 2018ರ ಸೆಪ್ಟೆಂಬರ್‍‍ನಲ್ಲಿ 692 ಯುನಿಟ್‍‍ಗಳು ಮಾರಾಟವಾಗಿದ್ದವು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಮಾರಾಟವು 79%ನಷ್ಟು ಕುಸಿದಿದೆ.

ಎಂಪಿವಿ ಸೆಗ್‍‍ಮೆಂಟಿನಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದ ಎರ್ಟಿಗಾ

2018ರ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಸೆಪ್ಟೆಂಬರ್‍‍ನಲ್ಲಿ ರೆನಾಲ್ಟ್ ಲಾಡ್ಜಿ ಎಂಪಿವಿಯ ಮಾರಾಟವು 189%ನಷ್ಟು ಹೆಚ್ಚಾಗಿದೆ. ಕಳೆದ ವರ್ಷದ ಸೆಪ್ಟೆಂಬರ್‍‍ನಲ್ಲಿ ಕೇವಲ 27 ಯುನಿಟ್‍‍ಗಳ ಮಾರಾಟವಾಗಿದ್ದರೆ, ಕಳೆದ ತಿಂಗಳು 78 ಯುನಿಟ್‍‍ಗಳು ಮಾರಾಟವಾಗಿವೆ.

ಎಂಪಿವಿ ಸೆಗ್‍‍ಮೆಂಟಿನಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದ ಎರ್ಟಿಗಾ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹೆಚ್ಚು ಮಾರಾಟವಾದ ಎಂಪಿವಿಗಳ ಪಟ್ಟಿಯಲ್ಲಿ ರೆನಾಲ್ಟ್ ಟ್ರೈಬರ್‍‍ನ ಮಾರಾಟವು ಹೆಚ್ಚಾಗಿರುವುದು ಕಂಡು ಬರುತ್ತದೆ. ಈ ಎಂ‍‍ಪಿವಿಯ ಜನಪ್ರಿಯತೆಯಿಂದಾಗಿ ರೆನಾಲ್ಟ್ ಕಂಪನಿಯ ಮಾರಾಟ ಪ್ರಮಾಣವು ಹೆಚ್ಚಾಗಿದೆ. ಈ ಸೆಗ್‍‍ಮೆಂಟಿನಲ್ಲಿ ಹೆಚ್ಚುತ್ತಿರುವ ಸ್ಪರ್ಧೆಯಿಂದಾಗಿ ಟೊಯೊಟಾ ಇನೊವಾ ಕ್ರಿಸ್ಟಾದ ಮಾರಾಟದಲ್ಲಿ ಕುಸಿತವಾಗಿದೆ.

Most Read Articles

Kannada
English summary
Top-Selling MPVs In India For September 2019: Renault Triber Closes In On The Maruti Ertiga - Read in Kannada
Story first published: Thursday, October 10, 2019, 18:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X