ಟೊಯೊಟಾ ಯಾರಿಸ್ ಕಾರು ಖರೀದಿಯ ಮೇಲೆ ಸುಮಾರು ರೂ. 1.5 ಲಕ್ಷದ ರಿಯಾಯಿತಿ..!

2018ರ ಮೇ ತಿಂಗಳಿನಲ್ಲಿ ಟೊಯೊಟಾ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಸಿ-ಸೆಗ್ಮೆಂಟ್ ಸೆಡಾನ್ ಕಾರು ಮಾದರಿಯಾದ ಯಾರಿಸ್ ಕಾರನ್ನು ಬಿಡುಗಡೆಗೊಳಿಸಿತ್ತು. ಬಿಡುಗಡೆಗೊಂಡ ಪ್ರಾರಂಭದಲಿ ಹೆಚ್ಚು ಬುಕ್ಕಿಂಗ್ ಘಳಿಸುತ್ತಿದ್ದ ಈ ಕಾರು, ಬರುಬರುತ್ತಾ ಕಡಿಮೆ ಮಾರಾಟವನ್ನು ಕಾಣುತ್ತಿದೆ. ಕಳೆದ ಜನವರಿಯಲ್ಲಿ ಕೇವಲ 343 ಯೂನಿಟ್ ಮಾತ್ರ ಮಾರಾಟವಾಗಿದೆಯಂತೆ.

ಟೊಯೊಟಾ ಯಾರಿಸ್ ಕಾರು ಖರೀದಿಯ ಮೇಲೆ ಸುಮಾರು ರೂ. 1.5 ಲಕ್ಷದ ರಿಯಾಯಿತಿ..!

ಆದುದರಿಂದ ಟೊಯೊಟಾ ಡೀಲರ್‍‍ಗಳು ಈ ಕಾರಿನ ಖರೀದಿ ಮೇಲೆ ಬಾರೀ ರಿಯಾಯಿತಿಯನ್ನು ನೀಡಲು ಮುಂದಾಗಿದ್ದಾರೆ. ಟೊಯೊಟಾ ಯಾರಿಸ್ ಕಾರು ತಿಂಗಳಿಗೆ ಸುಮಾರು 12000 ರಿಂದ 15000 ಬುಕ್ಕಿಂಗ್ ಅನ್ನು ಪಡೆದುಕೊಳ್ಳುತ್ತಿದ್ದು, ಮಾರುತಿ ಸುಜುಕಿ ಸಿಯಾಜ್, ಹೋಂಡಾ ಸಿತಿ ಮತ್ತು ಹ್ಯುಂಡೈ ವೆರ್ನಾ ಕಾರುಗಳಿಗೆ ಪೈಪೋಟಿ ನೀಡುತ್ತಿದ್ದು, ಇದೀಗ ಕಾರಿನ ಖರೀದಿಯ ಮೇಲೆ ಡೀಲರ್‍‍ಗಳು ಸುಮಾರು ರೂ. 1.5 ಲಕ್ಷದ ರಿಯಾಯಿತಿಯನ್ನು ನೀಡುತ್ತಿದ್ದಾರೆ.

ರಿಯಾಯಿತಿಯು ವಿನಿಮಯ ಪ್ರಸ್ತಾಪ, ನಗದು ರಿಯಾಯಿತಿ, ಉಚಿತ ವಿಮೆ ಮತ್ತು ಭಾಗಗಳು ಒಳಗೊಂಡಿದೆ. ಜೊತೆಗೆ ಯಾರಿಸ್ ಖರೀದಿದಾರರು ಕೂಡ ಖರೀದಿಯ ಮೇಲೆ ಚಿನ್ನದ ನಾಣ್ಯವನ್ನು ಪಡೆಯುವ ಅವಕಾಶವನ್ನು ಸಹ ಗ್ರಾಹಕರು ಪಡೆಯಬಹುದಾಗಿದೆ.

ಟೊಯೊಟಾ ಯಾರಿಸ್ ಕಾರು ಖರೀದಿಯ ಮೇಲೆ ಸುಮಾರು ರೂ. 1.5 ಲಕ್ಷದ ರಿಯಾಯಿತಿ..!

ಯಾರಿಸ್ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ಆರಂಭಿಕವಾಗಿ ರೂ.8.75 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯನ್ನು ರೂ. 14.07 ಲಕ್ಷಕ್ಕೆ ನಿಗದಿ ಮಾಡಲಾಗಿದೆ.

ಟೊಯೊಟಾ ಯಾರಿಸ್ ಕಾರುಗಳು 1.5-ಲೀಟರ್ ಡ್ಯುಯಲ್ ವಿವಿಟಿ-ಐ ಪೆಟ್ರೋಲ್ ಎಂಜಿನ್ ಹೊಂದಿದ್ದು, ಈ ಮೂಲಕ 108-ಬಿಎಚ್‌ಪಿ ಮತ್ತು 140-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು. ಜೊತೆಗೆ ಹೊಸ ಕಾರುಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾದರಿಗಳು ಆಯ್ಕೆಗೆ ಲಭ್ಯವಿರಲಿವೆ.

ಟೊಯೊಟಾ ಯಾರಿಸ್ ಕಾರು ಖರೀದಿಯ ಮೇಲೆ ಸುಮಾರು ರೂ. 1.5 ಲಕ್ಷದ ರಿಯಾಯಿತಿ..!

ಟೊಯೊಟಾ ಯಾರಿಸ್ ಕಾರುಗಳು ಸ್ಮಾರ್ಟ್ ಕನೆಕ್ವಿಟಿ ಜೊತೆಗೆ ಅತ್ಯುತ್ತಮ ತಂತ್ರಜ್ಞಾನ ಪ್ರೇರಿತ ಡ್ಯಾಶ್‌ಬೋರ್ಡ್ ಹೊಂದಿದ್ದು, ಸಾಫ್ಟ್ ಟಚ್ ಕ್ಲೈಮೆಟ್ ಕಂಟ್ರೊಲರ್ ಬಟನ್‌ಗಳು, ವಾಟರ್ ಫಾಲ್ ಮಾದರಿಯ ಸೆಂಟರ್ ಕನ್‌ಸೊಲ್ ಡಿಸೈನ್‌ಗಳು ಸೆಡಾನ್ ಮಾದರಿಯ ಮತ್ತೊಂದು ವೈಶಿಷ್ಟ್ಯತೆಯಾಗಿದೆ.

ಹಾಗೆಯೇ 7-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಕೂಡಾ ಇದ್ದು, ಸಂಜ್ಞೆಯ ಮೂಲಕವೇ ಕಾರಿನ ಸ್ಮಾರ್ಟ್ ಕನೆಕ್ಟಿವಿಟಿಗಳನ್ನು ನಿಯಂತ್ರಿಸಬಹುದಾಗಿದೆ. ಅದಾಗ್ಯೂ ಯಾರಿಸ್ ಕಾರುಗಳಲ್ಲಿ ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಜೋಡಣೆ ಹೊಂದಿಲ್ಲ ಎನ್ನುವುದು ಮುಖ್ಯ ವಿಚಾರ.

ಟೊಯೊಟಾ ಯಾರಿಸ್ ಕಾರು ಖರೀದಿಯ ಮೇಲೆ ಸುಮಾರು ರೂ. 1.5 ಲಕ್ಷದ ರಿಯಾಯಿತಿ..!

ಇನ್ನು ಮ್ಯಾನುವಲ್ ಕಾರುಗಳ ಗೇರ್ ಸ್ಟೀಕ್‌ಗಳು ಪ್ರಿಮಿಯಂ ಬ್ಲ್ಯಾಕ್ ಲೆದರ್ ವ್ಯಾರ್ಪ್ಡ್ ಹೊಂದಿರಲಿದ್ದು, ಆಟೋಮ್ಯಾಟಿಕ್ ಗೇರ್ ಸ್ಟಿಕ್‌ಗಳು ಸಹ ಮೆಟಲ್ ಕ್ರೋಮ್ ಮಾದರಿಯ ಲೆದರ್ ಕಾಂಬಿನೇಷನ್ ಡಿಸೈನ್ ಪಡೆದುಕೊಂಡಿರಲಿವೆ. ಜೊತೆಗೆ ಕಪ್ ಹೋಲ್ಡರ್ ಸಹ ಕಾರಿನ ಇಂಟಿರಿಯರ್ ವಿನ್ಯಾಸಕ್ಕೆ ಮೆರಗು ತಂದಿವೆ.

ಯಾರಿಸ್ ಕಾರುಗಳಲ್ಲಿ ಏಳು ಏರ್‌ಬ್ಯಾಗ್‌ಗಳು, ಎಬಿಎಸ್ ಮತ್ತು ಇಬಿಡಿ, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್, ಸ್ಟ್ಯಾಬಿಲಿಟಿ ಕಂಟ್ರೋಲ್, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ಫೋರ್ ವೀಲ್ ಡಿಸ್ಕ್ ಬ್ರೇಕ್‌ಗಳು, ಹೈ ಸೋಲಾರ್ ಎನರ್ಜಿ ಅಬ್ ಸಾರ್ಬಿಂಗ್, ಇನ್‌ಫ್ರಾ ರೆಡ್ ಕಿರಣಗಳಿಗೆ ತಡೆಯೊಡ್ಡುವ ತಂತ್ರಜ್ಞಾನ, ವೈಬ್ರೇಷನ್‌ ಮುಕ್ತ ಗ್ಲಾಸ್‌ಗಳಿಂದಾಗಿ ನಿಶ್ಯಬ್ಧ ಕ್ಯಾಬಿನ್ ಸೌಲಭ್ಯ ಇದರಲ್ಲಿದೆ.

Source: CarToq

Most Read Articles

Kannada
English summary
Toyota Announces Big Discount On Their Yaris. Read In Kannada
Story first published: Monday, February 11, 2019, 9:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X