ಕಾರು ಮಾರಾಟದಲ್ಲಿ ಮತ್ತೆ ಹಿನ್ನಡೆ ಅನುಭವಿಸಿದ ಟೊಯೊಟಾ

2019ರ ನವೆಂಬರ್ ತಿಂಗಳಿನಲ್ಲಿ ಟೊಯೊಟಾ ಕಿರ್ಲೋಸ್ಕರ್ ಕಂಪನಿಯ ಮಾದರಿವಾರು ಕಾರು ಮಾರಾಟದ ವರದಿ ಬಿಡುಗಡೆಯಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಟೊಯೊಟಾ ಕಿರ್ಲೋಸ್ಕರ್ ಮಾದರಿವಾರು ಮಾರಾಟದ ವರದಿಯಲ್ಲಿ ಇನೋವಾ ಕ್ರಿಸ್ಟಾ ಮೊದಲ ಸ್ಥಾನವನ್ನು ಪಡೆದಿದೆ.

ಕಾರು ಮಾರಾಟದಲ್ಲಿ ಮತ್ತೆ ಹಿನ್ನಡೆ ಅನುಭವಿಸಿದ ಟೊಯೊಟಾ

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಕಳೆದ ನವೆಂಬರ್ ತಿಂಗಳಲ್ಲಿ ಒಟ್ಟು 8,312 ಯು‍‍ನಿ‍ಟ್‍ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 10,721 ಯು‍‍ನಿ‍ಟ್‍‍ಗಳ ಮಾರಾಟವಾಗಿತ್ತು. ಕಳೆದ ವರ್ಷದ ಅವಧಿಗೆ ಹೋಲಿಸಿದರೆ ಶೇ.22 ರಷ್ಟು ಕುಸಿತವಾಗಿದೆ. ಇತರ ಜಪಾನಿನ ಜನಪ್ರಿಯ ವಾಹನ ಉತ್ಪಾದಕರಾದ ಹೋಂಡಾ, ಫೋರ್ಡ್ ಮತ್ತು ಫೋಕ್ಸ್ ವ್ಯಾಗನ್‍ ಕಂಪನಿಗಳು ಪ್ರಬಲ ಪೈಪೋಟಿಯನ್ನು ನೀಡುತ್ತಿದೆ.

ಕಾರು ಮಾರಾಟದಲ್ಲಿ ಮತ್ತೆ ಹಿನ್ನಡೆ ಅನುಭವಿಸಿದ ಟೊಯೊಟಾ

ಟೊಯೊಟಾ ಕಂಪನಿಯ ಮಾದರಿವಾರು ಕಾರು ಮಾರಾಟದಲ್ಲಿ ಇನೋವಾ ಕ್ರಿಸ್ಟಾ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಈ ವರ್ಷದ ನವೆಂಬರ್ ತಿಂಗಳಲ್ಲಿ ಇನೋವಾ ಕ್ರಿಸ್ಟಾ ಎಂಪಿವಿಯ 3,414 ಯು‍‍ನಿ‍‍ಟ್‍ಗಳು ಮಾರಾಟವಾಗಿವೆ. ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಇನೋವಾ ಕ್ರಿಸ್ಟಾ ಎಂಪಿವಿಯ 3,141 ಯು‍‍ನಿ‍ಟ್‍‍ಗಳು ಮಾರಾಟವಾಗಿತ್ತು.

ಕಾರು ಮಾರಾಟದಲ್ಲಿ ಮತ್ತೆ ಹಿನ್ನಡೆ ಅನುಭವಿಸಿದ ಟೊಯೊಟಾ

ಮುಂದಿನ ವರ್ಷದಲ್ಲಿ ಕಿಯಾ ಕಾರ್ನಿವಲ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. 2020ರ ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದೆ. ಕಿಯಾ ಕಾರ್ನಿವಾಲ್ ಹೆಚ್ಚು ನೂತನ ಫೀಚರ್ಸ್‍‍ಗಳನ್ನು ಹೊಂದಿದೆ. ಕಿಯಾ ಕಾರ್ನಿವಾಲ್ ಎಂಪಿವಿಯು ಇನ್ನೋವಾ ಕ್ರಿಸ್ಟಾ ಎಂಪಿವಿಗೆ ಪ್ರಬಲ ಪೈಪೋಟಿಯನ್ನು ನೀಡುತ್ತದೆ.

ಕಾರು ಮಾರಾಟದಲ್ಲಿ ಮತ್ತೆ ಹಿನ್ನಡೆ ಅನುಭವಿಸಿದ ಟೊಯೊಟಾ

ಟೊಯೊಟಾ ಕಂಪನಿಯ ಮಾದರಿವಾರು ಮಾರಾಟ ಪಟ್ಟಿಯಲ್ಲಿ ಟೊಯೊಟಾ ಗ್ಲಾಂಝಾ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ನವೆಂಬರ್ ತಿಂಗಳಲ್ಲಿ ಟೊಯೊಟಾ ಗ್ಲಾಂಝಾ 2,313 ಯು‍‍ನಿ‍ಟ್‍‍ಗಳು ಮಾರಾಟವಾಗಿದೆ. ಟೊಯೊಟಾ ಗ್ಲಾಂಝಾ ಬಾಲೆನೊ ರಿಬೇಡ್ಜ್ ಆವೃತ್ತಿಯಾಗಿದೆ.

ಕಾರು ಮಾರಾಟದಲ್ಲಿ ಮತ್ತೆ ಹಿನ್ನಡೆ ಅನುಭವಿಸಿದ ಟೊಯೊಟಾ

ಟೊಯೊಟಾ ಕಂಪನಿಯ ಮಾದರಿವಾರು ಮಾರಾಟ ಪಟ್ಟಿಯಲ್ಲಿ ಟೊಯೊಟಾ ಫಾರ್ಚೂನರ್ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ನವೆಂಬರ್ ತಿಂಗಳಲ್ಲಿ ಟೊಯೊಟಾ ಫಾರ್ಚೂನರ್ ಎಸ್‍‍ಯುವಿಯ 1,063 ಯು‍‍ನಿ‍‍‍ಟ್‍ಗಳು ಮಾರಾಟವಾಗಿವೆ. ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಟೊಯೊಟಾ ಫಾರ್ಚೂನರ್ ಎಸ್‍‍ಯುವಿಯ 1,475 ಯು‍‍ನಿ‍‍ಟ್‍ಗಳು ಮಾರಾಟವಾಗಿತ್ತು. ಕಳೆದ ವರ್ಷದ ನವೆಂಬರ್ ಅವಧಿಗೆ ಹೋಲಿಸಿದರೆ ಶೇ.28ರಷ್ಟು ಕುಸಿತವಾಗಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಕಾರು ಮಾರಾಟದಲ್ಲಿ ಮತ್ತೆ ಹಿನ್ನಡೆ ಅನುಭವಿಸಿದ ಟೊಯೊಟಾ

ಇನ್ನೂ ಈ ಪಟ್ಟಿಯಲ್ಲಿ 913 ಯುನಿ‍‍ಟ್‍ಗಳು ಮಾರಾಟವಾಗಿ ಟೊಯೊಟಾ ಇಟಿಯೋಸ್ ನಾಲ್ಕನೇ ಸ್ಥಾನವನ್ನು ಪಡೆದಿದೆ. ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಇಟಿಯೋಸ್ ಕಾರಿನ 1,622 ಯು‍‍ನಿ‍‍ಟ್‍ಗಳು ಮಾರಾಟವಾಗಿತ್ತು. ಕಳೆದ ವರ್ಷದ ನವೆಂಬರ್ ಅವಧಿಗೆ ಹೋಲಿಸಿದರೆ ಶೇ.44ರಷ್ಟು ಕುಸಿತವಾಗಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಕಾರು ಮಾರಾಟದಲ್ಲಿ ಮತ್ತೆ ಹಿನ್ನಡೆ ಅನುಭವಿಸಿದ ಟೊಯೊಟಾ

ಟೊಯೊಟಾ ಕಂಪನಿಯ ಮಾದರಿವಾರು ಮಾರಾಟ ಪಟ್ಟಿಯಲ್ಲಿ ಟೊಯೊಟಾ ಇಟಿಯೋಸ್ ಲಿವಾ ಐದನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ನವೆಂಬರ್ ತಿಂಗಳಲ್ಲಿ ಟೊಯೊಟಾ ಇಟಿಯೋಸ್ ಲಿವಾ ಕಾರಿನ 314 ಯು‍‍ನಿ‍‍ಟ್‍‍ಗಳು ಮಾರಾಟವಾಗಿವೆ. ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಇಟಿಯೋಸ್ ಲಿವಾ ಕಾರಿನ 1,389 ಯುನಿ‍‍‍ಟ್‍‍ಗಳು ಮಾರಾಟವಾಗಿತ್ತು. ಕಳೆದ ವರ್ಷದ ನವೆಂಬರ್ ಅವಧಿಗೆ ಹೋಲಿಸಿದರೆ ಶೇ.77ರಷ್ಟು ಕುಸಿತವಾಗಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಕಾರು ಮಾರಾಟದಲ್ಲಿ ಮತ್ತೆ ಹಿನ್ನಡೆ ಅನುಭವಿಸಿದ ಟೊಯೊಟಾ

ಟೊಯೊಟಾ ಕಿರ್ಲೋಸ್ಕರ್ ಕಂಪನಿಯ ಮಾದರಿವಾರು ಕಾರು ಮಾರಾಟದ ಪಟ್ಟಿಯಲ್ಲಿ ಐದನೇ ಸ್ಥಾನದ ಕೆಳಗಿನ ಸ್ಥಾನದಲ್ಲಿ ಕ್ರಮವಾಗಿ ಟೊಯೊಟಾ ಯಾರಿಸ್, ಟೊಯೊಟಾ ಕ್ಯಾಮ್ರಿ, ಟೊಯೊಟಾ ಕೊರೊಲಾ, ಟೊಯೊಟಾ ವೆಲ್‌ಫೈರ್ ಮತ್ತು ಟೊಯೊಟಾ ಪ್ರಡೊ ಕಾರುಗಳಿವೆ.

Most Read Articles

Kannada
Read more on ಟೊಯೊಟಾ toyota
English summary
Toyota Nov 2019 Sales Analysis - Read in Kannada
Story first published: Monday, December 9, 2019, 19:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X