ಒಲಂಪಿಕ್ಸ್ ಗಾಗಿ ವಿಶೇಷ ವಾಹನ ಬಿಡುಗಡೆಗೊಳಿಸಲಿದೆ ಟೊಯೊಟಾ

ಟೊಯೊಟಾ ಮೋಟಾರ್ ಕಾರ್ಪೊರೇಷನ್, ಒಲಂಪಿಕ್ ಹಾಗೂ ಪ್ಯಾರಾಲಿಂಪಿಕ್ ಕ್ರೀಡಾಕೂಟದ ಜಾಗತಿಕ ಪಾಲುದಾರನಾಗಿದೆ. 2020ರಲ್ಲಿ ಟೊಕಿಯೊದಲ್ಲಿ ನಡೆಯಲಿರುವ ಈ ಕ್ರೀಡಾಕೂಟಕ್ಕಾಗಿ ಟೊಯೊಟಾ ಕಂಪನಿಯು ಹೊಸ ವಾಹನವೊಂದನ್ನು ಅಭಿವೃದ್ಧಿಗೊಳಿಸುತ್ತಿದೆ. ಈ ವಾಹನಕ್ಕೆ ಅಕ್ಸೆಸಿಬಲ್ ಪೀಪಲ್ ಮೂವರ್ ಎಂದು ಹೆಸರಿಡಲಾಗಿದೆ. ಈ ವಾಹನವನ್ನು ಒಲಂಪಿಕ್ಸ್ ನಲ್ಲಿ ಬಳಸಲಾಗುವುದು.

ಒಲಂಪಿಕ್ಸ್ ಗಾಗಿ ವಿಶೇಷ ವಾಹನ ಬಿಡುಗಡೆಗೊಳಿಸಲಿದೆ ಟೊಯೊಟಾ

ಟೊಯೊಟಾ ಕಂಪನಿಯು, ಕ್ರೀಡಾಕೂಟದಲ್ಲಿ ಜನರನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಆರಾಮದಾಯಕವಾಗಿ ಕರೆದೊಯ್ಯುವ ವ್ಯವಸ್ಥೆಯನ್ನು ಕಲ್ಪಿಸಲಿದೆ. ಇದನ್ನು ಎಲ್ಲರಿಗೂ ಚಲನಶೀಲತೆ ಎಂದು ಕರೆಯಬಹುದು. ಆಕ್ಸೆಸಿಬಲ್ ಪೀಪಲ್ ಮೂವರ್ ನಿಂದಾಗಿ ಚಲನಶೀಲತೆಯನ್ನು ಗರಿಷ್ಠ ಮಟ್ಟಕ್ಕೆ ಕೊಂಡೊಯ್ಯುಬಹುದು. ಏಕೆಂದರೆ ಈ ವಾಹನವು ಕೊನೆಯ ಹಂತದವರೆಗಿನ ಪರಿಹಾರವನ್ನು ನೀಡುತ್ತದೆ. ಇದು ಕ್ರೀಡಾಕೂಟದಲ್ಲಿ ಈವೆಂಟ್‌ ನಡೆಯುವ ಜಾಗಗಳಿಗೆ ಸಾಧ್ಯವಾದಷ್ಟು ಜನರನ್ನು ಕೊಂಡೊಯ್ಯಲು ಸಹಾಯ ಮಾಡಲಿದೆ.

ಒಲಂಪಿಕ್ಸ್ ಗಾಗಿ ವಿಶೇಷ ವಾಹನ ಬಿಡುಗಡೆಗೊಳಿಸಲಿದೆ ಟೊಯೊಟಾ

2020ರ ಟೋಕಿಯೊ ಒಲಿಂಪಿಕ್ ಹಾಗೂ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳಿಗೆ, ಸಿಬ್ಬಂದಿಗಳಿಗೆ, ಅಗತ್ಯತೆ ಹೊಂದಿರುವ ಸಾರ್ವಜನಿಕರಿಗೆ, ವಯಸ್ಸಾದವರಿಗೆ, ದುರ್ಬಲರಿಗೆ, ಗರ್ಭಿಣಿಯರಿಗೆ ಹಾಗೂ ಚಿಕ್ಕ ಮಕ್ಕಳಿರುವ ಕುಟುಂಬಗಳು ಸೇರಿದಂತೆ ಇತರರಿಗೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕರೆದೊಯ್ಯುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಟೊಯೊಟಾ ಹೇಳಿದೆ. ಕೆಲವು ಎಪಿಎಂಗಳನ್ನು ಕ್ರೀಡಾಕೂಟದಲ್ಲಿನ ಪರಿಹಾರ ಕಾರ್ಯಗಳಿಗೆ ಬಳಸುವ ಸಾಧ್ಯತೆಗಳಿವೆ.

ಒಲಂಪಿಕ್ಸ್ ಗಾಗಿ ವಿಶೇಷ ವಾಹನ ಬಿಡುಗಡೆಗೊಳಿಸಲಿದೆ ಟೊಯೊಟಾ

ಪಂದ್ಯಾವಳಿಗಳು ಹಾಗೂ ಸ್ಪರ್ಧೆಗಳು ನಡೆಯುವ ಸ್ಥಳಗಳಿಗೆ ಮಾತ್ರವಲ್ಲದೇ ಒಲಿಂಪಿಕ್ ವಿಲೇಜ್‌ನಂತಹ ಪಂದ್ಯಾವಳಿಗಳು ನಡೆಯದ ಜಾಗಗಳಿಗೂ ಸೇರಿದಂತೆ, ಟೊಯೋಟಾ ಕಂಪನಿಯು, ಕ್ರೀಡಾಕೂಟದಲ್ಲಿ ಸುಮಾರು 200 ಆಕ್ಸೆಸಿಬಲ್ ಪೀಪಲ್ ಮೂವರ್‍‍ಗಳನ್ನು ನಿಯೋಜಿಸಲಿದೆ. ಟೊಯೊಟಾ ಕಂಪನಿಯು, ಎಪಿಎಂನ ಮೂಲ ಮಾದರಿ ಹಾಗೂ ರಿಲೀಫ್ ಸ್ಪೆಕ್ ಮಾದರಿಗಳನ್ನು ಕ್ರೀಡಾಕೂಟದಲ್ಲಿ ನಿಯೋಜಿಸಲಿದೆ. ಮೂಲ ಮಾದರಿಯು ಕಡಿಮೆ ವೇಗವನ್ನು ಹೊಂದಿದೆ.

ಒಲಂಪಿಕ್ಸ್ ಗಾಗಿ ವಿಶೇಷ ವಾಹನ ಬಿಡುಗಡೆಗೊಳಿಸಲಿದೆ ಟೊಯೊಟಾ

ಈ ವಾಹನದಲ್ಲಿ ಕಡಿಮೆ ಅಂತರದ ಬ್ಯಾಟರಿಯನ್ನು ಅಳವಡಿಸಲಾಗಿದೆ. ಈ ಮಾದರಿಯನ್ನು ಸಂದರ್ಶಕರಿಗೆ ಹಾಗೂ ಸಿಬ್ಬಂದಿಗಳಿಗೆ ದೊಡ್ಡ ಮೈದಾನದ ಒಳಗಿನ ಕಾರ್ಯಕ್ರಮಗಳಿಗೆ ಬಳಸಿ ಕೊಳ್ಳಲಾಗುವುದು. ಮೂಲ ಮಾದರಿಯ ಆಕ್ಸೆಸಿಬಲ್ ಪೀಪಲ್ ಮೂವರ್‍‍ನ ಮೊದಲ ಸಾಲಿನಲ್ಲಿ ಡ್ರೈವರ್ ಸೀಟ್‍‍ಯಿದ್ದು, ಎರಡನೇ ಸಾಲಿನಲ್ಲಿ ಮೂರು ಜನ ಹಾಗೂ ಮೂರನೇ ಸಾಲಿನಲ್ಲಿ ಇಬ್ಬರು ಕುಳಿತು ಕೊಳ್ಳಬಹುದು.

ಒಲಂಪಿಕ್ಸ್ ಗಾಗಿ ವಿಶೇಷ ವಾಹನ ಬಿಡುಗಡೆಗೊಳಿಸಲಿದೆ ಟೊಯೊಟಾ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಎರಡನೇ ಸಾಲಿನಲ್ಲಿರುವ ಸೀಟುಗಳನ್ನು ಮಡಚುವ ಮೂಲಕ ವ್ಹೀಲ್‍‍ಚೇರ್‍‍ಗಳಿಗೆ ಅನುಕೂಲವಾಗುವಂತೆ ಮಾಡಿಫೈಗೊಳಿಸಬಹುದು. ಟೊಯೊಟಾ, ಡ್ರೈವರ್ ಸೀಟನ್ನು ಎತ್ತರಿಸಿ ಮಧ್ಯದಲ್ಲಿರಿಸಿದೆ. ಎಪಿಎಂ ಅನ್ನು ಹತ್ತುವಾಗ ಹಾಗೂ ಇಳಿಯುವಾಗ ಚಾಲಕರು ಪ್ರಯಾಣಿಕರಿಗೆ ಬೇಕಾಗಿರುವ ಸೌಲಭ್ಯಗಳನ್ನು ಪೂರೈಸಲು ಇದರಿಂದ ಅನುಕೂಲವಾಗಲಿದೆ. ಎರಡೂ ಬದಿಗಳಿಂದ ಪ್ರಯಾಣಿಕರು ಎಪಿಎಂ ಹತ್ತಬಹುದು ಹಾಗೂ ಇಳಿಯಬಹುದು.

ಒಲಂಪಿಕ್ಸ್ ಗಾಗಿ ವಿಶೇಷ ವಾಹನ ಬಿಡುಗಡೆಗೊಳಿಸಲಿದೆ ಟೊಯೊಟಾ

ಈ ವಾಹನದ ಎರಡೂ ಬದಿಗಳಲ್ಲಿ ಸುರಕ್ಷತಾ ಬಾರ್‌ಗಳನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಪ್ರಯಾಣಿಕರ ಪ್ರವೇಶಕ್ಕಾಗಿ ಹಾಗೂ ಸಾಗಣಿಕೆಯನ್ನು ಸುಲಭಗೊಳಿಸಲು ವಾಹನಕ್ಕೆ ವ್ಹೀಲ್‍‍ಚೇರ್ ಆಂಕರ್ ಪ್ಲೇಟ್ ಹಾಗೂ ರ್‍ಯಾಂ‍‍ಪ್‍‍ಗಳನ್ನು ಅಳವಡಿಸಬಹುದು. ರಿಲೀಫ್ ಸ್ಪೆಕ್ ಮಾದರಿಯಲ್ಲಿ ಎರಡನೇ ಹಾಗೂ ಮೂರನೇ ಸಾಲಿನ ಸೀಟುಗಳ ಅರ್ಧದಷ್ಟು ಜಾಗವನ್ನು ಸ್ಟ್ರೆಚರ್‌ಗಾಗಿಯೇ ಇಡಲಾಗಿದೆ. ಸುರಕ್ಷಿತವಾದ ಹಾಗೂ ಸ್ಥಿರವಾದ ಸಾಗಣಿಕೆಗೆ ಅನುಕೂಲವಾಗುವಂತೆ ಸ್ಟ್ರೆಚರ್ ಅನ್ನು ಮಡಚಿ ವಾಹನದಲ್ಲಿಡಬಹುದು ಎಂದು ಟೊಯೊಟಾ ಹೇಳಿದೆ.

ಒಲಂಪಿಕ್ಸ್ ಗಾಗಿ ವಿಶೇಷ ವಾಹನ ಬಿಡುಗಡೆಗೊಳಿಸಲಿದೆ ಟೊಯೊಟಾ

ಸ್ಟ್ರೆಚರ್ ಪಕ್ಕದಲ್ಲಿ ಪರಿಹಾರ ಸಿಬ್ಬಂದಿ ಕುಳಿತುಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ. ಟೊಯೊಟಾದ ಈ ಎರಡೂ ಮಾದರಿಗಳನ್ನು 2020ರಲ್ಲಿ ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ ಹಾಗೂ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಬಿಡುಗಡೆಗೊಳಿಸಲಾಗುವುದು. ಈ ವಾಹನಗಳನ್ನು ಪೂರ್ತಿಯಾಗಿ ಚಾರ್ಜ್‌ ಮಾಡಿದರೆ 100 ಕಿಲೋಮೀಟರ್‍‍ವರೆಗೆ ಚಲಿಸಲಿವೆ. ಕನಿಷ್ಠ ಟರ್ನಿಂಗ್ ರೇಡಿಯಸ್ 4.8 ಮೀಟರ್ ಆಗಿದ್ದು, ಟಾಪ್ ಸ್ಫೀಡ್ ಅನ್ನು 19 ಕಿ.ಮೀಗಳಿಗೆ ನಿಗದಿಪಡಿಸಲಾಗಿದೆ.

ಒಲಂಪಿಕ್ಸ್ ಗಾಗಿ ವಿಶೇಷ ವಾಹನ ಬಿಡುಗಡೆಗೊಳಿಸಲಿದೆ ಟೊಯೊಟಾ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಟೊಯೊಟಾ ಕಂಪನಿಯು ಮತ್ತೆ ಹೊಸತನದ ವಾಹನವನ್ನು ನೀಡುತ್ತಿದೆ. ವಿಮಾನ ನಿಲ್ದಾಣಗಳಲ್ಲಿ ಹಾಗೂ ಗಾಲ್ಫ್ ಕೋರ್ಸ್‌ಗಳಲ್ಲಿ ಅನೇಕ ಮಾದರಿಯ ಪೀಪಲ್ ಮೂವರ್‍ ವಾಹನಗಳನ್ನು ನೋಡಿದ್ದೇವೆ. ಆದರೆ ಈ ವಾಹನಗಳು ಬೇರೆ ಮಾದರಿಯಲ್ಲಿವೆ. ಪ್ರಯಾಣಿಸುತ್ತಿರುವಾಗಲೇ ಸೀಟುಗಳನ್ನು ಕಾನ್ಫಿಗರ್ ಮಾಡಬಹುದು. ಟೊಯೊಟಾ ಈ ಆಕ್ಸೆಸಿಬಲ್ ಪೀಪಲ್ ಮೂವರ್‍‍‍ಗಳು ಹೆಚ್ಚಿನ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗುವಂತೆ ಅಭಿವೃದ್ಧಿಪಡಿಸಿದೆ.

Most Read Articles

Kannada
Read more on ಟೊಯೊಟಾ toyota
English summary
Toyota’s Accessible People Mover To Debut At Olympic and Paralympic Games Tokyo 2020 - Read in kannada
Story first published: Saturday, July 20, 2019, 15:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X