ಶೀಘ್ರದಲ್ಲೆ ಬಿಡುಗಡೆಯಾಗಲಿದೆ ಟೊಯೊಟಾ ಬ್ಯಾಡ್ಜಿಂಗ್ ಪಡೆದ ಬಲೆನೊ ಕಾರು

ನಾವೀಗಾಗಲೆ ನಿಮಗೆ ಟೊಯೊಟಾ ಮತ್ತು ಮಾರುತಿ ಸುಜುಕಿ ಜಂಟಿಯಾಗಿ ವಾಹನಗಳನ್ನು ನಿರ್ಮಾಣ ಮಾಡುವುದಾಗಿ ಮಾಹಿತಿಯನ್ನು ನೀಡಿದ್ದೆವು, ಇದೀಗ ಆಟೋಕಾರ್ ಇಂಡಿಯಾ ವರದಿಗಳ ಪ್ರಕಾರ ಟೊಯೊಟಾ ಕಿರ್ಲೋಸ್ಕರ್ ಮತ್ತು ಮರುತಿ ಸುಜುಕಿ ಸಂಸ್ಥೆಗಳು ಜಂಟಿಯಾಗಿ ನಿರ್ಮಾಣ ಮಾಡಲಿರುವ ಬಲೆನೊ ಕಾರನ್ನು ಜೂನ್ ತಿಂಗಳಿನಲ್ಲಿ ಬಿಡುಗಡೆಗೊಳಿಸುವುದಾಗಿ ಮಾಹಿತಿ ಲಭ್ಯವಾಗಿದೆ.

ಶೀಘ್ರದಲ್ಲೆ ಬಿಡುಗಡೆಯಾಗಲಿದೆ ಟೊಯೊಟಾ ಬ್ಯಾಡ್ಜಿಂಗ್ ಪಡೆದ ಬಲೆನೊ ಕಾರು

ಜಪಾನ್ ಮೂಲದ ವಾಹನ ಉತ್ಪಾದನಾ ದಿಗ್ಗಜರಾದ ಸುಜುಕಿ ಮೋಟಾರ್ಸ್ ಮತ್ತು ಟೊಯೊಟಾ ಮೋಟಾರ್ಸ್ ಸಂಸ್ಥೆಗಳು ಹೊಸ ಕಾರುಗಳ ಉತ್ಪಾದನೆಗಾಗಿ ಭಾರತದಲ್ಲಿ ಮಹತ್ವದ ಯೋಜನೆ ರೂಪಿಸಿದ್ದು, ಸಹಭಾಗಿತ್ವ ಆಧಾರದ ಮೇಲೆ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹೊಸ ಕಾರು ಉತ್ಪನ್ನಗಳನ್ನು ತಯಾರಿಸಲು ಬೃಹತ್ ಬಂಡವಾಳ ಹೂಡಿಕೆ ಮಾಡುತ್ತಿವೆ.

Image Source: cartoq

ಶೀಘ್ರದಲ್ಲೆ ಬಿಡುಗಡೆಯಾಗಲಿದೆ ಟೊಯೊಟಾ ಬ್ಯಾಡ್ಜಿಂಗ್ ಪಡೆದ ಬಲೆನೊ ಕಾರು

ಸಧ್ಯಕ್ಕೆ ಟೊಯೊಟಾ ಮತ್ತು ಮಾರುತಿಸ್ ಸುಜುಕಿ ಸಂಸ್ಥೆಯು ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಟೊಯೊಟಾ ಬ್ಯಾಡ್ಜಿಂಗ್ ಹೊಂದಿರುವ ಬಲೆನೊ ಕಾರನ್ನು ಸಧ್ಯಕ್ಕೆ A11 ಎಂಬ ಕೋಡ್ ಸಂಖ್ಯೆ ಇಂದ ಕರೆಯಲ್ಪಡಲಿದ್ದು, ಹೊರ ವಿನ್ಯಾಸದಲ್ಲಿ ಹಲವಾರು ಬದಲಾವಣೆಗಳನ್ನು ಪಡೆಯಲಿದೆ.

ಶೀಘ್ರದಲ್ಲೆ ಬಿಡುಗಡೆಯಾಗಲಿದೆ ಟೊಯೊಟಾ ಬ್ಯಾಡ್ಜಿಂಗ್ ಪಡೆದ ಬಲೆನೊ ಕಾರು

ಹೌದು, ಟೊಯೊಟಾ ಬ್ಯಾಡ್ಜಿಂಗ್ ಹೊತ್ತು ಬರಲಿರುವ ಬಲೆನೊ ಕಾರು ಹೊಸ ಗ್ರಿಲ್, ಮರುವಿನ್ಯಾಸ ಮಾಡಲಾದ ಬಂಪರ್ ಮತ್ತು ಟೊಯೊಟಾ ಕಾರುಗಳಲ್ಲಿ ಕಾಣಬಹುದಾದ ಲೈಟ್‍‍ಗಳನ್ನು ನೀಡಲಾಗಿದೆ. ಹೊಸ ಒಪ್ಪಂದದ ಪ್ರಕಾರ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮಾಡುವುದಷ್ಟೇ ಅಲ್ಲದೇ ಈಗಿರುವ ಸಾಮಾನ್ಯ ಕಾರುಗಳ ಮಾರಾಟಕ್ಕೂ ಪರಸ್ಪರ ಸಹಾಯ ಮಾಡುವ ಮಹತ್ವದ ಕಾರ್ಯ ಯೋಜನೆಗೂ ಟೊಯೊಟಾ ಮತ್ತು ಸುಜುಕಿ ಸಂಸ್ಥೆಗಳು ಒಪ್ಪಿಗೆ ಸೂಚಿಸಿವೆ.

ಶೀಘ್ರದಲ್ಲೆ ಬಿಡುಗಡೆಯಾಗಲಿದೆ ಟೊಯೊಟಾ ಬ್ಯಾಡ್ಜಿಂಗ್ ಪಡೆದ ಬಲೆನೊ ಕಾರು

ನೆನ್ನೆಯಷ್ಟೆ ಮಾರುತಿ ಸುಜುಕಿ ಬಿಡುಗಡೆ ಮಾಡಿರುವ ಬಿಎಸ್-6 ವೈಶಿಷ್ಟ್ಯತೆಯುಳ್ಳ ಬಲೆನೊ ಆವೃತ್ತಿಯು ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನ ಪ್ರೇರಣೆ ಹೊಂದಿದ್ದು, ಮಾಲಿನ್ಯ ಪ್ರಮಾಣ ತಗ್ಗಿಸಲು ಮತ್ತು ಮೈಲೇಜ್ ಹೆಚ್ಚಿಸುವಲ್ಲಿ ಹೊಸ ಎಂಜಿನ್ ಸಾಕಷ್ಟು ಸಹಕಾರಿಯಾಗಿದೆ. ಹೀಗಾಗಿ ಸಾಮಾನ್ಯ ಬಲೆನೊ ಆವೃತ್ತಿಗಿಂತ ಬಿಎಸ್-6 ಎಂಜಿನ್ ಪ್ರೇರಿಚ ಬಲೆನೊ ಕಾರಿನ ಬೆಲೆಯಲ್ಲಿ ತುಸು ಹೆಚ್ಚಳವಾಗಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.7.25 ಲಕ್ಷ ಬೆಲೆ ನಿಗದಿ ಮಾಡಲಾಗಿದೆ.

ಶೀಘ್ರದಲ್ಲೆ ಬಿಡುಗಡೆಯಾಗಲಿದೆ ಟೊಯೊಟಾ ಬ್ಯಾಡ್ಜಿಂಗ್ ಪಡೆದ ಬಲೆನೊ ಕಾರು

ಮಾರುತಿ ಸುಜುಕಿ ಸೇರಿದಂತೆ ದೇಶದ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ತಮ್ಮ ಜನಪ್ರಿಯ ಕಾರುಗಳನ್ನು ಬಿಎಸ್-6 ಎಂಜಿನ್‌ನೊಂದಿಗೆ ಉನ್ನತೀಕರಿಸಿ ಟೆಸ್ಟಿಂಗ್ ನಡೆಸುತ್ತಿದ್ದು, ಡೆಡ್‌ಲೈನ್‌ಗೂ ಮುನ್ನವೇ ಮಾರುತಿ ಸುಜುಕಿ ತನ್ನ ಬಹುಬೇಡಿಕೆಯ ಬಲೆನೊ ಕಾರನ್ನು ಹೊಸ ನಿಯಮದಂತೆ ಮರುಬಿಡುಗಡೆ ಮಾಡಿದೆ.

ಶೀಘ್ರದಲ್ಲೆ ಬಿಡುಗಡೆಯಾಗಲಿದೆ ಟೊಯೊಟಾ ಬ್ಯಾಡ್ಜಿಂಗ್ ಪಡೆದ ಬಲೆನೊ ಕಾರು

ಹೀಗಾಗಿ ಫೇಸ್‌ಲಿಫ್ಟ್ ಬಲೆನೊ ಕಾರುಗಳು ಸಾಮಾನ್ಯ ಬಲೆನೊ ಕಾರುಗಳಿಂತ ತಾಂತ್ರಿಕವಾಗಿ ಮತ್ತಷ್ಟು ಬಲಿಷ್ಠವಾಗಿರಲಿದ್ದು, ಹೊಸ ನಿಯಮಾವಳಿಗೆ ಅನುಸಾರವಾಗಿ ಬಿಎಸ್ 6 ವೈಶಿಷ್ಟ್ಯತೆಗಳೊಂದಿಗೆ ಹೊಸ ಕಾರಿನ ಎಂಜಿನ್ ಅಭಿವೃದ್ಧಿ ಮಾಡಲಾಗಿದೆ.

ಶೀಘ್ರದಲ್ಲೆ ಬಿಡುಗಡೆಯಾಗಲಿದೆ ಟೊಯೊಟಾ ಬ್ಯಾಡ್ಜಿಂಗ್ ಪಡೆದ ಬಲೆನೊ ಕಾರು

ಎಂಜಿನ್ ಸಾಮರ್ಥ್ಯ

ಸದ್ಯ ಲಭ್ಯವಿರುವ 1.2-ಲೀಟರ್ ಕೆ-ಸೀರಿಸ್ ಪೆಟ್ರೋಲ್ ಮತ್ತು 1.3 ಲೀಟರ್ ಡಿಡಿಐಎಸ್200 ಡೀಸೆಲ್ ಎಂದಿನ್ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಪೆಟ್ರೋಲ್ ಎಂಜಿನ್ ಆಧಾರಿತ ಬಲೆನೊ ಕಾರು 89ಬಿಹೆಚ್‍ಪಿ ಮತ್ತು 115ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಶೀಘ್ರದಲ್ಲೆ ಬಿಡುಗಡೆಯಾಗಲಿದೆ ಟೊಯೊಟಾ ಬ್ಯಾಡ್ಜಿಂಗ್ ಪಡೆದ ಬಲೆನೊ ಕಾರು

ಇನ್ನು ಡೀಸೆಲ್ ಆಧಾರಿತ ಬಲೆನೊ ಕಾರುಗಳು 75ಬಿಹೆಚ್‍ಪಿ ಮತು 190ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎರಡೂ ಎಂಜಿನ್‍ಗಳನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಅಷ್ಟೆ ಅಲ್ಲದೇ ಪೆಟ್ರೋಲ್ ಎಂಜಿನ್ ಅನ್ನು ಆಯ್ಕೆಯಾಗಿ ಸಿವಿಟಿ ಗೇರ್‍‍ಬಾಕ್ಸ್ ಜೋಡಣೆಯೊಂದಿಗೆ ಪಡೆಯಬಹುದಾಗಿದೆ.

ಶೀಘ್ರದಲ್ಲೆ ಬಿಡುಗಡೆಯಾಗಲಿದೆ ಟೊಯೊಟಾ ಬ್ಯಾಡ್ಜಿಂಗ್ ಪಡೆದ ಬಲೆನೊ ಕಾರು

ಸದ್ಯ ಮಾರುಕಟ್ಟೆಯಲ್ಲಿ ಬಲೆನೊ ಕಾರುಗಳು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಒಟ್ಟು ಆರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದರಲ್ಲಿ ಡೆಲ್ಟಾ ಪೆಟ್ರೋಲ್ ಮತ್ತು ಜೆಟಾ ಪೆಟ್ರೋಲ್ ವೆರಿಯೆಂಟ್‌ಗಳಲ್ಲಿ ಮಾತ್ರವೇ ಹೊಸ ಬಿಎಸ್-6 ಪ್ರೇರಿತ ಡ್ಯುಯೆಲ್ ಜೆಟ್ ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನವನ್ನು ಜೋಡಿಸಲಾಗಿದೆ.

ಶೀಘ್ರದಲ್ಲೆ ಬಿಡುಗಡೆಯಾಗಲಿದೆ ಟೊಯೊಟಾ ಬ್ಯಾಡ್ಜಿಂಗ್ ಪಡೆದ ಬಲೆನೊ ಕಾರು

ಈ ಮೂಲಕ ಹೊಸ ಎಂಜಿನ್ ಪ್ರೇರಿತ ಡೆಲ್ಟಾ ಪೆಟ್ರೋಲ್ ಆವೃತ್ತಿಯು ಲೀಟರ್‍‌ಗೆ 21.4ಕಿ.ಮಿ ಮೈಲೇಜ್ ನೀಡಿದ್ದಲ್ಲಿ ಜೆಟಾ ಪೆಟ್ರೋಲ್ ಆವೃತ್ತಿಯು ಪ್ರತಿ ಲೀಟರ್‌ಗೆ 23.87ಕಿ.ಮಿ ಮೈಲೇಜ್ ನೀಡಲಿದ್ದು, ಇವು ಸಾಮಾನ್ಯ ಆವೃತ್ತಿಗಳಿಂತ ರೂ.89 ಸಾವಿರದಷ್ಟು ದುಬಾರಿಯಾಗಿರಲಿವೆ.

Most Read Articles

Kannada
English summary
Toyota-badged Maruti Suzuki Baleno launch around June 2019. Read In Kannada
Story first published: Tuesday, April 23, 2019, 10:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X